ರಾಹುಲ್ ಗಾಂಧಿ ರಕ್ಷಣೆಗೆ ಓಡಿ ಬಂದು ನಿಂತ್ರಪ್ಪೋ ದಿಗ್ವಿಜಯ್ ಸಿಂಗ್

Posted By:
Subscribe to Oneindia Kannada

ನವದೆಹಲಿ, ಮಾರ್ಚ್ 11: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ರಕ್ಷಣೆಗೆ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಮತ್ತೊಮ್ಮೆ ಧಾವಿಸಿದ್ದಾರೆ. ನೆಹರೂ-ಗಾಂಧಿ ಕುಟುಂಬವು ಕಾಂಗ್ರೆಸ್ ಜತೆಗೆ ಗಟ್ಟಿಯಾದ ಬಾಂಧವ್ಯ ಹೊಂದಿದೆ ಎಂದು ಹೇಳುವ ಮೂಲಕ ಪಂಚರಾಜ್ಯ ಚುನಾವಣೆಯಲ್ಲಿ ನಿರೀಕ್ಷಿತ ಗೆಲುವು ಸಾಧಿಸಲು ಸಾಧ್ಯವಾಗದ ಕಾರಣಕ್ಕೆ ರಾಹುಲ್ ಗಾಂಧಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದಿದ್ದಾರೆ.

ರಾಜ್ಯಗಳಲ್ಲಿ ಕಾಂಗ್ರೆಸ್ ನಿಂದ ಪ್ರಾದೇಶಿಕ ನಾಯಕತ್ವ ಬೆಳೆಸುವುದರ ಪರವಾದ ಧೋರಣೆ ನನ್ನದು. ಯಾವ ರಾಜ್ಯಗಳಲ್ಲಿ ಸ್ಥಳೀಯ ನಾಯಕರಿಲ್ಲವೋ ಅಂಥ ಕಡೆ ನಾಯಕರನ್ನು ಗುರುತಿಸಿ, ಬೆಳೆಸುವ ಕೆಲಸ ಕಾಂಗ್ರೆಸ್ ನಿಂದ ತಕ್ಷಣವೇ ಅಗಬೇಕು. ಕಾಂಗ್ರೆಸ್ ಪಕ್ಷಕ್ಕೆ ನೆಹರೂ-ಗಾಂಧಿ ಕುಟುಂಬದ ಜತೆಗೆ ಗಟ್ಟಿಯಾದ-ದೀರ್ಘ ಹಿನ್ನೆಲೆಯ ಬಾಂಧವ್ಯವಿದೆ. ಆದ್ದರಿಂದ ರಾಹುಲ್ ಗಂಧಿ ನಾಯಕತ್ವ ಮುಂದುವರಿಯಬೇಕು ಎಂದಿದ್ದಾರೆ.[ಚುನಾವಣೆ ಸೋಲು: ರಾಹುಲ್ ಗಾಂಧಿ ರಾಜಕೀಯ ಅವನತಿ]

The Nehru-Gandhi family is the biggest binding factor for the Congress

ಕಾಂಗ್ರೆಸ್ ನಲ್ಲಿ ಯುವ ನಾಯಕತ್ವಕ್ಕೆ ಪ್ರೋತ್ಸಾಹ ಇಲ್ಲ ಎಂಬ ಮಾತು ನಿಜವಲ್ಲ. ರಾಜೀವ್ ಗಾಂಧಿ ಅವರು ನನ್ನನ್ನು ರಾಜ್ಯದ ಅಧ್ಯಕ್ಷನಾಗಿ ಆಯ್ಕೆ ಮಾಡಿದಾಗ 31 ವರ್ಷ ವಯಸ್ಸು. ಕೋಮುವಾದದ ನೆಲೆಗಟ್ಟಿನ ಮೇಲೆ ಆಕ್ರಮಣಕಾರಿಯಾಗಿ ಮೋದಿ ಹಾಗೂ ಅಮಿತ್ ಷಾ ಚುನಾವಣೆ ಪ್ರಚಾರ ಮಾಡಿದರು. ಮಾತು ಅಭಿವೃದ್ಧಿ ಬಗ್ಗೆ ಆದರೂ ಮೂಲದಲ್ಲಿ ಹಿಂದೂ-ಮುಸ್ಲಿಂ ಎಂಬ ಲೆಕ್ಕಾಚಾರದಲ್ಲಿ ಚುನಾವಣೆ ನಡೆಸಿದರು ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Nehru-Gandhi family is the biggest binding factor for the Congress, said by party leader Digvijay Singh. On the backdrop of Congress not upto the mark performance in 5 state assembly election, Rahul will not step down, he further added.
Please Wait while comments are loading...