ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇಟಿ ಬಚಾವೋ: ಉತ್ತರಕಾಶಿಯ ಈ ಹಳ್ಳಿಗಳಲ್ಲಿ ಹೆಣ್ಣು ಮಕ್ಕಳೇ ಜನಿಸುತ್ತಿಲ್ಲ!

|
Google Oneindia Kannada News

ಉತ್ತರಕಾಶಿ (ಉತ್ತರಾಖಂಡ್), ಜುಲೈ 22: ಕೇಂದ್ರ ಸರಕಾರವು 'ಬೇಟಿ ಬಚಾವೋ ಬೇಟಿ ಪಢಾವೋ' ಅಭಿಯಾನದ ಮೂಲಕ ಹೆಣ್ಣುಮಕ್ಕಳ ಪ್ರೋತ್ಸಾಹಕ್ಕೆ ಕಾರ್ಯಕ್ರಮ ರೂಪಿಸಿದೆ. ಇಂಥ ಸನ್ನಿವೇಶದಲ್ಲಿ ಉತ್ತರಾಖಂಡ್ ರಾಜ್ಯದ ಉತ್ತರಕಾಶಿ ಜಿಲ್ಲೆಯ 132 ಹಳ್ಳಿಗಳಲ್ಲಿ ಜನನ ಮಾಹಿತಿಯ ಲಿಂಗಾನುಪಾತ ಪ್ರಮಾಣವು ಬಹಿರಂಗವಾಗಿದ್ದು, ಕಳೆದ ಮೂರು ತಿಂಗಳಲ್ಲಿ ಈ ಪ್ರದೇಶದಲ್ಲಿ ಒಂದೇ ಒಂದು ಹೆಣ್ಣುಮಗು ಜನಿಸಿಲ್ಲ.

ಲಭ್ಯ ದತ್ತಾಂಶದ ಪ್ರಕಾರ, ಕಳೆದ ಮೂರು ತಿಂಗಳಲ್ಲಿ 216 ಮಕ್ಕಳು ಉತ್ತರಕಾಶಿ ಜಿಲ್ಲೆಯ ಒಟ್ಟು 132 ಹಳ್ಳಿಗಳಲ್ಲಿ ಜನಿಸಿವೆ. ಆದರೆ ನವಜಾತ ಶಿಶುಗಳಲ್ಲಿ ಒಂದು ಹೆಣ್ಣು ಮಗು ಇಲ್ಲದಿರುವುದು ಜಿಲ್ಲಾಡಳಿತವನ್ನೇ ಅಚ್ಚರಿಗೆ ದೂಡಿದೆ. ಹೆಣ್ಣು ಭ್ರೂಣ ಹತ್ಯೆಯ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಬಾಲಕಿಯ ಪ್ರಾಣ ರಕ್ಷಣೆಗಾಗಿ ಪ್ರವಾಹವನ್ನೂ ಲೆಕ್ಕಿಸದ CRPF ಯೋಧರುಬಾಲಕಿಯ ಪ್ರಾಣ ರಕ್ಷಣೆಗಾಗಿ ಪ್ರವಾಹವನ್ನೂ ಲೆಕ್ಕಿಸದ CRPF ಯೋಧರು

"ನಾವು ಕೆಲವು ಪ್ರದೇಶಗಳನ್ನು ಗುರುತಿಸಿದ್ದೇವೆ. ಅಲ್ಲಿ ಹೆಣ್ಣುಮಕ್ಕಳ ಜನನ ಸಂಖ್ಯೆ ಶೂನ್ಯ ಅಥವಾ ಒಂದಂಕಿಯಲ್ಲಿದೆ. ಈ ಪ್ರದೇಶಗಳಲ್ಲಿ ಗಂಡು ಹಾಗೂ ಹೆಣ್ಣು ಮಕ್ಕಳ ಜನನ ಅನುಪಾತದ ಮೇಲೆ ಈ ರೀತಿ ಪರಿಣಾಮ ಬೀರುತ್ತಿರುವ ಅಂಶಗಳೇನು ಎಂದು ಪರಿಶೀಲಿಸುತ್ತಿದ್ದೇವೆ. ಕಾರಣದ ಹಿಂದಿನ ಅಂಶವನ್ನು ಪತ್ತೆ ಹಚ್ಚಲು ಸಮಗ್ರವಾದ ಸಮೀಕ್ಷೆ, ಅಧ್ಯಯನ ನಡೆಸಲಿದ್ದೇವೆ" ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಆಶಿಶ್ ಚೌಹಾಣ್ ತಿಳಿಸಿದ್ದಾರೆ.

There is no girl child born in last 3 months in Uttara Kashis 132 villages

ಆಶಾ ಕಾರ್ಯಕರ್ತೆಯರ ಜತೆ ತುರ್ತು ಸಭೆ ನಡೆಸಿದ್ದು, ಈ ಪ್ರದೇಶಗಳಲ್ಲಿ ನಿಗಾ ಕ್ರಮಗಳನ್ನು ಹೆಚ್ಚಿಸಿ, ದತ್ತಾಂಶಗಳನ್ನು ಒಳಗೊಂಡಂತೆ ಕಾರಣದ ಬಗ್ಗೆ ಸಮಗ್ರ ವರದಿ ಸಲ್ಲಿಸಲು ಸೂಚನೆ ನೀಡಲಾಗಿದೆ. ಅಂದ ಹಾಗೆ ಈ ತುರ್ತು ಸಭೆಯಲ್ಲಿ ಗಂಗೋತ್ರಿಯ ಜನ ಪ್ರತಿನಿಧಿ ಗೋಪಾಲ್ ರಾವತ್ ಕೂಡ ಪಾಲ್ಗೊಂಡಿದ್ದರು.

"ಕಳೆದ ಮೂರು ತಿಂಗಳಿಂದ ಈ ಹಳ್ಳಿಗಳಲ್ಲಿ ಹೆಣ್ಣುಮಕ್ಕಳು ಜನಿಸಿಲ್ಲ ಎಂಬುದು ಕಾಕತಾಳೀಯ ಅಲ್ಲ. ಹೆಣ್ಣು ಭ್ರೂಣ ಹತ್ಯೆ ಆಗುತ್ತಿರುವುದರಿಂದಲೇ ಹೀಗಾಗಿದೆ. ಸರಕಾರವಾಗಲೀ ಜಿಲ್ಲಾಡಳಿತವಾಗಲೀ ಈ ಸಂಬಂಧ ಯಾವ ಕ್ರಮವನ್ನು ಕೈಗೊಳ್ಳುತ್ತಿಲ್ಲ" ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ಆರೋಪಿಸಿದ್ದಾರೆ.

English summary
There is no girl child born in last 3 months in Uttara Kashi's 132 villages, report revealed by district administration. Here is the complete details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X