ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಬಾರಿಯ ಬಜೆಟ್ ಗೂ ಮುನ್ನ ಈ ಪದಗಳ ಅರ್ಥ ನಮಗೆ ತಿಳಿದಿರಲಿ

|
Google Oneindia Kannada News

ನವದೆಹಲಿ, ಜನವರಿ 30: ಮುಂದಿನ ಆರ್ಥಿಕ ವರ್ಷದ ವಿತ್ತೀಯ ಬಜೆಟ್ ಅನ್ನು ಮಂಡಿಸಲು ಕೇಂದ್ರ ಸರ್ಕಾರ ಸಜ್ಜಾಗಿದೆ. ಈವರೆಗೆ ಬಂದಿರುವ ವರದಿಗಳ ಪ್ರಕಾರ, ಫೆ. 1ರಂದು ಲೋಕಸಭೆಯಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿಯವರು ವಿತ್ತೀಯ ಬಜೆಟ್ ಮಂಡಿಸಲಿದ್ದಾರೆ.

ಈ ಬಾರಿಯ ಬಜೆಟ್ ಭಾರೀ ವಿಶೇಷವಾದದ್ದು. ಏಕೆಂದರೆ, ಸ್ವತಂತ್ರ್ಯ ಭಾರತದಲ್ಲಿ ಇದೇ ಮೊದಲ ಬಾರಿಗೆ ರೈಲ್ವೇ ಬಜೆಟ್ ಹಾಗೂ ಕೇಂದ್ರ ಹಣಕಾಸು ಬಜೆಟ್ ಎರಡೂ ಪ್ರತ್ಯೇಕವಾಗಿ ಮಂಡನೆಯಾಗದೇ ಒಂದರಲ್ಲೇ ಸಮ್ಮಿಳಿತಗೊಂಡು ಮಂಡನೆಗೊಳಪಡುತ್ತಿವೆ.

ಇದಕ್ಕೂ ಮಿಗಿಲಾಗಿ, ಅಪನಗದೀಕರಣದ ನಂತರ ಕೇಂದ್ರ ಸರ್ಕಾರ ಮಂಡಿಸುತ್ತಿರುವ ಚೊಚ್ಚಲ ಬಜೆಟ್ ಇದಾಗಿರುವುದರಿಂದ ನೋಟ್ ಬ್ಯಾನ್ ಬಿಸಿಯಿಂದ ತತ್ತರಿಸಿರುವ ಹಲವಾರು ಕ್ಷೇತ್ರ, ಉದ್ದಿಮೆಗಳಿಗೆ ಪುನಃಶ್ಚೇತನ ನೀಡುವ ಹಾಗೂ ಜನಸಾಮಾನ್ಯರಿಗೆ ಹೊರೆಯಾಗದಂತೆ ಎಚ್ಚರಿಕೆ ವಹಿಸುವ ಸಮತೋಲಿತ ಬಜೆಟ್ ಮಂಡಿಸುವುದು ಇಂದಿನ ಅತ್ಯಂತ ಅನಿವಾರ್ಯತೆಯಾಗಿದೆ.

ಈ ಸವಾಲು ಸಾಮಾನ್ಯದ್ದಲ್ಲ. ಇದನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿಯವರು ಹೇಗೆ ನಿಭಾಯಿಸುತ್ತಾರೆಂಬುದನ್ನು ಕಾದು ನೋಡಬೇಕಿದೆ.

ಅಂದಹಾಗೆ, ಈ ಬಾರಿಯ ಬಜೆಟ್ ನಲ್ಲಿ ಕೇಂದ್ರ ವಿತ್ತ ಸಚಿವರು ಕೆಲವಾರು ಪದಪುಂಜಗಳನ್ನು ಬಳಸುವುದು ನಿಶ್ಚಿತ. ಬಹುತೇಕ ಜನಸಾಮಾನ್ಯರಿಗೆ ಈ ಪದಗಳ ಅರ್ಥ ತಿಳಿಯದು. ಹಾಗಾಗಿ, ಜೇಟ್ಲಿ ಉಪಯೋಗಿಸಬಹುದಾದ ಕೆಲವು ಪದಪುಂಜಗಳು ಹಾಗೂ ಅವುಗಳ ಅರ್ಥವನ್ನು ಇಲ್ಲಿ ಸಂಕ್ಷಿಪ್ತ ರೂಪದಲ್ಲಿ ಕೊಡಲಾಗಿದೆ. ಈ ಪದ ಪ್ರಯೋಗಗಳ ಬಗ್ಗೆ ಅರಿವಿದ್ದರೆ ಬಜೆಟ್ ಅನ್ನು ಮತ್ತಷ್ಟು ಮಗದಷ್ಟು ಅರ್ಥಮಾಡಿಕೊಳ್ಳಲು ನೆರವಾಗುತ್ತದೆ.

