ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಬ್‌ಜಿ ಫ್ಯಾನ್ಸ್‌ಗೆ ಮತ್ತೊಂದು ಶಾಕ್: ಭಾರತದಲ್ಲಿ ಸರ್ವರ್ ಸ್ಥಗಿತ

|
Google Oneindia Kannada News

ನವದೆಹಲಿ, ಅಕ್ಟೋಬರ್ 30: ಸಾವಿರಾರು ಜನರ ಮೆಚ್ಚಿನ ಆನ್‌ಲೈನ್ ಆಟಗಳಲ್ಲಿ ಒಂದಾಗಿದ್ದ ಪಬ್‌ಜಿ ಮೊಬೈಲ್ ಮತ್ತು ಪಬ್‌ಜಿ ಮೊಬೈಲ್ ಲೈಟ್ ಭಾರತದಲ್ಲಿ ಇಂದಿನಿಂದ ಬಳಕೆಗೆ ಲಭ್ಯವಾಗುತ್ತಿಲ್ಲ. ಭಾರತದಲ್ಲಿರುವ ತನ್ನ ಎಲ್ಲ ಸರ್ವರ್‌ಗಳು ಹಾಗೂ ಆಕ್ಸೆಸ್‌ಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುತ್ತಿರುವುದಾಗಿ ಕಂಪೆನಿಯು ಫೇಸ್‌ಬುಕ್‌ನಲ್ಲಿ ಪ್ರಕಟಣೆ ನೀಡಿದೆ.

ಪಬ್‌ಜಿ ಗೇಮ್‌ನ ಸಮುದಾಯ ವೇದಿಕೆಯಲ್ಲಿಯೂ ಈ ಸಂದೇಶವನ್ನು ಅದು ಹಂಚಿಕೊಂಡಿದೆ. ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ಚೀನಾ ನಿರ್ಮಿತ 117 ಆಪ್‌ಗಳನ್ನು ನಿಷೇಧಿಸುವ ಎರಡನೆಯ ಹಂತದ ನಿರ್ಧಾರದಲ್ಲಿ ಪಬ್‌ಜಿಯನ್ನು ಸಹ ನಿಷೇಧಿಸಲಾಗಿತ್ತು.

ಗದಗ; ಪಬ್ಜಿ ಆಡಬೇಡ ಎಂದು ಮೊಬೈಲ್ ಕಿತ್ತುಕೊಂಡಿದ್ದಕ್ಕೆ ಯುವಕ ಆತ್ಮಹತ್ಯೆಗದಗ; ಪಬ್ಜಿ ಆಡಬೇಡ ಎಂದು ಮೊಬೈಲ್ ಕಿತ್ತುಕೊಂಡಿದ್ದಕ್ಕೆ ಯುವಕ ಆತ್ಮಹತ್ಯೆ

ಭಾರತದಲ್ಲಿನ ತನ್ನ ಸೇವೆಗಳನ್ನು ಸಂಪೂರ್ಣವಾಗಿ ಅಂತ್ಯಗೊಳಿಸುತ್ತಿರುವುದಾಗಿ ಫೇಸ್‌ಬುಕ್‌ನಲ್ಲಿ ಪ್ರಕಟಿಸಿರುವ ಪಬ್‌ಜಿ ಮೊಬೈಲ್, 'ಆತ್ಮೀಯ ಅಭಿಮಾನಿಗಳೇ, ಸೆಪ್ಟೆಂಬರ್ 2ರ 2020ರಂದು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಮಧ್ಯಂತರ ಆದೇಶಕ್ಕೆ ಅನುಗುಣವಾಗಿ ಟೆನ್ಸೆಂಟ್ ಗೇಮ್ಸ್ ಭಾರತದಲ್ಲಿನ ಪಬ್‌ಜಿ ಮೊಬೈಲ್ ನೋರ್ಡಿಕ್ ಮ್ಯಾಪ್: ಲಿವಿಕ್ ಮತ್ತು ಪಬ್‌ಜಿ ಮೊಬೈಲ್ ಲೈಟ್ (ಪಬ್‌ಜಿ ಮೊಬೈಲ್) ಬಳಕೆದಾರರ ಎಲ್ಲ ಸೇವೆಗಳು ಮತ್ತು ಸೌಲಭ್ಯಗಳನ್ನು ಅಕ್ಟೋಬರ್ 30ರಿಂದ ಕಿತ್ತುಹಾಕಲಾಗುತ್ತಿದೆ. ಭಾರತದಲ್ಲಿನ ಪಬ್‌ಜಿ ಮೊಬೈಲ್ ಆರಂಭಿಸುವ ಹಕ್ಕುಗಳನ್ನು ಪಬ್‌ಜಿಯ ಮಾಲೀಕರಿಗೆ ಹಿಂದಿರುಗಿಸಲಾಗುವುದು' ಎಂದು ತಿಳಿಸಿದೆ. ಮುಂದೆ ಓದಿ.

