ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇಡಿಕೆ ಪೂರೈಸುವಷ್ಟು ಪೆಟ್ರೋಲ್, ಡೀಸೆಲ್ ಉತ್ಪದಾನೆ: ಕೇಂದ್ರ ಸರ್ಕಾರ

|
Google Oneindia Kannada News

ನವದೆಹಲಿ, ಜೂನ್ 15: ರಾಜಸ್ಥಾನ, ಮಧ್ಯಪ್ರದೇಶ ಮತ್ತು ಕರ್ನಾಟಕದ ಪೆಟ್ರೋಲ್ ಬಂಕ್‌ಗಳಲ್ಲಿ ಜನರು ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದು, ದೇಶದಲ್ಲಿ ಪೆಟ್ರೋಲ್, ಡೀಸೆಲ್ ಕೊರತೆಯಿದೆ ಎನ್ನುವಂತ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು. ಈಗ ವದಂತಿಗಳಿಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ದೇಶದಲ್ಲಿ ಬೇಡಿಕೆಯನ್ನು ಪೂರೈಸುವಷ್ಟು ಇಂಧನ ಉತ್ಪಾದನೆಯಾಗುತ್ತಿದೆ ಎಂದು ಅದು ಹೇಳಿದೆ.

ಬುಧವಾರ ಇಂಧನ ಸಚಿವಾಲಯ ಹೊರಡಿಸಿದ ಹೇಳಿಕೆಯಲ್ಲಿ, "ಕಳೆದ ಕೆಲವು ದಿನಗಳಲ್ಲಿ, ಕೆಲವು ಪ್ರದೇಶಗಳಲ್ಲಿ ಸಾರ್ವಜನಿಕ ವಲಯದ ಉದ್ಯಮ (ಪಿಎಸ್‌ಯು) ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಹೆಚ್ಚಿನ ಜನಸಂದಣಿ ಇರುವುದು ವರದಿಯಾಗಿವೆ, ಇದು ವಿಳಂಬಕ್ಕೆ ಕಾರಣವಾಗುತ್ತದೆ ಮತ್ತುಗ್ರಾಹಕರು ಹೆಚ್ಚು ಸಮಯ ಕಾಯಲು ಕಾರಣವಾಗಿದೆ. ಇದೇ ಸಂದರ್ಭದಲ್ಲಿ ತೈಲ ಮಾರುಕಟ್ಟೆ ಕಂಪನಿಗಳಿಂದ ಪೂರೈಕೆ ನಿರ್ಬಂಧಗಳ ಊಹಾಪೋಹಗಳು ಬಂದಿವೆ" ಎಂದು ಹೇಳಿದೆ.

Infographics: ಜೂನ್ 15ರಂದು ರಾಜ್ಯದಲ್ಲಿ ಪೆಟ್ರೋಲ್-ಡೀಸೆಲ್ ದರ ಎಷ್ಟಿದೆ? Infographics: ಜೂನ್ 15ರಂದು ರಾಜ್ಯದಲ್ಲಿ ಪೆಟ್ರೋಲ್-ಡೀಸೆಲ್ ದರ ಎಷ್ಟಿದೆ?

ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಉತ್ಪಾದನೆಯು ಯಾವುದೇ ಇರುವ ಬೇಡಿಕೆಯ ಪೂರೈಸಲು ಸಾಕಾಗುತ್ತದೆ. ಕೆಲವು ಬೆಳವಣಿಗೆಗಳಿಂದ ಸ್ಥಳೀಯ ಮಟ್ಟದಲ್ಲಿ ಕೆಲವು ತಾತ್ಕಾಲಿಕ ಸರಬರಾಜು ಸಮಸ್ಯೆಗಳನ್ನು ಸೃಷ್ಟಿಸಿದೆ. ತೈಲ ಕಂಪನಿಗಳು ಈ ಸಮಸ್ಯೆಗಳನ್ನು ನಿಭಾಯಿಸಲು ಸಜ್ಜಾಗಿವೆ ಎಂದು ಹೇಳಿದೆ.

ಗುಜರಾತ್‌, ರಾಜಸ್ಥಾನದ ವಿವಿಧೆಡೆ ಪೆಟ್ರೋಲ್‌ ಕೊರತೆಗುಜರಾತ್‌, ರಾಜಸ್ಥಾನದ ವಿವಿಧೆಡೆ ಪೆಟ್ರೋಲ್‌ ಕೊರತೆ

