ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆದಾಯ ತೆರಿಗೆ ರಿಟರ್ನ್ಸ್ ಫೈಲಿಂಗ್ ದಿನಾಂಕ ಆ.31 ಕ್ಕೆ ವಿಸ್ತರಣೆ

|
Google Oneindia Kannada News

ನವದೆಹಲಿ, ಜುಲೈ 23: 2019-20ನೇ ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯ ದಿನಾಂಕವನ್ನು ಕೇಂದ್ರ ಸರ್ಕಾರ ಆಗಸ್ಟ್ 31ರವರೆಗೆ ವಿಸ್ತರಿಸಿದೆ.

ಇದಕ್ಕೂ ಮುನ್ನ ಐಟಿ ರಿಟರ್ನ್ಸ್ ಸಲ್ಲಿಸಲು ಜುಲೈ 31, 2019 ಕೊನೆಯ ದಿನಾಂಕವಾಗಿತ್ತು. ಇದೀಗ ಈ ದಿನಾಂಕವನ್ನು ಇನ್ನೊಂದು ತಿಂಗಳು ಅಂದರೆ ಆಗಸ್ಟ್ 31, 2019 ಕ್ಕೆ ವಿಸ್ತರಿಸಲಾಗಿದೆ.

2 ಕೋಟಿಗೂ ಹೆಚ್ಚು ತೆರಿಗೆ ಆದಾಯ ಇದ್ದರೆ ಕನಿಷ್ಠ 39% ತೆರಿಗೆ 2 ಕೋಟಿಗೂ ಹೆಚ್ಚು ತೆರಿಗೆ ಆದಾಯ ಇದ್ದರೆ ಕನಿಷ್ಠ 39% ತೆರಿಗೆ

ಐಟಿ ರಿಟರ್ನ್ಸ್ ಸಲ್ಲಿಕೆಗೆ ಅಗತ್ಯವಾದ ಫಾರ್ಮ್ 16 ನಮೂನೆ ಕೆಲವರಿಗೆ ದೊರೆಯದ ಕಾರಣ ರಿಟರ್ನ್ಸ್ ಸಲ್ಲಿಸಲು ವಿಳಂಬವಾಗುತ್ತಿತ್ತು. ಮತ್ತು ಹಲವು ಕಾರಣಗಳಿಂದ ತೆರಿಗೆದಾದರರು ದಿನಾಂಕ ವಿಸ್ತರಿಸುವಂತೆ ಮನವಿ ಮಾಡಿದ್ದರಿಂದ ವಿಸ್ತರಿಸಲಾಗಿದೆ ಎಂದು ಕೇಂದ್ರ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.

The government extends deadline for filing income tax to Aug 31

ಕಳೆದ ಫೆಬ್ರವರಿಯಲ್ಲಿ ಕೇಂದ್ರ ಬಜೆಟ್ ಮಂಡಿಸಿದ್ದ ಆಗಿನ ಹಣಕಾಸು ಸಚಿವ ಪಿಯೂಶ್ ಗೋಯೆಲ್ ಅವರು 5 ಲಕ್ಷ ರು. ವರೆಗೆ ವಾರ್ಷಿಕ ಆದಾಯವಿರುವ ಸಂಬಳದಾರರು ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ ಎಂದಿದ್ದರು. ಜೊತೆಗೆ ಜೂನ್ ತಿಂಗಳಿನಲ್ಲಿ ಪೂರ್ಣಾವಧಿ ಬಜೆಟ್ ಮಂಡಿಸಿದ್ದ ಕೇಂದ್ರ ಹಣಕಾಸು ಸವಿವೆ ನಿರ್ಮಲಾ ಸೀತಾರಾಮನ್ ಅವರೂ ಇದನ್ನೇ ಪುನರುಚ್ಚರಿಸಿದ್ದು ಇಲ್ಲಿ ಉಲ್ಲೇಖನೀಯ.

English summary
The finance ministry has extended the deadline for filing income tax return (ITR) for FY2018-19 by individuals to August 31, 2019 from July 31, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X