ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಕ್ಷಿಣ ಭಾರತದ ಮೇಲೆ ದಾಳಿಗೆ ಉಗ್ರರ ಸಂಚು: ಸೇನೆಯಿಂದ ಎಚ್ಚರಿಕೆ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 9: ದಕ್ಷಿಣ ಭಾರತದ ಮೇಲೆ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಭಾರತೀಯ ಸೇನೆ ಎಚ್ಚರಿಕೆ ನೀಡಿದೆ.

ಸರ್ ಕ್ರಿಕ್ ಗಡಿಯಲ್ಲಿ ಭದ್ರತಾ ಪಡೆ ವಾರಸುದಾರರಿಲ್ಲದ ದೋಣಿಗಳನ್ನು ವಶಪಡಿಸಿಕೊಂಡಿವೆ. ಅನುಮಾನಾಸ್ಪದ ವ್ಯಕ್ತಿಗಳು ದಕ್ಷಿಣದ ಕಡೆ ಹೋಗಿರುವ ಸಾಧ್ಯತೆಯಿದೆ.

ಜಾಗತಿಕ ಉಗ್ರ ಮಸೂದ್ ಅಜರ್‌ನನ್ನು ಗುಟ್ಟಾಗಿ ಬಿಡುಗಡೆಗೊಳಿಸಿದ ಪಾಕಿಸ್ತಾನಜಾಗತಿಕ ಉಗ್ರ ಮಸೂದ್ ಅಜರ್‌ನನ್ನು ಗುಟ್ಟಾಗಿ ಬಿಡುಗಡೆಗೊಳಿಸಿದ ಪಾಕಿಸ್ತಾನ

ಆದಾಗ್ಯೂ ನಮ್ಮ ಭದ್ರತಾ ಪಡೆಗಳು ಉಗ್ರರ ಯೋಜನೆಯನ್ನು ನಾಶಗೊಳಿಸುತ್ತದೆ ಎಂದು ಸೇನೆಯ ದಕ್ಷಿಣದ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಎಸ್.ಕೆ.ಸೈನಿ ತಿಳಿಸಿದ್ದಾರೆ.

Terrorist Planning To Attack In Southern Part Of India

ದಕ್ಷಿಣ ಭಾರತವಲ್ಲದೆ ಭಾರತೀಯ ಸೇನೆ ಹಾಗೂ ಇತರ ಭದ್ರತಾ ಪಡೆಗಳ ಶಿಬಿರಗಳಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಪಾಕಿಸ್ತಾನ ಮೂಲದ ಲಷ್ಕರೆ ತೊಯ್ಬಾ ಯೋಜಿಸುತ್ತಿದೆ. ಈ ಕಾರಣದಿಂದ ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಸೈನಿ ತಿಳಿಸಿದ್ದಾರೆ.

ಕಳೆದ ತಿಂಗಳು ದೇಶದ ಅತಿದೊಡ್ಡ ಖಾಸಗಿ ಬಂದರನ್ನು ನಿರ್ವಹಿಸುವ ಅದಾನಿ ಪೋರ್ಟ್ ಮತ್ತು ಲಾಜಿಸ್ಟಿಕ್ಸ್, ಕೋಚ್ ಗಾರ್ಡ್ ನಿಲ್ದಾಣದಿಂದ ಒಳಹರಿವುಗಳನ್ನು ಸ್ವೀಕರಿಸಲಾಗಿತ್ತು , ಪಾಕಿಸ್ತಾನದ ಕಮಾಂಡೋಗಳು ಕಚ್ ಪ್ರದೇಶದ ಮೂಲಕ ಭಾರತೀಯ ಭೂಪ್ರದೇಶಕ್ಕೆ ಒಳನುಸುಳುವ ಸಾಧ್ಯತೆಯಿದೆ ಎಂದು ಕಚ್ ಪ್ರದೇಶದ ಮೂಲಕ ಕೋಮು ಗಲಭೆ ಅಥವಾ ಗುಜರಾತ್‌ನಲ್ಲಿ ಭಯೋತ್ಪಾದಕ ದಾಳಿ ನಡೆಸುವ ಬಗ್ಗೆ ಗುಪ್ತಚರ ಇಲಾಖೆ ಸುಳಿವು ನೀಡಿತ್ತು.

ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಅವರು ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಜೈಷ್-ಎ-ಮೊಹಮ್ಮದ್ ಸದಸ್ಯರಿಗೆ ಅಂಡರ್ ವಾಟರ್ ಅಟ್ಯಾಕ್ ತರಬೇತಿ ನೀಡುತ್ತಿದ್ದಾರೆ ಎಂದು ಗುಪ್ತಚರ ವರದಿಗಳನ್ನು ಉಲ್ಲೇಖಿಸಿ ಹೇಳಿದ್ದರು.

ಗುಜರಾತ್‌ನ ಸರ್ ಕ್ರೀಕ್‌ನಲ್ಲಿ ಕೆಲವು ಹಾಗೆ ಬಿಟ್ಟಿರುವ ದೋಣಿಗಳು ಕಂಡು ಬಂದಿರುವ ಈ ಹಿನ್ನಲೆಯಲ್ಲಿ ಪಾಕಿಸ್ತಾನದ ಉಗ್ರರು ಕಚ್ ಪ್ರದೇಶದ ಮೂಲಕ ಭಾರತಕ್ಕೆ ಒಳನುಸುಳಿ ಕೋಮುಗಲಭೆ ಅಥವಾ ಉಗ್ರ ದಾಳಿ ನಡೆಸುವ ಬಗ್ಗೆ ಸುಳಿವು ದೊರೆತಿದೆ ಎನ್ನಲಾಗಿದೆ.

ಈ ಅಲರ್ಟ್‌ನಿಂದ ಎಚ್ಚೆತ್ತುಕೊಂಡಿರುವ ಸೈನ್ಯವು ಈಗ ಹಲವು ಕ್ರಮಗಳನ್ನು ತೆಗೆದುಕೊಂಡಿದೆಎನ್ನಲಾಗಿದೆ. ಈಗ ಸೇನಾಧಿಕಾರಿಯ ಹೇಳಿಕೆಯ ನಂತರ ಕೇರಳ ಪೋಲಿಸ್ ಆಡಳಿತವು ಎಲ್ಲಾ ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ್ದು, ವಿಶೇಷವಾಗಿ ಕರಾವಳಿ ತೀರದಲ್ಲಿ ಜಾಗರೂಕರಾಗಿರಲು ಸೂಚನೆ ನೀಡಿದೆ.

ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು, ವಿಮಾನ ನಿಲ್ದಾಣಗಳು ಮತ್ತು ಶಾಪಿಂಗ್ ಮಾಲ್‌ಗಳು ಸೇರಿದಂತೆ ಜನದಟ್ಟಣೆ ಇರುವ ಪ್ರದೇಶಗಳಲ್ಲಿ ಎಚ್ಚರಿಕೆ ವಹಿಸುವಂತೆ ಪೊಲೀಸ್ ಮುಖ್ಯಸ್ಥರಿಗೆ ನಿರ್ದೇಶಿಸಲಾಗಿದೆ.

English summary
Terrorist Planning To Attack In Southern Part Of India, Lt Gen Saini's statements come at a time when the intelligence agencies have got inputs that Pakistan-based terrorist outfit Lashkar-e-Taiba is planning to carry out attacks on camps of Indian Army and other security forces.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X