ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧರ್ಮದ ಹೆಸರಿನಲ್ಲಿ ಹಿಂಸಾಚಾರ ಖಂಡಿಸಿದ ಸಾಯಿ ಪಲ್ಲವಿ

|
Google Oneindia Kannada News

ನವದೆಹಲಿ, ಜೂನ್ 15: ದೇಶದಲ್ಲಿ ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಬಹುಭಾಷಾ ನಟಿ ಸಾಯಿ ಪಲ್ಲವಿ ಖಂಡಿಸಿದ್ದಾರೆ. "ಕಾಶ್ಮೀರಿ ಪಂಡಿತರ ಮೇಲಾದದ್ದು ದೌರ್ಜನ್ಯ ಎನ್ನುವುದಾದರೆ, ಜೈ ಶ್ರೀರಾಮ್ ಹೆಸರಿನಲ್ಲಿ ಮುಸ್ಲಿಮರಿಗೆ ಹೊಡೆದದ್ದು ಕೂಡ ದೌರ್ಜನ್ಯವೇ" ಎಂದು ಹೇಳಿದ್ದಾರೆ.

ಯೂಟ್ಯೂಬ್ ಚಾನೆಲ್ ಗ್ರೇಟ್ ಆಂಧ್ರಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಸಾಯಿ ಪಲ್ಲವಿ, "ಆ ಸಮಯದಲ್ಲಿ ಕಾಶ್ಮೀರಿ ಪಂಡಿತರನ್ನು ಹೇಗೆ ಕೊಲ್ಲಲಾಯಿತು ಎಂದು ಕಾಶ್ಮೀರಿ ಫೈಲ್ಸ್ ಚಲನಚಿತ್ರದಲ್ಲಿ ತೋರಿಸಲಾಗಿದೆ. ಈ ವಿಷಯವನ್ನು ಧಾರ್ಮಿಕ ಸಂಘರ್ಷ ಎಂದು ನೀವು ಪರಿಗಣಿಸುತ್ತಿದ್ದರೆ, ಇತ್ತೀಚೆಗೆ ಗೋವುಗಳನ್ನು ಸಾಗಿಸುತ್ತಿದ್ದ ಮುಸ್ಲಿಂ ಚಾಲಕನನ್ನು ಥಳಿಸಿ 'ಜೈ ಶ್ರೀ ರಾಮ್' ಎಂದು ಹೇಳಲು ಒತ್ತಾಯಿಸಿದ ಘಟನೆ ನಡೆದಿದೆ, ಹಾಗಾದರೆ ಎರಡೂ ಘಟನೆಗಳ ನಡುವೆ ಏನು ವ್ಯತ್ಯಾಸ ಇದೆ?" ಎಂದು ಪ್ರಶ್ನಿಸಿದ್ದಾರೆ.

ಉಗ್ರರ ದಾಳಿ ಭೀತಿ :ಕಾಶ್ಮೀರ ತೊರೆಯುತ್ತಿರುವ ಸರಕಾರಿ ನೌಕರರುಉಗ್ರರ ದಾಳಿ ಭೀತಿ :ಕಾಶ್ಮೀರ ತೊರೆಯುತ್ತಿರುವ ಸರಕಾರಿ ನೌಕರರು

ಸಾಯಿ ಪಲ್ಲವಿ ಪ್ರಸ್ತುತ ತಮ್ಮ ಮುಂಬರುವ ತೆಲುಗು ಚಿತ್ರ "ವಿರಾಟ ಪರ್ವಂ" ಪ್ರಚಾರದಲ್ಲಿದ್ದಾರೆ. ರಾಣಾ ದಗ್ಗುಬಾಟಿ ನಾಯಕನಾಗಿ ನಟಿಸಿರುವ ಚಲನಚಿತ್ರವು 1990ರ ದಶಕದ ನೈಜ ಘಟನೆಗಳಿಂದ ಪ್ರೇರಿತವಾಗಿದೆ. ಇದು ತೆಲಂಗಾಣ ಪ್ರದೇಶದಲ್ಲಿ ನಕ್ಸಲೀಯ ಚಳವಳಿಯ ಹಿನ್ನೆಲೆಯಲ್ಲಿ ಪ್ರೇಮಕಥೆಯನ್ನು ಒಳಗೊಂಡಿದೆ.

