• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹೈದರಾಬಾದ್ ಅತ್ಯಾಚಾರ ಪ್ರಕರಣ: ಜನರು ಮಾಡುತ್ತಿರುವುದೇನು ಗೊತ್ತೇ?

|

ಹೈದರಾಬಾದ್, ಡಿಸೆಂಬರ್ 3: ತೆಲಂಗಾಣದ ಪಶುವೈದ್ಯೆ ಮೇಲಿನ ಅತ್ಯಾಚಾರ ಮತ್ತು ಬರ್ಬರ ಹತ್ಯೆಯ ಕೃತ್ಯಕ್ಕೆ ದೇಶ ವಿದೇಶಗಳಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಆಕೆಯನ್ನು ಸುಟ್ಟು ಹಾಕಿದ ರೀತಿಯಲ್ಲಿಯೇ ಆರೋಪಿಗಳನ್ನೂ ಸುಟ್ಟುಹಾಕಬೇಕು, ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸುವುದರಿಂದ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಬೇಕು ಎಂದು ಒತ್ತಾಯಿಸಲಾಗಿದೆ. ಆದರೂ ಈ ಘಟನೆಯ ಬೆನ್ನಲ್ಲೇ ಅತ್ಯಾಚಾರದಂತಹ ಪ್ರಕರಣಗಳು ವರದಿಯಾಗುತ್ತಲೇ ಇವೆ. ಏನನ್ನೂ ಅರಿಯದ ಮುಗ್ಧ ಮಕ್ಕಳೂ ಅತ್ಯಾಚಾರಿಗಳ ದಾಳಿಗೆ ಬಲಿಯಾಗುತ್ತಿರುವುದು ಬೆಚ್ಚಿ ಬೀಳಿಸುತ್ತಿವೆ. ಮಕ್ಕಳು-ಮಹಿಳೆಯರು ಒಂಟಿಯಾಗಿ ಓಡಾಡುವುದಕ್ಕೆ ಭಯಪಡುವಂತಹ ವಾತಾವರಣ ನಿರ್ಮಾಣವಾಗುತ್ತಿದೆ.

ಅತ್ಯಾಚಾರಿಗಳನ್ನು ಕಠಿಣ ಶಿಕ್ಷೆಗೆ ಒಳಪಡಿಸುವಂತೆ ಕಾನೂನಿನಲ್ಲಿ ತಿದ್ದುಪಡಿ ತರುವ ಮೂಲಕ ಅಂತಹ ಅಪರಾಧಗಳನ್ನು ಎಸಗಿದವರು ಪಾರಾಗಲು ಸಾಧ್ಯವೇ ಇಲ್ಲ ಎಂಬ ವಾತಾವರಣ ಸೃಷ್ಟಿಸಿದರೆ, ಇಂತಹ ಘಟನೆಗಳು ಕಡಿಮೆಯಾಗಬಹುದು ಎಂಬ ಅಭಿಪ್ರಾಯವಿದೆ. ಆದರೆ ಅತ್ಯಾಚಾರಿಗಳಷ್ಟೇ ಕ್ರೂರಿಗಳೇ? ಅತ್ಯಾಚಾರಿಗಳನ್ನು ಗಲ್ಲಿಗೆ ಏರಿಸಬೇಕು ಎಂದು ಒತ್ತಾಯಿಸುವ ಎಲ್ಲ ಮನಸ್ಸುಗಳೂ ಅಷ್ಟೇ ಪರಿಶುದ್ಧ ಎನ್ನಲಾಗುತ್ತದೆಯೇ?

ತೆಲಂಗಾಣ ಅತ್ಯಾಚಾರ: ಆರೋಪಿಗಳಿಗೆ ಜೈಲಲ್ಲಿ ಮಟನ್ ಕರಿ ಭೋಜನ

ತೆಲಂಗಾಣದ ಪಶುವೈದ್ಯೆಯ ಅತ್ಯಾಚಾರದ ಬಳಿಕ ಜನರು ನಡೆದುಕೊಂಡಿರುವ ರೀತಿ ಕೂಡ ಆಘಾತಕಾರಿಯಾಗಿದೆ. ಅತ್ಯಾಚಾರಿಗಳಿಗೂ ಈ ಜನರಿಗೂ ಅಷ್ಟೇನೂ ವ್ಯತ್ಯಾಸ ಇಲ್ಲ. ಅದಕ್ಕಿಂತಲೂ ಇವರು ಇನ್ನೂ ಕ್ರೂರಿಗಳು ಎನ್ನುವಂತಿದೆ ಈ ನಡತೆ.

