ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಕಿ ರಫ್ತಿನ ಮೇಲೆ ನಿರ್ಬಂಧ ವಿಧಿಸಲ್ಲ; ಕೇಂದ್ರ ಸರ್ಕಾರ

|
Google Oneindia Kannada News

ನವದೆಹಲಿ, ಮೇ 31: ದೇಶದಲ್ಲಿ ಅಗತ್ಯಕ್ಕೆ ತಕ್ಕಷ್ಟು ಅಕ್ಕಿ ದಾಸ್ತಾನು ಲಭ್ಯವಿದ್ದು, ಬೆಲೆ ನಿಯಂತ್ರಣದಲ್ಲಿದೆ, ಅಕ್ಕಿಯ ರಫ್ತಿನ ಮೇಲೆ ನಿಷೇಧ ಹೇರುವ ವದಂತಿ ಸತ್ಯಕ್ಕೆ ದೂರವಾದುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಾಸ್ಮತಿ ಇತರೆ ಅಕ್ಕಿ ದಾಸ್ತಾನು ಲಭ್ಯವಿದೆ ಎಂದು ಹೇಳಿದ್ದಾರೆ. 2021-22ನೇ ಮಾರುಕಟ್ಟೆ ವರ್ಷದಲ್ಲಿ ಗೋಧಿ ರಫ್ತು ನಿಷೇಧ ಮಾಡಿದ್ದ ಕೇಂದ್ರ, ಸಕ್ಕರೆ ರಫ್ತಿನ ಮೇಲೆ ಮಿತಿ ಹೇರಿತ್ತು. ಈ ಬೆನ್ನಲ್ಲೇ ಅಕ್ಕಿ ರಫ್ತಿಗು ಕಡಿವಾಣ ಹಾಕಲಿದೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದ್ದು ಕೇಂದ್ರ ಈಗ ಸ್ಪಷ್ಟನೆ ನೀಡಿದೆ.

ಗೋಧಿ ಸರಬರಾಜಿನಲ್ಲಿ ಕೊರತೆ, ಪರಿಹಾರಗಳು ಗೋಧಿ ಸರಬರಾಜಿನಲ್ಲಿ ಕೊರತೆ, ಪರಿಹಾರಗಳು

"ಅಕ್ಕಿಯ ರಫ್ತು ನಿಯಂತ್ರಣಕ್ಕೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಸರ್ಕಾರದ ಗೋದಾಮುಗಳಲ್ಲಿ ಮತ್ತು ಖಾಸಗಿ ವ್ಯಾಪಾರಿಗಳಲ್ಲಿ ಸಾಕಷ್ಟು ದಾಸ್ತಾನು ಇದೆ. ಸದ್ಯಕ್ಕೆ ದೇಶೀಯ ಬೆಲೆಗಳು ಸಹ ನಿಯಂತ್ರಣದಲ್ಲಿವೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

There Is No Ban Or Curb Exports Of Basmati And Non Basmati Rice

ಅಧಿಕೃತ ಮಾಹಿತಿಯ ಪ್ರಕಾರ ಚೀನಾದ ನಂತರ ವಿಶ್ವದ ಎರಡನೇ ಅತಿದೊಡ್ಡ ಅಕ್ಕಿ ಉತ್ಪಾದಕ ರಾಷ್ಟ್ರ ಭಾರತವು 2021-22ರಲ್ಲಿ 6.11 ಶತಕೋಟಿ ಡಾಲರ್ ಮೌಲ್ಯದ ಬಾಸ್ಮತಿ, ಮತ್ತು ಇತರೆ ತಳಿಯ ಅಕ್ಕಿಯನ್ನು ರಫ್ತು ಮಾಡಿದೆ, ಇದು 2020-21 ರಲ್ಲಿ 4.8 ಶತಕೋಟಿ ಡಾಲರ್‌ನಷ್ಟಿತ್ತು. 2021-22ನೇ ಸಾಲಿನಲ್ಲಿ ಭಾರತ 150 ದೇಶಗಳಿಗೆ ಬಾಸ್ಮತಿ, ಮತ್ತು ಇತರೆ ತಳಿಯ ಅಕ್ಕಿಯನ್ನು ರಫ್ತು ಮಾಡಿದೆ.