ಸಮತೋಲಿತ ಬಜೆಟ್ ಆಶಾಕಿರಣ

ಸಮತೋಲಿತ ಬಜೆಟ್ ಆಶಾಕಿರಣ

ಬ್ಯಾಲೆನ್ಸ್ ಪೇಮೆಂಟ್: ವಿದೇಶಿ ವಿನಿಮಯದಿಂದ ನಮ್ಮ ದೇಶಕ್ಕೆ ಬರಬೇಕಿರುವ ಒಟ್ಟಾರೆ ಬಾಕಿ ಹಾಗೂ ನಾವು ಹೊರದೇಶಗಳಿಗೆ ನೀಡಬೇಕಿರುವ ಒಟ್ಟಾರೆ ಬಾಕಿಗಳ ವ್ಯತ್ಯಾಸದ ಮೊತ್ತ.

ಬ್ಯಾಲೇನ್ಸ್ ಡ್ ಬಜೆಟ್: ಆದಾಯ ಹಾಗೂ ಖರ್ಚು ವೆಚ್ಚಗಳನ್ನು ಸಮರ್ಪಕವಾಗಿ ಸರಿದೂಗಿಸುವ ಬಜೆಟ್ ಗೆ ಸಮತೋಲಿತ ಬಜೆಟ್ ಅಥವಾ ಬ್ಯಾಲೇನ್ಸ್ ಡ್ ಬಜೆಟ್ ಎನ್ನುತ್ತಾರೆ.

ತೆರಿಗೆಗಳ ನರ್ತನ

ತೆರಿಗೆಗಳ ನರ್ತನ

ಜಿಡಿಪಿ: ಜಿಡಿಪಿಯೆಂದರೆ, ಒಟ್ಟು ದೇಶೀಯ ಉತ್ಪನ್ನ. ಒಂದು ನಿರ್ದಿಷ್ಟ ಹಣಕಾಸು ವರ್ಷದಲ್ಲಿ ದೇಶದಲ್ಲಿ ಉತ್ಪಾದನೆಗೊಳ್ಳುವ ಒಟ್ಟಾರೆ ಸರಕು ಹಾಗೂ ಸೇವೆಗಳ ಒಟ್ಟಾರೆ ಮೌಲ್ಯವನ್ನು ಇದು ಸೂಚಿಸುತ್ತದೆ.

ಸೆನ್ ವ್ಯಾಟ್: ಸೆಂಟ್ರಲ್ ವ್ಯಾಲ್ಯೂ ಆ್ಯಡೆಡ್ ಟ್ಯಾಕ್ಸ್ ಎಂಬುದು ಇದರ ವಿಸ್ತೃತ ರೂಪ. ಉತ್ಪಾದನಾ ಕ್ಷೇತ್ರದ ಕಂಪನಿಗಳ ಮೇಲೆ ಕೇಂದ್ರ ಸರ್ಕಾರ ಹೇರುವ ತೆರಿಗೆ.

ಅನೇರ ತೆರಿಗೆ

ಅನೇರ ತೆರಿಗೆ

ಕಾರ್ಪೊರೇಟ್ ಟ್ಯಾಕ್ಸ್ : ಕಂಪನಿಯ ಆದಾಯದ ಮೇಲೆ ವಿಧಿಸಲಾಗುವ ತೆರಿಗೆ. ಇದು ನೇರ ತೆರಿಗೆಯ ಪಟ್ಟಿಗೆ ಸೇರುತ್ತದೆ. ಕಂಪನಿಯ ಒಟ್ಟಾರೆ ಆದಾಯದಲ್ಲಿ ಖರ್ಚುಗಳನ್ನು ಕಳೆದು ಉಳಿಯುವ ಹಣದ ಮೇಲೆ ಈ ತೆರಿಗೆಯನ್ನು ವಿಧಿಸಲಾಗುತ್ತದೆ.

