ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಲ್ಲು ಶಿಕ್ಷೆಯ ಅರ್ಜಿ ರಾತ್ರಿ ವಿಚಾರಣೆ ನಡೆದಿದ್ದು ಮೊದಲಲ್ಲ

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಜುಲೈ 31 : ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಅಪರಾಧಿ ಯಾಕೂಬ್ ಮೆಮನ್ ಗಲ್ಲು ಶಿಕ್ಷೆಯ ಅರ್ಜಿ ವಿಚಾರಣೆಯನ್ನು ಮಧ್ಯರಾತ್ರಿ ಸುಪ್ರೀಂಕೋರ್ಟ್‌ನಲ್ಲಿ ನಡೆಸಿರುವ ಬಗ್ಗೆ ಚರ್ಚೆ ನಡೆಯುತ್ತಿದೆ. ಕೋರ್ಟ್ ಮೊದಲ ಬಾರಿಗೆ ಹೀಗೆ ರಾತ್ರಿ ವಿಚಾರಣೆ ನಡೆಸಿಲ್ಲ. ಹಿಂದೆಯೂ ಎರಡು ಬಾರಿ ಇಂತಹ ವಿಚಾರಣೆ ನಡೆದಿತ್ತು.

ಮಂಗಲ್‌ಲಾಲ್ ಬರೇಲಾ ಮತ್ತು ಸುರೀಂದರ್ ಕೋಲಿಯ ಗಲ್ಲು ಶಿಕ್ಷೆಯ ದಿನಾಂಕ ನಿಗದಿಯಾದಾಗ ಕೋರ್ಟ್ ರಾತ್ರಿ ವಿಚಾರಣೆ ನಡೆಸಿತ್ತು. ಈ ಎರಡೂ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ತಡೆ ನೀಡಲಾಗಿತ್ತು. ಆದರೆ, ಯಾಕೂಬ್ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ತಡೆ ನೀಡಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿತ್ತು.[ಯಾಕೂಬ್ ಗಲ್ಲು, ಬುಧವಾರ ರಾತ್ರಿಯ ಹೈಡ್ರಾಮ]

ಪ್ರಕರಣ 1 : 2013ರ ಏಪ್ರಿಲ್ 9ರಂದು ಮಂಗಲ್‌ಲಾಲ್ ಬರೇಲಾಗೆ ಗಲ್ಲುಶಿಕ್ಷೆ ನಿಗದಿ ಮಾಡಲಾಗಿತ್ತು. ತನ್ನ ಮಕ್ಕಳನ್ನು ಕೊಂದಿದ್ದ ಬರೇಲಾ ನೇಣಿಗೇರಬೇಕಾಗಿತ್ತು. ರಾಷ್ಟ್ರಪತಿಗಳು ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದ್ದರು. [ನೇಣಿಗೆ ಕೊರಳೊಡ್ಡಿದ ಯಾಕೂಬ್]

supreme court

ಆಗ ಬರೇಲಾ ಪರ ವಕೀಲರು ರಾತ್ರಿ 11 ಗಂಟೆಗೆ ಕೋರ್ಟ್ ಮೊರೆ ಹೋಗಿದ್ದರು. ನ್ಯಾಯಮೂರ್ತಿಗಳ ನಿವಾಸದಲ್ಲಿಯೇ ಅರ್ಜಿಯ ವಿಚಾರಣೆ ನಡೆಸಿ, ಗಲ್ಲು ಶಿಕ್ಷೆಗೆ ತಡೆಯಾಜ್ಞೆ ನೀಡಲಾಗಿತ್ತು. ಗಲ್ಲು ಶಿಕ್ಷೆಗೆ ಸಕಲ ಸಿದ್ಧತೆ ನಡೆಸಿತ್ತು. ಗಲ್ಲು ಜಾರಿಯಾಗುವ 5 ಗಂಟೆ ಮೊದಲು ಈ ಆದೇಶ ಬಂದಿತ್ತು. [ಮುಂಬೈ ಸ್ಫೋಟ Timeline]

ಪ್ರಕರಣ 2 : ನಿಥಾರಿ ಮಕ್ಕಳ ಸರಣಿ ಕೊಲೆ ಪ್ರಕರಣದಲ್ಲಿ 2014ರ ಸೆಪ್ಟೆಂಬರ್ 9ರಂದು ಸುರೀಂದರ್ ಕೋಲಿಯಾಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ಮಧ್ಯರಾತ್ರಿ ಕೋಲಿಯಾ ಪರ ವಕೀಲರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.

