ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಾದ್ಯಂತ ಮಾರ್ಚ್ ವೇಳೆಗೆ ಕೊರೊನಾ ಸೋಂಕು ಇಳಿಮುಖ ಸಾಧ್ಯತೆ:ICMR

|
Google Oneindia Kannada News

ನವದೆಹಲಿ, ಫೆಬ್ರವರಿ 5: ದೇಶಾದ್ಯಂತ ಮಾರ್ಚ್ ವೇಳೆಗೆ ಕೊರೊನಾ ಸೋಂಕಿತ ಪ್ರಕರಣಗಳು ಇಳಿಮುಖವಾಗುವ ಸಾಧ್ಯತೆ ಇದೆ ಎಂದು ಐಸಿಎಂಆರ್ ತಿಳಿಸಿದೆ.

ಮಹಾರಾಷ್ಟ್ರ, ದೆಹಲಿ, ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳು ಈಗಾಗಲೇ ಸಕ್ರಿಯ ಪ್ರಕರಣಗಳು ಇಳಿದಿರುವ ಕುರಿತು ಮಾಹಿತಿ ನೀಡಿವೆ. ಇನ್ನೂ ಕೆಲವು ರಾಜ್ಯಗಳಲ್ಲಿ ಪ್ರಕರಣಗಳು ಏರುಗತಿಯತ್ತ ಸಾಗುತ್ತಿವೆ. ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 14.35 ಲಕ್ಷ ದಷ್ಟಿದೆ.

ಭಾರತೀಯ ವಿಜ್ಞಾನಿಗಳಿಂದ ಆ್ಯಂಟಿ ವೈರಲ್ ಫೇಸ್‌ ಮಾಸ್ಕ್ ಸಂಶೋಧನೆಭಾರತೀಯ ವಿಜ್ಞಾನಿಗಳಿಂದ ಆ್ಯಂಟಿ ವೈರಲ್ ಫೇಸ್‌ ಮಾಸ್ಕ್ ಸಂಶೋಧನೆ

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಉನ್ನತಾಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ದೇಶದ ಕೆಲವು ಭಾಗಗಳಲ್ಲಿ ಈ ತಿಂಗಳ ಅಂತ್ಯದ ವೇಳೆಗೆ ಮೂರನೇ ಅಲೆಯು ಕ್ಷೀಣಿಸುವ ಸಾಧ್ಯತೆ ಇದೆ ಎಂದಿದ್ದಾರೆ.

Third COVID-19 Wave Likely To Decline by March Across India: ICMR

ಮಹಾರಾಷ್ಟ್ರ, ದೆಹಲಿ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಅತ್ಯಂತ ಗರಿಷ್ಠ ಮಟ್ಟದ ಪ್ರಕರಣಗಳನ್ನು ಎದುರಿಸಿ ಇದೀಗ ಕೆಳಗಿಳಿಯುತ್ತಿವೆ. ಕೊರೊನಾ ಸೋಂಕಿನ ಮೂರನೇ ಅಲೆಯಿಂದ ಮಾರ್ಚ್‌ನ ಎರಡು ಹಾಗೂ ಮೂರನೇ ವಾರದ ವೇಳೆಗೆ ಹೊರಬರಬಹುದು ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೋಪೆ ಅಭಿಪ್ರಾಯಪಟ್ಟಿದ್ದಾರೆ.

ಒಂದು ದಿನದಲ್ಲಿ ಮೂರು ಲಕ್ಷದವರೆಗಿನ ಪ್ರಕರಣಗಳು ಪತ್ತೆಯಾಗಿ ಇದೀಗ ಮತ್ತೆ ಇಳಿಮುಖಗೊಂಡಿದೆ. ದಿನಕ್ಕೆ ಒಂದು ಲಕ್ಷದಷ್ಟು ಸೋಂಕಿತರು ದಾಖಲಾಗುತ್ತಿದ್ದಾರೆ. ಆದರೆ ಈ ಮೂರನೇ ಅಲೆ ಇದೊಂದು ತಿಂಗಳು ಕಾಡಲಿದೆ. ಭಾರತದಲ್ಲಿ ಮಾರ್ಚ್​ ತಿಂಗಳ ಹೊತ್ತಿಗೆ ಕೊವಿಡ್​ 19 ಮೂರನೇ ಅಲೆ ಪ್ರಮಾಣ ತುಸು ತಗ್ಗಬಹುದು ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಮಧ್ಯೆ ಮಹಾರಾಷ್ಟ್ರ, ದೆಹಲಿ, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಕೂಡ ಕೊರೊನಾ ಸಕ್ರಿಯ ಪ್ರಕರಣಗಳು ಕಡಿಮೆ ಆಗಿವೆ.

