ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಂಡನ್ನಿನ ಉಗ್ರರ ದಾಳಿಗೂ ಬೆಂಗಳೂರಿಗೂ ನಂಟಿದೆ!

ಲಂಡನ್ನಿನಲ್ಲಿ ಪಾದಚಾರಿಗಳ ಮೇಲೆ ವಾಹನ ಹರಿಸಿದ ಘಟನೆಗೂ ಕರ್ನಾಟಕಕ್ಕೂ ಸಂಬಂಧವಿದೆ. ಈ ಮಾದರಿಯ ದಾಳಿಯನ್ನು ಆರಂಭಿಸಿದ್ದು ಬೆಂಗಳೂರಿನ ಮೂಲದ ಜಿಹಾದಿ

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಜೂನ್ 04 : ಲಂಡನ್ನಿನಲ್ಲಿ ಪಾದಚಾರಿಗಳ ಮೇಲೆ ವಾಹನ ಹರಿಸಿದ ಉಗ್ರರ ದಾಳಿ ಘಟನೆಗೂ ಕರ್ನಾಟಕಕ್ಕೂ ಸಂಬಂಧವಿದೆ. ಈ ಮಾದರಿಯ ದಾಳಿಯನ್ನು ಮೊದಲಿಗೆ ಆರಂಭಿಸಿದ್ದು ಬೆಂಗಳೂರಿನ ಮೂಲದ ಜಿಹಾದಿ.

ಲಂಡನ್ನಿನ ಮೂರು ಪ್ರತ್ಯೇಕ ಸ್ಥಳಗಳಲ್ಲಿ ಶನಿವಾರ(ಜೂನ್ 03) ರಾತ್ರಿ ಉಗ್ರರ ದಾಳಿ ಸಂಭವಿಸಿದ್ದು, 7 ಮಂದಿ ಸತ್ತು, ಹಲವಾರು ಮಂದಿಗೆ ಗಾಯಗಳಾಗಿವೆ. ಲಂಡನ್ನಿನ ಬರೋ, ಲಂಡನ್ ಬ್ರಿಡ್ಜ್, ದಿ ವಾಕ್ಸ್ ಹಾಲ್ ಪ್ರದೇಶದಲ್ಲಿ ಉಗ್ರರ ದಾಳಿ ನಡೆದಿದೆ. ಪಾದಚಾರಿಗಳ ಮೇಲೆ ವಾಹನದಿಂದ ಡಿಕ್ಕಿ ಹೊಡೆಯಲಾಗಿದೆ. ಇನ್ನೊಂದೆಡೆ 'ಒಂಟಿ ತೋಳ ದಾಳಿ' ಮಾದರಿಯಲ್ಲಿ ಸಾರ್ವಜನಿಕರಿಗೆ ಚಾಕುವಿನಿಂದ ಇರಿದು ಕೊಲ್ಲಲಾಗಿದೆ.[ಉಗ್ರರ ದಾಳಿ: ಭಾರತ ಹಾಗೂ ಪಾಕಿಸ್ತಾನ ಪಂದ್ಯದ ಕಥೆ ಏನು?]

ವಾಹನ ಡಿಕ್ಕಿ ವಿಧಾನ: ಚಾಕು ಇರಿತ, ವಾಹನ ಡಿಕ್ಕಿ, ವಿಷ ಬಳಕೆ ಎಲ್ಲವೂ ಇರಾಕಿ ಉಗ್ರಸಂಘಟನೆ ಸದಸ್ಯರು, ಜಿಹಾದಿಗಳು ಬಳಸುವ ವಿಧಾನವಾಗಿದೆ. ಇಸ್ರೇಲ್ ನ ಪ್ಯಾಲೆಸ್ಟೇನ್ ನಲ್ಲಿ ವಾಹನ ಡಿಕ್ಕಿ ಮಾಡಿ ಸಾರ್ವಜನಿಕರನ್ನು ಕೊಲ್ಲುವ ವಿಧಾನ ಬಳಕೆಯಾಗಿತ್ತು. ಆದರೆ, ಲಂಡನ್ನಿನ ಗ್ಲಾಸ್ಗೋ ವಿಮಾನ ನಿಲ್ದಾಣದ ಗೋಡೆಗೆ ಬೆಂಕಿ ಹೊತ್ತಿಕೊಂಡಿರುವ ವ್ಯಾನ್ ಡಿಕ್ಕಿ ಹೊಡೆಸಿದ್ದು ಬೆಂಗಳೂರು ಮೂಲದ ಜಿಹಾದಿ ಖಲೀಫ್ ಅಹ್ಮದ್.

Terrorists ramming vehicles: This jihadi from Karnataka started it

2007ರ ಜೂನ್ 30ರಂದು ಗ್ಲಾಸ್ಗೋ ದಾಳಿ ನಂತರ ಈ ವಿಧಾನ ಬಳಕೆ ಕಡಿಮೆಯಾಗಿತ್ತು. 2014ರಲ್ಲಿ ಐಎಸ್ಐಎಸ್ ಹಾಗೂ ಅಲ್ ಖೈದಾ ಸಂಘಟನೆಗಳು ವಾಹನ ಡಿಕ್ಕಿ ವಿಧಾನ ಬಳಸುವಂತೆ ಸೂಚಿಸಿದ್ದವು. [ಉಗ್ರರ ದಾಳಿಗೆ ಬೆಚ್ಚಿದ ಲಂಡನ್, ಹೈ ಅಲರ್ಟ್ ಘೋಷಣೆ!]

ಇದೀಗ ಮತ್ತೊಮ್ಮೆ ಇದೇ ವಿಧಾನದಲ್ಲಿ ದಾಳಿ ಹೆಚ್ಚು ಜನಪ್ರಿಯಗೊಳ್ಳುತ್ತಿದೆ. ಖಲೀಫ್ ಅಹ್ಮದ್ ಕೂಡಾ ಹಿಂದೊಮ್ಮೆ ಗೋವಾದಲ್ಲಿ ಇದೇ ರೀತಿ ವಾಹನವನ್ನು ಪಾದಚಾರಿಗಳ ಮೇಲೆ ಹರಿಸಿ ದಾಳಿ ನಡೆಸುವ ಉದ್ದೇಶ ಹೊಂದಿದ್ದ. ಆದರೆ, ಆತನ ಕಾರ್ಯಾಚರಣೆ ವಿಫಲವಾಗಿತ್ತು.

ಗನ್, ಬಾಂಬ್ ಗಳ ಕಾಲದಲ್ಲಿ ಚಾಕು ಚೂರಿ, ವಿಷ, ಅಪಘಾತದಂಥ ವಿಧಾನ ಬಳಸಿ, ಪೊಲೀಸರ ಹದ್ದಿನ ಕಣ್ಣಿಗೆ ಮಣ್ಣೆರೆರಚಲಾಗುತ್ತಿದೆ. ಅಲ್ ಖೈದಾ ಈಗಾಗಲೇ ಕಾರು ಬಾಂಬ್ ಬಳಕೆ ಮಾಡಿದೆ. ಲಂಡನ್ ನಲ್ಲಿ ಕಾರು ಹರಿಸಿ ನಡೆಸಿರುವ ದಾಳಿ ಬಗ್ಗೆ ಇನ್ನಷ್ಟು ಮಾಹಿತಿ, ತನಿಖೆ ನಂತರ ಹೊರಬೀಳಲಿದೆ.

English summary
Vehicle-ramming is not something new and has been used extensively by Palestinian terrorists in Israel. Kafeel Ahmed, a jihadi of Indian from Bengaluru in Karnataka , rammed a burning car into the wall of Glasgow airport in 2007.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X