ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೆಲ್ಟಾ ರೂಪಾಂತರಿ ವಿಶ್ವದೆಲ್ಲೆಡೆ ಮೂಡಿಸಿದ ಆತಂಕ ಹೇಗಿದೆ ಗೊತ್ತಾ!

|
Google Oneindia Kannada News

ನವದೆಹಲಿ, ಜೂನ್ 13: ಕೊರೊನಾವೈರಸ್‌ನ ಡೆಲ್ಟಾ ರೂಪಾಂತರಿ ಈಗ ವಿಶ್ವವನ್ನು ಆತಂಕಕ್ಕೆ ತಳ್ಳಿದೆ. ಮೊದಲ ಅಲೆಯಲ್ಲಿ ಭಾರತದಲ್ಲಿ ಹೆಚ್ಚಿನ ಅಪಾಯವನ್ನು ಮಾಡದಿದ್ದ ಕೊರೊನಾವೈರಸ್ ಎರಡನೇ ಅಲೆಯಲ್ಲಿ ದೊಡ್ಡ ಆಘಾತವನ್ನು ನೀಡಿತ್ತು. ಇದಕ್ಕೆ ಕಾರಣವಾಗಿದ್ದು ಡೆಲ್ಟಾ ರೂಪಾಂತರಿ ವೈರಸ್. ಭಾರತದಲ್ಲಿ ಮೊದಲಿಗೆ ಪತ್ತೆಯಾದ ಈ ಅಪಾಯಕಾರಿ ರೂಪಾಂತರಿ ಈಗ ವಿಶ್ವದ ಉಳಿದ ದೇಶಗಳಿಗೂ ಆತಂಕ ಮೂಡಿಸುತ್ತಿದೆ.

ವಿಶ್ವದ ಬೇರೆ ಬೇರೆ ರಾಷ್ಟ್ರಗಳಲ್ಲಿ ಡೆಲ್ಟಾ ರೂಪಾಂತರಿ ಪತ್ತೆಯಾಗುತ್ತಿದೆ. ಹೀಗಾಗಿ ಅನೇಕ ರಾಷ್ಟ್ರಗಳು ಲಾಕ್‌ಡೌನ್‌ನಂತ ಕ್ರಮಗಳನ್ನು ಕೈಗೊಂಡು ಹರಡದಂತೆ ಎಚ್ಚರಿಕೆಯ ಕ್ರಮ ಕೈಗೊಳ್ಳುತ್ತಿದೆ.

ಗುಣಮುಖರಾದವರು ಲಸಿಕೆ ಪಡೆದರೆ ಏನಾಗುತ್ತದೆ; AIG ವರದಿ ಹೀಗನ್ನುತ್ತಿದೆ...ಗುಣಮುಖರಾದವರು ಲಸಿಕೆ ಪಡೆದರೆ ಏನಾಗುತ್ತದೆ; AIG ವರದಿ ಹೀಗನ್ನುತ್ತಿದೆ...

ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಎರಡನೇ ಅಲೆಯ ಕಡಿಮೆಯಾದ ಬಳಿಕ ಈಗ ಮೂರನೇ ಅಲೆ ಕಾಡಲು ಆರಂಭಿಸಿದ್ದು ಇಲ್ಲಿ ಡೆಲ್ಟಾ ರೂಪಾಂತರಿ ಪ್ರಕರಣಗಳೂ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸದ್ಯ ಜೂನ್ 21ರವರೆಗೆ ಲಾಕ್‌ಡೌನ್ ಹೇರಲಾಗಿದೆ. ಅಂದುಕೊಂಡ ಪ್ರಮಾಣದಲ್ಲಿ ವೈರಸ್ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಈ ಲಾಕ್‌ಡೌನ್‌ಅನ್ನು ಮತ್ತೆ ನಾಲ್ಕು ವಾರಗಳ ಕಾಲ ಮುಂದುವರಿಸುವ ಸಾಧ್ಯತೆಯಿದೆ ಎಂದು ವರದಿಯಾಗುತ್ತಿದೆ. ಕಳೆದ ಒಂದು ವಾರದಲ್ಲಿ 30,000 ಹೊಸ ಡೆಲ್ಟಾ ಮಾದರಿಯ ಕೊರೊನಾವೈರಸ್ ಪ್ರಕರಣಗಳು ಪತ್ತೆಯಾಗಿದೆ ಎಂದು ಪಬ್ಲಿಕ್ ಹೆಲ್ತ್ ಇಂಗ್ಲೆಂಡ್ ಅಧಿಕೃತ ಮಾಹಿತಿಯನ್ನು ನೀಡಿದೆ.

