ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದು ಮತ್ತು ನಾಳೆ ಪರ್ಸೀಡ್ ಉಲ್ಕಾಪಾತ: ಆಕಾಶದ ಈ ವಿಸ್ಮಯ ವೀಕ್ಷಣೆ ಹೇಗೆ?

|
Google Oneindia Kannada News

ಸದಾ ವಿಸ್ಮಯಕಾರಿ ಸಂಗತಿಗಳನ್ನು ತೋರಿಸುವ ಆಕಾಶ, ಮತ್ತೊಂದು ಅಪರೂಪದ ವಿದ್ಯಮಾನವನ್ನು ಪ್ರದರ್ಶಿಸಲಿದೆ. ಕಳೆದ ತಿಂಗಳು ನಮ್ಮ ಸೌರ ವ್ಯವಸ್ಥೆಯಲ್ಲಿ ನಿಯೋವೈಸ್ ಧೂಮಕೇತು ಕಂಡು ಖಗೋಳಪ್ರಿಯರು ರೋಮಾಂಚನಗೊಂಡಿದ್ದರು. ಆಕಾಶದ ವಿವಿಧ ನಕ್ಷತ್ರ, ಧೂಮಕೇತು, ಕಾಯಗಳ ಕುರಿತು ಆಸಕ್ತಿಯುಳ್ಳವರಿಗೆ ಮತ್ತೊಂದು ಖುಷಿಯ ಸಂಗತಿ ದೊರಕಿದೆ.

ಮೋಡದ ನಡುವೆಯೂ ಆಕಾಶದ ಬೆರಗು ಉಲ್ಕಾಪಾತದ ಅದ್ಭುತ ನೋಟವನ್ನು ಕಣ್ತುಂಬಿಕೊಳ್ಳುವ ಅವಕಾಶ ಬಂದಿದೆ. ಇದು ಈ ವರ್ಷದ ಅತ್ಯಂತ ಪ್ರಕಾಶಮಾನ ಉಲ್ಕಾಪಾತವಾಗಿದ್ದು, ಭಾರತದಲ್ಲಿಯೂ ಗೋಚರಿಸಲಿದೆ. ಆದರೆ ಭಾರತದ ಎಲ್ಲ ಭಾಗಗಳಲ್ಲಿಯೂ ಇದು ಕಾಣಿಸಲಿದೆ ಎನ್ನುವಂತಿಲ್ಲ. ಕೆಲವು ಪ್ರದೇಶಗಳಲ್ಲಿ ಅರ್ಧಚಂದ್ರನ ಬೆಳಕು ಹಾಗೂ ಇನ್ನುಕೆಲವೆಡೆ ಮುಂಗಾರು ಮೋಡಗಳು ಈ ವಿಹಂಗಮ ದೃಶ್ಯವನ್ನು ಸವಿಯಲು ಅಡ್ಡಿಪಡಿಸುವ ಸಾಧ್ಯತೆ ಇದೆ. ಮುಂದೆ ಓದಿ...

ರಾಶಿ ರಾಶಿ ಉಲ್ಕೆಗಳು

ರಾಶಿ ರಾಶಿ ಉಲ್ಕೆಗಳು

ಪೆರ್ಸೀಡ್ ಉಲ್ಕಾಪಾತವು ಮಂಗಳವಾರ ಮತ್ತು ಬುಧವಾರ ಎರಡೂ ದಿನ ಕಾಣಿಸಲಿದೆ. ಸ್ವಿಫ್ಟ್-ಟಟ್ಲ್ ಧೂಮಕೇತುವಿನಿಂದ ದೃಷ್ಟಿಯಾದ ಅವಶೇಷಗಳಿಂದಾಗಿ ಈ ಉಲ್ಕಾಪಾತ ಉಂಟಾಗುತ್ತಿದೆ. ಗಂಟೆಗೆ 60 ಉಲ್ಕೆಗಳು ಬೀಳಲಿದ್ದು, ನಂತರ ಅದು 16-20 ಉಲ್ಕೆಗಳಿಗೆ ಇಳಿಯಲಿದೆ. ಚಂದ್ರನ ಬೆಳಕಿನ ಪ್ರಕಾಶ ಈ ರಮಣೀಯ ಸನ್ನಿವೇಶ ವೀಕ್ಷಣೆಗೆ ಅಡ್ಡಿಯಾದರೂ, ಪ್ರತಿ ಎರಡು ನಿಮಿಷಕ್ಕೊಮ್ಮೆ ಒಂದು ಉಲ್ಕೆ ಸಿಡಿಯುವಂತೆ ಕಾಣಿಸಲಿದೆ.

