ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾಲುಣಿಸುವ ತಾಯಂದಿರಿಗೆ ಈ ನಾಲ್ಕು ಲಸಿಕೆಗಳು ಸುರಕ್ಷಿತ: ಡಾ.ವಿ.ಕೆ.ಪೌಲ್‌

|
Google Oneindia Kannada News

ನವದೆಹಲಿ, ಜೂ.29: ''ಕೋವಿಡ್‌ ವಿರುದ್ದದ ಭಾರತ ಸರ್ಕಾರ ಅನುಮೋದಿಸಿರುವ ನಾಲ್ಕು ಲಸಿಕೆಗಳಾದ ಕೋವಾಕ್ಸಿನ್, ಕೋವಿಶೀಲ್ಡ್, ಸ್ಪುಟ್ನಿಕ್ ವಿ ಮತ್ತು ಮಾಡರ್ನಾ ಹಾಲುಣಿಸುವ ತಾಯಂದಿರಿಗೆ ಸುರಕ್ಷಿತವಾಗಿದೆ,'' ಎಂದು ಹೇಳಿದ ನೀತಿ ಆಯೋಗದ ಸದಸ್ಯರಾದ ಡಾ.ವಿ.ಕೆ. ಪೌಲ್‌, ಈ ಸಂದರ್ಭದಲ್ಲೇ ಲಸಿಕೆಗೂ, ''ಬಂಜೆತನಕ್ಕೂ ಯಾವುದೇ ಸಂಬಂಧವಿಲ್ಲ,'' ಎಂದು ಮಂಗಳವಾರ ಸ್ಪಷ್ಟಪಡಿಸಿದ್ದಾರೆ.

ಕೊರೊನಾವೈರಸ್ ಕುರಿತು ಆರೋಗ್ಯ ಸಚಿವಾಲಯದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಡಾ. ಪೌಲ್‌, ಸಂತಾನೋತ್ಪತ್ತಿ ವಯಸ್ಸಿನ ಜನಸಂಖ್ಯೆಯಲ್ಲಿ ಕೋವಿಡ್‌ ಲಸಿಕೆಯ ಕಾರಣದಿಂದಾಗಿ ಬಂಜೆತನದ ಬಗ್ಗೆ ಮಾಧ್ಯಮ ವರದಿಗಳ ಬಗ್ಗೆ ಕಳವಳಗೊಳ್ಳದಂತೆ ತಿಳಿಸಿದ್ದಾರೆ.

 ಭಾರತದಲ್ಲಿ ಮಾಡೆರ್ನಾ ಲಸಿಕೆಗೆ ಅನುಮೋದನೆ; ಸಿಪ್ಲಾ ಕಂಪನಿಯಿಂದ ಆಮದು ಭಾರತದಲ್ಲಿ ಮಾಡೆರ್ನಾ ಲಸಿಕೆಗೆ ಅನುಮೋದನೆ; ಸಿಪ್ಲಾ ಕಂಪನಿಯಿಂದ ಆಮದು

ಕೋವಿಡ್‌ ಲಸಿಕೆಗಳು ಸುರಕ್ಷಿತವಾಗಿದೆ. ಹಾಲುಣಿಸುವ ಎಲ್ಲ ಮಹಿಳೆಯರಿಗೆ ಶಿಫಾರಸು ಮಾಡಲಾಗುವುದು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಆಗಾಗ ಪ್ರಕಟಣೆಯಲ್ಲಿ ತಿಳಿಸಿದೆ.

These four vaccines are safe for lactating mothers says Dr. VK Paul

ಭಾರತ್ ಬಯೋಟೆಕ್‌ನ ಕೋವಾಕ್ಸಿನ್, ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ತಯಾರಿಸುತ್ತಿರುವ ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾದ ಕೋವಿಶೀಲ್ಡ್‌ಗೆ ಜನವರಿಯಲ್ಲಿ ಅನುಮೋದನೆ ನೀಡಲಾಗಿದೆ. ಭಾರತದಲ್ಲಿ ಡಾ. ರೆಡ್ಡಿ ಪ್ರಯೋಗಾಲಯಗಳು ಮಾರಾಟ ಮಾಡುತ್ತಿರುವ ರಷ್ಯಾದ ಸ್ಪುಟ್ನಿಕ್ ವಿ ಗೆ ಎಪ್ರಿಲ್‌ನಲ್ಲಿ ಅನುಮೋದನೆ ನೀಡಲಾಗಿದೆ.

