ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವಾರಿಯರ್ಸ್ ವಿರುದ್ಧವೇ ಕಳಂಕ ಅಂಟಿಸಿದ ಕರಾಳ ಕಥೆ!

|
Google Oneindia Kannada News

ನವದೆಹಲಿ, ಮೇ.12: ನೋಡಿದ್ದು ಸುಳ್ಳಾಗಬಹುದು, ಕೇಳಿದ್ದು ಸುಳ್ಳಾಗಬಹುದು, ನಿಧಾನಿಸಿ ಯೋಚಿಸಿದಾಗ ನಿಜವು ತಿಳಿಯುವುದು. ನೊವೆಲ್ ಕೊರೊನಾ ವೈರಸ್ ವಿರುದ್ಧ ವಾರಿಯರ್ಸ್ ರೀತಿಯಲ್ಲಿ ಹೋರಾಡುತ್ತಿರುವ ನರ್ಸ್ ಒಬ್ಬರಿಗೆ ಕಳಂಕ ಅಂಟಿದ ಕರಾಳ ಕಥೆ ಈ ಮಾತನ್ನು ನಿಜವಾಗಿಸಿದೆ.

ಮೇ.12ರ ಮಂಗಳವಾರ ಅಂತಾರಾಷ್ಟ್ರೀಯ ದಾದಿಯರ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನ ದೇಶವನ್ನು ನೊವೆಲ್ ಕೊರೊನಾ ವೈರಸ್ ನಿಂದ ರಕ್ಷಿಸಲು ಶ್ರಮಿಸುತ್ತಿರುವ ದಾದಿಯರ ನೋವಿನ ಕಥೆಯ ಬಗ್ಗೆ ಬಿಜಿನೆಸ್ ಇನ್ ಸೈಡರ್ ವಿಶೇಷ ವರದಿಯೊಂದನ್ನು ಪ್ರಕಟಿಸಿದೆ.

ಕೊರೊನಾ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದರೂ ಇಲ್ಲ ಉದ್ಯೋಗ ಭದ್ರತೆ!ಕೊರೊನಾ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದರೂ ಇಲ್ಲ ಉದ್ಯೋಗ ಭದ್ರತೆ!

ನವದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ ರಾಖಿ ಯಾದವ್ ಎಂಬ 29 ವರ್ಷದ ಕೊರೊನಾ ವಾರಿಯರ್ಸ್ ಗೆ ಕೊವಿಡ್-19 ಸೋಂಕಿನ ಜೊತೆಗೆ ಕಳಂಕವೊಂದು ಅಂಟಿಕೊಂಡಿತು. ದಿನನಿತ್ಯ ಕೊರೊನಾ ವಿರುದ್ಧದ ತಮ್ಮ ಹೋರಾಟ ಹಾಗೂ ಅನುಭವಿಸುವ ನೋವು-ಯಾತನೆಯ ಬಗ್ಗೆ ಸ್ವತಃ ರಾಖಿ ಯಾದವ್ ಹೇಳಿಕೊಂಡಿದ್ದಾರೆ. ಈ ಕುರಿತು ವಿಶೇಷ ವರದಿ ಇಲ್ಲಿದೆ ನೋಡಿ.

ಜನರಲ್ಲಿ ಕೊರೊನಾ ವಾರಿಯರ್ಸ್ ಬಗ್ಗೆ ತಪ್ಪು ಕಲ್ಪನೆ

ಜನರಲ್ಲಿ ಕೊರೊನಾ ವಾರಿಯರ್ಸ್ ಬಗ್ಗೆ ತಪ್ಪು ಕಲ್ಪನೆ

ನೊವೆಲ್ ಕೊರೊನಾ ವಾರಿಯರ್ಸ್ ಎಂದರೆ ಸೋಂಕಿತರನ್ನು ಮಹಾಮಾರಿಯಿಂದ ರಕ್ಷಿಸಲು ಶ್ರಮಿಸುತ್ತಿರುವ ಯೋಧರು. ಆದರೆ ದೇಶದ ಕೆಲವು ಜನರಲ್ಲಿ ವಾರಿಯರ್ಸ್ ಬಗ್ಗೆ ತಪ್ಪು ಪರಿಕಲ್ಪನೆ ಹುಟ್ಟಿಕೊಂಡಿದೆ. ಸಾಂಕ್ರಾಮಿಕ ಪಿಡುಗು ಹರಡುತ್ತಿರುವ ಸಂದರ್ಭದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿದೆ. ಕೊರೊನಾ ವಾರಿಯರ್ಸ್ ರಿಂದಲೇ ಸೋಂಕು ಹೆಚ್ಚಾಗಿ ಹರಡುತ್ತಿದೆ ಎಂಬ ತಪ್ಪು ಪರಿಕಲ್ಪನೆ ಹಲವು ಜನರಲ್ಲಿ ಮೂಡಿತ್ತು ಎಂದು ರಾಖಿ ಯಾದವ್ ಆತಂಕ ವ್ಯಕ್ತಪಡಿಸಿದರು.