ನ್ಯಾಯಮೂರ್ತಿಗಳಾದ ಎಚ್.ಎಲ್.ದತ್ತು ಮತ್ತು ಎ.ಆರ್.ದಾವೆ ಅವರು ಈ ಅರ್ಜಿಯ ವಿಚಾರಣೆಯನ್ನು ನಡೆಸಿದ್ದರು ಮತ್ತು ಗಲ್ಲು ಶಿಕ್ಷೆಗೆ ತಡೆಯಾಜ್ಞೆ ನೀಡಿದ್ದರು. ಈ ಅರ್ಜಿಯ ವಿಚಾರಣೆ ಕೋರ್ಟ್‌ನಲ್ಲಿಯೇ ನಡೆಯಲಿ ಎಂದು ಆದೇಶ ನೀಡಿದ್ದರು.

ಯಾಕೂಬ್‌ಗೆ ತಡೆ ಸಿಗಲಿಲ್ಲ : ಮುಂಬೈ ಸರಣಿ ಬಾಂಬ್ ಸ್ಫೋಟದ ಅಪರಾಧಿ ಯಾಕೂಬ್ ಮೆಮನ್ ವಿಚಾರದಲ್ಲಿಯೂ ರಾತ್ರಿ ವಿಚಾರಣೆ ನಡೆಯಿತು. ರಾತ್ರಿ 11 ಗಂಟೆ ವೇಳೆಗೆ ಹಿರಿಯ ವಕೀಲ ಪ್ರಶಾಂತ್ ಭೂಷಣ್ ನೇತೃತ್ವದಲ್ಲಿ ಮೂವರು ವಕೀಲರು ಯಾಕೂಬ್ ಗಲ್ಲು ಶಿಕ್ಷೆಗೆ ತಡೆ ಕೋರಿ ಅರ್ಜಿ ಸಲ್ಲಿಸಲು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಚ್.ಎಲ್.ದತ್ತು ಅವರ ನಿವಾಸಕ್ಕೆ ಆಗಮಿಸಿದರು.

ದತ್ತು ಅವರ ನಿವಾಸಕ್ಕೆ ಆಗಮಿಸಿದ ಸುಪ್ರೀಂಕೋರ್ಟ್ ರಿಜಿಸ್ಟ್ರಾರ್ ಸಿಜೆ ಅವರನ್ನು ಭೇಟಿ ಮಾಡಿ, ಪ್ರಶಾಂತ್ ಭೂಷಣ್ ನೇತೃತ್ವದ ತಂಡ ತಂದಿದ್ದ ಅರ್ಜಿಯನ್ನು ಹಸ್ತಾಂತರ ಮಾಡಿದರು. 12.45ಕ್ಕೆ ದತ್ತು ಅವರು ಅರ್ಜಿ ವಿಚಾರಣೆಗೆ ಒಪ್ಪಿಗೆ ನೀಡಿದರು.

ಎಚ್.ಎಲ್.ದತ್ತು ಅವರು ರಚನೆ ಮಾಡಿದ್ದ ತ್ರಿ ಸದಸ್ಯ ಪೀಠದ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ, ಪ್ರಫುಲ್ಲಾ ಸಿ ಪಂತ್ ಹಾಗೂ ಅಮಿತಾವ್ ರಾಯ್ ಅವರು ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್‌ನ ಹಾಲ್‌ ನಂ 4ರಲ್ಲಿ 1.30ಕ್ಕೆ ಆರಂಭಿಸಿದರು. ಗಲ್ಲು ಶಿಕ್ಷೆಗೆ ತಡೆಯಾಜ್ಞೆ ನೀಡುವುದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಲಾಯಿತು. 4.45ಕ್ಕೆ ಎಲ್ಲಾ ಕಾನೂನು ಹೋರಾಟ ಅಂತ್ಯಗೊಂಡಿತು. 6.40ಕ್ಕೆ ಯಾಕೂಬ್ ನೇಣಿಗೆ ಕೊರಳೊಡ್ಡಿದ.

English summary
While there is a lot that is being spoken about the pre-dawn hearing by the Supreme Court in the Yakub Memon case, this is however not the first time something to this effect has taken place. In the past there have been two such instances when the Supreme Court has opened its doors for death row convicts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X