ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್ ವಿರುದ್ಧ ಪ್ರಜೆಗಳ ಸ್ಪಂದನೆಗೆ ಪ್ರಧಾನಿ ವಂದನೆ

|
Google Oneindia Kannada News

ನವದೆಹಲಿ, ಮೇ.31: ಕೊರೊನಾ ವೈರಸ್ ವಿರುದ್ಧ ಹೋರಾಟದ ನಡುವೆ ಭಾರತದ ಆರ್ಥಿಕತೆ ಅಭಿವೃದ್ಧಿಗೆ ಸಹಕಾರಿಯಾಗುವಂತಾ ಎಲ್ಲ ಅವಕಾಶಗಳನ್ನು ತೆರೆಯಲಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಭಾನುವಾರ ಮನ್ ಕೀ ಬಾತ್ 65ನೇ ಸಂಚಿಕೆಯಲ್ಲಿ ದೇಶದ ಪ್ರಜೆಗಳನ್ನು ಉದ್ದೇಶಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ 30 ನಿಮಿಷಗಳ ಕಾಲ ಮಾತನಾಡಿದರು. ಕಳೆದ ಬಾರಿ ಮನ್ ಕೀ ಬಾತ್ ನಲ್ಲಿ ಮಾತನಾಡುವ ಸಂದರ್ಭದಲ್ಲಿ ಸಾರಿಗೆ ವ್ಯವಸ್ಥೆ ಸಂಪೂರ್ಣ ಬಂದ್ ಆಗಿತ್ತು.

Fact Check: 'ಮನ್ ಕೀ ಬಾತ್'ನಲ್ಲಿ ಲಾಕ್‌ಡೌನ್‌ 5.0 ಘೋಷಣೆ ನಿಜಾನ?Fact Check: 'ಮನ್ ಕೀ ಬಾತ್'ನಲ್ಲಿ ಲಾಕ್‌ಡೌನ್‌ 5.0 ಘೋಷಣೆ ನಿಜಾನ?

ಇಂದು ಭಾರತದಲ್ಲಿ ಸನ್ನಿವೇಶ ಮೊದಲಿನಂತಿಲ್ಲ. ವಲಸೆ ಕಾರ್ಮಿಕರನ್ನು ತಮ್ಮೂರಿಗೆ ತಲುಪಿಸುವ ನಿಟ್ಟಿನಲ್ಲಿ ಸಾವಿರಾರು ಶ್ರಮಿಕ್ ರೈಲುಗಳು ಸಂಚಾರ ನಡೆಸುತ್ತಿವೆ. ಇದರ ನಡುವೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ವಿಮಾನ ಸಂಚಾರ ಕೂಡಾ ಆರಂಭವಾಗಿದೆ ಎಂದು ಮೋದಿ ತಿಳಿಸಿದರು.

The PM Narendra Modi Salutes The Citizens Who Have Cooperated In Fight Against Coronavirus

ಪ್ರಜೆಗಳ ಸ್ಪಂದನೆಗೆ ಪ್ರಧಾನಿ ಮೋದಿ ವಂದನೆ:

ಕೊರಾನಾ ವೈರಸ್ ಹರಡುತ್ತಿರುವ ಸಂದಿಗ್ಧ ಪರಿಸ್ಥಿತಿಯಲ್ಲಿ ದೇಶದ ಪ್ರಜೆಗಳು ನೀಡುತ್ತಿರುವ ಸಹಕಾರ ಮೆಚ್ಚುವಂಥದ್ದಾಗಿದೆ. ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕೆ ಪ್ರಜೆಗಳು ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ. ಬೇರೆ ರಾಷ್ಟ್ರಗಳಿಗೆ ಹೋಲಿಕೆ ಮಾಡಿ ನೋಡಿದರೆ ನಮ್ಮ ದೇಶದಲ್ಲಿ ಕೊರೊನಾ ವೈರಸ್ ಅಷ್ಟೊಂದು ವೇಗವಾಗಿ ಹರಡಿಲ್ಲ. ನಮೋ ಆ್ಯಪ್ ಮೂಲಕ ಪ್ರಜೆಗಳು ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕೆ ಸಲಕರಣೆಗಳನ್ನು ಕಂಡು ಹಿಡಿಯಲಾಗುತ್ತಿದೆ. ಟ್ರ್ಯಾಕ್ಟರ್ ಗಳ ಮೂಲಕ ಸ್ಯಾನಿಟೈಸರ್ ಮಾಡಲಾಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

English summary
The PM Narendra Modi Salutes The Citizens Who Have Cooperated In Fight Against Coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X