There Should Be No Violence In The Name Of Religion: Actress Sai Pallavi

ವಿರಾಟ ಪರ್ವಂ ಚಿತ್ರದಲ್ಲಿ ಸಾಯಿ ಪಲ್ಲವಿ ನಕ್ಸಲ್ ನಾಯಕ ರಾವಣ್ಣ (ರಾಣಾ ದಗ್ಗುಬಾಟಿ) ಯನ್ನು ಪ್ರೀತಿಸುವ ವೆನ್ನೆಲಾ ಪಾತ್ರದಲ್ಲಿ ನಟಿಸಿದ್ದಾರೆ. ಅವರ ರಾಜಕೀಯ ಒಲವಿನ ಬಗ್ಗೆ ಕೇಳಲಾದ ಪ್ರಶ್ನೆಗೆ, ಅವರು ಮಧ್ಯಮ ಕುಟುಂಬದಲ್ಲಿ ಬೆಳೆದರು ಮತ್ತು ಮನುಷ್ಯತ್ವ ಬೆಳೆಸಿಕೊಳ್ಳಲು ಹೇಳಿಕೊಟ್ಟಿದ್ದಾರೆ ಎಂದು ಉತ್ತರಿಸಿದ್ದಾರೆ.

"ನೋವಿಗೆ ಒಳಗಾದವರನ್ನು ರಕ್ಷಿಸಬೇಕು ಎಂದು ನನಗೆ ಕಲಿಸಲಾಗಿದೆ, ದಮನಿತರನ್ನು ರಕ್ಷಿಸಬೇಕು" ಎಂದು ಅವರು ಹೇಳಿದರು. ಸಾಯಿ ಪಲ್ಲವಿ ಅಭಿನಯದ "ವಿರಾಟ ಪರ್ವಂ" ಜೂನ್ 17 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

There Should Be No Violence In The Name Of Religion: Actress Sai Pallavi

ಸಾಯಿ ಪಲ್ಲವಿ ಕಾಮೆಂಟ್‌ಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿವೆ. ಕೆಲವು ಟ್ವಿಟರ್ ಬಳಕೆದಾರರು ಆಕೆಯ ಧೈರ್ಯವನ್ನು ಶ್ಲಾಘಿಸಿದರೆ, ಇತರರು ಸಾಯಿ ಪಲ್ಲವಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಯಿ ಪಲ್ಲವಿ ಹೇಳಿಕೆಗೆ ಸ್ಯಾಂಡಲ್‌ವುಡ್ ನಟಿ ರಮ್ಯಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದಮನಿತರಿಗೆ ರಕ್ಷಣೆ ನೀಡಬೇಕು, ಸಾಯಿ ಪಲ್ಲವಿ ಸತ್ಯವನ್ನು ಮಾತನಾಡಿದ್ದಾರೆ ಎಂದು ಅಭಿನಂದಿಸಿ ಟ್ವೀಟ್ ಮಾಡಿದ್ದಾರೆ.

ಮತ್ತೆ ಕೆಲವರು ಸಾಯಿ ಪಲ್ಲವಿ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಗೋವುಗಳನ್ನು ಕದಿಯುವ ಕಳ್ಳನ ಹತ್ಯೆಗೆ ಕಾಶ್ಮೀರಿ ಪಂಡಿತರ ನರಮೇಧವನ್ನು ಹೋಲಿಸುವುದು ಮೂರ್ಖತನ, ಪಂಡಿತರಿಗೆ ಇನ್ನೂ ನ್ಯಾಯ ಸಿಕ್ಕಿಲ್ಲ, ಅವರ ನೋವು ನಿಮಗೆ ಅರ್ಥವಾಗುವುದಿಲ್ಲ ಎಂದು ಹೇಳಿದ್ದಾರೆ.

English summary
Actress Sai Pallavi Said There Should Be No Violence In The Name Of Religion, The oppressed should be protected, She Added.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X