ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Eid-ul-Fitr 2022 moon sighting : ಕಾಣದ ಚಂದ್ರ; ಮೇ 3ರಂದು ಈದ್-ಉಲ್-ಫಿತರ್ ಆಚರಣೆ

|
Google Oneindia Kannada News

ಭಾರತ, ಮೇ 02: ಭಾನುವಾರ ಸಂಜೆ ಚಂದ್ರನ ದರ್ಶನವಾಗದ ಕಾರಣ ರಂಜಾನ್ ತಿಂಗಳ ಉಪವಾಸದ ಅಂತ್ಯವನ್ನು ಸೂಚಿಸುವ ಈದ್-ಉಲ್-ಫಿತರ್ ಅನ್ನು ಮಂಗಳವಾರದಂದು ದೇಶದಲ್ಲಿ ಆಚರಿಸಲು ತೀರ್ಮಾನಿಸಲಾಗಿದೆ.

ಫತೇಪುರಿ ಮಸೀದಿ ಇಮಾಮ್ ಮುಫ್ತಿ ಮುಕರಮ್ ಅಹ್ಮದ್ ಈ ಕುರಿತು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದು, ಮಸೀದಿಯ ರುಯೆಟ್-ಇ-ಹಿಲಾಲ್ ಸಮಿತಿಯು ನವದೆಹಲಿ, ಪಶ್ಚಿಮ ಬಂಗಾಳ, ಬಿಹಾರ ಮತ್ತು ದೇಶದ ಇತರ ಭಾಗಗಳಲ್ಲಿ ಚಂದ್ರನ ದರ್ಶನವಾಗಿಲ್ಲ. ಹೀಗಾಗಿ ಸೋಮವಾರ ರಂಜಾನ್ ಕೊನೆಯ ದಿನವಾಗಿದ್ದು, ಮಂಗಳವಾರ ಈದ್‌ ಆಚರಿಸಲಾಗುವುದು ಎಂದು ಹೇಳಿದರು.

ಮರ್ಕಝಿ ಚಾಂದ್ ಸಮಿತಿಯ ಮುಖ್ಯಸ್ಥ ಖಾಲಿದ್ ರಶೀದ್ ಫಿರಂಗಿ ಮಹಾಲಿ ಮಾತನಾಡಿ, ಶವ್ವಾಲ್ ಚಂದ್ರನ ದರ್ಶನವಾಗಿಲ್ಲ ಮತ್ತು ಮೇ 3 ರಂದು ಈದ್ ಆಚರಿಸಲಾಗುವುದು ಎಂದು ಘೋಷಿಸಿದರು.

The Unsighted Moon On Sunday; Eid-ul-Fitr To Be Celebrated on May 3rd

ಇನ್ನು ಪಾಟ್ನಾದ ಮುಸ್ಲಿಂ ಸಾಮಾಜಿಕ-ಧಾರ್ಮಿಕ ಸಂಘಟನೆ ಎಡರಾ-ಎ-ಶರಿಯಾ ಭಾನುವಾರ ಸಂಜೆ ಚಂದ್ರನ ದರ್ಶನವಾಗದ ಕಾರಣ ಮೇ 3ರಂದು ಈದ್ ಆಚರಿಸಲಾಗುವುದು ಎಂದು ಘೋಷಿಸಿದರು.

ಕಳೆದ ಎರಡು ವರ್ಷಗಳಿಂದ ಕೋವಿಡ್-19 ಸಾಂಕ್ರಾಮಿಕದ ಕರಿನೆರಳಿನಲ್ಲಿ ಮುಸ್ಲಿಮರು ಉಪವಾಸದ ತಿಂಗಳು ಮತ್ತು ಈದ್ ಅನ್ನು ಆಚರಿಸುತ್ತಿದ್ದಾರೆ. ಆದರೆ ಈ ವರ್ಷ ಕೋವಿಡ್ ಪ್ರಕರಣಗಳ ಕುಸಿತ ಮತ್ತು ಜನರ ವ್ಯಾಕ್ಸಿನೇಷನ್ ನಂತರ ಅನೇಕ ಕೋವಿಡ್-19 ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ.

ಕರ್ನಾಟಕದ ರುಯಾತ್-ಇ-ಹಿಲಾಲ್ ಕಮಿಟಿಯ ಕಾರ್ಯಕಾರಿ ಸದಸ್ಯರು ದೇಶದಾದ್ಯಂತ ಎಲ್ಲಿಯೂ ಅರ್ಧಚಂದ್ರಾಕಾರ ಕಾಣಿಸಲಿಲ್ಲ ಮತ್ತು ಈದ್ ಅಲ್-ಫಿತರ್ ಅನ್ನು ಮೇ 3ರಂದು ಆಚರಿಸಲಾಗುವುದು ಎಂದು ಘೋಷಿಸಿದರು.