ಜಿಂಬಾಬ್ವೆಯಲ್ಲೂ ಲಾಕ್‌ಡೌನ್‌ಗೆ ಕಾರಣವಾದ ಡೆಲ್ಟಾ

ಜಿಂಬಾಬ್ವೆಯಲ್ಲೂ ಲಾಕ್‌ಡೌನ್‌ಗೆ ಕಾರಣವಾದ ಡೆಲ್ಟಾ

ಇನ್ನು ಕೊರೊನಾವೈರಸ್‌ನ ಡೆಲ್ಟಾ ಮಾದರಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಜಿಂಬಾಬ್ವೆ ಸರ್ಕಾರ ಎರಡು ವಾರಗಳ ಕಾಲ ಸ್ಥಳೀಯ ಲಾಕ್‌ಡೌನ್‌ಅನ್ನು ಎರಡು ಜಿಲ್ಲೆಗಳಲ್ಲಿ ವಿಧಿಸಿದೆ. ಹುರುಂಗ್ವೆ ಹಾಗೂ ಕರೀಬಾ ಜಿಲ್ಲೆಗಳಲ್ಲಿ ಎರಡು ವಾರಗಳ ಲಾಕ್‌ಡೌನ್‌ಅನ್ನು ಜಿಂಬಾಬ್ವೆ ಸರ್ಕಾರ ಘೋಷಿಸಿದೆ. ಸರ್ಕಾರ ನೀಡಿರುವ ಮಾಹಿತಿಯ ಪ್ರಕಾರ ಕಳೆದ ಮೂರು ದಿನಗಳಲ್ಲಿ 40ಕ್ಕೂ ಹೆಚ್ಚು ಡೆಲ್ಟಾ ಮಾದರಿಯ ಪ್ರಕರಣಗಳು ಈ ಜಿಲ್ಲೆಗಳಲ್ಲಿ ಪತ್ತೆಯಾಗಿದೆ.

ಯೂರೋಪ್‌ಗೆ ಕಾದಿದೆಯಾ ಆತಂಕ?

ಯೂರೋಪ್‌ಗೆ ಕಾದಿದೆಯಾ ಆತಂಕ?

ವಿಶ್ವ ಆರೋಗ್ಯ ಸಂಸ್ಥೆಯ ಯೂರೋಪ್ ನಿರ್ದೇಶಕ ಡಾ. ಹನ್ಸ್ ಕ್ಲೂಜ್ ಡೆಲ್ಟಾ ಮಾದರಿ ಯುರೋಪ್ ಭಾಗವನ್ನು ಹೆಚ್ಚಾಗಿ ಕಾಡುವ ಸಾಧ್ಯತೆಯಿದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ. ಕಳೆದ ಗುರುವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು 'ಯೂರೋಪ್ ಪ್ರದೇಶದಲ್ಲಿ ಡೆಲ್ಟಾ ಮಾದರಿಯ ವೈರಸ್ ಹಿಡಿತ ಸಾಧಿಸಲು ಸಿದ್ಧವಾಗಿದೆ" ಎಂದಿದ್ದರು. "ಡೆಲ್ಟಾ ರೂಪಾಂತರಿ ಕೆಲ ಲಸಿಕೆಗಳಿಂತ ತಪ್ಪಿಸಿಕೊಳ್ಳುವಂತಾ ಸಾಮರ್ಥ್ಯವನ್ನು ಹೊಂದಿದೆ. ದುರ್ಬಲ ಜನರು ಹಾಗೂ 60 ವರ್ಷಕ್ಕಿಂತ ಹೆಚ್ಚಿನ ವಯೋಮಾನದವರಿಗೆ ಈ ವೈರಸ್‌ನ ಆತಂಕ ಹೆಚ್ಚಾಗಿದೆ" ಎಂದಿದ್ದರು.

ಫ್ರಾನ್ಸ್‌ನಲ್ಲೂ ಪತ್ತೆಯಾಗುತ್ತಿದೆ ಡೆಲ್ಟಾ

ಫ್ರಾನ್ಸ್‌ನಲ್ಲೂ ಪತ್ತೆಯಾಗುತ್ತಿದೆ ಡೆಲ್ಟಾ

ಕೊರೊನಾವೈರಸ್‌ನ ಡೆಲ್ಟಾ ರೂಪಾಂತರಿ ಫ್ರಾನ್ಸ್‌ನಲ್ಲಿಯೂ ಅಲ್ಲಲ್ಲಿ ಪತ್ತೆಯಾಗುವ ಮೂಲಕ ಆತಂಕಕ್ಕೆ ಕಾರಣವಾಗಿದೆ. ಅಲ್ಲಿನ ಆರೋಗ್ಯ ಸಚಿವ ಓಲಿವಿಯರ್ ವೇಲನ್ ಈ ಬಗ್ಗೆ ಮಾಹಿತಿ ನೀಡಿದ್ದು ಅನೇಕ ಪ್ರದೇಶಗಳಲ್ಲಿ ಈ ರೂಪಾಂತರಿ ಪತ್ತೆಯಾಗುತ್ತಿದ್ದು ನೈಋತ್ಯ ಲ್ಯಾಂಡೇಸ್ ಪ್ರದೇಶದಲ್ಲಿ ಹೆಚ್ಚಿನ ಪ್ರಕರಣಗಳು ಬೆಳಕಿಗೆ ಬರುತ್ತಿವೆ ಎಂದು ತಿಳಿಸಿದ್ದಾರೆ.

