ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐದು ವರ್ಷದಲ್ಲಿ 914 ಬಾಂಬ್ ದಾಳಿಗಳು ಭಾರತದಲ್ಲಿ ಆಗಿವೆ: ರಾಹುಲ್ ಟ್ವೀಟ್‌

|
Google Oneindia Kannada News

ನವದೆಹಲಿ, ಮೇ 03: ಭಾರತದಲ್ಲಿ ಕಳೆದ ಐದು ವರ್ಷದಲ್ಲಿ 914 ಬಾಂಬ್ ದಾಳಿಗಳು ಸಂಭವಿಸಿವೆ ಮೋದಿ ಅವರು ಕಿವಿಗೊಟ್ಟು ಕೇಳಿಲ್ಲವಷ್ಟೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಪುಲ್ವಾಮಾ, ಪಠಾಣ್‌ಕೋಟ್, ಉರಿ, ಗಡ್ಚಿರೋಲಿ ಸೇರಿದಂತೆ ಒಟ್ಟು 914 ದೊಡ್ಡ ಪ್ರಮಾಣದ ಬಾಂಬ್ ದಾಳಿಗಳು 2014 ರಿಂದ ಈಚೆಗೆ ಆಗಿವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ನಮ್ಮ ಅವಧಿಯಲ್ಲಿ ಯಾವುದೇ ಬಾಂಬ್ ದಾಳಿ ಆಗಿಲ್ಲವೆಂದು ನರೇಂದ್ರ ಮೋದಿ ಅವರು ಸಮಾವೇಶವೊಂದರಲ್ಲಿ ಹೇಳಿದ್ದರ ವರದಿಯನ್ನು ಟ್ವೀಟ್‌ಗೆ ಅಂಟಿಸಿರುವ ರಾಹುಲ್ ಗಾಂಧಿ ಮೋದಿ ಅವರು ಕಿವಿಗೊಟ್ಟು ಕೇಳಿಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ.

There are 914 bomb blasts in India in last five years: Rahul Gandhi

ಸೌತ್ ಏಷ್ಯಾ ಟೆರರಿಸಂ ಪೋರ್ಟಲ್‌ ನೀಡುವ ಮಾಹಿತಿ ಪ್ರಕಾರ ಕಳೆದ ಐದು ವರ್ಷದಲ್ಲಿ ಭಾರತದಲ್ಲಿ 942 ಬಾಂಬ್ ಬ್ಲಾಸ್ಟ್‌ಗಳಲು ಸಂಭವಿಸಿವೆ ಅವುಗಳಲ್ಲಿ 451 ಮಂದಿ ಸಾವನ್ನಪ್ಪಿದ್ದಾರೆ, 1589 ಮಂದಿ ಗಾಯಾಳುಗಳಾಗಿದ್ದಾರೆ.

ಭಾರತದ ಎನ್‌ಎಸ್‌ಜಿ ಮತ್ತು ರಾಷ್ಟ್ರೀಯ ಬಾಂಬ್ ದಾಳಿ ದತ್ತಾಂಶ ಸಂಗ್ರಹ ಕೇಂದ್ರ 2016 ರಲ್ಲಿ ಒದಗಿಸಿದ್ದ ಮಾಹಿತಿ ಪ್ರಕಾರ, 2016ರಲ್ಲಿಯೇ 112 ಜನ ಬಾಂಬ್ ದಾಳಿಗಳಿಂದ ಹತರಾಗಿದ್ದರು ಮತ್ತು 479 ಮಂದಿ ಗಾಯಾಳುಗಳಾಗಿದ್ದರು.

ಈ ಎಲ್ಲ ಮಾಹಿತಿಗಳನ್ನು ಒಳಗೊಂಡ ಲೇಖನವೊಂದನ್ನು ರಾಹುಲ್ ಗಾಂಧಿ ಅವರು ತಮ್ಮ ಟ್ವೀಟ್‌ನಲ್ಲಿ ಸೇರಿಸಿದ್ದಾರೆ.

English summary
There are 914 bomb blasts in India in last five years of Narendra Modi tweets AICC president Rahul Gandhi, He attached a fact check news copy to his tweet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X