ಪ್ಲೇ ಸ್ಟೋರ್‌ಗಳಲ್ಲಿ ಲಭ್ಯ ಇರಲಿಲ್ಲ

ಪ್ಲೇ ಸ್ಟೋರ್‌ಗಳಲ್ಲಿ ಲಭ್ಯ ಇರಲಿಲ್ಲ

ಪಬ್‌ಜಿ ಆಪ್ ನಿಷೇಧದ ಬಳಿಕ ಭಾರತೀಯರು ಗೂಗಲ್ ಪ್ಲೇ ಸ್ಟೋರ್‌, ಐಒಎಸ್ ಆಪ್ ಸ್ಟೋರ್‌ಗಳಿಂದ ಪಬ್‌ಜಿ ಆಪ್ ಡೌನ್‌ಲೋಡ್ ಮಾಡಿಕೊಳ್ಳುವ ಅವಕಾಶವನ್ನು ತೆಗೆದುಹಾಕಲಾಗಿತ್ತು. ಆದರೆ ಈಗಾಗಲೇ ಗೇಮ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಂಡಿದ್ದ ಅನೇಕರು ಆಟ ಮುಂದುವರಿಸಿದ್ದರು.

ಪಬ್‌ಜಿ ಆಡುವುದು ಕಷ್ಟ

ಪಬ್‌ಜಿ ಆಡುವುದು ಕಷ್ಟ

ಈಗ ಭಾರತದಲ್ಲಿನ ಪಬ್‌ಜಿ ಸರ್ವರ್‌ಗಳನ್ನು ಸ್ಥಗಿತಗೊಳಿಸುತ್ತಿರುವುದರಿಂದ ಭಾರತದಲ್ಲಿ ಪಬ್‌ಜಿ ಬಳಕೆದಾರರು ಆಟ ಮುಂದುವರಿಸುವುದು ಕಷ್ಟವಾಗಲಿದೆ. ವಿಪಿಎನ್ ಅಥವಾ ನಕಲಿ ಸರ್ವರ್‌ಗಳನ್ನು ಬಳಸಿ ನಿರ್ಬಂಧಗಳಾಚೆಯೂ ಕೆಲವರು ಪಬ್‌ಜಿ ಆಡುವ ಅವಕಾಶ ಪಡೆಯುವ ಸಾಧ್ಯತೆಯೂ ಇದೆ.

ಪಬ್‌ಜಿ ಆಡಲು ಅಜ್ಜನ ಖಾತೆಯಿಂದಲೇ 2.3 ಲಕ್ಷ ರೂ. ಎಗರಿಸಿದ ಮೊಮ್ಮಗಪಬ್‌ಜಿ ಆಡಲು ಅಜ್ಜನ ಖಾತೆಯಿಂದಲೇ 2.3 ಲಕ್ಷ ರೂ. ಎಗರಿಸಿದ ಮೊಮ್ಮಗ