ಶ್ರೀಲಂಕಾದಲ್ಲಿಯೂ ಡೆಲ್ಟಾ ಕರಿಛಾಯೆ

ಶ್ರೀಲಂಕಾದಲ್ಲಿಯೂ ಡೆಲ್ಟಾ ಕರಿಛಾಯೆ

ಮತ್ತೊಂದೆಡೆ ಶ್ರೀಲಂಕಾದ ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳು ಕೂಡ ದ್ವೀಪರಾಷ್ಟ್ರದಲ್ಲಿ ಡೆಲ್ಟಾ ಮಾದರಿ ಪತ್ತೆಯಾಗಿರುವುದನ್ನು ಖಚಿತಪಡಿಸಿದ್ದಾರೆ. ಕ್ವಾರಂಟೈನ್‌ನಲ್ಲಿದ್ದ ಓರ್ವ ವ್ಯಕ್ತಿಯಲ್ಲಿ ಈ ರೂಪಾಂತರಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಳೆದ ಏಪ್ರಿಲ್ ತಿಂಗಳಿನಿಂದ ಶ್ರೀಲಂಕಾದಲ್ಲಿಯೂ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಹಾಗೂ ಇದಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ.

ಕೊರೊನಾವೈರಸ್‌ನ ತವರಿನಲ್ಲಿಯೂ ಡೆಲ್ಟಾ

ಕೊರೊನಾವೈರಸ್‌ನ ತವರಿನಲ್ಲಿಯೂ ಡೆಲ್ಟಾ

ಚೀನಾದ ಗುವಾಗ್ಸು ಪ್ರದೇಶದಲ್ಲಿ ಮೇ 21ರಿಂದ 100ಕ್ಕೂ ಹೆಚ್ಚು ಕೊರೊನಾವೈರಸ್ ಪ್ರಕರಣಗಳು ಪತ್ತೆಯಾಗಿದೆ. ವೈದ್ಯರುಗಳ ಮಾಹಿತಿಯ ಪ್ರಕಾರ ಈ ಭಾಗದಲ್ಲಿ ವೈರಸ್‌ನ ಏರಿಕೆಗೆ ಡೆಲ್ಟಾ ರೂಪಾಂತರಿ ಕಾರಣ ಎನ್ನಲಾಗಿದೆ.

Recommended Video

ಕೊರೊನಾದಿಂದ ಮೃತಪಟ್ಟ ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ಪರಿಹಾರ ಘೋಷಿಸಿದ CM | Oneindia Kannada
ಲಸಿಕೆ ಪಡೆದವರಿಗೂ ರೂಪಾಂತರಿ ಕಾಟ

ಲಸಿಕೆ ಪಡೆದವರಿಗೂ ರೂಪಾಂತರಿ ಕಾಟ

ನವದೆಹಲಿಯ ಏಮ್ಸ್ ಇತ್ತೀಚೆಗೆ ನಡೆಸಿದ ಅಧ್ಯಯನದಲ್ಲಿ ಡೆಲ್ಟಾ ರೂಪಾಂತರ ಒಂದು ಡೋಸ್ ಅಥವಾ ಕೋವಿಡ್ -19 ಲಸಿಕೆಯ ಎರಡೂ ಪ್ರಮಾಣವನ್ನು ಪಡೆದ ನಂತರವೂ ಪತ್ತೆಯಾಗುತ್ತಿರುವುದನ್ನು ತಿಳಿಸಿದೆ. 63 ಜನರಲ್ಲಿ ಈ ಅಧ್ಯಯನವನ್ನು ನಡೆಸಿದ್ದು ಇದರಲ್ಲಿ 36 ಜನರು ಎರಡೂ ಡೋಸ್‌ಗಳನ್ನು ಪಡೆದಿದ್ದರೆ 27 ಸೋಂಕಿತರು ಒಂದು ಡೋಸ್ ಪಡೆದವರಾಗಿದ್ದರು.

English summary
The Covid-19 Delta variant is currently spreading havoc around the globe. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X