ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಎನ್​ಎಕ್ಸ್​ ಮೀಡಿಯಾ ಏನು ? ಎತ್ತ? ಅಂಶಗಳಲ್ಲಿ ವಿವರಣೆ

By ವಿಕಾಸ್ ನಂಜಪ್ಪ
|
Google Oneindia Kannada News

ಚೆನ್ನೈ, ಫೆಬ್ರವರಿ 28: ಐಎನ್​ಎಕ್ಸ್​ ಮೀಡಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಅವರ ಬಂಧನವಾಗಿದೆ. ಫೆಮಾ ನಿಯಮ ಉಲ್ಲಂಘಿಸಿ ಹಣ ಪಡೆದ ಆರೋಪವನ್ನು ಕಾರ್ತಿ ಹೊತ್ತುಕೊಂಡಿದ್ದಾರೆ.

ಐಎನ್​ಎಕ್ಸ್​ ಮೀಡಿಯಾದಿಂದ ಫೆಮಾ ನಿಯಮ ಉಲ್ಲಂಘಿಸಿ ಹಣ ಪಡೆದ ಆರೋಪದ ಮೇಲೆ ಕಾರ್ತಿಯನ್ನು ಬಂಧಿಸಲಾಗಿದೆ. 10 ಲಕ್ಷ ರೂ. ಅಕ್ರಮ ಹಣದ ರಸೀದಿಯನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಸಿಬಿಐ ತಿಳಿಸಿದೆ.

ಚೆನ್ನೈ ಏರ್​ಪೋರ್ಟ್​ನಲ್ಲಿ ಕಾರ್ತಿ ಬಂಧನವಾಗಿದ್ದು, ಅವರ ಮೇಲೆ ಆರೋಪಕ್ಕೆ ಕಾರಣವಾದ ಐಎನ್ಎಕ್ಸ್ ಮೀಡಿಯಾದ ಒಡೆತನವನ್ನು ಪೀಟರ್ ಮುಖರ್ಜಿ ಹಾಗೂ ಇಂದ್ರಾಣಿ ಮುಖರ್ಜಿ ಹೊಂದಿದ್ದರು ಎಂಬುದು ಗಮನಾರ್ಹ.

ಐಎನ್​ಎಕ್ಸ್ ಮೀಡಿಯಾ ಸಂಸ್ಥೆಯಲ್ಲಿ ವಿದೇಶಿ ಹೂಡಿಕೆಗೆ 2007ರಲ್ಲಿ ಅಂದಿನ ಹಣಕಾಸು ಸಚಿವ, ಕಾರ್ತಿ ಅವರ ತಂದೆ ಪಿ. ಚಿದಂಬರಂ ಅನುಮತಿ ನೀಡಿದ್ದರು. ಇದಕ್ಕಾಗಿ ಮೀಡಿಯಾ ಸಂಸ್ಥೆಯಿಂದ ಕಾರ್ತಿ ಚಿದಂಬರಂಗೆ 10 ಲಕ್ಷ ರೂ. ಕಿಕ್ ಬ್ಯಾಕ್ ಸಿಕ್ಕಿದ ಆರೋಪ ಕೂಡಾ ಇದೆ.

The INX Media case explained in 6 points
English summary
In a major development, the Central Bureau of Investigation arrested Karti Chidambaram, son of former union minister, P Chidambaram in connection with the INX Media case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X