ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2020ರಲ್ಲಿ ಕೊರೊನಾ ಸೋಲಿಸಲು 27.1 ಲಕ್ಷ ಕೋಟಿ ಮಿನಿ ಬಜೆಟ್

|
Google Oneindia Kannada News

ನವದೆಹಲಿ, ಫೆಬ್ರವರಿ.01: ಕಳೆದ ವರ್ಷವೇ ದೇಶವನ್ನು ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದ ರಕ್ಷಿಸುವುದಕ್ಕಾಗಿ ಹಲವು ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. ಅದರ ಒಟ್ಟು ಮೌಲ್ಯವೇ 27.1 ಲಕ್ಷ ಕೋಟಿ ರೂಪಾಯಿ ಆಗಿತ್ತು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

2021-22ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಬಗ್ಗೆ ಹೇಳಿದ್ದಾರೆ. ಭಾರತ ಲಾಕ್ ಡೌನ್ ಸಂದರ್ಭದಲ್ಲಿ ದೇಶದ ಪ್ರಜೆಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ರಿಸರ್ವ್ ಬ್ಯಾಂಕ್ ಗವರ್ನರ್ ಅವರು ಹಲವು ರೀತಿ ಘೋಷಣೆಗಳನ್ನು ಹೊರಡಿಸಿದ್ದರು.

7 ಮೆಗಾ ಜವಳಿ ಪಾರ್ಕ್ ಸ್ಥಾಪನೆ, ಭರಪೂರ ಉದ್ಯೋಗವಕಾಶ 7 ಮೆಗಾ ಜವಳಿ ಪಾರ್ಕ್ ಸ್ಥಾಪನೆ, ಭರಪೂರ ಉದ್ಯೋಗವಕಾಶ

ಭಾರತ ಲಾಕ್ ಡೌನ್ ಸಂದರ್ಭದಲ್ಲಿ 27.1 ಲಕ್ಷ ಕೋಟಿ ರೂಪಾಯಿ ಮೌಲ್ಯದ ಯೋಜನೆಗೆ ಸಂಬಂಧಿಸಿದಂತೆ ಘೋಷಣೆಗಳನ್ನು ಹೊರಡಿಸಲಾಗಿತ್ತು. ಈ ಒಟ್ಟು ಮೊತ್ತವು ಭಾರತದ ಒಟ್ಟು ದೇಶೀಯ ಉತ್ಪನ್ನದ ಶೇ.13ರಷ್ಟಿದೆ ಎಂದು ತಿಳಿದು ಬಂದಿದೆ.

The total Estimate Of All Relief Measures Announced By Govt & RBI Is Rs 27.1 Lakh cr: FM

ಕೊರೊನಾವೈರಸ್ ಎದುರಿಸಲು ಮಿನಿ ಬಜೆಟ್-2020:

ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಮತ್ತು ಲಾಕ್ ಡೌನ್ ಸಂದರ್ಭದಲ್ಲಿ ಎದುರಾದ ಸವಾಲುಗಳನ್ನು ಎದುರಿಸಲು ಕೇಂದ್ರ ಸರ್ಕಾರವು ಹಲವು ಯೋಜನೆಗಳನ್ನು ಘೋಷಿಸಿತು. ಕೇಂದ್ರ ಸರ್ಕಾರ ಘೋಷಿಸಿದ 30 ಲಕ್ಷ ಕೋಟಿ ಮೌಲ್ಯದ ಬಜೆಟ್ ನ್ನು ಮಿನಿ ಬಜೆಟ್ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕರೆದಿದ್ದರು. ಅಂದು ಘೋಷಿಸಿದ ಯೋಜನೆಗಳು ಯಾವ ಯಾವ ವಲಯಕ್ಕೆ ಸೇರಿದ್ದವು ಎನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ.

- ಆತ್ಮ ನಿರ್ಭರ್ ಭಾರತ್ ಅಡಿ ಕಾರ್ಯಕ್ರಮಗಳು

- ದೇಶೀಯ ಉತ್ಪಾದನೆಗೆ ಉತ್ತೇಜನ

- ಉದ್ಯಮಗಳಿಗೆ ಸುಧಾರಿತ ಸಾಲ ಪ್ರವೇಶ

- ಬಡ್ಡಿ ಪಾವತಿಗಳ ಮೇಲಿನ ನಿಷೇಧ

- ಕೈಗೆಟುಕುವ ವಸತಿ ಮೇಲೆ ಒತ್ತು

- ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಪ್ರೋತ್ಸಾಹ

English summary
The total estimate of all relief measures announced by govt & RBI so far is Rs 27.1 lakh cr (13% of GDP), the Finance Minister says.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X