ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೆಚ್ಚ ಕಡಿತದಿಂದ ಉಗ್ರರ ವೇತನಕ್ಕೆ ಕತ್ತರಿ, ಸಂಬಳ ಎಷ್ಟು?

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 04 : ಖಾಸಗಿ ಕಂಪನಿಗಳು ವೆಚ್ಚಕ್ಕೆ ಕಡಿವಾಣ ಹಾಕಲು ಸಂಬಳಕ್ಕೆ ಕತ್ತರಿ ಹಾಕುವುದನ್ನು ಕೇಳಿದ್ದೇವೆ. ಅಚ್ಚರಿ ಎಂಬಂತೆ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳು ವೆಚ್ಚ ಕಡಿತದ ನಿರ್ಧಾರ ಕೈಗೊಂಡಿವೆ. ಇದರ ಪರಿಣಾಮ ಉಗ್ರರ ಸಂಬಳಕ್ಕೆ ಕತ್ತರಿ ಪ್ರಯೋಗವಾಗಿದೆ.

ಪಾಕಿಸ್ತಾನದ ವಿವಿಧ ಉಗ್ರ ಸಂಘಟನೆಗಳು ಭಾರೀ ನಷ್ಟ ಎದುರಿಸುತ್ತಿವೆ. ಆದ್ದರಿಂದ, ಉಗ್ರರಿಗೆ ನೀಡುವ ಸಂಬಳವನ್ನು ಕಡಿತ ಮಾಡಿವೆ. ವೇತನ ಕಡಿತದ ನಂತರ ಉಗ್ರರಿಗೆ 18 ಸಾವಿರ ರೂ. ಸಂಬಳವನ್ನು ಮಾತ್ರ ನೀಡಲು ನಿರ್ಧರಿಸಲಾಗಿದೆ.

ಮೂವರು ಖಲಿಸ್ತಾನ್ ಭಯೋತ್ಪಾದಕರ ಬಂಧನಮೂವರು ಖಲಿಸ್ತಾನ್ ಭಯೋತ್ಪಾದಕರ ಬಂಧನ

ಜಮ್ಮು ಮತ್ತು ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕ ಸಂಘಟನೆಗಳಿಗೆ ಭಾರೀ ನಷ್ಟ ಉಂಟಾಗಿದೆ. ಇದರ ಪರಿಣಾಮ ಸಂಘಟನೆಗಳು ನಷ್ಟದತ್ತ ಮುಖಮಾಡಿವೆ. ಆದ್ದರಿಂದ, ಹಣಕಾಸಿನ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಲು ವೆಚ್ಚ ಕಡಿತಕ್ಕೆ ನಿರ್ಧರಿಸಲಾಗಿದೆ. ಇದರ ಫಲವಾಗಿ ಉಗ್ರರ ಸಂಬಳ ಇಳಿಕೆಯಾಗಿದೆ.

6 ತಿಂಗಳಲ್ಲಿ 13 ಬ್ಯಾಂಕ್ ದರೋಡೆ ಮಾಡಿದ ಕಾಶ್ಮೀರಿ ಉಗ್ರರು6 ತಿಂಗಳಲ್ಲಿ 13 ಬ್ಯಾಂಕ್ ದರೋಡೆ ಮಾಡಿದ ಕಾಶ್ಮೀರಿ ಉಗ್ರರು

ವಿದೇಶದಿಂದ ಬರುವ ಭಯೋತ್ಪಾದಕರಿಗೆ ಮತ್ತು ಸ್ಥಳೀಯರಿಗೆ ಉಗ್ರ ಸಂಘಟನೆಗಳು ಬೇರೆ-ಬೇರೆ ಸಂಬಳ ನೀಡುತ್ತವೆ. ಆದರೆ, ಪಾಕ್‌ನಲ್ಲಿ ನಿರುದ್ಯೋಗ ಹೆಚ್ಚಾಗಿದ್ದು, ಯುವಕರು ಉಗ್ರ ಸಂಘಟನೆ ಸೇರುತ್ತಿದ್ದಾರೆ. ಆದ್ದರಿಂದ, ಸಂಬಳ ಕಡಿತ ಮಾಡಲಾಗಿದೆ....ಉಗ್ರರ ಸಂಬಳದ ವಿವರ ಚಿತ್ರಗಳಲ್ಲಿ...

