ಇಂದು ವಿಶ್ವ ಹೆಡ್ ಇಂಜ್ಯುರಿ ಡೇ: ನಿಮ್ಮ ತಲೆ, ನಿಮ್ಮ ಹೊಣೆ!

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 20: ಅಪಘಾತ ಪ್ರಕರಣಗಳಂತೂ ದಿನ ದಿನವೂ ವರದಿಯಾಗುತ್ತಲೇ ಇರುತ್ತದೆ. ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಪರಿ ಪರಿಯಾಗಿ ಕೇಳಿಕೊಂಡರೂ ಅದರ ಉಲ್ಲಂಘನೆಯಾಗುತ್ತಲೇ ಇರುತ್ತದೆ. ಅಪಘಾತಗಳು ಸಂಭವಿಸಿದಾಗ ದೇಹದ ಯಾವುದೇ ಭಾಗಕ್ಕೆ ಗಾಯವಾದರೂ ಅದಕ್ಕೆ ಸೂಕ್ತ ಚಿಕಿತ್ಸೆ ನೀಡಬಹುದು. ಆದರೆ ತಲೆಗೆ ಏಟುಬಿದ್ದರೆ ಮನುಷ್ಯ ಬದುಕುವುದು ಕಷ್ಟ. ಇಡೀ ದೇಹದ ಕ್ರಿಯೆಯನ್ನೂ ಮೆದುಳಿನಲ್ಲಿರುವ ನರಗಳು ನಿಯಂತ್ರಿಸುವುದರಿಂದ ಅಲ್ಲಿ ಏಟು ಬಿದ್ದರೆ ಇಡೀ ದೇಹವೂ ನಿಶ್ಚಲವಾಗುತ್ತದೆ.

ಕೇವಲ ಅಪಘಾತ ಪ್ರಕರಣಗಳಲ್ಲಿ ಎಂದಷ್ಟೇ ಅಲ್ಲ, ಇನ್ನಿತರ ಸಂದರ್ಭಗಳಲ್ಲೂ ತಲೆಗೆ ಏಟು ಬಿದ್ದರೆ ತಕ್ಷಣವೇ ವೈದ್ಯರನ್ನೊಮ್ಮೆ ಕಾಣುವುದು ಸೂಕ್ತ. ಆದರೆ ಹಲವರಿಗೆ ಈ ಬಗ್ಗೆ ಅರಿವಿಲ್ಲ. ಆದ್ದರಿಂದಲೇ ಈ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಪ್ರತಿವರ್ಷ ಮಾರ್ಚ್ 20 ಅನ್ನು ವಿಶ್ವ ಹೆಡ್ ಇಂಜ್ಯುರಿ ಡೇ(World Head Injury Awareness Day)ಯನ್ನಾಗಿ ಆಚರಿಸಲಾಗುತ್ತದೆ.

ಅಯ್ಯಯ್ಯೋ, ಇಲ್ನೋಡಿ, ಥಾಣೆ ರಸ್ತೆಯಲ್ಲೊಬ್ಬ ತಲೆಯಿಲ್ಲದ ಮನುಷ್ಯ!

ಅಪಘಾತದ ಸಂದರ್ಭದಲ್ಲಿ ತಲೆಗೆ ಅಪಘಾತವಾಗದಂತೆ ತಪ್ಪಿಸಲು ಹೆಲ್ಮೇಟ್ ಧರಿಸುವುದನ್ನು ಈಗಾಗಲೇ ಹಲವೆಡೆ ಕಡ್ಡಾಯಗೊಳಿಸಲಾಗಿದೆ. ವಿಶ್ವ ಹೆಡ್ ಇಂಜ್ಯೂರಿ ಡೆ ಸಲುವಾಗಿ ಟ್ವೀಟ್ ಮಾಡಿರುವ ಬೆಂಗಳೂರು ನಗರ ಟ್ರಾಫಿಕ್ ವಿಭಾಗದ ಹೆಚ್ಚುವರಿ ಆಯುಕ್ತ ಆರ್.ಹಿತೇಂದ್ರ "ಇಂದು ವಿಶ್ವ ಹೆಡ್ ಇಂಜ್ಯೂರಿ ಡೆ. ತಲೆಯ ಕಾಳಜಿಗೆ ಹೆಚ್ಚಿನ ಗಮನ ನೀಡಿ" ಎಂದಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಪ್ರತಿವರ್ಷ ಶೇ.5 ರಷ್ಟು ಜನ ಅಪಘಾತ ಪ್ರಕರಣಗಳಿಂದಾಗಿ ಮೆದುಳಿನ ಗಾಯಕ್ಕೆ ತುತ್ತಾಗುತ್ತಾರೆ ಎಂದು ವರದಿಯೊಂದು ಹೇಳುತ್ತದೆ. ಅದಕ್ಕೆಂದೇ ಕಾರು ಚಲಾಯಿಸುವಾಗ ಸೀಟ್ ಬೆಲ್ಟ್ ಅನ್ನು, ದ್ವಿಚಕ್ರ ವಾಹನ ಚಲಾಯಿಸುವಾಗ ಹೆಲ್ಮೇಟ್ ಅನ್ನೂ ಮರೆಯದೇ ಬಳಸಿ ಎಂಬುದು ಕಾಳಜಿಯ ನುಡಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The World Head Injury Awareness Day falls on March 20th every year and it looks at the number of people who suffer from a mild bump on their head to severe brain injury. The purpose of this day is to remind us on how we could reduce accidents and brain injuries if we are mindful.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