ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ಲಾಸ್ಟಿಕ್ ಅತಿ ಬಳಕೆ ಮನುಕುಲಕ್ಕೆ ತಂದಿಟ್ಟ ಅಪಾಯ

|
Google Oneindia Kannada News

ಬೆಂಗಳೂರು, ಅಕ್ಟೋಬರ್. 06: ಪ್ಲಾಸ್ಟಿಕ್ ಅತಿಯಾದ ಬಳಕೆ ಮಾನವನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದನ್ನು ಅನೇಕ ಸಂಶೋಧನೆಗಳು ಒತ್ತಿ ಹೇಳಿವೆ. ಇದೀಗ ಬೆಂಗಳೂರು ಮೂಲದ ಕೂದಲು ಮತ್ತು ಚರ್ಮದ ಕ್ಲಿನಿಕ್ ಹೇರ್ ಲೈನ್ ಇಂಟರ್ ನ್ಯಾಶನಲ್ ಸಂಸ್ಥೆ ಅದಕ್ಕೆ ಮತ್ತಷ್ಟು ಪುರಾವೆಗಳನ್ನು ಒದಗಿಸಿದೆ.

ಪ್ಲಾಸ್ಟಿಕ್ ಕೇವಲ ಪರಿಸರಕ್ಕಷ್ಟೇ ಹಾನಿಕಾರಕವಾಗಿಲ್ಲ, ಆರೋಗ್ಯ ಸಮಸ್ಯೆಗಳನ್ನೂ ಸೃಷ್ಟಿಸುತ್ತದೆ ಎಂಬ ಕುರಿತು ಅರಿವು ಮೂಡಿಸಲು ಹೇರ್ ಲೈನ್ ಇಂಟರ್ ನ್ಯಾಶನಲ್, ಮೆರಿಸಿಸ್ ಥೆರಪಿಯಾಟಿಕ್ಸ್ ಜತೆ ಸೇರಿಕೊಂಡು ಪ್ಲಾಸ್ಟಿಕ್ ನ ಹಾನಿಕಾರಕ ಅಂಶಗಳನ್ನು ಒಂದೊಂದಾಗಿ ಮುಂದಿಡಲಾಗಿದೆ.[ನೀವು ತಿನ್ನುವ ಅಕ್ಕಿ ಪ್ಲಾಸ್ಟಿಕ್ ನಿಂದ ಮಾಡಿದ್ದೇ]

ಸಂಶೋಧನಾ ವರದಿಯನ್ನು ಹೇರ್ ಲೈನ್ ಇಂಟರ್ ನ್ಯಾಶನಲ್ ರಿಸರ್ಚ್ ಆಂಡ್ ಟ್ರೀಟ್ ಮೆಂಟ್ ಸೆಂಟರ್ ನಿರ್ದೇಶಕ ಬಾಣಿ ಆನಂದ್ ಬಿಡುಗಡೆ ಮಾಡಿದರು. ಕೂದಲು ಉದುರುವ ಸಮಸ್ಯೆ ಹೊಂದಿರುವ 100 ರೋಗಿಗಳ ಮೇಲೆ 8 ತಿಂಗಳ ಕಾಲ ನಡೆಸಿದ ಸಂಶೋಧನೆಯ ಫಲಿತಾಂಶ ಪ್ಲಾಸ್ಟಿಕ್ ನ ಕರಾಳ ಮುಖವನ್ನು ತೆಗೆದಿರಿಸಿತ್ತು ಎಂದು ತಿಳಿಸಿದರು. ಪ್ಲಾಸ್ಟಿಕ್ ಬಳಕೆ ತರುವ ಅಪಾಯಗಳನ್ನು ಒಂದೊಂದಾಗಿ ನೋಡಿ..

ಕ್ಯಾನ್ಸರ್ ಕಾರಕ

ಕ್ಯಾನ್ಸರ್ ಕಾರಕ

ಕ್ಯಾನ್ಸರ್ ನಂಥ ಸಮಸ್ಯೆಗೆ ಮೂಲ ಕಾರಣವೇ ಪ್ಲಾಸ್ಟಿಕ್. ಪ್ಲಾಸ್ಟಿಕ್ ನಲ್ಲಿರುವ ಬಿಪಿಎ ಅಥವಾ ಬಿಸ್ಫಿನಾಲ್ ಎ ಮಾನವರ ದೇಹಕ್ಕೆ ವಿವಿಧ ಆಯಾಮದಲ್ಲಿ ಸೇರಿ ಮಾರಕ ರೋಗಗಳಿಗೆ ಕಾರಣವಾಗುತ್ತದೆ.

