ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಬ್ಬಬ್ಬಾ.. ಭಾರತೀಯ ರೈಲ್ವೆ ಪ್ರಯಾಣಿಕರಿಗೆ ಇದೆಂಥಾ ಮೋಸ

|
Google Oneindia Kannada News

ಬೆಂಗಳೂರು, ಮಾ. 19: ರೈಲ್ವೆ ಟಿಕೆಟ್ ಬುಕಿಂಗ್ ಮಾಡಿರುತ್ತಿರಿ. ಅದರ ಕನ್ ಫರ್ಮ್ ಗೆಂದು ಬೆಳಗ್ಗೆ 8 ಗಂಟೆಗೆ ಲಾಗ್ ಇನ್ ಆದರೆ ಬೆಚ್ಚಿಬೀಳಬೇಕಾಗುತ್ತದೆ. ಎಲ್ಲ ಸೀಟುಗಳು ಒಮ್ಮೆಲೆ ಭರ್ತಿಯಾಗಿರುತ್ತವೆ. ಈ ಅನುಭವ ರೈಲ್ವೆ ಪ್ರಯಾಣಿಕರಿಗೆ ಆಗಿರಲೇಬೇಕು.

ಹಿಂದಿನ ದಿನ ನೋಡಿದಾಗ ಖಾಲಿ ಇದ್ದ ಎಲ್ಲ ಸೀಟುಗಳು ಕ್ಷಣ ಮಾತ್ರದಲ್ಲಿ ಬುಕ್ ಆಗಿರುತ್ತದೆ. ಈ ಎಲ್ಲ ಕೆಲಸಗಳು ಬೆಳಗ್ಗೆ 8 ಗಂಟೆಯುಂದ 8 ಗಂಟೆ 1 ನಿಮಿಷ ಅಂದರೆ ಕೇವಲ ಒಂದು ನಿಮಿಷದ ಅವಧಿಯಲ್ಲಿ ನಡೆದಿರುತ್ತದೆ ಎಂಬುದನ್ನು ನಂಬಲೇಬೇಕು[ಇನ್ನೂ 4 ತಿಂಗಳ ಮೊದಲೇ ರೈಲ್ವೆ ಟಿಕೆಟ್ ಬುಕ್ ಮಾಡಿ]

india

ಹೌದು. ಇಂಥದ್ದೊಂದು ಆತಂಕಾರಿ ಮಾಹಿತಿಯನ್ನು ಗುಪ್ತಚರ ವರದಿಯೊಂದು ನೀಡಿದ್ದು ಪ್ರತಿದಿನ ನಾಲ್ಕು ಸಾವಿರಕ್ಕೂ ಅಧಿಕ ಟಿಕೆಟ್ ಗಳನ್ನು ಬ್ಲ್ಯಾಕ್ ಟಿಕೆಟ್ ಮಾದರಿಯಲ್ಲಿ ಮಾರಿಕೊಳ್ಳಲಾಗುತ್ತಿದೆ.[ರೈಲ್ವೆ ಸ್ಪೆಷಲ್ : 12 ದಿನಗಳ ಯಾತ್ರೆಗೆ 9,900 ರು]

ಇದು ಹೇಗೆ ಸಾಧ್ಯ?

ಮೊದಲೇ ಟಿಕೆಟ್ ಬುಕ್ ಮಾಡಿದ್ದರೆ ಪ್ರಯಾಣಿಕ ಸಮಗ್ರ ಮಾಹಿತಿಯನ್ನು ನೀಡಿರಬೇಕಾಗುತ್ತದೆ. ಇದನ್ನೇ ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿರುವ ವಂಚಕರು ಯಾವುದೋ ಹೆಸರುವಾಸಿಯಲ್ಲದ ರೈಲಿನ ಟಿಕೆಟ್ ಖರೀದಿ ಮಾಡಿರುತ್ತಾರೆ. ಈ ವೇಳೆ ಅವರ ಸಮಗ್ರ ಅವರ ಎಲ್ಲ ದಾಖಲಾಗಿರುತ್ತದೆ.

ಟಿಕೆಟ್ ಕೌಂಟರ್ ಆರಂಭಾದ ತಕ್ಷಣ ಇದೇ ಟಿಕೆಟ್ ಪಿಎನ್ ಆರ್ ನಂಬರ್ ಬದಲಿಸಿ ಜನಪ್ರಿಯ ರೈಲುಗಳ ಅಂದರೆ ರಾಜಧಾನಿ ಸೇರಿದಂತೆ ಲಾಂಗ್ ರೂಟ್ ನ ರೈಲಿನ ಟಿಕೆಟ್ ಆಗಿ ಬದಲಾವಣೆ ಮಾಡಿಕೊಡಲಾಗುತ್ತದೆ. ಪ್ರಯಾಣಿಕರ ಮಾಹಿತಿ ಈ ಹಿಂದೆಯೇ ದಾಖಲಾಗಿರುವುದರಿಂದ ಹೊಸದಾಗಿ ನೋಂದಣಿ ಮಾಡುವ ಅಗತ್ಯ ಇರುವುದಿಲ್ಲ. ಈ ಎಲ್ಲ ಕೆಲಸಗಳು ಕೇವಲ ಒಂದು ನಿಮಿಷದ ಅವಧಿಯಲ್ಲಿ ನಡೆದು ಹೋಗಿರುತ್ತದೆ.

ಮಧ್ಯವರ್ತಿಗಳು ಒಂದು ದಿನದ ಹಿಂದೆಯೇ ಯಾವುದೋ ಖಾಲಿ ಇರುವ ರೈಲಿನ ಟಿಕೆಟ್ ಬುಕ್ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ರೈಲ್ವೆ ಇಲಾಖೆ ಕ್ಲರ್ಕ್ ಜತೆ ಮೊದಲೆ ಹೊಂದಾಣಿಕೆ ಮಾಡಿಕೊಂಡಿರುವುದರಿಂದ ಮರುದಿನ ಬೆಳಗ್ಗೆ ಕೌಂಟರ್ ತೆರೆದ ತಕ್ಷಣ ದಲ್ಲಾಳಿ ಕೈಗೆ ಜನಪ್ರಿಯ ರೈಲಿನ ಟಿಕೆಟ್ ಲಭ್ಯವಾಗುತ್ತದೆ. ದಲ್ಲಾಳಿ ಇದನ್ನು ಆಮೇಲೆ ಹೆಚ್ಚಿನ ಬೆಲೆಗೆ ಮಾರಿಕೊಳ್ಳುತ್ತಾನೆ.

ಈ ಬಗ್ಗೆ ರೈಲ್ವೆ ಇಲಾಖೆ ಪರಿಹಾರ ತೆಗೆದುಕೊಳ್ಳಲು ಮುಂದಾಗಿದೆ. ಒಂದೇ ವಿಳಾಸ ನೀಡಿ ಪದೇ ಪದೇ ಟಿಕೆಟ್ ಬುಕ್ ಮಾಡಿ ಬದಲಾಯಿಸುವವರ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕಿ ತಪ್ಪಿತಸ್ಥರನ್ನು ಬಂಧಿಸಲಾಗುವುದು ಎಂದು ರೈಲ್ವೆ ಇಲಾಖೆ ಅಧಿಕಾರಿ ಶುಕ್ಲಾ ತಿಳಿಸಿದ್ದಾರೆ.

English summary
Your chances of securing confirmed train tickets on popular routes just went up. The Railways has zeroed in on the biggest reason behind the perennial complaint of passengers not being able to get confirmed tickets even after turning up at the ticket counters at 8 am, when they open across India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X