ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ವ್ಯಾಕ್ಸಿನೇಷನ್‌ ದಾಖಲೆಯ ಹಿಂದಿನ ರಹಸ್ಯ ಇದು': ಪಿ ಚಿದಂಬರಂ ಹೇಳಿದ್ದೇನು?

|
Google Oneindia Kannada News

ನವದೆಹಲಿ, ಜೂ.23: ಭಾನುವಾರ ಸಂಗ್ರಹ, ಸೋಮವಾರ ದಾಖಲೆಯ ಲಸಿಕೆ ಹಾಗೂ ಮಂಗಳವಾರ ಧಿಡೀರ್‌ ಲಸಿಕೆ ನೀಡಿಕೆ ಪ್ರಮಾಣ ಕುಸಿತ ಎಂದು ಹೇಳುವ ಮೂಲಕ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಕೇಂದ್ರ ಸರ್ಕಾರ ಕೊರೊನಾ ಲಸಿಕೆ ನೀತಿಯನ್ನು ಟೀಕಿಸಿದ್ದಾರೆ. ಕೇಂದ್ರದ ಈ ಸೋಮವಾರದ ಒಂದು ದಿನದ ಲಸಿಕೆ ದಾಖಲೆಯ ಹಿಂದಿನ ಮೂರು ಪ್ರಕಾರದ ಕಾರ್ಯಕ್ರಮವನ್ನು ಉಲ್ಲೇಖ ಮಾಡಿ ಪಿ.ಚಿದಂಬರಂ ಕೇಂದ್ರಕ್ಕೆ ಟಾಂಗ್‌ ನೀಡಿದ್ದಾರೆ.

ಸೋಮವಾರ ದಾಖಲೆಯ 88 ಲಕ್ಷ ಕೊರೊನಾ ಲಸಿಕೆ ನೀಡಲಾಗಿದೆ. ಆದರೆ ಮಂಗಳವಾರ ದೇಶಾದ್ಯಂತ ಲಸಿಕೆ ನೀಡಿಕೆ ಅಂಕಿಅಂಶವು ಧಿಡೀರ್‌ 54.22 ಲಕ್ಷಕ್ಕೆ ಇಳಿದಿದೆ. ಕೇಂದ್ರ ಸರ್ಕಾರ ಡಿಸೆಂಬರ್ ಅಂತ್ಯದ ವೇಳೆಗೆ ಎಲ್ಲರಿಗೂ ಲಸಿಕೆ ನೀಡುವ ಭರವಸೆ ನೀಡಿರುವಾಗ ಈ ಲಸಿಕೆ ನೀಡಿಕೆ ಪ್ರಮಾಣ ಇಳಿಕೆಯು ಗೊಂದಲಕ್ಕೆ ಕಾರಣವಾಗಿದೆ.

ದೇಶದ ಸ್ಥಿತಿ ಇಷ್ಟೊಂದು ಹದಗೆಟ್ಟಿದ್ದರೂ ಪ್ರಧಾನಿ ಒಪ್ಪಿಕೊಳ್ಳಲು ಸಿದ್ಧರಿಲ್ಲ: ಚಿದಂಬರಂ ದೇಶದ ಸ್ಥಿತಿ ಇಷ್ಟೊಂದು ಹದಗೆಟ್ಟಿದ್ದರೂ ಪ್ರಧಾನಿ ಒಪ್ಪಿಕೊಳ್ಳಲು ಸಿದ್ಧರಿಲ್ಲ: ಚಿದಂಬರಂ

ಈ ಬಗ್ಗೆ ಟ್ವೀಟ್‌ ಮಾಡಿರುವ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ, ''ಭಾನುವಾರ ಸಂಗ್ರಹಿಸಿ, ಸೋಮವಾರ ಲಸಿಕೆ ಹಾಕಿ ಮತ್ತು ಮಂಗಳವಾರ ಲಸಿಕೆ ನೀಡಿಕೆಯಲ್ಲಿ ಇಳಿಕೆ ಕಾಣಿರಿ. ಇದು ಒಂದು ದಿನದ ಲಸಿಕೆ ನೀಡಿಕೆಯ ವಿಶ್ವ ದಾಖಲೆಯ ಹಿಂದಿನ ರಹಸ್ಯ,'' ಎಂದು ವ್ಯಂಗ್ಯವಾಡಿದ್ದಾರೆ.

That is the secret behind the world record of vaccinations on a single day: P Chidambaram

ಹಾಗೆಯೇ ಈ "ಸಾಧನೆ" ಗಿನ್ನೆಸ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನವನ್ನು ಪಡೆಯುತ್ತದೆ ಎಂದು ನನಗೆ ಖಾತ್ರಿಯಿದೆ ಎಂದು ಲೇವಡಿ ಮಾಡಿದ್ದಾರೆ.