ಕಾಯಿಲೆಗಳ ಕಾರ್ಖಾನೆ

ಕಾಯಿಲೆಗಳ ಕಾರ್ಖಾನೆ

ನರ ಸಂಬಂಧಿ ಸಮಸ್ಯೆ, ಥೈರಾಯ್ಡ್ ತೊಂದರೆ, ಹೆಚ್ಚಿದ ಕ್ಯಾನ್ಸರ್ ಹಾಗೂ ಟ್ಯೂಮರ್ ನ ಅಪಾಯ, ಅಸ್ತಮಾ ಹಾಗೂ ಹೃದಯದ ಕಾಯಿಲೆಗಳು, ಲೈಂಗಿಕ ದೌರ್ಬಲ್ಯ, ಜತೆಗೆ ಕೂದಲು ಮತ್ತು ಚರ್ಮದ ಸಮಸ್ಯೆಗಳಿಗೆ ಮೂಲವೇ ಪ್ಲಾಸ್ಟಿಕ್ ಎಂದು ಮೆರಿಸಿಸ್ ಥೆರಪಿಯಾಟಿಕ್ಸ್ ನಿರ್ದೇಶಕ ಡಾ.ಕೌಶಿಕ್ ಡಿ ದೇಬ್ ತಿಳಿಸಿದರು.

ಬಳಕೆ ಸಂಪೂರ್ಣ ನಿಂತಿಲ್ಲ

ಬಳಕೆ ಸಂಪೂರ್ಣ ನಿಂತಿಲ್ಲ

ಸರ್ಕಾರ 40 ಮೈಕ್ರಾನ್ ಗಿಂತ ಕಡಿಮೆ ಇರುವ ಪ್ಲಾಸ್ಟಿಕ್ ಕವರ್ ಗಳನ್ನು ನಿಷೇಧ ಮಾಡಿದ್ದರೂ ಬಳಕೆಗೆ ಇನ್ನೂ ಸಂಪೂರ್ಣ ಕಡಿವಾಣ ಬಿದ್ದಿಲ್ಲ. ಜನರೇ ಪ್ಲಾಸ್ಟಿಕ್ ತ್ಯಜಿಸದ ಹೊರತು ಬಳಕೆ ನಿಲ್ಲಿಸಲು ಸಾಧ್ಯವಿಲ್ಲ.

ಪಶುಗಳ ಪ್ರಾಣಕ್ಕೆ ಮಾರಕ

ಪಶುಗಳ ಪ್ರಾಣಕ್ಕೆ ಮಾರಕ

ಎಲ್ಲೆಂದರಲ್ಲಿ ಬಿಸಾಡುವ ಆಹಾರಯುಕ್ತ ಪ್ಲಾಸ್ಟಿಕ್ ವಸ್ತುಗಳನ್ನು ಪಶುಗಳು ಭಕ್ಷಿಸುತ್ತವೆ. ಆದರೆ ಪಶುಗಳ ಹೊಟ್ಟೆ ಸೇರಿದ ಪ್ಲಾಸ್ಟಿಕ್ ಅವುಗಳ ಪ್ರಾಣವನ್ನೇ ಬಲಿ ತೆಗೆದುಕೊಂಡ ಉದಾಹರಣೆಗಳು ಇವೆ.

ಮನೆಯಿಂದಲೇ ಆರಂಭವಾಗಲಿ

ಮನೆಯಿಂದಲೇ ಆರಂಭವಾಗಲಿ

ನಾವು ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಲು ಪಣ ತೋಡಬೇಕಾಗಿದೆ. ಅಡುಗೆ ಮನೆಯ ಸಾಮ್ರಿಗಳು ಪ್ಲಾಸ್ಟಿಕ್ ಮಯವಾಗುತ್ತಿವೆ. ಮಾರುಕಟ್ಟೆಗೆ ತೆರಳಿದಾಗಲೂ ಪ್ಲಾಸ್ಟಿಕ್ ಕವರ್ ನ್ನೇ ನೆಷ್ಷಿಕೊಂಡಿದ್ದೇವೆ. ಇದೆಲ್ಲದರ ಬದಲಾಗಿ ಪರ್ಯಾಯ ಮಾರ್ಗ ಅನುಸರಿಸಿದರೆ ಪರಿಸರ ಸಂರಕ್ಷಣೆ ಮತ್ತು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ.

English summary
Plastics are a part of our daily lives. Unfortunately, that doesn't mean they're safe or responsible. A closer understanding of the harmful effects of plastic will empower us to improve their toxic footprint. Here is the list of plastic effects.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X