• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮತೋತ್ಸವದಲ್ಲಿ ಗಮನ ಸೆಳೆದ ಈ ಇಬ್ಬರು ಸುಂದರಿಯರದ್ದೇ ಎಲ್ಲೆಡೆ ಚರ್ಚೆ

|

ನವದೆಹಲಿ, ಮೇ 18: ಮತೋತ್ಸವದಲ್ಲಿ ಎಲ್ಲರ ಗಮನ ಸೆಳೆದ ಇಬ್ಬರು ಸುಂದರಿಯರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಎಲ್ಲೆಡೆ ಚರ್ಚೆಯಾಗುತ್ತಿದೆ.

ಮತದಾನದಂದು ಕರ್ತವ್ಯ ನಿರ್ವಹಣೆಗಾಗಿ ಬಂದಿದ್ದ ರೀನಾ ದ್ವಿವೇದಿ ಹಾಗೂ ಭೋಪಾಲ್‌ನ ಕೆನರಾ ಬ್ಯಾಂಕ್ ಅಧಿಕಾರಿ ಯೋಗೇಶ್ವರಿ ಗೋಹಿಟೆ ಸಾಮಾಜಿಕ ಜಾಲತಾಣದ ಸ್ಟಾರ್‌ಗಳಾಗಿದ್ದಾರೆ.

ವಿವಿಪ್ಯಾಟ್ ಹಿಡಿದು ಮಿಂಚಿದ್ದ ಹಳದಿ ಸೀರೆ ಚೆಲುವೆ ಯಾರು?

ಚುನಾವಣೆ ಸಮಯದಲ್ಲಿ ಚುನಾವಣಾ ಸುದ್ದಿಗಿಂತ ಇವರಿಬ್ಬರು ಫೋಟೊಗಳು ವೈರಲ್ ಆಗಿದ್ದವು. ''ನನಗೆ ಚಿಕ್ಕ ವಯಸ್ಸಿದ್ದಾಗಲೇ ಮದುವೆ ಮಾಡಿದರು ಆದರೆ ನನಗೂ ಮುಂದೆ ಭವಿಷ್ಯವಿದೆ ಎಂದು ನಿರ್ಧರಿಸಿ ಕೆಲಸಕ್ಕೆ ಸೇರಿಕೊಂಡೆ ಮನೆಯಲ್ಲೂ ತುಂಬಾ ಬೆಂಬಲ ನೀಡಿದ್ದಾರೆ.

ನಾನು ನನ್ನ ಜೀವನದ ಪ್ರತಿ ಕ್ಷಣವನ್ನು ಎಂಜಾಯ್ ಮಾಡುತ್ತೇನೆ. ನನ್ನನ್ನು ಯಾರೂ ನೋಟಿಸ್ ಮಾಡದಿದ್ದರೂ ತೊಂದರೆಯಿಲ್ಲ, ನನಗೆ ಅದೂ ಕೂಡ ಖುಷಿಯೇ'' ಎಂದು ರೀನಾ ದ್ವಿವೇದಿ ಹೇಳಿದ್ದಾರೆ.

ನನ್ನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೊಗಳು ಹರಿದಾಡಿದ ಬಳಿಕ ನನ್ನ ಮಗ ಅವರ ಸ್ನೇಹಿತರ ಬಳಿ ಇವರು ನನ್ನ ತಾಯಿ ಎಂದು ಎಷ್ಟೇ ಹೇಳಿದರೂ ಯಾರೂ ನಂಬಿರಲಿಲ್ಲ, ಬಳಿಕ ವಿಡಿಯೋ ಕಾಲ್ ಮಾಡಿ ಅವರನ್ನು ನಂಬಿಸಬೇಕಾಯಿತು ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

2014ರ ಲೋಕಸಭಾ ಚುನಾವಣೆ ಹಾಗೂ 2017ರ ರಾಜ್ಯ ಚುನಾವಣೆಯಲ್ಲಿ ಲಕ್ನೋನ ಹಲವು ಚುನಾವಣಾ ಕೇಂದ್ರಗಳಲ್ಲಿ ನಾನು ಕೆಲಸ ಮಾಡಿದ್ದೇನೆ. ಮೇ 19ರಂದು ನಡೆಯಲಿರುವ ಹಂತಿಮ ಹಂತದ ಮತದಾನದಲ್ಲಿ ತಾನು ಪತಿ ಸಂಜೀವ್ ಅವರೊಂದಿಗೆ ಮತ ಚಲಾಯಿಸಲಿದ್ದೇನೆ ಎಂದು ತಿಳಿಸಿದ್ದಾರೆ.

ಇನ್ನು ಮತ್ತೊಬ್ಬ ಚೆಲುವೆ ಯೋಗೇಶ್ವರಿ ಅವರ ಬಗ್ಗೆ ಹೇಳುವುದಾದರೆ ಅವರು ಗೋವಿಂದಪುರದ ಐಟಿಐ ಮತಗಟ್ಟೆಯ ಚುನಾವಣಾ ಅಧಿಕಾರಿಯಾಗಿದ್ದಾರೆ.

ಅವರು ಮತಗಟ್ಟೆಗೆ ಆಗಮಿಸುವ ಸಂದರ್ಭದಲ್ಲಿ ಫೋಟೊಗ್ರಾಫರ್‌ಗಳು ಅವರ ಫೋಟೊವನ್ನು ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಮಾಧ್ಯಮದವರು ಅವರನ್ನು ಸಂಪರ್ಕಿಸಲು ಯತ್ನಿಸಿದರೂ ಅವರು ಮಾತನಾಡಲು ನಿರಾಕರಿಸಿದರು. ''ನಾನು ನನಗೆ ಇಷ್ಟ ಬಂದ ರೀತಿಯಲ್ಲಿ ಉಡುಗೆಯನ್ನು ತೊಡುತ್ತೇನೆ, ಆದರೆ ಮಾಡೆಲ್ ಆಗಬೇಕು ಎನ್ನುವ ಕನಸಿಲ್ಲ'' ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಇನ್‌ಸ್ಟಾಗ್ರಾಂ, ಫೇಸ್‌ಬುಕ್, ಟ್ವಿಟ್ಟರ್ ಎಲ್ಲಿ ನೋಡಿದರೂ ಈ ಇಬ್ಬರು ಸುಂದರಿಯರದ್ದೇ ಚರ್ಚೆಯಾಗುತ್ತಿದೆ.

English summary
Two polling officers have become internet sensations after their photographs, clicked while on duty during Lok sabha elections, went viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X