ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

6 ತಿಂಗಳಲ್ಲಿ 13 ಬ್ಯಾಂಕ್ ದರೋಡೆ ಮಾಡಿದ ಕಾಶ್ಮೀರಿ ಉಗ್ರರು

ಕಳೆದ 6 ತಿಂಗಳಲ್ಲಿ ಅಂದರೆ ನವೆಂಬರ್ ಮತ್ತು ಮೇ ನಡುವೆ 13 ಬ್ಯಾಂಕ್ ದರೋಡೆ ಪ್ರಕರಣಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿವೆ. ಇವುಗಳಲ್ಲಿ ಹೆಚ್ಚಿನವು ಜಮ್ಮು ಮತ್ತು ಕಾಶ್ಮೀರ ಬ್ಯಾಂಕುಗಳಾಗಿವೆ.

By ವಿಕಾಸ್ ನಂಜಪ್ಪ
|
Google Oneindia Kannada News

ಜಮ್ಮು ಮತ್ತು ಕಾಶ್ಮೀರ, ಮೇ 9: ಅಪನಗದೀಕರಣದ ನಂತರ ತಮ್ಮ ಹಣದ ಮೂಲವನ್ನು ಬ್ಯಾಂಕುಗಳಲ್ಲಿ ಕಂಡುಕೊಂಡಿರುವ ಉಗ್ರರು ಕಳೆದ 6 ತಿಂಗಳಲ್ಲಿ 90.18 ಲಕ್ಷ ರೂಪಾಯಿಗಳನ್ನು ಬ್ಯಾಂಕ್ ಗಳಿಂದಲೇ ದೋಚಿದ್ದಾರೆ.

ಕಳೆದ 6 ತಿಂಗಳಲ್ಲಿ ಅಂದರೆ ನವೆಂಬರ್ ಮತ್ತು ಮೇ ನಡುವೆ 13 ಬ್ಯಾಂಕ್ ದರೋಡೆ ಪ್ರಕರಣಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿವೆ. ಇವುಗಳಲ್ಲಿ ಹೆಚ್ಚಿನವು ಜಮ್ಮು ಮತ್ತು ಕಾಶ್ಮೀರ ಬ್ಯಾಂಕುಗಳಾಗಿವೆ. ಇನ್ನು ಎಸ್ಬಿಐ, ಆಕ್ಸಿಸ್ ಮತ್ತು ಇಲಾಕಿ ದೇಹತ್ ಬ್ಯಾಂಕಿನ ಶಾಖೆಗಳನ್ನೂ ಉಗ್ರರು ಕೊಳ್ಳೆ ಹೊಡೆದಿದ್ದಾರೆ.

Terrorists have looted Rs 90 lakh from banks in 6 months

ತನಿಖೆಯ ನಂತರ ಈ ಬ್ಯಾಂಕುಗಳಿಂದ ಒಟ್ಟು 90.08 ಲಕ್ಷ ರೂಪಾಯಿ ದೋಚಿದ್ದು ಪತ್ತೆಯಾಗಿದೆ. ಲಷ್ಕರ್ ಇ ತಯ್ಯಬಾ ಮತ್ತು ಹಿಜ್ಬುಲ್ಲಾ ಮುಜಾಹಿದ್ದೀನ್ ಉಗ್ರರು ಈ ದಾಳಿಗಳನ್ನು ನಡೆಸಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹೇಳಿದ್ದಾರೆ. ಈ ಎರಡೂ ಸಂಘಟನೆಗಳು ರಾಜ್ಯದಲ್ಲಿ ತೀವ್ರ ಚಟುವಟಿಕೆಯಿಂದ ಕೂಡಿದ್ದು ಒಟ್ಟು 200 ಉಗ್ರರು ಕಣಿವೆ ರಾಜ್ಯದಲ್ಲಿ ಇರಬಹುದು ಎಂದು ಅಂದಾಜು ಮಾಡಲಾಗಿದೆ.

ಅಪನಗದೀಕರಣದ ನಂತರ ಉಗ್ರ ಸಂಘಟನೆಗಳಿಗೆ ಹಣದ ಕೊರತೆ ಎದುರಾಗಿತ್ತು. ಇದನ್ನು ಮೆಟ್ಟಿ ನಿಲ್ಲಲು ಉಗ್ರರು ಬ್ಯಾಂಕುಗಳನ್ನು ದರೋಡೆ ಮಾಡುವ ದಾರಿ ಕಂಡುಕೊಂಡಿದ್ದಾರೆ.

ಹಾಗೆ ನೋಡಿದರೆ ಈ ಹಿಂದೆಯೂ ಉಗ್ರರು ಬ್ಯಾಂಕುಗಳನ್ನು ದರೋಡೆ ಮಾಡುತ್ತಿದ್ದರು. ಸದ್ಯ ಈ ದರೋಡೆ ಪ್ರಕರಣಗಳು ಇನ್ನೂ ಹೆಚ್ಚಾಗಿವೆ. ಲಷ್ಕರ್ ಇ ತಯ್ಯಬಾದ ಮೂರು ಘಟಕಗಳು ಮುಖ್ಯಸ್ಥರು ಈ ಬ್ಯಾಕ್ ದರೋಡೆ ಸಂಚು ರೂಪಿಸಿ ಕಾರ್ಯಗತಗೊಳಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು ಸಿಸಿಟಿವಿ ಫೂಟೇಜ್ ಗಳನ್ನು ತೆಗೆದುಕೊಂಡಿರುವ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಎಲ್ಲಾ ಬ್ಯಾಂಕ್ ದರೋಡೆಗಳನ್ನೂ ಒಂದೇ ರೀತಿಯಲ್ಲಿ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

English summary
In the past six months, terrorists in Jammu and Kashmir have looted a total of Rs 90.08 lakh from various banks. The terrorists have been resorting to bank robberies of late in a bid to fund their operations and the modus operandi was invented to beat demonetisation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X