ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದ ಮೊದಲ ಕೊರೊನಾ ಟೆಸ್ಟಿಂಗ್ ಕಿಟ್ ತಯಾರಿಸಿದ ತುಂಬು ಗರ್ಭಿಣಿ

|
Google Oneindia Kannada News

ಮುಂಬೈ, ಮಾರ್ಚ್ 30: ಮಗುವಿಗೆ ಜನ್ಮ ನೀಡುವ ಒಂದು ದಿನದ ಹಿಂದಷ್ಟೇ ಸೂಕ್ಷ್ಮ ರೋಗಾಣು ಶಾಸ್ತ್ರಜ್ಞೆ ಡಾ. ಮಿನಾಲ್ ದೇಶದ ಮೊದಲ ಕೊರೊನಾ ವೈರಸ್ ಟೆಸ್ಟಿಂಗ್ ಕಿಟ್ ತಯಾರಿಸಿದ್ದರು.

Recommended Video

ದೇಶದ ಜನರಲ್ಲಿ ಕ್ಷಮೆಯಾಚಿಸಿದ ಪ್ರಧಾನಿ ಮೋದಿ | Modi | Oneindia Kannada

ಮೌಲ್ಯಮಾಪನಕ್ಕಾಗಿ ಟೆಸ್ಟಿಂಗ್ ಕಿಟ್‌ನ್ನು ಅಧಿಕಾರಿಗಳಿಗೆ ನೀಡುವ ಒಂದು ದಿನದ ಮೊದಲೇ ಮುದ್ದಾದ ಹೆಣ್ಣುಮಗುವಿಗೆ ಮಿನಾಲ್ ಜನ್ಮ ನೀಡಿದ್ದಾರೆ.

ಕಿಟ್ ತಯಾರಿಕೆ ಹಾಗೂ ಗರ್ಭಾವಸ್ಥೆ ಎರಡೂ ಒಂದೇ ಹಳಿಯ ಮೇಲೆ ಸಾಗಿತು ಈಗಾಗಿ ಎರೆಡೆರೆಡು ಮಗುವಿಗೆ ಜನ್ಮ ನೀಡಿದಂತಾಗಿದೆ ಎಂದು ಮಿನಾಲ್ ಹೇಳಿಕೊಂಡಿದ್ದಾರೆ.

ಕೋವಿಡ್-19: ಧೂಮಪಾನಿಗಳಿಗೆ ಹೆಚ್ಚು ಅಪಾಯ-ಡಾ. ವಿಶಾಲ್ ರಾವ್ಕೋವಿಡ್-19: ಧೂಮಪಾನಿಗಳಿಗೆ ಹೆಚ್ಚು ಅಪಾಯ-ಡಾ. ವಿಶಾಲ್ ರಾವ್

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನನ್ನ ಸೇವೆಗೆ ಒಳ್ಳೆಯ ಸಮಯ ಎಂದೆನೆಸಿತು. ಹೀಗಾಗಿ ಗರ್ಭಿಣಿ ಎಂಬುದನ್ನೂ ಲೆಕ್ಕಿಸದೆ ಟೆಸ್ಟಿಂಗ್ ಕಿಟ್ ತಯಾರಿಕೆಗೆ ಮುಂದಾದೆ ಎಂದು ಮಿನಾಲ್ ಹೇಳಿಕೊಂಡಿದ್ದಾರೆ.

ಮಿನಾಲ್ ಯಾರು?

ಮಿನಾಲ್ ಯಾರು?

ಮಿನಾಲ್ ಅವರು ಪುಣೆಯ ಮೈ ಲ್ಯಾಬ್ ಡಿಸ್ಕವರಿ ಸಲ್ಯೂಷನ್ಸ್‌ನಲ್ಲಿ ಸೂಕ್ಷ್ಮ ರೋಗಾಣು ಶಾಸ್ತ್ರಜ್ಞೆ ಹಾಗೂ ರಿಸರ್ಚ್ ಆಂಡ್ ಡೆವಲಪ್‌ಮೆಂಟ್ ಚೀಫ್ ಆಗಿದ್ದಾರೆ. 2009ರಲ್ಲಿ ಬಂದಿದ್ದ ಸ್ವೈನ್ ಫ್ಲ್ಯೂ ಸಮಯದಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಇವರಿಗಿದೆ.

