ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

CDS : ಶೀಘ್ರದಲ್ಲೇ ಸಿಡಿಎಸ್‌ ಹುದ್ದೆ ನೇಮಕಕ್ಕೆ ಸಜ್ಜಾದ ಕೇಂದ್ರ ಸರ್ಕಾರ

|
Google Oneindia Kannada News

ನವದೆಹಲಿ, ಏಪ್ರಿಲ್‌ 17: ದೇಶದ ಮೊಟ್ಟಮೊದಲ ಸಿಡಿಎಸ್ ಆಗಿದ್ದ ಜನರಲ್ ಬಿಪಿನ್ ರಾವತ್ ಅವರ ವೀರಮರಣದ ನಂತರ ಸಿಡಿಎಸ್ ಹುದ್ದೆ ಖಾಲಿಯೇ ಉಳಿದಿದ್ದು ಕೇಂದ್ರ ಸರ್ಕಾರವು ಯಾವ ಅಧಿಕಾರಿಯನ್ನು ನೇಮಕ ಮಾಡಬಹುದು ಎಂಬುದು ಕುತೂಹಲ ಮೂಡಿಸಿದೆ.

ಸಿಡಿಎಸ್ ಬಿಪಿನ್ ರಾವತ್ ರಕ್ಷಣಾ ಸೇನೆಯ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾಗಿದ್ದರು ಬಳಿಕ ಈ ಹುದ್ದೆಯನ್ನು ನೇಮಕ ಮಾಡಲು ಕೇಂದ್ರ ಸರಕಾರವು ಸಮಯಾವಕಾಶ ತೆಗೆದುಕೊಂಡಿತ್ತು. ಆದರೆ ಮತ್ತೆ ರಕ್ಷಣೆಯಲ್ಲಿ ಮಹತ್ವದ ಪಾತ್ರವಹಿಸಿರುವ ಸಿಡಿಎಸ್ ಹುದ್ದೆಯನ್ನು ತುಂಬಿಕೊಳ್ಳಲು ಕೇಂದ್ರವು ಈ ಹುದ್ದೆಗೆ ಸೇವೆ ಸಲ್ಲಿಸುತ್ತಿರುವ ನಿವೃತ್ತ ಮಿಲಿಟರಿ ಅಧಿಕಾರಿಗಳನ್ನು ಪರಿಗಣಿಸಬಹುದು ಅಥವಾ ನಿವೃತ್ತ ಸೇನಾ ಅಧಿಕಾರಿಗಳನ್ನು ಸರ್ಕಾರ ಪರಿಗಣಿಸಬಹುದು ಎನ್ನಲಾಗಿದೆ.

ಜನರಲ್ ಬಿಪಿನ್ ರಾವತ್ ಹಠಾತ್ ನಿಧನ: ಯಾರಾಗಲಿದ್ದಾರೆ ಹೊಸ ಸಿಡಿಎಸ್?ಜನರಲ್ ಬಿಪಿನ್ ರಾವತ್ ಹಠಾತ್ ನಿಧನ: ಯಾರಾಗಲಿದ್ದಾರೆ ಹೊಸ ಸಿಡಿಎಸ್?

ಮುಂದಿನ ಸೇನಾ ಮುಖ್ಯಸ್ಥರನ್ನು ನೇಮಕ ಮಾಡಲು ಸರ್ಕಾರ ಈಗಾಗಲೇ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ. ಮುಂಬರುವ ವಾರದದಲ್ಲಿಯೇ ನೂತನ ಸಿಡಿಎಸ್ ಮುಖ್ಯಸ್ಥರನ್ನು ಸರ್ಕಾರ ಘೋಷಣೆ ಮಾಡುವ ಸಾಧ್ಯತೆಯಿದೆ ಎಂದು ಎಎನ್ಐ ಮೂಲಗಳು ತಿಳಿಸಿವೆ.ಸಿಡಿಎಸ್ ಹುದ್ದೆಗೆ ನೇಮಕವಾಗುವ ಈ ಮಹತ್ವದ ಹುದ್ದೆಯನ್ನು ತುಂಬಲು ಮೂರು ಅಥವಾ ನಾಲ್ಕು ಸ್ಟಾರ್ ಹೊಂದಿರುವ ಉನ್ನತ ಶ್ರೇಣಿಯ ಅಧಿಕಾರಿಗಳನ್ನು ಸಹ ಸಮಿತಿಯಲ್ಲಿ ಸೇರಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

The Center is soon to appoint next CDS post

ಇನ್ನು 2019ರಲ್ಲಿ ಅಧಿಕಾರಿಕ್ಕೆ ಬಿಜೆಪಿ ನೇತೃತ್ವದ ಮೋದಿ ಸರ್ಕಾರವು ಅಧಿಕಾರಕ್ಕೆ ಬಂದ 6 ತಿಂಗಳಲ್ಲಿಯೇ ಸಿಡಿಎಸ್ ಸೇನಾ ಮುಖ್ಯಸ್ಥರನ್ನು ನೇಮಕ ಮಾಡಿಕೊಂಡಿತ್ತು. ದೇಶದ ಉನ್ನತ ಮಿಲಿಟರಿ ಮೂಲ ಸೌಕರ್ಯಗಳಲ್ಲಿ ಅನೇಕ ಸುಧಾರಣೆಗಳಲ್ಲಿ ಒಂದಾಗಿದೆ ಎಂದು ಪ್ರಶಂಸಿಸಲಾಗಿದೆ.

The Center is soon to appoint next CDS post

Recommended Video

ಹುಲಿಯ ಹಳೇ ವಿಡಿಯೋ ಈಗ ಸದ್ದು ಮಾಡ್ತಿದೆ | Oneindia Kannada

ಸಿಡಿಎಸ್ ಹುದ್ದೆಯನ್ನು ನಿಭಾಯಿಸಲು ತಕ್ಕ ಅಧಿಕಾರಿಗಳು ಮಾತ್ರ ನೇಮಕ ಮಾಡಲಾಗುತ್ತದೆ. ಏಕೆಂದರೆ ಇದು ದೇಶದ ಅತ್ಯಂತ ಬಲಿಷ್ಠ ಮಿಲಿಟರಿಯ ಕೇಂದ್ರ ವಿಭಾಗವೆಂದು ನಿರೀಕ್ಷಿಸಲಾಗಿದೆ. ದೇಶದ ಎಲ್ಲಾ ಯುದ್ಧದ ರಚನೆಗಳು ನೇರವಾಗಿ ವರದಿ ಮಾಡುತ್ತವೆ. ಪ್ರಸ್ತುತ ಹೆಚ್ಚುವರಿ ಕಾರ್ಯದರ್ಶಿ ಶ್ರೇಣಿಯ ಲೆಫ್ಟಿನೆಂಟ್‌ ಜನರಲ್‌ ಅಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಮಿಲಿಟರಿ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಯಾಗಿ ಸಿಡಿಎಸ್ ಅವರನ್ನು ನೇಮಕ ಮಾಡಲಾಗುತ್ತದೆ.

English summary
After the death of the country's first ever CDS leader, the late General Bipin Rawat, the post of CDS remains vacant and the central government has raised concerns over which officer can be appointed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X