ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

FASTag Toll Collection : 2022ರಲ್ಲಿ ಫಾಸ್ಟ್ಯಾಗ್ ಮೂಲಕ 50,855 ಕೋಟಿ ರೂ ಟೋಲ್ ಸಂಗ್ರಹ !

2022ರಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಯ ಟೋಲ್‌ಗಳಲ್ಲಿ ಫಾಸ್ಟ್ಯಾಗ್‌ ಮೂಲಕ 50.855 ಕೋಟಿ ರೂಪಾಯಿ ಶುಲ್ಕವನ್ನು ಸಂಗ್ರಹಿಸಲಾಗಿದೆ.

|
Google Oneindia Kannada News

ನವದೆಹಲಿ,ಜನವರಿ.24: ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಯ ಟೋಲ್‌ಗಳಲ್ಲಿ ಫಾಸ್ಟ್ಯಾಗ್‌ ಮೂಲಕ 2022ರಲ್ಲಿ ಸುಮಾರು 50.855 ಕೋಟಿ ರೂಪಾಯಿ ಶುಲ್ಕವನ್ನು ಸಂಗ್ರಹಿಸಲಾಗಿದೆ ಎಂಬ ಮಾಹಿತಿಯನ್ನು ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಪ್ರಕಟನೆಯಲ್ಲಿ ತಿಳಿಸಿದೆ.

ಕಳೆದ ವರ್ಷ ಅಂದರೇ 2021 ರಲ್ಲಿ ಸುಮಾರು ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಯ ಟೋಲ್‌ಗಳಲ್ಲಿ ಫಾಸ್ಟ್ಯಾಗ್ ಮೂಲಕ ಸುಮಾರು 34,778 ಕೋಟಿ ರೂಪಾಯಿಗಳನ್ನು ಸಂಗ್ರಹಿಸಲಾಗಿತ್ತು. ಈ ಬಾರಿ 2022ರಲ್ಲಿ ಸುಮಾರು 50.855 ಕೋಟಿ ರೂಪಾಯಿ ಶುಲ್ಕ ಸಂಗ್ರಹಿಸುವ ಮೂಲಕ 46%ಕ್ಕೆ ಏರಿಕೆಯಾಗಿದೆ ಎಂಬ ಮಾಹಿತಿಯನ್ನು NAHI ತಿಳಿಸಿದೆ.

ಗುತ್ತಿಗೆದಾರರಿಂದ ಲಂಚ: NHAI ಅಧಿಕಾರಿ ಶ್ರೀನಿವಾಸಲು ನಾಯ್ಡು ವಿರುದ್ಧ ಸಿಬಿಐ ಎಫ್ಐಆರ್ ಗುತ್ತಿಗೆದಾರರಿಂದ ಲಂಚ: NHAI ಅಧಿಕಾರಿ ಶ್ರೀನಿವಾಸಲು ನಾಯ್ಡು ವಿರುದ್ಧ ಸಿಬಿಐ ಎಫ್ಐಆರ್

ಕಳೆದ ಡಿಸೆಂಬರ್ 2022 ರಲ್ಲಿ ರಾಷ್ಟ್ರೀಯ ಹೆದ್ದಾರಿಯ ಟೋಲ್‌ ಪ್ಲಾಜಾಗಳಲ್ಲಿ ಫಾಸ್ಟ್ಯಾಗ್ ಮೂಲಕ 134.44 ಕೋಟಿ ರೂಪಾಯಿ ಪ್ರಾಧಿಕಾರದ ಖಜಾನೆ ಸೇರಿಕೊಂಡಿತ್ತು. ಈ ಪೈಕಿ ಕಳೆದ ಡಿಸೆಂಬರ್ 24 ರಂದು ಸುಮಾರು 144.19 ಕೋಟಿ ರೂ ಒಂದೇ ದಿನದಲ್ಲಿ ಸಂಗ್ರಹವಾಗಿತ್ತು ಎಂಬ ಮಾಹಿತಿಯನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ತಿಳಿಸಿದೆ.

