• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಿರ್ಮಲಾ ಚೊಚ್ಚಲ ಬಜೆಟ್ : ಯಾವುದು ಏರಿಕೆ ? ಯಾವುದು ಇಳಿಕೆ?

|

ನವದೆಹಲಿ, ಜುಲೈ 05: ನರೇಂದ್ರ ಮೋದಿ ನೇತೃತ್ವದ ಪೂರ್ಣಾವಧಿ ಬಜೆಟ್ ಮಂಡನೆ ಮಾಡಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಡಿಜಿಟಲ್ ಪಾವತಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಕೆಲ ಐಷಾರಾಮಿ ವಸ್ತುಗಳ ಆಮದು ಸುಂಕ ಏರಿಕೆ ಮಾಡಿದ್ದಾರೆ.

ಬಜೆಟ್ ನಿಂದ ನಮ್ಮ-ನಿಮ್ಮ ನಿತ್ಯ ಜೀವನದ ಮೇಲೆ ಆಗುವ ಪರಿಣಾಮಗಳೇನು? ನಾವು ದಿನ ನಿತ್ಯ ಬಳಸುವ ಯಾವ ವಸ್ತುಗಳ ಬೆಲೆ ಏರಿಕೆಯಾಗಲಿದೆ? ಯಾವ ವಸ್ತುಗಳ ಬೆಲೆ ಇಳಿಕೆಯಾಗಲಿದೆ? ಎಂಬುದರ ವಿವರ ಇಲ್ಲಿದೆ.

ಕೇಂದ್ರ ಬಜೆಟ್ Live Updates: ತೈಲ, ಚಿನ್ನ, ಮದ್ಯ ದುಬಾರಿ

ಸರಕು ಸೇವಾ ತೆರಿಗೆ (ಜಿಎಸ್ ಟಿ) ಜಾರಿಗೊಂಡ ಬಳಿಕ ಏಕರೂಪದ ತೆರಿಗೆ ದೇಶದೆಲ್ಲೆಡೆ ಜಾರಿಗೊಂಡಿದೆ.ಈ ಮೂಲಕ ಗ್ರಾಹಕರ ಮೇಲೆ ಬೀಳುತ್ತಿದ್ದ ಹೆಚ್ಚುವರಿ ತೆರಿಗೆಗಳ ಮೇಲೆ ನಿಯಂತ್ರಣ ಹೊಂದಲಾಗಿದೆ. ಜಿಎಸ್ ಟಿಯಲ್ಲಿ ವಿವಿಧ ಸ್ಲಾಬ್ ಗಳಲ್ಲಿದ್ದು, ಇದರ ಜತೆಗೆ ರಾಜ್ಯಗಳಲ್ಲಿನ ಜಿಎಸ್ ಟಿ ಕೂಡಾ ಸೇರಲಿದೆ.

ಮೊಬೈಲ್ ಫೋನ್, ಸ್ಮಾಟ್ ಫೋನ್, ಕಾರು ಸೆಟ್ ಟಾಪ್ ಬಾಕ್ಸ್, ಸಿಗರೇಟು, ತಂಬಾಕು ಪದಾರ್ಥ, ಮಾರ್ಬಲ್ ಸೇರಿದಂತೆ ಹಲವು ವಸ್ತುಗಳ ಮೇಲಿನ ತೆರಿಗೆ ಏರಿಸಲಾಗಿದೆ. ಸೌರಫಲಕ, ಇಟ್ಟಿಗೆ, ಕಿವುಡು ಮೂಗರಿಗೆ ಬಳಸುವ ಸಾಧನಗಳು ಇತ್ಯಾದಿಗಳ ಮೇಲಿನ ಬೆಲೆ ಇಳಿಕೆಯಾಗಿದೆ.

ಯಾವುದು ಏರಿಕೆ

ಯಾವುದು ಏರಿಕೆ

ಚಿನ್ನ ಹಾಗೂ ದುಬಾರಿ ಲೋಹ, ಪೆಟ್ರೋಲ್, ಡೀಸೆಲ್, ಆಟೋಮೊಬೈಲ್ ಉಪಕರಣ, ತಂಬಾಕು, ಡಿಜಿಟಲ್ ಕೆಮರಾ, ಆಪ್ಟಿಕಲ್ ಫೈಬರ್, ಕೆಲವು ಸಿಂಥೆಟಿಕ್ ರಬ್ಬರ್, ಗೋಡಂಬಿ, ವಿನೈಲ್ ಫ್ಲೋರಿಂಗ್, ಎಲೆಕ್ಟ್ರಿಕಲ್ ವಾಹನ ಬಿಡಿಭಾಗಗಳು.