Theres No Shortage of Petrol And Diesel Supply: Petroleum Ministry

ತೈಲ ಮಾರುಕಟ್ಟೆ ಕಂಪನಿಗಳು ಈ ಹೆಚ್ಚುವರಿ ಬೇಡಿಕೆಯನ್ನು ಪೂರೈಸಲು ಸಾಕಷ್ಟು ಪೆಟ್ರೋಲ್ ಮತ್ತು ಡೀಸೆಲ್ ಲಭ್ಯವಿವೆ ಎಂದು ಖಚಿತಪಡಿಸಿದೆ. ರಾಷ್ಟ್ರದ ಇಂಧನ ಅಗತ್ಯಗಳನ್ನು ಪೂರೈಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಪೆಟ್ರೋಲ್, ಡೀಸೆಲ್‌ ಬೇಡಿಕೆ ಹೆಚ್ಚಳ; ಕೆಲವು ರಾಜ್ಯಗಳಲ್ಲಿನ ನಿರ್ದಿಷ್ಟ ಸ್ಥಳಗಳಲ್ಲಿ, ಪೆಟ್ರೋಲ್ ಮತ್ತು ಡೀಸೆಲ್‌ಗೆ ಬೇಡಿಕೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ ಎಂಬುದು ಸತ್ಯ, ಜೂನ್ 2022 ರ ಮೊದಲಾರ್ಧದಲ್ಲಿ ಕಳೆದ ವರ್ಷದ ಅನುಗುಣವಾದ ಅವಧಿಗೆ ಹೋಲಿಸಿದರೆ ಶೇಕಡಾ 50 ರಷ್ಟು ಬೇಡಿಕೆ ಹೆಚ್ಚಳವಾಗಿದೆ. ನಿರ್ದಿಷ್ಟವಾಗಿ, ಇದು ರಾಜಸ್ಥಾನ, ಮಧ್ಯಪ್ರದೇಶ ಮತ್ತು ಕರ್ನಾಟಕದಲ್ಲಿ ಹೆಚ್ಚಾಗಿರುವುದು ಗಮನಕ್ಕೆ ಬಂದಿದೆ ಎಂದು ಸಚಿವಾಲಯ ತಿಳಿಸಿದೆ.

ಖಾಸಗಿ ಮಾರ್ಕೆಟಿಂಗ್ ಕಂಪನಿಗಳಿಗೆ ಸೇರಿದ ಚಿಲ್ಲರೆ ಮಾರಾಟ ಮಳಿಗೆಗಳಿಂದ ಹೆಚ್ಚಿನ ಪ್ರಮಾಣದ ಪೂರೈಕೆಯನ್ನು ಮಾಡಲಾಗುತ್ತಿರುವ ರಾಜ್ಯಗಳು ಮತ್ತು ಪೂರೈಕೆ ಸ್ಥಳಗಳಿಂದ ಅಂದರೆ ಟರ್ಮಿನಲ್‌ಗಳು ಮತ್ತು ಡಿಪೋಗಳಿಂದ ದೂರವಿರುವ ರಾಜ್ಯಗಳಲ್ಲಿ ಈ ಸಮಸ್ಯೆ ಉಂಟಾಗಿದೆ ಎಂದು ಹೇಳಿದೆ.

Theres No Shortage of Petrol And Diesel Supply: Petroleum Ministry

ಈ ಪ್ರದೇಶಗಳಿಗೆ ಪೂರೈಕೆಯನ್ನು ನೀಡಲು ಚಿಲ್ಲರೆ ವ್ಯಾಪಾರಿಗಳು ಕೈಗೊಂಡ ಕ್ರಮಗಳನ್ನು ಪಟ್ಟಿ ಮಾಡುತ್ತಾ, ಡಿಪೋಗಳು ಮತ್ತು ಟರ್ಮಿನಲ್‌ಗಳಲ್ಲಿ ದಾಸ್ತಾನುಗಳನ್ನು ಹೆಚ್ಚಿಸಲಾಗುತ್ತಿದೆ ಮತ್ತು ಚಿಲ್ಲರೆ ಮಳಿಗೆಗಳಿಗೆ ಸೇವೆ ಸಲ್ಲಿಸಲು ಟ್ಯಾಂಕ್ ಟ್ರಕ್‌ಗಳು ಮತ್ತು ಲಾರಿಗಳ ಹೆಚ್ಚುವರಿಯಾಗಿ ನಿಯೋಜಿಸಲಾಗುತ್ತದೆ ಎಂದು ಸಚಿವಾಲಯ ಹೇಳಿದೆ.

ದೇಶದ ಅತಿದೊಡ್ಡ ಇಂಧನ ಚಿಲ್ಲರೆ ವ್ಯಾಪಾರಿ ಇಂಡಿಯನ್ ಆಯಿಲ್, ಪೆಟ್ರೋಲ್ ಪಂಪ್‌ಗಳಲ್ಲಿ ಇಂಧನ ಪೂರೈಕೆಯಲ್ಲಿ ವ್ಯತ್ಯಾಸವಾಗಿಲ್ಲ ಮತ್ತು ಯಾವುದೇ ಇಂಧನದ ಕೊರತೆಯು ಉಂಟಾಗಿಲ್ಲ ಎಂದು ಹೇಳಿಕೆ ನೀಡಿದೆ.

English summary
The production of petrol and diesel in India is more than sufficient to take care of any demand surge. This unprecedented growth has created some temporary logistics issues at the local level.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X