ಕೊರೊನಾ ವಾರಿಯರ್ಸ್ ಜೊತೆಗೆ ಸ್ನೇಹಿತರ ಅಂತರ

ಕೊರೊನಾ ವಾರಿಯರ್ಸ್ ಜೊತೆಗೆ ಸ್ನೇಹಿತರ ಅಂತರ

ಭಾರತದಲ್ಲಿ ಡೆಡ್ಲಿ ಕೊರೊನಾ ವೈರಸ್ ವಿರುದ್ಧ ಹೋರಾಟ ನಡೆಸುತ್ತಿರುವ ದಾದಿಯರನ್ನು ನಿಕೃಷ್ಟವಾಗಿ ಕಾಣಲಾಗುತ್ತಿದೆ. ಕರ್ತವ್ಯ ಮುಗಿಸಿ ದಾದಿಯರು ಮನೆಗೆ ತೆರಳುತ್ತಿದ್ದಂತೆ ಮನೆಯವರೇ ಅನುಮಾನದಿಂದ ನೋಡುವಂತಾಗಿದೆ. ಇನ್ನು, ಸುತ್ತಮುತ್ತಲಿನ ಸ್ನೇಹಿತರು ಮನೆ ಖಾಲಿ ಮಾಡಿಕೊಂಡು ದಾದಿಯರಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ದಾದಿಯರು ಕೊರೊನಾ ವೈರಸ್ ವಿರುದ್ಧ ಹೋರಾಡುವ ಯೋಧರೇ ಹೊರತೂ ಸೋಂಕು ಹರಡಿಸುವವರಲ್ಲ ಎಂದು ರಾಖಿ ಯಾದವ್ ನೋವು ತೋಡಿಕೊಂಡಿದ್ದಾರೆ.

ಫ್ಲಾರೆನ್ಸ್ ನೈಟಿಂಗೇಲ್ ಯಾರು? ವಿಶ್ವ ದಾದಿಯರ ದಿನಾಚರಣೆ ಏಕೆ?ಫ್ಲಾರೆನ್ಸ್ ನೈಟಿಂಗೇಲ್ ಯಾರು? ವಿಶ್ವ ದಾದಿಯರ ದಿನಾಚರಣೆ ಏಕೆ?

ಕೊರೊನಾ ವಾರಿಯರ್ಸ್ ಗೂ ಅಂಟಿದ ಕೊರೊನಾ ವೈರಸ್

ಕೊರೊನಾ ವಾರಿಯರ್ಸ್ ಗೂ ಅಂಟಿದ ಕೊರೊನಾ ವೈರಸ್

ನವದೆಹಲಿಯ ಏಮ್ಸ್ ಆಸ್ಪತ್ರೆಗೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 29 ವರ್ಷದ ರಾಖಿ ಯಾದವ್ ಅವರಿಗೂ ಕೊರೊನಾ ವೈರಸ್ ಸೋಂಕು ಅಂಟಿಕೊಂಡಿತು. ಕೊವಿಡ್-19 ಸೋಂಕಿತನ ಸಂಪರ್ಕದಿಂದ ಡೆಡ್ಲಿ ವೈರಸ್ ನರ್ಸ್ ಅವರ ದೇಹ ಹೊಕ್ಕಿತ್ತು. ಆದರೆ ನಂತರದಲ್ಲಿ ರಾಖಿ ಯಾದವ್ ಬಗ್ಗೆ ಸುಳ್ಳು ವದಂತಿಯನ್ನೇ ಹರಲಾಯಿತು. ಜನರಲ್ಲಿ ದಾದಿಯ ವಿರುದ್ಧ ತಪ್ಪು ಕಲ್ಪನೆಯು ಮೂಡಿತು. ಸೋಂಕು ತಗಲಿರುವುದನ್ನು ಬೇಕಂತಲೇ ಗೌಪ್ಯವಾಗಿ ಇಟ್ಟಿದ್ದಾರೆ ಎಂದು ಅನುಮಾನಿಸಲಾಯಿತು.