ಮುಂಬೈ, ಪುಣೆ, ಥಾಣೆ ಮತ್ತು ರಾಯಗಢದಂತಹ ಪ್ರಮುಖ ನಗರಗಳಲ್ಲಿ ಸೋಂಕಿನ ಪ್ರಮಾಣ ಕಡಿಮೆಯಾಗಿದೆ, ದಿನಕ್ಕೆ 48 ಸಾವಿರಕ್ಕಿಂತ ಹೆಚ್ಚಿನ ಪ್ರಕರಣಗಳನ್ನು ಕಾಣುತ್ತಿದ್ದ ಪ್ರದೇಶಗಳಲ್ಲಿ ಈಗ 15 ಸಾವಿರ ಪ್ರಕರಣಗಳು ದಾಖಲಾಗುತ್ತಿವೆ.

ಓಮಿಕ್ರಾನ್ ನ ಗುಣಲಕ್ಷಣಗಳು ಏನು? ಇದು ಎಷ್ಟು ಅಪಾಯಕಾರಿ?

Recommended Video

ಯೋಗಿ ಆದಿತ್ಯನಾಥ್ ಕಿವಿ ಓಲೆ ಮತ್ತು ರುದ್ರಾಕ್ಷಿ ಮಾಲೆಯ ಬೆಲೆ ಎಷ್ಟು ಗೊತ್ತಾ? | Oneindia Kannada

-ಓಮಿಕ್ರಾನ್ ಸೋಂಕಿತ ಅನೇಕ ಜನರು ಲಕ್ಷಣ ರಹಿತವಾಗಿದ್ದಾರೆ.
-ಸ್ನಾಯುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ.
-ಒಂದು ಅಥವಾ ಎರಡು ದಿನಗಳವರೆಗೆ ಸುಸ್ತು ಇರಲಿದೆ.
-ಆದಾಗ್ಯೂ ಓಮಿಕ್ರಾನ್ ರೂಪಾಂತರ ಯಾವುದೇ ಹೊಸ ವೈಶಿಷ್ಟ್ಯಗಳು ಇಲ್ಲಿಯವರೆಗೆ ಕಂಡುಬಂದಿಲ್ಲ.
-ಗಂಟಲು ನೋವು, ತಲೆನೋವು, ಉಸಿರಾಟದ ತೊಂದರೆ, ಎದೆನೋವು ಕಾಣಿಸಿಕೊಳ್ಳಲಿದೆ.
-ಓಮಿಕ್ರಾನ್ 3ನೇ ಅಲೆ ಅನ್ನೋದು ಹಲವು ತಜ್ಞರ ಅಭಿಪ್ರಾಯ.
-ಹೊಸ ರೂಪಾಂತರಿ ಡೆಲ್ಟಾಕ್ಕಿಂತ ಹಲವಾರು ಪಟ್ಟು ಹೆಚ್ಚು ಮಾರಕ.
-ಓಮಿಕ್ರಾನ್ ಹೊಸ ರೂಪಾಂತರಿ ಡೆಲ್ಟಾಕ್ಕಿಂತ 7 ಪಟ್ಟು ವೇಗವಾಗಿ ಹರಡುತ್ತಿದೆ.
-ಹೊಸ ರೂಪಾಂತರಿಯನ್ನು ಗುರುತಿಸುವುದಕ್ಕೂ ಮುನ್ನ 32 ಬಾರಿ ರೂಪಾಂತರಗೊಂಡಿದೆ.

English summary
Maharashtra health minister Rajesh Tope on Friday opined that the third wave of the pandemic might get over by the second or third week of March.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X