ಕರೆಂಟ್ ಅಕೌಂಟ್ ಡೆಫಿಸಿಟ್: ಇದು ದೇಶದಿಂದ ಹೊರಗೆ ರಫ್ತಾಗುವ ಉತ್ಪಾದನೆ ಅಥವಾ ಸೇವೆಯ ಒಟ್ಟಾರೆ ಮೌಲ್ಯ ಹಾಗೂ ಆಮದಾಗುವ ಸರಕು ಅಥವಾ ಸೇವೆಯ ಒಟ್ಟಾರೆ ಮೌಲ್ಯಗಳ ನಡುವಿನ ವ್ಯತ್ಯಾಸ.

ವ್ಯಕ್ತಿಯೂ, ಸಂಸ್ಥೆಯೂ ಹೊರತಲ್ಲ

ವ್ಯಕ್ತಿಯೂ, ಸಂಸ್ಥೆಯೂ ಹೊರತಲ್ಲ

ಇನ್ ಕಂ ಟ್ಯಾಕ್ಸ್: ಇದರ ಬಗ್ಗೆ ಎಲ್ಲರಿಗೂ ಗೊತ್ತಿದೆ. ಪ್ರತಿಯೊಬ್ಬ ವೈಯಕ್ತಿಕ ಆದಾಯ ಮೇಲೆ ವಿಧಿಸಲಾಗುವ ತೆರಿಗೆಯಿದು. ಇದರಲ್ಲಿ ಅಬಕಾರಿ ತೆರಿಗೆ, ಮಾರಾಟ ತೆರಿಗೆ, ಸೇವಾ ತೆರಿಗೆ ಎಂಬ ವಿವಿಧತೆಯಿದೆ.

ಇನ್ ಡೈರೆಕ್ಟ್ ಟ್ಯಾಕ್ಸ್ (ಪರೋಕ್ಷ ತೆರಿಗೆ): ಸರಕು ಅಥವಾ ಸೇವೆಗಳ ಮೇಲೆ ವಿಧಿಸಲಾಗುವ ತೆರಿಗೆ. ಇದು ಆದಾಯ ತೆರಿಗೆಯಂತೆ ನೇರ ತೆರಿಗೆ ಅಲ್ಲ. ಸಾಮಗ್ರಿಯೊಂದು ಉತ್ಪಾದನೆಗೊಂಡು ಅದು ಗ್ರಾಹಕರನ್ನು ಸೇರುವ ಮಾರ್ಗದ ಯಾವುದಾದರೊಂದು ಹಂತದಲ್ಲಿ ಇದನ್ನು ಅಳವಡಿಸಲಾಗುತ್ತದೆ. ಹಾಗಾಗಿ, ಇದರ ಹೊರೆಯನ್ನು ಗ್ರಾಹಕನೇ ಹೊರಬೇಕಾಗುತ್ತದೆ.

ತೆರಿಗೆಗಳೂ ಪೂರಕವಾಗಿವೆ

ತೆರಿಗೆಗಳೂ ಪೂರಕವಾಗಿವೆ

ಡೈರೆಕ್ಟ್ ಟ್ಯಾಕ್ಸಸ್: ಇದು ವ್ಯಕ್ತಿಯ ಅಥವಾ ಕಂಪನಿಯ ಮೇಲೆ ವಿಧಿಸುವ ತೆರಿಗೆಯಾಗಿದೆ. ಆದಾಯ ತೆರಿಗೆ, ಕಾರ್ಪೊರೇಟ್ ತೆರಿಗೆಗಳು ಈ ಡೈರೆಕ್ಟ್ ಟ್ಯಾಕ್ಸ್ ಎಂದು ಕರೆಯಲ್ಪಡುತ್ತವೆ.

ಅಬಕಾರಿ ಸುಂಕ: ದೇಶೀಯ ಬಳಕೆಗಾಗಿ ಉತ್ಪಾದನೆಗೊಳ್ಳುವ ಯಾವುದೇ ಸರಕು, ಸಾಮಗ್ರಿಗಳ ಮೇಲೆ ವಿಧಿಸಲಾಗುವ ಸುಂಕವಿದು.