ಬಳಕೆದಾರರ ದತ್ತಾಂಶ ಸಂರಕ್ಷಣೆ

ಬಳಕೆದಾರರ ದತ್ತಾಂಶ ಸಂರಕ್ಷಣೆ

'ಬಳಕೆದಾರರ ಡೇಟಾಗಳನ್ನು ರಕ್ಷಿಸುವುದು ನಮ್ಮ ಅತ್ಯಂತ ಪ್ರಮುಖ ಆದ್ಯತೆಯಾಗಿದೆ. ಭಾರತದ ಡೇಟಾ ರಕ್ಷಣೆಯ ಕುರಿತಾದ ಕಾನೂನು ಮತ್ತು ನಿಯಮಾವಳಿಗಳನ್ನು ಪಾಲಿಸಲು ನಾವು ಬದ್ಧರಾಗಿದ್ದೇವೆ. ಪ್ರತಿ ಬಳಕೆದಾರರ ಗೇಮ್ ಪ್ಲೇ ಮಾಹಿತಿಯನ್ನು ನಮ್ಮ ಖಾಸಗಿತನ ನೀತಿಯಲ್ಲಿ ತಿಳಿಸಿರುವಂತೆ ಪಾರದರ್ಶಕವಾಗಿ ನಿರ್ವಹಿಸಿದ್ದೆವು. ಈ ನಿರ್ಧಾರಕ್ಕಾಗಿ ವಿಷಾದಿಸುತ್ತೇವೆ. ನಿಮ್ಮೆಲ್ಲರ ಬೆಂಬಲ ಹಾಗೂ ಭಾರತದಲ್ಲಿನ ಪಬ್‌ಜಿ ಮೊಬೈಲ್ ಕುರಿತಾದ ಪ್ರೀತಿಗೆ ಧನ್ಯವಾದಗಳು' ಎಂದು ಟೆನ್ಸೆಂಟ್ ಹೇಳಿದೆ.

ಕಂಪ್ಯೂಟರ್ ಆವೃತ್ತಿ ಲಭ್ಯ

ಕಂಪ್ಯೂಟರ್ ಆವೃತ್ತಿ ಲಭ್ಯ

ಪಬ್‌ಜಿ ಆಪ್ ನಿಷೇಧದ ಬಳಿಕ ಚೀನಾದ ಕಂಪೆನಿಯಾದ ಟೆನ್ಸೆಂಟ್‌ನಿಂದ ಪಬ್‌ಜಿ ಕಾರ್ಪೋರೇಷನ್ ಭಾರತದಲ್ಲಿ ಗೇಮ್ ಅನ್ನು ಪಬ್ಲಿಷ್ ಮಾಡುವ ಹಕ್ಕುಗಳನ್ನು ಪಡೆದುಕೊಂಡಿತ್ತು. ಪಬ್‌ಜಿ ಮೊಬೈಲ್ ಇನ್ನು ಲಭ್ಯವಾಗದೆ ಹೋದರೂ ಪಬ್‌ಜಿ ಬಳಕೆದಾರರಿಗೆ ಲಭ್ಯವಾಗಿರಲಿದೆ. ಈ ಗೇಮ್‌ಅನ್ನು ದಕ್ಷಿಣ ಕೊರಿಯಾದ ಕಂಪೆನಿ ಪಬ್‌ಜಿ ಕಾರ್ಪೊರೇಷನ್ ಅಭಿವೃದ್ಧಿಪಡಿಸಿತ್ತು. ಆದರೆ ಚೀನಾದ ಟೆನ್ಸೆಂಟ್ ಗೇಮ್ಸ್ ಕಂಪೆನಿ ಬ್ಲೂಹೋಲ್ ಸ್ಟುಡಿಯೋದ ಶೇ 1.5ರಷ್ಟು ಷೇರುಗಳನ್ನು ಖರೀದಿಸಿತ್ತು. ಹೀಗಾಗಿ ಮೊಬೈಲ್ ಆಪ್ ನಿಷೇಧವಾದರೂ ಕಂಪ್ಯೂಟರ್ ಆವೃತ್ತಿಯ ಆಟ ಇನ್ನೂ ಲಭ್ಯವಿದೆ.

English summary
Tencent company has announced the complete shut down of PUBG Mobile servers and services in India from today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X