ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ಸೇನೆಯಲ್ಲಿ 52,000 ಸೈನಿಕರ ಕೊರತೆ

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಮಾರ್ಚ್ 22: ಸೇನೆಯಲ್ಲಿ 52,000 ಕ್ಕೂ ಹೆಚ್ಚು ಸೈನಿಕರ ಕೊರತೆ ಇದೆ. ಹೀಗಂತ ಸ್ವತಃ ರಕ್ಷಣಾ ಖಾತೆ ರಾಜ್ಯ ದರ್ಜೆ ಸಚಿವ ಸುಭಾಷ್ ಭಾಮ್ರೆ ಬುಧವಾರ ಲೋಕಸಭೆಯಲ್ಲಿ ತಿಳಿಸಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಭೂ ಸೇನೆಯಲ್ಲಿ 21,383 ಸೈನಿಕರ ಕೊರತೆ ಇದ್ದರೆ, ನೌಕಾಸೇನೆಯಲ್ಲಿ 16,348 ಸೈನಿಕರು ಕಡಿಮೆ ಇದ್ದಾರೆ. ಇನ್ನು ವಾಯುದಳದಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಇಲ್ಲೂ 15,010 ಯೋಧರ ಕೊರತೆ ಇದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಭಾರತೀಯ ವಾಯುಸೇನೆ ಸೇರಬೇಕೆ? ಇಲ್ಲಿದೆ ಅವಕಾಶಭಾರತೀಯ ವಾಯುಸೇನೆ ಸೇರಬೇಕೆ? ಇಲ್ಲಿದೆ ಅವಕಾಶ

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಭೂಸೇನೆಯಲ್ಲಿ 7,680 ಅಧಿಕಾರಿಗಳ ಕೊರತೆ ಇದೆ ಎಂದಿದ್ದಾರೆ ಇನ್ನು ರಾಫೇಲ್ ಡೀಲ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಕ್ಷಣಾ ಸಚಿವೆ ನಿರ್ಮಲಾ ಸೀತರಾಮನ್ 36 ವಿಮಾನಗಳ ಖರೀದಿಯಲ್ಲಿ ಎಲ್ಲಾ ನಿಯಮಗಳನ್ನು ಪಾಲನೆ ಮಾಡಲಾಗಿದೆ ಎಂದಿದ್ದಾರೆ.

The armed forces are 52,000 soldiers short says Govt

2016ರಲ್ಲಿ ಭಾರತ 58,000 ಕೋಟಿ ರೂಪಾಯಿ ವೆಚ್ಚದಲ್ಲಿ 36 ರಾಫೇಲ್ ಯುದ್ಧ ವಿಮಾನಗಳ ಖರೀದಿಗೆ ಫ್ರಾನ್ಸ್ ಜತೆ ಒಪ್ಪಂದ ಮಾಡಿಕೊಂಡಿತ್ತು. ಇದರಲ್ಲಿ ಹಗರಣ ನಡೆದಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ಒಪ್ಪಂದದ ವಿವರಗಳನ್ನು ನೀಡುವಂತೆ ಆಗ್ರಹಿಸಿದೆ.

ಆದರೆ ಸರಕಾರ ಒಪ್ಪಂದ ವಿವರಗಳನ್ನು ಬಹಿರಂಗಪಡಿಸಲು ಹಿಂದೇಟು ಹಾಕಿದೆ. 2019ರ ಸೆಪ್ಟೆಂಬರ್ ನಿಂದ ವಿಮಾನಗಳನ್ನು ಫ್ರಾನ್ಸ್ ಪೂರೈಸಲಿದೆ.

English summary
The government has said that there is a huge shortage in the armed forces. According to the details provided by Minister of State for Defence Subhash Bhamre in the Lok Sabha, the Army is reeling under a shortage of 21,383 personnel, while the number of vacant posts in the Navy is 16,348 and 15,010 in the Air Force.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X