ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ರೈಲ್ವೆ ಖಾಸಗೀಕರಣ : ಸಚಿವ ಪಿಯೂಶ್ ಗೋಯಲ್ ಸ್ಪಷ್ಟನೆ

|
Google Oneindia Kannada News

ನವದೆಹಲಿ, ಜೂನ್ 29: ವಿಶ್ವದ ಅತಿಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳಲ್ಲಿ ಒಂದಾಗಿರುವ ಭಾರತೀಯ ರೈಲ್ವೇಸ್ ಅನ್ನು ಖಾಸಗೀಕರಣಗೊಳಿಸುವ ಸುದ್ದಿಯ ಬಗ್ಗೆ ರೈಲ್ವೆ ಸಚಿವ ಪಿಯೂಶ್ ಗೋಯಲ್ ಸ್ಪಷ್ಟನೆಯನ್ನು ನೀಡಿದ್ದಾರೆ.

ರಾಜ್ಯಸಭೆಯಲ್ಲಿ ಈ ಬಗ್ಗೆ ಹೇಳಿಕೆ ನೀಡಿರುವ ಪಿಯೂಶ್, ರೈಲ್ವೆಯನ್ನು ಖಾಸಗೀಕರಣಕ್ಕೊಳ ಪಡಿಸುವ ಯಾವುದೇ ಯೋಜನೆಯನ್ನು ಕೇಂದ್ರ ಸರ್ಕಾರ ಹೊಂದಿಲ್ಲ ಎಂದು ಲಿಖಿತ ಸ್ಪಷ್ಟನೆಯನ್ನು ನೀಡಿದ್ದಾರೆ.

ದ.ಕದಲ್ಲಿ ರೈಲ್ವೆ ಅಭಿವೃದ್ಧಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಮನವಿದ.ಕದಲ್ಲಿ ರೈಲ್ವೆ ಅಭಿವೃದ್ಧಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಮನವಿ

ಸಮಾಜವಾದಿ ಪಕ್ಷದ ಸಂಸದ ಸುರೇಂದ್ರನಾಥ್ ನಗರ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಪಿಯೂಶ್, ನೂರು ದಿನಗಳ ಯೋಜನೆಯಲ್ಲಿ ಎರಡು ರೈಲುಗಳನ್ನು ಐಆರ್ಸಿಟಿಸಿಗೆ ನೀಡುವ ಪ್ರಸ್ತಾವನೆಯನ್ನು ಇಲಾಖೆ ಸಲ್ಲಿಸಿತ್ತು ಎಂದಿದ್ದಾರೆ.

There is no plan of privatise Indian railways: Minister Piyush Goyal

ತನ್ನ ಏಳು ಉತ್ಪಾದನಾ ಘಟಕವನ್ನು ಇಂಡಿಯನ್ ರೈಲ್ವೆ, ರೋಲಿಂಗ್ ಸ್ಟಾಕ್ ಕಂಪೆನಿಗೆ ಸಲ್ಲಿಸುವ ಬಗ್ಗೆ ಪ್ರಸ್ತಾವವಿರಿಸಿತ್ತು, ಇದಕ್ಕೆ ಕಾರ್ಮಿಕ ಒಕ್ಕೂಟದಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.

ಐಆರ್ ಸಿಟಿಸಿ ವೆಬ್ ಸೇವೆಗೆ ಇನ್ನಷ್ಟು ಸೌಲಭ್ಯಗಳು ಸೇರ್ಪಡೆ ಐಆರ್ ಸಿಟಿಸಿ ವೆಬ್ ಸೇವೆಗೆ ಇನ್ನಷ್ಟು ಸೌಲಭ್ಯಗಳು ಸೇರ್ಪಡೆ

ರಾಜಧಾನಿ ಮತ್ತು ಶತಾಬ್ದಿ ಎಕ್ಸ್ ಪ್ರೆಸ್ ರೈಲುಗಳ ನಿರ್ವಹಣೆಯನ್ನು ಖಾಸಗಿ ಸಂಸ್ಥೆಗೆ ನೀಡಲು ಕೇಂದ್ರ ಸರಕಾರ ನಿರ್ಧರಿಸಿದೆ ಎನ್ನುವ ಮಾತು ಚಾಲ್ತಿಯಲ್ಲಿತ್ತು. ಈಗ, ಖುದ್ದು ಸಚಿವರೇ ಈ ವಿಷಯವನ್ನು ತಳ್ಳಿಹಾಕಿದ್ದಾರೆ.

ರೈಲ್ವೆಯಲ್ಲಿ ಒಂಬತ್ತು ಸಾವಿರ ಕಾನ್ಸ್ಟೇಬಲ್ ಹುದ್ದೆ ಖಾಲಿಯಿದ್ದು, ಅದನ್ನು ಭರ್ತಿ ಮಾಡುವ ಕೆಲಸ ಆರಂಭವಾಗಿದ್ದು, ಇದರಲ್ಲಿ ಶೇ. 50ರಷ್ಟನ್ನು ಮಹಿಳೆಯರಿಗೆ ಮೀಸಲಿಡಲಾಗುವುದು ಎಂದು ಸಚಿವ ಪಿಯೂಶ್ ಹೇಳಿದ್ದಾರೆ.

English summary
Union Minister for Railways Piyush Goyal said the Railways has no plans to privatise the national transporter or its premium trains such as Rajdhani and Shatabdi express, amidst speculation that there was a proposal to rope in private operators.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X