24 ರಾಜ್ಯಗಳಿಗೆ 86,912 ಕೋಟಿ ರೂ. ಜಿಎಸ್‌ಟಿ ಪರಿಹಾರ ಘೋಷಿಸಿದ ಕೇಂದ್ರ ಸರ್ಕಾರ24 ರಾಜ್ಯಗಳಿಗೆ 86,912 ಕೋಟಿ ರೂ. ಜಿಎಸ್‌ಟಿ ಪರಿಹಾರ ಘೋಷಿಸಿದ ಕೇಂದ್ರ ಸರ್ಕಾರ

ಗೋಧಿ ರಫ್ತು ನಿಷೇಧಿಸಿದ್ದ ಭಾರತ; ಗೋಧಿಯ ರಪ್ತು ನಿಷೇಧಿಸುವ ಮುನ್ನ 10 ದಶಲಕ್ಷ ಮೆಟ್ರಿಕ್ ಟನ್ ಗೋಧಿ ರಫ್ತು ಮಾಡುವ ಗುರಿಯನ್ನು ಹೊಂದಿತ್ತು. ಉತ್ತರ ಭಾರತದಲ್ಲಿ ಬಿಸಿಗಾಳಿ, ಅಧಿಕ ತಾಪಮಾನದ ಪರಿಣಾಮ ಗೋಧಿ ಇಳುವರಿ ಕುಸಿತ ಕಂಡಿತ್ತು. ದೇಶೀಯ ಬೇಡಿಕೆ ಹೆಚ್ಚಿರುವ ಕಾರಣ ಗೋಧಿ ರಫ್ತು ನಿಷೇಧಿಸಿತ್ತು.

ಭಾರತದ ಗೋಧಿ ರಫ್ತು ನಿಷೇಧ ಕ್ರಮಕ್ಕೆ ಜಗತ್ತಿನ ಹಲವು ದೇಶಗಳು ವಿರೋಧ ವ್ಯಕ್ತಪಡಿಸಿದ್ದವು. ಅಮೆರಿಕ ಸೇರಿದಂತೆ ಇತರೆ ದೇಶಗಳು ಗೋಧಿ ರಫ್ತು ನಿಷೇಧ ತೆರವು ಮಾಡಲು ಒತ್ತಾಯ ಮಾಡುತ್ತಲೇ ಇವೆ.

There Is No Ban Or Curb Exports Of Basmati And Non Basmati Rice

ಅಕ್ಕಿ ರಫ್ತು ನಿಷೇಧ ಚಿಂತನೆ ಇಲ್ಲ; ಅಕ್ಕಿ ರಫ್ತಿ ನಿಷೇಧ ವದಂತಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಧಿಕಾರಿಯೊಬ್ಬರು, ರಫ್ತಿನ ಮೇಲೆ ನಿಷೇಧ ಮಾಡುವ ಬಗ್ಗೆಯಾಗಲೀ ಅಥವಾ ರಫ್ತಿನ ಮೇಲೆ ಮಿತಿ ಹೇರುವ ನಿಯಮ ಜಾರಿ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಭಾರತ ಈಗಾಗಲೇ ಬಾಸ್ಮತಿ ಸೇರಿ ವಿವಿಧ ತಳಿಯ 21.1 ಮಿಲಿಯನ್ ಮೆಟ್ರಿಕ್ ಟನ್‌ಗಳಷ್ಟು ಅಕ್ಕಿಯನ್ನು ರಫ್ತು ಮಾಡಿದೆ. ಮಾಹಿತಿ ಪ್ರಕಾರ ಭಾರತೀಯ ಆಹಾರ ನಿಗಮದ ವ್ಯಾಪ್ತಿಯಲ್ಲಿ 33.27 ಮಿಲಿಯನ್ ಟನ್ ಅಕ್ಕಿ, 26.61 ಮಿಲಿಯನ್ ಟನ್‌ ಭತ್ತ ದಾಸ್ತಾನು ಮಾಡಿದೆ.

English summary
The central government has no plans to ban or impose curbs on export of either basmati or non-basmati rice Official Confirms.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X