ಗಡಿಯಲ್ಲಿ ಸುಂಕ ನಿಗದಿ

ಗಡಿಯಲ್ಲಿ ಸುಂಕ ನಿಗದಿ

ಕಸ್ಟಮ್ಸ್ ಸುಂಕ: ಆಮದು ಮತ್ತು ರಫ್ತು ಸಾಮಗ್ರಿಗಳ ಮೇಲೆ ವಿಧಿಸಲಾಗುವ ಸುಂಕ.

ಡಿಸ್ ಇನ್ವೆಸ್ಟ್ ಮೆಂಟ್: ಆರ್ಥಿಕ ಸಂಕಷ್ಟದಲ್ಲಿರುವ ಅಥವಾ ನಷ್ಟದಲ್ಲಿರುವ ಸರ್ಕಾರಿ ಉದ್ದಿಮೆಗಳಲ್ಲಿನ ಬಂಡವಾಳವನ್ನು ಹಿಂಪಡೆಯುವುದು ಅಥವಾ ಅಂಥ ಉದ್ದಿಮೆಗಳನ್ನು ಮಾರಾಟ, ಪರಭಾರೆ ಮಾಡುವ ವಿಧಾನವನ್ನು ಡಿಸ್ ಇನ್ವೆಸ್ಟ್ ಮೆಂಟ್ ಎನ್ನಬಹುದಾಗಿದೆ.

ಆದಾಯ, ಖರ್ಚುಗಳ ಸಮತೋಲನ ಸವಾಲು

ಆದಾಯ, ಖರ್ಚುಗಳ ಸಮತೋಲನ ಸವಾಲು

ಬಜೆಟರಿ ಡೆಫಿಸಿಟ್: ಖರ್ಚುಗಳನ್ನು ಭರಿಸುವ ನಿಟ್ಟಿನಲ್ಲಿ ಉಂಟಾಗುವ ಆರ್ಥಿಕ ಕೊರತೆಯನ್ನು ಡೆಫಿಸಿಟ್ ಎಂದು ಕರೆಯಲಾಗುತ್ತದೆ. ಅಂದರೆ, ಎಲ್ಲಾ ಆರ್ಥಿಕ ಸಂಪನ್ಮೂಲಗಳಿಂದ ಬರುವ ಆದಾಯ, ದೇಶದ ಒಟ್ಟಾರೆ ಖರ್ಚನ್ನು ಸರಿದೂಗಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಖರ್ಚನ್ನು ಇನ್ನೂ ಎಷ್ಟು ಹಣ ಬೇಕು ಎಂಬುದನ್ನು ಬಜೆಟರಿ ಡೆಫಿಸಿಟ್ ತೋರಿಸುತ್ತದೆ.

ಫಿಸ್ಕಲ್ ಡೆಫಿಸಿಟ್ : ಇದನ್ನು ಆರ್ಥಿಕ ಹಣದುಬ್ಬರ ಎಂದು ಹೇಳಲಾಗುತ್ತದೆ. ದೇಶದ ಒಟ್ಟಾರೆ ಉತ್ಪನ್ನ ಹಾಗೂ ಒಟ್ಟಾರೆ ಖರ್ಚಿನ ನಡುವಿನ ವ್ಯತ್ಯಾಸವನ್ನು ಸೂಚಿಸುತ್ತದೆ.

ಹಳೇ, ಹೊಸ ಸಂಪ್ರದಾಯಗಳ ನಡುವೆ

ಹಳೇ, ಹೊಸ ಸಂಪ್ರದಾಯಗಳ ನಡುವೆ

ಫಿನಾನ್ಸ್ ಬಿಲ್ : ಈಗ ಅಸ್ತಿತ್ವದಲ್ಲಿರುವ ತೆರಿಗೆಯಲ್ಲಿ ಬದಲಾವಣೆ, ನೂತನ ತೆರಿಗೆ, ಚಾಲ್ತಿಯಲ್ಲಿರುವ ತೆರಿಗೆಗಳನ್ನು ಮುಂದುವರಿಸುವ ಬಗ್ಗೆ ಸಂಸತ್ತಿನಲ್ಲಿ ಮಂಡಿಸಲಾಗುವ ಮಸೂದೆಯನ್ನು ಫಿನಾನ್ಸ್ ಬಿಲ್ ಎಂದು ಕರೆಯಲಾಗುತ್ತದೆ.

English summary
May be on Febrary 1st, the central government is planning to present the Centrl budget. During this budget, finance minister Arun Jetley may use some important terminologies which are important very to understand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X