ಇಸ್ರೋದ ಮಾನವರಹಿತ ಗಗನಯಾನಕ್ಕೆ ವಿಘ್ನ, ಉಡಾವಣೆ ಮುಂದೂಡಿಕೆಇಸ್ರೋದ ಮಾನವರಹಿತ ಗಗನಯಾನಕ್ಕೆ ವಿಘ್ನ, ಉಡಾವಣೆ ಮುಂದೂಡಿಕೆ

ಭಾರತದಲ್ಲಿ ವೀಕ್ಷಣೆ ಹೇಗೆ?

ಭಾರತದಲ್ಲಿ ವೀಕ್ಷಣೆ ಹೇಗೆ?

ಪರ್ಸೀಡ್ ಉಲ್ಕಾಪಾತವು ಮಂಗಳವಾರ (ಆಗಸ್ಟ್ 11) ಅಧಿಕವಾಗಿದ್ದರೂ ಬುಧವಾರವೂ ರಾತ್ರಿ ಗೋಚರಿಸಲಿದೆ. ಕೆಲವು ದೇಶಗಳಲ್ಲಿ ಗುರುವಾರ ಕೂಡ ಕಾಣಿಸಲಿದೆ. ಆದರೆ ಭಾರತದಲ್ಲಿ ಮಂಗಳವಾರ ಮತ್ತು ಬುಧವಾರ ಕಾಣಿಸಲಿದೆ. ರಾತ್ರಿ 2 ಗಂಟೆಯಿಂದ ನಸುಕಿನವರೆಗೂ ಉಲ್ಕಾಪಾತದ ದರ್ಶನ ಹೆಚ್ಚಾಗಿರಲಿದೆ.

ಬರಿಗಣ್ಣಿನಿಂದ ನೋಡಬಹುದು

ಬರಿಗಣ್ಣಿನಿಂದ ನೋಡಬಹುದು

ಅಂದಹಾಗೆ, ಉಲ್ಕಾಪಾತದ ಈ ಆಕರ್ಷಕ ಅನುಭವ ಪಡೆದುಕೊಳ್ಳಲು ಯಾವುದೇ ಸಲಕರಣೆಗಳ ಅಗತ್ಯವಿಲ್ಲ. ಬರಿಗಣ್ಣಿನಿಂದ ನೋಡಬಹುದಾಗಿದೆ. ಆದರೆ ಅದಕ್ಕೆ ಮಾಲಿನ್ಯ, ಅಧಿಕ ಬೆಳಕು ಇಲ್ಲದ ಜಾಗವನ್ನು ನೋವು ನೋಡಿಕೊಳ್ಳಬೇಕು, ಮೋಡವಿಲ್ಲದಿದ್ದರೆ ಯಾವ ಸಾಧನವಿಲ್ಲದೆ ಬರಿಗಣ್ಣಿನಿಂದ ನೋಡಲು ಸಾಧ್ಯ.

ಜ್ವಾಲಾಮುಖಿ, ಉಲ್ಕೆಗಳಿಂದಲೂ ವಿನಾಶಕಾರಿ ವೈರಸ್‌ಗಳು ಭೂಮಿಗೆ ಬರುತ್ತವೆ!ಜ್ವಾಲಾಮುಖಿ, ಉಲ್ಕೆಗಳಿಂದಲೂ ವಿನಾಶಕಾರಿ ವೈರಸ್‌ಗಳು ಭೂಮಿಗೆ ಬರುತ್ತವೆ!

ನೇರ ಪ್ರಸಾರವೂ ಇದೆ

ನೇರ ಪ್ರಸಾರವೂ ಇದೆ

ಒಂದು ವೇಳೆ ದಟ್ಟ ಮೋಡ ಆವರಿಸಿರುವ ಕಾರಣ ನೇರವಾಗಿ ಆಕಾಶ ದಿಟ್ಟಿಸಿ ಉಲ್ಕಾಪಾತದ ಸುಂದರ ದೃಶ್ಯ ತುಂಬಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರೆ ಕೂಡ ನಿರಾಶೆ ಬೇಡ. ಉಲ್ಕಾಪಾತ ವೀಕ್ಷಣೆಗೆಂದೇ ನಾಸಾ ಫೇಸ್‌ಬುಕ್‌ನಲ್ಲಿ ಲೈವ್ ವಿಡಿಯೋ ಪ್ರಸಾರ ಮಾಡಲಿದ್ದು, ಅದರಲ್ಲಿಯೂ ನೋಡಬಹುದು.

English summary
The 2020 Perseid meteor shower peaks Today and Tomorrow: Here is How to watch the show.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X