• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗರ್ಭಿಣಿಯರಿಗೆ ಕೋವಿಡ್ ಬಂದರೆ ಭಯ ಬೇಡ, ವೈದ್ಯರು ನೀಡಿರುವ ಸಲಹೆ ಪಾಲಿಸಿ

|
Google Oneindia Kannada News

ಕೊರೊನಾ ಸೋಂಕು ಸಾಮಾನ್ಯರಿಗಿಂತ ಗರ್ಭಿಣಿಯರಿಗೆ ಹೆಚ್ಚು ಆತಂಕ ಮೂಡಿಸಿದೆ. ಗರ್ಭಿಣಿಯಾಗಿದ್ದರೆ ಕೊರೊನಾ ಲಸಿಕೆ ಪಡೆದುಕೊಳ್ಳುವಂತಿಲ್ಲ, ಆದರೆ ಒಂದೊಮ್ಮೆ ಕೊರೊನಾ ಬಂದರೆ ಏನು ಮಾಡುವುದು, ಒಂದೊಮ್ಮೆ ಪಾಸಿಟಿವ್ ಬಂದರೆ ನಿಮಗೆ ಮತ್ತು ನಿಮ್ಮ ಮಗುವಿಗೆ ಅಪಾಯವಾಗಲಿದೆಯೇ ಎನ್ನುವ ಒಂದಿಷ್ಟು ಪ್ರಶ್ನೆಗಳು ನಿಮ್ಮನ್ನು ಕಾಡುತ್ತಿವೆ.

ಕೊರೊನಾ ಸೋಂಕು ಗರ್ಭಿಣಿಯರ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ, ಗರ್ಭಾವಸ್ಥೆಯಲ್ಲಿ ರೋಗ ಬರದಂತೆ ತಡೆಯುವ ಕ್ರಮಗಳು ಯಾವುವು ಎಂಬುದರ ಕುರಿತು ಇಲ್ಲಿ ವಿವಿರಿಸಲಾಗಿದೆ.

ಕೊರೊನಾ 2ನೇ ಅಲೆ, ಮಕ್ಕಳಿಗೂ ಹೆಚ್ಚು ಅಪಾಯಕಾರಿ: ವೈದ್ಯರ ಎಚ್ಚರಿಕೆಕೊರೊನಾ 2ನೇ ಅಲೆ, ಮಕ್ಕಳಿಗೂ ಹೆಚ್ಚು ಅಪಾಯಕಾರಿ: ವೈದ್ಯರ ಎಚ್ಚರಿಕೆ

ಗರ್ಭಿಣಿಯರು ಸೋಂಕಿಗೆ ಒಳಗಾಗುವ ಸಾಧ್ಯತೆ ಹೆಚ್ಚಿದೆ ಎಂಬುದಕ್ಕೆ ಯಾವುದೇ ಸಾಕ್ಷಿಗಳು ಇಲ್ಲ, ಇದರ ಹೊರತಾಗಿಯೂ ಗರ್ಭಿಣಿಯರು ಸಾಮಾಜಿಕ ಸಂಪರ್ಕವನ್ನು ಕಡಿಮೆ ಮಾಡಬೇಕು.

ಮಹಿಳೆಯರಲ್ಲಿ ಗರ್ಭಧಾರಣೆ ಸಂದರ್ಭದಲ್ಲಿ ದೇಹವು ಹಲವು ವೈರಲ್ ಸೋಂಕುಗಳೊಂದಿಗೆ ಹೋರಾಡುತ್ತದೆ. ಹೀಗಾಗಿ ಎಂದಿನಂತೆ ಹೆಚ್ಚಿಗೆ ಜಾಗರೂಕರಾಗಿರಬೇಕು.

ಕೊರೊನಾ ಮೊದಲ ಹಾಗೂ 2ನೇ ಅಲೆ ಲಕ್ಷಣಗಳ ನಡುವಿನ ವ್ಯತ್ಯಾಸ ಹೀಗಿದೆ!ಕೊರೊನಾ ಮೊದಲ ಹಾಗೂ 2ನೇ ಅಲೆ ಲಕ್ಷಣಗಳ ನಡುವಿನ ವ್ಯತ್ಯಾಸ ಹೀಗಿದೆ!

