• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಿಎಸ್ ಟಿ ಜಾರಿ ನಂತರ ರೆಸ್ಟೋರೆಂಟ್ ಬಿಲ್ ತೆರಿಗೆ ಕರಗಿದ ಬಗೆ ಕಂಡೀರಾ?

|
Google Oneindia Kannada News

ನವದೆಹಲಿ, ಅಕ್ಟೋಬರ್ 18: ರೆಸ್ಟೋರೆಂಟ್ ಗಳಲ್ಲಿ ಜಿಎಸ್ ಟಿ ಜಾರಿಗೆ ಬರುವ ಮುನ್ನ ಪರೋಕ್ಷವಾಗಿ ತೆರಿಗೆ ಹಾಕಲಾಗುತ್ತಿತ್ತು. ಅಂದರೆ ಗ್ರಾಹಕರಿಗೆ ದುಬಾರಿ ತೆರಿಗೆ ಬೀಳುತ್ತಿತ್ತು. ಆದರೆ ಯಾವಾಗ ಜಿಎಸ್ ಟಿ ಜಾರಿಗೆ ಬಂತೋ ಆಗಿಂದ ಭಾರತದ ಮಧ್ಯಮ ವರ್ಗದ ಜನರಿಗೆ ಬಹಳ ಹೊರೆ ತಗ್ಗಿದೆ.

ಇದರ ಶ್ರೇಯ ಜಿಎಸ್ ಟಿಗೆ ಸಲ್ಲಬೇಕು. ಈಗ ರೆಸ್ಟೋರೆಂಟ್ ಗಳಲ್ಲಿ ದರ ಕಡಿಮೆ ಆಗಿದೆ. ಏಸಿ ಹಾಗೂ ಏಸಿ ಇಲ್ಲದ ರೆಸ್ಟೋರೆಂಟ್ ಗಳಲ್ಲಿ ಜಿಎಸ್ ಟಿ ದರ ಶೇಕಡ ಐದರಷ್ಟಕ್ಕೆ ಇಳಿದಿದೆ. ಈ ಹಿಂದೆ ಅದು ಹದಿನಾಲ್ಕು ಪರ್ಸೆಂಟ್ ಗೂ ಹೆಚ್ಚಿತ್ತು. ಜಿಎಸ್ ಟಿ ಕೌನ್ಸಿಲ್ ನ ಇಪ್ಪತ್ಮೂರನೇ ಸಭೆಯಲ್ಲಿ ಈ ಹಿಂದಿನ ದರವನ್ನು ಕಡಿಮೆ ಮಾಡಿ, ಐದು ಪರ್ಸೆಂಟ್ ಗೆ ಇಳಿಸಿತ್ತು.

ಜಿಎಸ್ಟಿ ಹೇಗೆ ಮಧ್ಯಮ ವರ್ಗದ ಜನತೆಗೆ ಲಾಭದಾಯಕವಾಗಿದೆಜಿಎಸ್ಟಿ ಹೇಗೆ ಮಧ್ಯಮ ವರ್ಗದ ಜನತೆಗೆ ಲಾಭದಾಯಕವಾಗಿದೆ

ಆದರೆ, ರೆಸ್ಟೋರೆಂಟ್ ಗಳಿಗೆ ಇನ್ ಪುಟ್ ಟ್ಯಾಕ್ಸ್ ಕ್ರೆಡಿಟ್ ನ ಲಾಭ ದೊರೆಯುವುದಿಲ್ಲ. ಆದರೆ ಮದ್ಯಕ್ಕೆ ರಾಜ್ಯ ಸರಕಾರದಿಂದ ಹಾಕುವಂಥ ವ್ಯಾಟ್ ಅನ್ನು ವಿಧಿಸಲಿದ್ದು, ಜಿಎಸ್ ಟಿಯಿಂದ ಹೊರಗಿಡಲಾಗಿದೆ. ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮಾತನಾಡಿ, ಇನ್ ಪುಟ್ ಟ್ಯಾಕ್ಸ್ ಕ್ರೆಡಿಟ್ ನ ಅನುಕೂಲವನ್ನು ಗ್ರಾಹಕರಿಗೆ ವರ್ಗಾವಣೆ ಮಾಡಲಿಲ್ಲವಾದ್ದರಿಂದ ಅವರೂ ಈ ಅನುಕೂಲ ಪಡೆಯಲು ಅರ್ಹರಲ್ಲ ಎಂದಿದ್ದಾರೆ.