ಉಗ್ರ ಡೇವಿಡ್ ಹೆಡ್ಲಿ ಬಾಯಿಬಿಟ್ಟ ರೋಚಕ ಸತ್ಯಗಳುಉಗ್ರ ಡೇವಿಡ್ ಹೆಡ್ಲಿ ಬಾಯಿಬಿಟ್ಟ ರೋಚಕ ಸತ್ಯಗಳು

ಅಚ್ಚರಿಯಾದರೂ ಸತ್ಯ...ಸಂಬಳ 1 ಲಕ್ಷ ರೂ.

ಅಚ್ಚರಿಯಾದರೂ ಸತ್ಯ...ಸಂಬಳ 1 ಲಕ್ಷ ರೂ.

500 ಬೆಸ್ಟ್ ಉಗ್ರರ ಅವಾರ್ಡ್‌ ಎಂಬ ಪಟ್ಟಿ ಇದೆ. ಈ ಪಟ್ಟಿಯಲ್ಲಿರುವ ವಿದೇಶಿ ಅಥವ ಸ್ಥಳೀಯರಿಗೆ 1 ಲಕ್ಷ ರೂ. ಸಂಬಳ ನೀಡಲಾಗುತ್ತದೆ.

ತಿಂಗಳ ಸಂಬಳ ಎಷ್ಟು?

ತಿಂಗಳ ಸಂಬಳ ಎಷ್ಟು?

ವಿದೇಶದ ಉಗ್ರರಿಗೆ ಪ್ರತಿ ತಿಂಗಳು 15 ಸಾವಿರ, ಸ್ಥಳಿಯರಿಗೆ 3 ರಿಂದ 10 ಸಾವಿರ ರೂ. ತನಕ ಸಂಬಳವಿದೆ. ಇದು ವೆಚ್ಚ ಕಡಿತದ ಬಳಿಕ ನೀಡಲಾಗುವ ವೇತನ.

ದಾಳಿಯಲ್ಲಿ ಸಾವನ್ನಪ್ಪಿದರೆ ಪರಿಹಾರ

ದಾಳಿಯಲ್ಲಿ ಸಾವನ್ನಪ್ಪಿದರೆ ಪರಿಹಾರ

ಒಂದು ವೇಳೆ ಉಗ್ರರು ದಾಳಿ ಮಾಡಿದಾಗ ಸಾವನ್ನಪ್ಪಿದರೆ ಕುಟುಂಬಕ್ಕೆ ಉಗ್ರ ಸಂಘಟನೆ ಪರಿಹಾರ ನೀಡುತ್ತದೆ. ವಿದೇಶಿಯರಿಗೆ ಒಟ್ಟಿಗೆ 50 ಸಾವಿರ ಅಥವ ಪ್ರತಿ ತಿಂಗಳು 5 ಸಾವಿರ, ಸ್ಥಳೀಯರಿಗೆ 25 ಸಾವಿರ ಒಟ್ಟಿಗೆ ಅಥವ ಪ್ರತಿ ತಿಂಗಳು 3 ಸಾವಿರ ರೂ. ಪರಿಹಾರ ನೀಡಲಾಗುತ್ತದೆ.

ಚೀಫ್/ಕಮಾಂಡರ್ ವೇತನ

ಚೀಫ್/ಕಮಾಂಡರ್ ವೇತನ

ವಿದೇಶಿಯರು ಅಥವ ಸ್ಥಳೀಯರು ಯಾರೇ ಆಗಲಿ ಕಮಾಂಡರ್ ಆದರೆ 50 ಸಾವಿರ ರೂ. ವೇತನ ನೀಡಲಾಗುತ್ತದೆ.

ಹೊಸ ಸದಸ್ಯರ ವೇತನ ಎಷ್ಟು?

ಹೊಸ ಸದಸ್ಯರ ವೇತನ ಎಷ್ಟು?

ಹೊಸದಾಗಿ ಉಗ್ರ ಸಂಘಟನೆ ಸೇರುವ ಸ್ಥಳೀಯರಿಗೆ 3 ರಿಂದ 20 ಸಾವಿರ, ವಿದೇಶಿಯರಿಗೆ 50 ಸಾವಿರದ ತನಕ ವೇತನ ನೀಡಲಾಗುತ್ತದೆ.

English summary
After suffering huge losses, Pakistan's terror groups have entered cost cutting mode. Terrorists from Pakistan are now being paid Rs 18,000 per month and this has been seen as a cost cutting exercise. This cost cutting exercise was undertaken by the terror groups after it suffered huge losses in the Valley.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X