ಹೆರಿಗೆ ವೇಳೆ ಪರಿಣಾಮ

ಹೆರಿಗೆ ವೇಳೆ ಪರಿಣಾಮ

ಲ್ಯಾನ್ಸೆಟ್ ವರದಿ ಪ್ರಕಾರ, ಅಧ್ಯಯನದ ಭಾಗವಾಗಿದ್ದ ಎಲ್ಲಾ ಗರ್ಭಿಣಿಯರು ತಮ್ಮ ಎರಡನೇ ಅಥವಾ ಮೂರನೇ ತ್ರೈಮಾಸಿಕದಲ್ಲಿದ್ದರು. ಮೊದಲ ತ್ರೈಮಾಸಿಕದಲ್ಲಿ ಕೋವಿಡ್ ಪಾಸಿಟಿವ್ ತೋರಿಸಿದ ಮಹಿಳೆಯರಲ್ಲಿ ಹೆಚ್ಚಿನ ಯಾವುದೇ ಅಡ್ಡಪರಿಣಾಮಗಳು ಕಾಣಲಿಲ್ಲ. ಹೆಚ್ಚಿನ ಜ್ವರದಂತಹ ರೋಗಲಕ್ಷಣಗಳಿರುವ ಗರ್ಭಿಣಿಯರು, ಹೆರಿಗೆಯ ಸಂದರ್ಭದಲ್ಲಿ ಹೆಚ್ಚಿನ ಬಳಲಿಕೆ ಇರುವುದು ಗೋಚರವಾಗಿತ್ತು. ಇಂತಹ ಸಂದರ್ಭದಲ್ಲಿ ಎಚ್ಚರಿಕೆ ವಹಿಸದಿದ್ದರೆ ಗರ್ಭಿಣಿ ಹಾಗೂ ಮಗುವಿಗೂ ಅಪಾಯವಾಗುವ ಸಾಧ್ಯತೆ ಇದೆ.

ಮಗುವಿನ ಮೇಲಾಗುವ ಪರಿಣಾಮವೇನು?

ಮಗುವಿನ ಮೇಲಾಗುವ ಪರಿಣಾಮವೇನು?

-ಕೊರೊನಾ ಪಾಸಿಟಿವ್ ಬಂದವರಲ್ಲಿ ಗರ್ಭಪಾತದ ಆತಂಕವಿದೆ ಎಂದು ಹೇಳಲು ಯಾವುದೇ ಪುರಾವೆಗಳಿಲ್ಲ.
-ಇದು ತುಂಬಾ ಹೊಸ ವೈರಸ್ ಆಗಿರುವುದರಿಂದ, ಎಲ್ಲಾ ಮಾಹಿತಿ ಮತ್ತು ಪುರಾವೆಗಳು ಇನ್ನೂ ಲಭ್ಯವಾಗಿಲ್ಲ.
-ನೀವು ಗರ್ಭಾವಸ್ಥೆಯಲ್ಲಿರುವಾಗ ಕೊರೊನಾ ಸೋಂಕು ತಗುಲಿದರೆ ಮಗುವಿಗೂ ಹರಡುತ್ತದೆ ಎನ್ನುವುದಕ್ಕೂ ಪುರಾವೆಗಳಿಲ್ಲ.
-ಚೀನಾದಲ್ಲಿ ಇದನ್ನು ಪರೀಕ್ಷಿಸಲಾಗಿದೆ,9 ಗರ್ಭಿಣಿಯರ ಮೇಲೆ ನಡೆಸಿದ ಅಧ್ಯಯನದಲ್ಲಿ ಎಲ್ಲಾ 9 ಶಿಶುಗಳು ಕೋವಿಡ್ ನೆಗೆಟಿವ್ ಆಗಿದ್ದವು, ಮಕ್ಕಳು ಆರೋಗ್ಯದಿಂದಿದ್ದವು.

ತಾಯಿಗೆ ಕೊರೊನಾ ಸೋಂಕಿದ್ದರೆ ಮಗುವಿಗೆ ಎದೆಹಾಲುಣಿಸಬಹುದೇ?

ತಾಯಿಗೆ ಕೊರೊನಾ ಸೋಂಕಿದ್ದರೆ ಮಗುವಿಗೆ ಎದೆಹಾಲುಣಿಸಬಹುದೇ?

-ನೀವು ಪಾಸಿಟಿವ್ ಆಗಿದ್ದರೆ, ಶಿಶುವಿಗೆ ಹಾಲುಣಿಸುವ ಸಂದರ್ಭದಲ್ಲಿ ಕೋವಿಡ್ ಹರಡಬಹುದು
-ಎದೆಹಾಲಿನ ಮೂಲಕ ಕೊರೊನಾ ಹರಡುವ ಅಪಾಯ ಕಂಡುಬಂದಿಲ್ಲ, ಆದರೆ ಸ್ತನ್ಯಪಾನದ ಮುಖ್ಯ ಅಪಾಯವೆಂದರೆ ನಿಮ್ಮ ಮತ್ತು ನಿಮ್ಮ ಮಗುವಿನ ನಡುವಿನ ನಿಕಟ ಸಂಪರ್ಕವಾಗಿರುತ್ತದೆ. ನಿಮ್ಮ ಉಸಿರು ಮಗುವಿಗೆ ತಾಕಿದಾಗ ಸೋಂಕು ಹರಡಬಹುದು.
-ಎದೆಹಾಲನ್ನು ಮಗುವಿಗೆ ನಿಪ್ಪಲ್ ಮೂಲಕ ನೀಡುವುದು ಸುರಕ್ಷಿತ, ಕೋವಿಡ್ ನೆಗೆಟಿವ್ ಬಳಿಕ ಎದೆಹಾಲು ನೇರವಾಗಿ ಕುಡಿಸಬಹುದು.
-ಮಗುವನ್ನು ಸ್ಪರ್ಶಿಸುವ ಮೊದಲು ನಿಮ್ಮ ಕೈಗಳನ್ನು ತೊಳಯಿರಿ, ನೀವು ಹಾಲುಣಿಸುವಾಗ ಕೆಮ್ಮು ಅಥವಾ ಸೀನಿವುದನ್ನು ತಪ್ಪಿಸಿ.