ಅಷ್ಟೇ ಅಲ್ಲದೇ ಬಿಜೆಪಿಯ 2019 ರ ಚುನಾವಣಾ ಘೋಷಣೆ "ಮೋದಿ ಹೈ, ಮುಮ್ಕಿನ್ ಹೈ" (ಮೋದಿ ಇದ್ದರೆ ಎಲ್ಲವೂ ಸಾಧ್ಯ) ಎಂಬುದನ್ನು ಉಲ್ಲೇಖಿಸಿ ಪ್ರಧಾನಿ ನರೇಂದ್ರ ಮೋದಿಯ ಕಾಲೆಳೆದಿದ್ದಾರೆ. "ಯಾರಿಗೆ ಗೊತ್ತು, ಮೋದಿ ಸರ್ಕಾರಕ್ಕೆ ಔಷಧಕ್ಕಾಗಿ ನೊಬೆಲ್ ಪ್ರಶಸ್ತಿ ನೀಡಬಹುದು.

'ಮೋದಿ ಹೈ, ಮಮ್ಕಿನ್ ಹೈ' (ಮೋದಿ ಇದ್ದರೆ ಎಲ್ಲವೂ ಸಾಧ್ಯ) ಈಗ 'ಮೋದಿ ಹೈ, ಮಿರಾಕಲ್ ಹೈ' (ಮೋದಿ ಇದ್ದರೆ ಪವಾಡ) ಎನ್ನಬೇಕು ಎಂದು ಅಣಕಿಸಿದ್ದಾರೆ.

ಸೋಮವಾರ ದಾಖಲೆಯ ಪ್ರಮಾಣದ ಕೊರೊನಾ ಲಸಿಕೆ ಹಾಕುವ ನಿಟ್ಟಿನಲ್ಲಿ ಮಧ್ಯಪ್ರದೇಶ ಸೇರಿದಂತೆ ಕೆಲವು ರಾಜ್ಯಗಳು ''ಲಸಿಕೆ ಪ್ರಮಾಣವನ್ನು ಹಲವು ದಿನಗಳವರೆಗೆ ಸಂಗ್ರಹಿಸಿರಿಸಿವೆ'' ಎಂಬ ಆರೋಪಗಳಿವೆ. ಇನ್ನು ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ನೀಡಿರುವ ದಾಖಲೆ ಹೊಂದಿರುವ ಅಗ್ರ 10 ರಾಜ್ಯಗಳಲ್ಲಿ ಏಳು ಬಿಜೆಪಿ ಆಡಳಿತ ನಡೆಸುತ್ತಿರುವ ರಾಜ್ಯವಾಗಿದೆ.

ಈ ವರ್ಷದ ಅಂತ್ಯದ ವೇಳೆಗೆ ಎಲ್ಲಾ ವಯಸ್ಕರಿಗೆ ಸಂಪೂರ್ಣವಾಗಿ ಲಸಿಕೆ ನೀಡುವ ಕೇಂದ್ರದ ಗುರಿಯನ್ನು ಪೂರೈಸಲು, ದಿನಕ್ಕೆ 97 ಲಕ್ಷ ಲಸಿಕೆ ನೀಡಬೇಕಾಗಿತ್ತು. ಪ್ರಸ್ತುತ ಪೂರೈಕೆ ಪರಿಸ್ಥಿತಿಯು ಗುರಿಯನ್ನು ಪೂರೈಸುತ್ತದೆಯೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.

ಸರ್ಕಾರ ದೈನಂದಿನ ಅಗತ್ಯವಿರುವ ಲಸಿಕೆಗಳನ್ನು ಸಂಗ್ರಹಿಸುವ ಮತ್ತು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿಕೊಂಡಿದೆ. ಆದರೆ ಕೊರೊನಾ ಲಸಿಕೆ ನೀಡಿಕೆ ಪ್ರಮಾಣದಲ್ಲಿ ಮತ್ತೆ ಏರಿಳಿತ ಕಂಡು ಬಂದಿದೆ. ಈ ನಡುವೆ ದೇಶದಲ್ಲಿ ಡೆಲ್ಟಾ ಕೊರೊನಾವೈರಸ್‌ ರೂಪಾಂತರಗಳ ಸಂಖ್ಯೆ ಏರಿಕೆಯಾಗುತ್ತಿದೆ.

(ಒನ್‌ಇಂಡಿಯಾ ಸುದ್ದಿ)

English summary
Hoard on Sunday, vaccinate on Monday, and go back to limping on Tuesday. That is the secret behind the world “record” of vaccinations on a single day tweets Congress leader P Chidambaram.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X