ಕೊರೊನಾ ಸೋಂಕು ಹರಿಡಿಸುವ ಬಗ್ಗೆ ದಾದಿ ವಿರುದ್ಧ ಕಳಂಕ

ಕೊರೊನಾ ಸೋಂಕು ಹರಿಡಿಸುವ ಬಗ್ಗೆ ದಾದಿ ವಿರುದ್ಧ ಕಳಂಕ

ಕೊರೊನಾ ವೈರಸ್ ಹರಡುವ ಉದ್ದೇಶದಿಂದಲೇ ತಮಗೆ ಸೋಂಕು ತಗಲಿರುವುದನ್ನು ಗೌಪ್ಯವಾಗಿ ಇರಿಸಿದ್ದರು ಎಂಬ ಕಳಂಕ ಕೊರೊನಾ ವಾರಿಯರ್ಸ್ ಗೆ ಅಂಟಿಕೊಂಡಿತು. ನಾವು ಸೋಂಕಿತರನ್ನು ರಕ್ಷಿಸಲು ಶ್ರಮಿಸುತ್ತಿದ್ದೇವೆಯೇ ವಿನಃ ಸೋಂಕು ಹರಡುವುದೇ ನಮ್ಮ ಕಾಯಕವಲ್ಲ. ಸಾರ್ವಜನಿಕರಿಗಾಗಿ ಹಗಲು ರಾತ್ರಿ ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿದ್ದೇವೆ. ಇದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು ಎಂದು ರಾಖಿ ಯಾದವ್ ಮನವಿ ಮಾಡಿಕೊಂಡಿದ್ದಾರೆ.

ವಿಶ್ವ ದಾದಿಯರ ದಿನ: ಕೇವಲ ಕೊರೊನಾ ಯೋಧರು ಎಂದು ಕರೆದರೆ ಸಾಕೇ?ವಿಶ್ವ ದಾದಿಯರ ದಿನ: ಕೇವಲ ಕೊರೊನಾ ಯೋಧರು ಎಂದು ಕರೆದರೆ ಸಾಕೇ?

ಅಂಗಡಿಗಳಲ್ಲಿ ಕೊರೊನಾ ವಾರಿಯರ್ಸ್ ಗೆ ಪ್ರವೇಶವಿಲ್ಲ!

ಅಂಗಡಿಗಳಲ್ಲಿ ಕೊರೊನಾ ವಾರಿಯರ್ಸ್ ಗೆ ಪ್ರವೇಶವಿಲ್ಲ!

ಗುರುಗ್ರಾಮ್ ನಲ್ಲಿ ಇರುವ ಖಾಸಗಿ ಆಸ್ಪತ್ರೆಯ ದಾದಿ ಆಗಿರುವ ಮಸಿಹಾ ಕೂಡಾ ವೈದ್ಯಕೀಯ ಸಿಬ್ಬಂದಿ ಮೇಲೆ ನಡೆಯುತ್ತಿರುವ ಹಲ್ಲೆಗೆ ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೇ ತಮಗಾದ ನೋವಿನ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ಕಿರಾಣಿ ಅಂಗಡಿಗೆ ತೆರಳಿದ ಸಂದರ್ಭದಲ್ಲಿ ಅಂಗಡಿ ಮಾಲೀಕರು ತಮ್ಮನ್ನು ಒಳಗೆ ಬಿಟ್ಟುಕೊಳ್ಳದೇ, ಅಂಗಡಿಯಿಂದ ದೂರದಲ್ಲಿ ನಿಲ್ಲುವಂತೆ ಹೇಳಿದರು.

ಕರ್ನಾಟಕದಲ್ಲಿ ಕರ್ತವ್ಯ ಪ್ರಜ್ಞೆ ತೋರಿದ ಗರ್ಭಿಣಿ

ಕರ್ನಾಟಕದಲ್ಲಿ ಕರ್ತವ್ಯ ಪ್ರಜ್ಞೆ ತೋರಿದ ಗರ್ಭಿಣಿ

ಕೊರೊನಾ ವೈರಸ್ ಸೋಂಕು ನಿಯಂತ್ರಣಕ್ಕೆ ಹೋರಾಡುತ್ತಿರುವ ಸಂದರ್ಭದಲ್ಲಿ ತುಂಬು ಗರ್ಭಿಣಿಯೊಬ್ಬರು ಕರ್ತವ್ಯ ಪ್ರಜ್ಞೆ ತೋರಿದ್ದಾರೆ. ಕರ್ನಾಟಕದಲ್ಲಿ 9 ತಿಗಂಳ ತುಂಬು ಗರ್ಭಿಣಿ ರೂಪಾ ಪ್ರವೀಣ್ ರಾವ್ ಎಂಬುವವರು ಕೊರೊನಾ ವೈರಸ್ ಸೋಂಕಿತರ ಆರೈಕೆ ಮಾಡುತ್ತಿದ್ದಾರೆ. ಹಿರಿಯ ಅಧಿಕಾರಿಗಳು ರಜೆ ತೆಗೆದುಕೊಳ್ಳುವಂತೆ ಸೂಚಿಸಿದರೂ ಸಹ, ದಿನಕ್ಕೆ 6 ಗಂಟೆಗಳ ಕಾಲ ಸೇವೆ ಸಲ್ಲಿಸುತ್ತಿದ್ದು, ಮಾದರಿ ಎನಿಸಿದ್ದಾರೆ.

English summary
The Stigma To The Corona Warriors: How Society Treats Nurses.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X