The total collection of tolls by FASTag increases by 46% to reach ₹50,855 Crore by 2022

ಟೋಲ್‌ಗಳಲ್ಲಿ ಅತಿ ಸುಲಭ ಮತ್ತು ತ್ವರಿತವಾಗಿ ಶುಲ್ಕ ಪಾವತಿಸಲು ಫಾಸ್ಟ್ಯಾಗ್ ಬಳಸಲಾಗುತ್ತಿರುವುದರಿಂದ 2022 ರಲ್ಲಿ ಸುಮಾರು 46 ಪ್ರತಿಶತದಷ್ಟು ಬೆಳವಣಿಗೆಯನ್ನು ಕಂಡಿದೆ. 2021 ಮತ್ತು 2022 ರಲ್ಲಿ ಫಾಸ್ಟ್ಯಾಗ್‌ ಮೂಲಕ ಕ್ರಮವಾಗಿ 219 ಕೋಟಿ ಮತ್ತು 324 ಕೋಟಿ ರೂಪಾಯಿ ಶುಲ್ಕ ಸಂಗ್ರಹಿಸಲಾಗಿತ್ತು.

ಪ್ರಯಾಣಿಕರ ಸಮಯ ಮತ್ತು ತೊಂದರೆ ಮುಕ್ತ ಸಂಚಾರ ಸುಗಮಗೊಳಿಸುವ ನಿಟ್ಟಿನಲ್ಲಿ ಶುಲ್ಕ ಪಾವತಿ ಯೋಜನೆಯನ್ನು ಜಾರಿಗೊಳಿಸಲಾಗಿದೆ.ಈವರೆಗೂ ಸುಮಾರು 6.4 ಕೋಟಿ ಫಾಸ್ಟ್ಯಾಗ್‌ ವಿತರಿಸಲಾಗಿದೆ. 2021ರಲ್ಲಿ 922 ಟೋಲ್‌ಗಳಲ್ಲಿ ಫಾಸ್ಟ್ಯಾಗ್ ಸಕ್ರಿಯಗೊಳಿಸಲಾಗಿತ್ತು.ಈ ವರ್ಷದಲ್ಲಿ 2022ರಲ್ಲಿ 1,181 ಟೋಲ್‌ಗಳಲ್ಲಿ ಫಾಸ್ಟ್ಯಾಗ್ ಅಳವಡಿಸಿಕೊಳ್ಳಲಾಗಿದೆ ಎಂದು ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.

ಸರ್ಕಾರವು 2021ರ ಫೆಬ್ರವರಿ 16ರಿಂದ ಎಲ್ಲ ಖಾಸಗಿ ಮತ್ತು ವಾಣಿಜ್ಯ ವಾಹನಗಳಿಗೆ ಫಾಸ್ಟ್ಯಾಗ್‌ಅನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳುವಂತೆ ಆದೇಶ ಹೊರಡಿಸಿತ್ತು.

The total collection of tolls by FASTag increases by 46% to reach ₹50,855 Crore by 2022

ಫಾಸ್ಟ್ಯಾಗ್ ಬದಲಿಗೆ ಜಿಪಿಎಸ್‌ ವ್ಯವಸ್ಥೆ !

ಮುಂಬರುವ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ತಡೆರಹಿತ ವಾಹನ ಸಂಚಾರ ಮತ್ತು ಸುಲಭ ಶುಲ್ಕ ಪಾವತಿ ವ್ಯವಸ್ಥೆಗಾಗಿ ಫಾಸ್ಟ್ಯಾಗ್‌ ಬದಲಿಗೆ ಜಿಪಿಎಸ್‌ ಆಧಾರಿತ ಟೋಲ್ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಈ ಯೋಜನೆಯ ಅನುಷ್ಠಾನದಿಂದ ದೇಶವು ಟೋಲ್ ಪ್ಲಾಜಾ ಮುಕ್ತವಾಗಲಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಹೊಸ ತಂತ್ರಜ್ಞಾನ ಆಧಾರಿತ ಟೋಲಿಂಗ್‌ಗೆ ಅನುಕೂಲವಾಗುವಂತೆ ಮೋಟಾರು ವಾಹನ ಕಾಯ್ದೆಗೆ ಮತ್ತಷ್ಟು ತಿದ್ದುಪಡಿಗಳ ಕೆಲಸವನ್ನು ಪ್ರಾರಂಭಿಸುವುದರೊಂದಿಗೆ ಮಹತ್ವಾಕಾಂಕ್ಷೆಯ ಯೋಜನೆಯನ್ನು ಸಿದ್ಧಪಡಿಸಲಾಗುತ್ತಿದೆ.

English summary
The National Highways Authority of India (NHAI) said in a release that about Rs 50.855 crore in tolls collected through FASTag in 2022 on state and national highway tolls
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X