ಕೊರೊನಾ ಸೋಂಕು ಬರದಂತೆ ತಡೆಯುವ ಕ್ರಮಗಳು

ಕೊರೊನಾ ಸೋಂಕು ಬರದಂತೆ ತಡೆಯುವ ಕ್ರಮಗಳು

-ಸಾಮಾಜಿಕ ಅಂತರವನ್ನು ಅಭ್ಯಾಸ ಮಾಡಿಕೊಳ್ಳಿ, ನೀವು ಸಾರ್ವಜನಿಕ ಸ್ಥಳದಲ್ಲಿದ್ದಾಗ ಯಾವಾಗಲೂ ಇತರರಿಂದ ಕನಿಷ್ಠ 2 ಅಥವಾ 6 ಅಡಿ ದೂರವನ್ನು ಕಾಪಾಡಿಕೊಳ್ಳಿ.
-ನಿಮ್ಮ ಕೈಗಳನ್ನು ಆಗಾಗ ತೊಳಿಯಿರಿ, ಶುಚಿತ್ವವನ್ನು ಕಾಪಾಡಿಕೊಳ್ಳಿ
-ಕೆಮ್ಮುವಾಗ ಅಥವಾ ಸೀನುವಾಗ ಅಡ್ಡವಾಗಿ ಟಿಶ್ಯೂ ಪೇಪರ್ ಬಳಸಿ, ಕೈಗಳನ್ನು ತಕ್ಷಣ ತೊಳೆಯಿರಿ.
-ಸಾಧ್ಯವಾದಷ್ಟು ಗೈನಕಾಲಾಜಿಸ್ಟ್ ಬಳಿಗೆ ಪ್ರಸವಪೂರ್ವ ಭೇಟಿ ಬದಲು ವರ್ಚುವಲ್ ಸಾಮಾಲೋಚನೆಗಳನ್ನು ಪರಿಗಣಿಸಿ, ಆಸ್ಪತ್ರೆಯಲ್ಲಿ ಸಮಯ ಕಳೆಯುವುದನ್ನು ಕಡಿಮೆ ಮಾಡಿ.
-ಸಾಧ್ಯವಾದಾಗಲೆಲ್ಲಾ ಮನೆಯಿಂದಲೇ ಕೆಲಸಮಾಡಿ, ಸುರಕ್ಷಿತವಾಗಿರಿ
-ನಿರಂತರ ಕೆಮ್ಮಿನೊಂದಿಗೆ ಅಥವಾ ಜ್ವರದೊಂದಿಗೆ ಬಳಲುತ್ತಿದ್ದರೆ ಯಾರೊಂದಿಗೂ ನಿಕಟ ಸಂಪರ್ಕಕ್ಕೆ ಹೋಗಬೇಡಿ.
-ವೈದ್ಯರ ಸಲಹೆಯಂತೆ ವ್ಯಾಯಾಮ ಮಾಡಿ, ನಿಮ್ಮ ಡೆಲಿವರಿ ಡೇಟ್ ಹತ್ತಿರದಲ್ಲಿದ್ದರೆ ಚಿಂತೆ ಮಾಡಬೇಡಿ, ಏಕೆಂದರೆ ಆಸ್ಪತ್ರೆಗಳು ಸುರಕ್ಷಿತ ಹೆರಿಗೆಗಾಗಿ ವ್ಯವಸ್ಥೆಯನ್ನು ಹೊಂದಿರುತ್ತವೆ.
-ಯಾವುದೇ ಉಸಿರಾಟದ ತೊಂದರೆಯನ್ನು ನಿರ್ಲಕ್ಷಿಸಬೇಡಿ, ಇಂತಹ ಸಂದರ್ಭಗಳು ಬಂದರೆ ವೈದ್ಯರನ್ನು ಭೇಟಿಯಾಗಿ.

English summary
Covid positive during pregnancy: Here's what you should be doing in case you are pregnant and Covid positive.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X