ಸಿಗರೇಟು, ಲೈಟರ್, ಕ್ಯಾಂಡಲ್, ಆಲಿವ್ ಆಯಿಲ್, ಕಡ್ಲೇಕಾಯಿ ತ್ರಿಚಕ್ರವಾಹನ, ಸ್ಕೂಟರ್, ಪೆಡಲ್ ಕಾರ್, ಬೊಂಬೆ ಇನ್ನಿತರ ಆಟದ ಸಾಮಾಗ್ರಿಗಳು, ರೇಷ್ಮೆ ಸಿದ್ಧ ಉಡುಪು, ಟ್ರಕ್ ಹಾಗೂ ಬಸ್ ಟೈಯರ್, ಸುಗಂಧ ದ್ರವ್ಯ ಹಾಗೂ ಟಾಯ್ಲೆಟ್ ಸ್ಪ್ರೇ, ಡಿಯೋಡ್ರಂಟ್, ಶೇವಿಂಗ್ ಕ್ರೀಮ್ ಹಾಗೂ ಸಂಬಂಧಿಸಿದಂತ ಉತ್ಪನ್ನಗಳು

ಎಲೆಕ್ಟ್ರಿಕ್ ವಾಹನ ಖರೀದಿಗೆ ಉತ್ತೇಜನ

ಎಲೆಕ್ಟ್ರಿಕ್ ವಾಹನ ಖರೀದಿಗೆ ಉತ್ತೇಜನ

ಎಲೆಕ್ಟ್ರಿಕ್ ವಾಹನ ಖರೀದಿಗೆ ಉತ್ತೇಜನ ನೀಡಲಾಗಿದ್ದು, ಇ ವಾಹನಗಳ ಜಿ ಎಸ್ ಟಿ ದರವನ್ನು ಶೇಕಡಾ 12ರ ಬದಲು ಶೇಕಡಾ 5ಕ್ಕೆ ಇಳಿಕೆ ಮಾಡಲಾಗಿದೆ. ಇ-ಸ್ಟಾರ್ಟ್ ಅಪ್ ಕಂಪನಿಗಳು ಏಂಜಲ್ ತೆರಿಗೆ ಪಾವತಿ ಮಾಡಬೇಕಾಗಿಲ್ಲ. ಸೌರಫಲಕ, ಇಟ್ಟಿಗೆ, ಕಿವುಡು ಮೂಗರಿಗೆ ಬಳಸುವ ಸಾಧನಗಳು ಇತ್ಯಾದಿಗಳ ಮೇಲಿನ ಬೆಲೆ ಇಳಿಕೆಯಾಗಿದೆ.

ಆದಾಯ ತೆರಿಗೆ ಪಾವತಿ ಮಿತಿ ಬಗ್ಗೆ ನಿರ್ಮಲಾ ಬಜೆಟ್ ನಲ್ಲಿ ಏನಿದೆ?

ಆಮದು ವಸ್ತುಗಳ ಬೆಲೆ ಏರಿಕೆ

ಆಮದು ವಸ್ತುಗಳ ಬೆಲೆ ಏರಿಕೆ

ಪುಸ್ತಕ, ಕಾರು, ಮೋಟಾರ್ ಸೈಕಲ್, ಮೊಬೈಲ್ ಫೋನ್, ಚಿನ್ನ, ಬೆಳ್ಳಿ, ವಜ್ರ, ಫ್ಯಾನ್ಸಿ ಆಭರಣಗಳು, ತರಕಾರಿ, ಹಣ್ಣಿನ ಜ್ಯೂಸ್, ಸನ್ ಗ್ಲಾಸ್, ಸುಗಂಧ ಧ್ರವ್ಯಗಳು, ಅಡುಗೆ ತಯಾರಿಸಲು ಬಳಸುವ ವಸ್ತುಗಳು, ಮೆನಿಕ್ಯೂರ್ ಮತ್ತು ಪೆಡಿಕ್ಯೂರ್ ವಸ್ತುಗಳು, ಹಲ್ಲಿನ ಸ್ವಚ್ಛತೆ ಮತ್ತು ಶೇವ್ ಗೆ ಸಂಬಂಧಿಸಿದ ವಸ್ತುಗಳು, ಬಸ್ ಮತ್ತು ಟ್ರಕ್ ಗಳ ಟೈರುಗಳು, ರೇಷ್ಮೆ ಬಟ್ಟೆ, ಚಪ್ಪಲಿ, ಮುತ್ತು ರತ್ನಗಳು, ಸ್ಮಾರ್ಟ್ ವಾಚ್ ಸೇರಿದಂತೆ ವಿಭಿನ್ನ ಗಡಿಯಾರಗಳು, ಎಲ್ಇಡಿ, ಎಲ್ ಸಿಡಿ ಟಿವಿ, ಗೃಹ ಉಪಯೋಗಿ ವಸ್ತುಗಳು, ಬಲ್ಬ್ ಗಳು, ಆಟಿಕೆ ವಸ್ತುಗಳು, ವಿಡಿಯೋ ಗೇಮ್ ಸಾಧನಗಳು, ಕ್ರೀಡೆಗೆ ಬಳಸುವ ವಸ್ತುಗಳು, ಸಿಗರೇಟ್, ಕ್ಯಾಂಡಲ್, ಗಾಳಿಪಟ, ಆಲಿವ್ ಮತ್ತು ಕಡಲೆ ಎಣ್ಣೆಯಂಥ ಅಡುಗೆ ಎಣ್ಣೆಗಳ ಬೆಲೆ ಏರಿಕೆಯಾಗಲಿದೆ.