ಮಾಡರ್ನಾದ ಕೋವಿಡ್‌ ಲಸಿಕೆಯನ್ನು ಭಾರತದ ಔಷಧ ನಿಯಂತ್ರಕ ಮಂಡಳಿ (ಡಿಸಿಜಿಐ) ನಿಂದ ತುರ್ತು ಬಳಕೆಯ ಅನುಮತಿ ನೀಡಲಾಗಿದೆ ಎಂದು ಸರ್ಕಾರ ಇಂದು (ಜೂನ್‌ 29) ದೃಢಪಡಿಸಿದೆ.

ಕೊರೊನಾ ಅಲೆಗಳಿಗೆ ಕಾಲಮಿತಿ ನಿಗದಿ ಸರಿಯಲ್ಲ; ವಿ.ಕೆ. ಪೌಲ್ಕೊರೊನಾ ಅಲೆಗಳಿಗೆ ಕಾಲಮಿತಿ ನಿಗದಿ ಸರಿಯಲ್ಲ; ವಿ.ಕೆ. ಪೌಲ್

ಈ ಹಿಂದೆ ಜೂನ್ 25 ರಂದು ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪಿನ ರೋಗನಿರೋಧಕ (ಎನ್‌ಟಿಎಜಿಐ) ಕಾರ್ಯಕಾರಿ ಗುಂಪಿನ ಅಧ್ಯಕ್ಷ ಡಾ.ನರೇಂದ್ರ ಕುಮಾರ್ ಅರೋರಾ ಕೋವಿಡ್‌ ಲಸಿಕೆಗಳು ಬಂಜೆತನಕ್ಕೆ ಕಾರಣವಾಗುವುದಿಲ್ಲ ಎಂದು ಹೇಳಿದ್ದರು.

"ಪೋಲಿಯೊ ಲಸಿಕೆ ಬಂದಾಗ ಭಾರತ ಮತ್ತು ವಿಶ್ವದ ಇತರ ಭಾಗಗಳಲ್ಲಿ ಈ ರೀತಿಯ ವದಂತಿಯನ್ನು ಹರಡಲಾಗಿತ್ತು. ಆ ಸಮಯದಲ್ಲಿ, ಪೋಲಿಯೊ ಲಸಿಕೆ ಪಡೆಯುತ್ತಿರುವ ಮಕ್ಕಳು ಭವಿಷ್ಯದಲ್ಲಿ ಬಂಜೆತನವನ್ನು ಎದುರಿಸಬಹುದು ಎಂಬ ತಪ್ಪು ಮಾಹಿತಿ ಸೃಷ್ಟಿಸಲಾಗಿತ್ತು. ಲಸಿಕೆ ವಿರೋಧಿ ಲಾಬಿಯಿಂದ ಈ ರೀತಿಯ ತಪ್ಪು ಮಾಹಿತಿಯು ಹರಡುತ್ತದೆ," ಎಂದು ಹೇಳಿದ್ದರು.

"ಎಲ್ಲಾ ಲಸಿಕೆಗಳು ತೀವ್ರವಾದ ವೈಜ್ಞಾನಿಕ ಸಂಶೋಧನೆಗಳ ಬಳಿಕ ಬಳಕೆಗೆ ಅನುಮತಿ ನೀಡಲಾಗುತ್ತದೆ ಎಂದು ನಾವು ತಿಳಿದಿರಬೇಕು. ಯಾವುದೇ ಲಸಿಕೆಗಳು ಈ ರೀತಿಯ ಅಡ್ಡಪರಿಣಾಮವನ್ನು ಹೊಂದಿಲ್ಲ. ಈ ಬಗ್ಗೆ ನಾನು ಭರವಸೆ ನೀಡಬಲ್ಲೆ. ನಮ್ಮನ್ನು, ಕುಟುಂಬ ಮತ್ತು ಸಮಾಜವನ್ನು ಕೊರೊನಾ ವೈರಸ್‌ನಿಂದ ರಕ್ಷಿಸುವುದು ಈ ಸಂದರ್ಭದಲ್ಲಿ ಮುಖ್ಯ ಉದ್ದೇಶವಾಗಿದೆ. ಆದ್ದರಿಂದ, ಎಲ್ಲರೂ ಮುಂದೆ ಬಂದು ಲಸಿಕೆ ಪಡೆಯಬೇಕು," ಎಂದು ಮನವಿ ಮಾಡಿದ್ದರು.

(ಒನ್‌ಇಂಡಿಯಾ ಸುದ್ದಿ)

English summary
The four vaccines against COVID-19, Covaxin, Covishield, Sputnik V and Moderna which have been approved by the Indian government, are safe for lactating mothers and have no association with infertility, Dr VK Paul, Member-Health, Niti Aayog said on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X