ಟೆಸ್ಟಿಂಗ್ ಕಿಟ್ 2.5 ಗಂಟೆಗಳಲ್ಲಿ ಫಲಿತಾಂಶ ನೀಡುತ್ತದೆ

ಟೆಸ್ಟಿಂಗ್ ಕಿಟ್ 2.5 ಗಂಟೆಗಳಲ್ಲಿ ಫಲಿತಾಂಶ ನೀಡುತ್ತದೆ

ಹತ್ತು ವರ್ಷಗಳಿಂದ ತಮ್ಮ ತಂಡದ ಜೊತೆಗೆ ಒಳ್ಳೆಯ ಬಾಂಧವ್ಯ ಇರುವುದರಿಂದ ಕಿಟ್ ತಯಾರಿಕೆಗೂ ಸಹಾಯವಾಯಿತು. ದೇಶಕ್ಕಾಗಿ ಸೇವೆಯೊಂದನ್ನು ಮಾಡಿದ ಖುಷಿಯಿದೆ ಎಂದು ಮಿನಾಲ್ ಹೇಳುತ್ತಾರೆ. ಈ ಟೆಸ್ಟಿಂಗ್ ಕಿಟ್ ಮೂಲಕ 2.5 ಗಂಟೆಗಳಲ್ಲಿ ಫಲಿತಾಂಶವನ್ನು ಕಂಡುಕೊಳ್ಳಬಹುದಾಗಿದೆ. ಇದಕ್ಕೂ ಮೊದಲು 8 ಗಂಟೆಗಳು ಬೇಕಾಗುತ್ತಿತ್ತು.

ಕಚೇರಿಗೆ ಭೇಟಿ ನೀಡಲು ಸಾಧ್ಯವಾಗುತ್ತಿರಲಿಲ್ಲ

ಕಚೇರಿಗೆ ಭೇಟಿ ನೀಡಲು ಸಾಧ್ಯವಾಗುತ್ತಿರಲಿಲ್ಲ

ಈ ಕ್ಷೇತ್ರದಲ್ಲಿ ಐದು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೇನೆ, ದೇಶಕ್ಕೆ ಸೇವೆ ಅಗತ್ಯವಾಗಿರುವಾಗ ಗರ್ಭಿಣಿ ಎಂದು ಸುಮ್ಮನಾದರೆ ಪ್ರೋಜನವೇನಿದೆ. ಕಿಟ್ ತಯಾರಿಕ ಸಮಯದಲ್ಲಿ ಕಚೇರಿಗೆ ಬರಲು ಸಾಧ್ಯವಾಗದಿದ್ದರೂ ಅಲ್ಲಿಂದಲೇ ಮಾರ್ಗದರ್ಶನ ನೀಡುತ್ತಿದ್ದರು.

ಒಂದಿಷ್ಟು ತೊಡಕುಗಳು ಉಂಟಾಗಿದ್ದವು

ಒಂದಿಷ್ಟು ತೊಡಕುಗಳು ಉಂಟಾಗಿದ್ದವು

ಗರ್ಭಿಣಿಯಾಗಿ ಟೆಸ್ಟಿಂಗ್ ಕಿಟ್ ತಯಾರಿಸುವಾಗ ಒಂದಿಷ್ಟು ತೊಡಕುಗಳು ಉಮಟಾಗಿದ್ದವು. ಸಿಸೀರಿಯನ್ ಮೂಲಕ ಹೆರಿಗೆ ನಡೆಯಿತು. ಕೊರೊನಾ ವೈರಸ್ ವಿರುದ್ಧ ಹೋರಾಡಲು ಮತ್ತು ಜನರಿಗೆ ನೆರವು ನೀಡಲು ಇದೊಂದು ಒಳ್ಳೆಯ ಅವಕಾಶ ಎನಿಸಿತು ಎಂದು ಹೇಳಿಕೊಂಡಿದ್ದಾರೆ.

English summary
ndustrialist Anand Mahindra and actor Soni Razdan are among the thousands who are applauding the efforts of Minal Dakhave Bhosale - the virologist behind India's first coronavirus testing kit .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X