ಅಬಕಾರಿ ಸುಂಕ

ಅಬಕಾರಿ ಸುಂಕ

ಮೊಬೈಲ್ ಫೋನ್ ಮತ್ತು ಸ್ಮಾರ್ಟ್ ಫೋನ್ ಉಪಕರಣಗಳ ಆಮದಿನ ಮೇಲಿದ್ದ ಅಬಕಾರಿ ಸುಂಕವನ್ನು ಬಜೆಟ್ ನಲ್ಲಿ ಶೇಕಡಾ 15 ರಿಂದ 20ಕ್ಕೆ ಏರಿಕೆ ಮಾಡಲಾಗಿದೆ. ಇದರಿಂದ ಇವುಗಳ ಬೆಲೆಯಲ್ಲಿ ಭಾರೀ ಪ್ರಮಾಣದ ಏರಿಕೆಯಾಗಲಿದೆ. ಭಾರತದಲ್ಲಿ ಉದ್ಯೋಗ ಸೃಷ್ಟಿಯಾಗಬೇಕು ಎಂಬ ಕಾರಣಕ್ಕೆ ಮೊಬೈಲ್ ಫೋನ್ ಆಮದಿನ ಮೇಲಿನ ಸುಂಕ ಏರಿಕೆ ಮಾಡಲಾಗಿದೆ. ಇದರಿಂದ ಮುಖ್ಯವಾಗಿ ಚೀನಾ ಮೂಲದ ಮೊಬೈಲ್ ತಯಾರಿಕಾ ಸಂಸ್ಥೆಗಳಾದ ವಿವೋ, ಒಪ್ಪೋ, ಶಿಯೋಮಿ, ಹುವಾಯ್ ಕಂಪನಿಗಳಿಗೆ ಹೊಡೆತ ಬೀಳಲಿದ್ದರೆ, ಗ್ರಾಹಕರ ಜೇಬಿಗೆ ಮೊಬೈಲ್ ಫೋನ್ ಗಳು ಭಾರವಾಗಲಿವೆ.

ರೈತರ ಆದಾಯ ದ್ವಿಗುಣ, ಶೂನ್ಯ ಬಂಡವಾಳ ಕೃಷಿಗೆ ಒತ್ತು

ಯಾವುದು ಇಳಿಕೆ

ಯಾವುದು ಇಳಿಕೆ

* ಎಲೆಕ್ಟ್ರಾನಿಕ್ ಕಾರಿನ ಬೆಲೆ ಇಳಿಕೆ, ಎಲೆಕ್ಟ್ರಾನಿಕ್ ಕಾರು ಮೇಲಿನ ಸಾಲಕ್ಕೆ ಸಬ್ಸಿಡಿ.

* ಕೈಗೆಟುಕುವ ದರ ಮನೆ ಖರೀದಿ ಗೃಹ ಸಾಲ ಬಡ್ಡಿದರ ಇಳಿಕೆ

* ಕೃತಕ ಕಿಡ್ನಿ, ಡಯಾಲಿಸಿಸ್‌ ಯಂತ್ರ, ಕೆಲವು ಶಸ್ತ್ರ ಚಿಕಿತ್ಸೆ ಉಪಕರಣಗಳು ಅಗ್ಗ.

* ರಕ್ಷಣಾ ಇಲಾಖೆ ಸಾಧನಗಳ ಆಮದು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Union Budget 2019-20 presented in the Parliament on Friday (Jul 05) by Finance Minister Nirmala Sitharaman in which the Narendra Modi government announced changes on import duties of Gold and Electronic goods. Check out which things or goods becomes dearer and which becomes costlier after Budget 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more