ಹೋಟೆಲ್ ನ ಒಳಗಿರುವ ರೆಸ್ಟೋರೆಂಟ್ ಗಳಿಗೆ ಜಿಎಸ್ ಟಿ ಐದು ಪರ್ಸೆಂಟ್ ಇದೆ. ಏಳೂವರೆ ಸಾವಿರಕ್ಕಿಂತ ಹೆಚ್ಚು ದರ ವಿಧಿಸುವ ಫೈವ್ ಸ್ಟಾರ್ ಹೋಟೆಲ್ ಗಳನ್ನು ಹೊರತುಪಡಿಸಿ, ಉಳಿದೆಡೆ ಇದೇ ದರವಿದೆ. ಅಂಥ ಕಡೆ ರೆಸ್ಟೋರೆಂಟ್ ಗಳಲ್ಲಿ 18 ಪರ್ಸೆಂಟ್ ಜಿಎಸ್ ಟಿಯೇ ಇದೆ. ಅದರ ಜತೆಗೆ ಇನ್ ಪುಟ್ ಟ್ಯಾಕ್ಸ್ ಕ್ರೆಡಿಟ್ ಕೂಡ ದೊರೆಯುತ್ತದೆ. ಹೊರಗಿನ ಕ್ಯಾಟರಿಂಗ್ ಗೆ ಇನ್ ಪುಟ್ ಟ್ಯಾಕ್ಸ್ ಕ್ರೆಡಿಟ್ ಜತೆಗೆ 18 ಪರ್ಸೆಂಟ್ ತೆರಿಗೆ ಇದೆ.

ಪೆಟ್ರೋಲ್ ದರ ನಿರ್ಧಾರ ಹೇಗೆ? ಯಾರಿಗೆಷ್ಟು ಪಾಲು? ಯಾವ ದೇಶದಲ್ಲೆಷ್ಟು?ಪೆಟ್ರೋಲ್ ದರ ನಿರ್ಧಾರ ಹೇಗೆ? ಯಾರಿಗೆಷ್ಟು ಪಾಲು? ಯಾವ ದೇಶದಲ್ಲೆಷ್ಟು?

ಸರಕು ಹಾಗೂ ಸೇವೆ ಮೇಲೆ ವಿಧಿಸುವ ಪರೋಕ್ಷ ತೆರಿಗೆಯೇ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ). ಪ್ರತಿ ಹಂತದ ಪ್ರಕ್ರಿಯೆಯಲ್ಲಿ ತೆರಿಗೆ ವಿಧಿಸಿ, ಗ್ರಾಹಕರನ್ನು ಹೊರತುಪಡಿಸಿ ಉಳಿದವರಿಗೆ ಮರುಪಾವತಿ ಮಾಡಲಾಗುತ್ತದೆ. ಜಿಎಸ್ ಟಿ ಮೂಲಕ 0%, 5%, 12%, 18% ಮತ್ತು 28% ಹೀಗೆ ತೆರಿಗೆ ಸಂಗ್ರಹದ ಸ್ಲ್ಯಾಬ್ ಐದು ಬಗೆ ಇದೆ.

ಪೆಟ್ರೋಲಿಯಂ ಉತ್ಪನ್ನಗಳು, ಮದ್ಯ, ವಿದ್ಯುಚ್ಛಕ್ತಿಯನ್ನು ಜಿಎಸ್ ಟಿಯಿಂದ ಹೊರಗಿಡಲಾಗಿದೆ. ಅದರ ಬದಲಿಗೆ ಆಯಾ ರಾಜ್ಯ ಸರಕಾರಗಳು ಅವುಗಳ ಮೇಲೆ ತೆರಿಗೆ ವಿಧಿಸುತ್ತವೆ.

English summary
The Indirect tax on restaurant has been reduced substantially due to the implementation of Goods and Services Tax (GST). Indeed, a boon for end-consumer, especially, middle-class people in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X