ಈದ್-ಉಲ್-ಫಿತರ್ ಅನ್ನು ಜಗತ್ತಿನಾದ್ಯಂತ ಮುಸ್ಲಿಮರು ಆಚರಿಸುತ್ತಾರೆ. ಇಸ್ಲಾಮಿಕ್ ಪವಿತ್ರ ರಂಜಾನ್ ತಿಂಗಳ ಅಂತ್ಯವನ್ನು ಗುರುತಿಸಿ, ಇಸ್ಲಾಮಿಕ್ ನಂಬಿಕೆಯ ಪ್ರಕಾರ ಪ್ರವಾದಿ ಮಹಮ್ಮದ್‌ ಪೈಗಂಬರ್‌ಗೆ ಖುರಾನ್‌ನ ಮೊದಲ ಬಹಿರಂಗಪಡಿಸುವಿಕೆಯ ನೆನಪಿಗಾಗಿ ರಂಜಾನ್ ಅನ್ನು ವಿಶ್ವದಾದ್ಯಂತ ಮುಸ್ಲಿಮರು ಉಪವಾಸದ ತಿಂಗಳಾಗಿ ಆಚರಿಸುತ್ತಾರೆ.

ತಮಿಳುನಾಡು ಸರ್ಕಾರದ ಮುಖ್ಯ ಕಾಜಿಯವರ ಕಚೇರಿಯು ಈದ್-ಉಲ್-ಫಿತರ್ ಮೇ 3ರಂದು ಇರುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ. ಶವ್ವಾಲ್ 2022 (1443 ಎಚ್) ತಿಂಗಳ ಅಮಾವಾಸ್ಯೆಯು ಮೇ 1, 2022ರ ಭಾನುವಾರದಂದು ಕಂಡುಬಂದಿಲ್ಲ. ಆದ್ದರಿಂದ, ಈದ್-ಉಲ್-ಫಿತರ್ (ರಂಜಾನ್ ಈದ್) ಅನ್ನು ಮಂಗಳವಾರ, ಮೇ 3, 2022ರಂದು ಆಚರಿಸಲಾಗುತ್ತದೆ, ಎಂದು ಹೇಳಿದೆ.

ರಂಜಾನ್ ಇಸ್ಲಾಮಿಕ್ ಕ್ಯಾಲೆಂಡರ್‌ನ ಒಂಬತ್ತನೇ ತಿಂಗಳು, ಇದು ಸುಮಾರು 30 ದಿನಗಳವರೆಗೆ ಕಠಿಣ ಉಪವಾಸವನ್ನು ಒಳಗೊಂಡಿರುತ್ತದೆ. ಈ ತಿಂಗಳಲ್ಲಿ, ಮುಸ್ಲಿಮರು ಮುಂಜಾನೆಯಿಂದ ಸಂಜೆಯವರೆಗೆ ಆಹಾರ ಅಥವಾ ನೀರನ್ನು ಸೇವಿಸುವುದಿಲ್ಲ. ಅವರು ಸೆಹ್ರಿ (ಬೆಳಗ್ಗೆ ಪೂರ್ವದ ಊಟ) ತಿನ್ನುತ್ತಾರೆ ಮತ್ತು ಸಂಜೆ ಇಫ್ತಾರ್ ನೊಂದಿಗೆ ತಮ್ಮ ದಿನದ ಉಪವಾಸವನ್ನು ಮುರಿಯುತ್ತಾರೆ.

ಹತ್ ಕಾ ಸೇವಿಯಾನ್, ನಮ್ಮಕ್ ಕಾ ಸೇವಿಯಾನ್, ಚಕ್ಲೆ ಕಾ ಸೇವಿಯಾನ್ ಮತ್ತು ಲಡ್ಡು ಸೇವಿಯನ್ ನಂತಹ ವಿವಿಧ ಪ್ರಭೇದಗಳ ಅಡಿಯಲ್ಲಿ ಬರುವ ಸೇವಿಯಾನ್ (ವರ್ಮಿಸೆಲ್ಲಿ) ಅನ್ನು ಹಂಚುವ ಮೂಲಕ ಹಬ್ಬವನ್ನು ಆಚರಿಸಲಾಗುತ್ತದೆ. ಈ ಎಲ್ಲಾ ರೂಪಾಂತರಗಳನ್ನು ಶೀರ್‌ಕುರ್ಮಾ ಎಂಬ ಭಕ್ಷ್ಯದಲ್ಲಿ ಬಳಸಬಹುದು, ಇದನ್ನು ಈದ್‌ನಲ್ಲಿ ತಯಾರಿಸಲಾಗುತ್ತದೆ ಮತ್ತು ಸ್ನೇಹಿತರು ಮತ್ತು ಸಂಬಂಧಿಕರ ನಡುವೆ ವಿತರಿಸಲಾಗುತ್ತದೆ.

English summary
Eid-ul-Fitr, which marks the end of the fasting month of ramzan, is scheduled to be celebrated in the country on May 3rd, Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X