ಅಶ್ಲೀಲ ವೆಬ್‌ಸೈಟ್‌ಗಳಲ್ಲಿ ಹುಡುಕಾಟ

ಅಶ್ಲೀಲ ವೆಬ್‌ಸೈಟ್‌ಗಳಲ್ಲಿ ಹುಡುಕಾಟ

ಪಶುವೈದ್ಯೆಯ ಮೇಲೆ ಅತ್ಯಾಚಾರ ಎಸಗಿದ ಕ್ರೂರಿಗಳು ಜೈಲಿನಲ್ಲಿದ್ದಾರೆ. ಆದರೆ ಅದಕ್ಕೂ ಹೆಚ್ಚಿನ ಕ್ರೂರಿಗಳು ಹೊರಗೆ ನಮ್ಮ ನಡುವೆ ಇದ್ದಾರೆ ಎಂಬ ಆಘಾತಕಾರಿ ಸಂಗತಿ ವರದಿಯಾಗಿದೆ. ಅತ್ಯಾಚಾರಕ್ಕೆ ಒಳಗಾದ ಪಶುವೈದ್ಯೆಯ ಹೆಸರು ತಿಳಿಯುತ್ತಿದ್ದಂತೆಯೇ ಕೊಳಕು ಮನಸುಗಳು ಆಕೆಯ ಹೆಸರನ್ನು ಅಶ್ಲೀಲ ವೆಬ್‌ಸೈಟ್‌ಗಳಲ್ಲಿ ಹುಡುಕಾಡಿದ್ದಾರೆ. ಅಶ್ಲೀಲ್ ವೆಬ್‌ಸೈಟ್‌ ಒಂದು ಸ್ವತಃ ಈ ಮಾಹಿತಿ ಹೊರಗೆಡವಿದ್ದು, ನಮ್ಮ ಜನರ ಮನಸ್ಥಿತಿ ಹೇಗಿದೆ ಎಂಬುದಕ್ಕೆ ಇದು ಕನ್ನಡಿ ಹಿಡಿಯುವಂತಿದೆ.

ಎಂಟು ಮಿಲಿಯನ್ ಹುಡುಕಾಟ

ಎಂಟು ಮಿಲಿಯನ್ ಹುಡುಕಾಟ

ಅಶ್ಲೀಲ ವಿಡಿಯೋಗಳನ್ನು ಹೊಂದಿರುವ ವೆಬ್‌ಸೈಟ್ ಒಂದು ನೀಡಿರುವ ಮಾಹಿತಿ ಅನ್ವಯ ಭಾರತ ಮತ್ತು ಪಾಕಿಸ್ತಾನದ ಹೆಚ್ಚಿನ ಜನರು ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯ ಹೆಸರನ್ನು ಆ ವೆಬ್‌ಸೈಟ್‌ನಲ್ಲಿ ಹುಡುಕಾಡಿದ್ದಾರೆ. ಅಂದರೆ, ಆ ಹೆಸರಿನ ಮಹಿಳೆಯ ಅಶ್ಲೀಲ ವಿಡಿಯೋ ಸಿಗಲಿದೆಯೇ ಎಂಬ ಕಾತರದಿಂದ ಹುಡುಕಲು ಪ್ರಯತ್ನಿಸಿದಾರೆ. ಘಟನೆ ನಡೆದ (ನ.27) ಐದು ದಿನಗಳಲ್ಲಿಯೇ ಎಂಟು ಮಿಲಿಯನ್ ಬಾರಿ ಆಕೆಯ ಹೆಸರನ್ನು ಅಶ್ಲೀಲ ವೆಬ್‌ಸೈಟ್‌ಗಳಲ್ಲಿ ಹುಡುಕಲಾಗಿದೆ.

ತೆಲಂಗಾಣ ಅತ್ಯಾಚಾರ ಸಂತ್ರಸ್ತೆಯ ಹೆಸರು ಬದಲಿಸಿದ ಪೊಲೀಸರು

ಪಾಕಿಸ್ತಾನಿಯರು ಮುಂದೆ

ಪಾಕಿಸ್ತಾನಿಯರು ಮುಂದೆ

ಮತ್ತೊಂದು ಆಘಾತಕಾರಿ ಅಂಶವೆಂದರೆ ಆಕೆಯ ಹೆಸರು ಹುಡುಕಾಡಿದವರಲ್ಲಿ ಪಾಕಿಸ್ತಾನಿಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪಾಕಿಸ್ತಾನದಲ್ಲಿ ಆ ಹೆಸರು ಟ್ರೆಂಡ್‌ ಆಗಿದೆ. ಭಾರತೀಯರೂ ತಮ್ಮ ದೇಶದ ಅತ್ಯಾಚಾರದ ಬಲಿಪಶುವಿನ ಹೆಸರಿನಲ್ಲಿ ಕೂಡ ಅಶ್ಲೀಲ ವಿಡಿಯೋ ಹುಡುಕುವುದರಲ್ಲಿ ಹಿಂದೆ ಬಿದ್ದಿಲ್ಲ. ಭಾರತದಿಂದ ಸರ್ಚ್ ಮೂಲಕ ಆಕೆಯ ಹೆಸರನ್ನು ಅಶ್ಲೀಲ ವೆಬ್‌ಸೈಟ್‌ನಲ್ಲಿ ಜಾಲಾಡಿದ್ದಾರೆ. ಪ್ರತಿದಿನವೂ ಇಲ್ಲಿ ಆಕೆಯ ಹೆಸರಿನಲ್ಲಿ ವಿಡಿಯೋ ಹುಡುಕಾಡುತ್ತಿದ್ದಾರೆ.

ಸಾಮಾಜಿಕ ತಾಣಗಳಲ್ಲಿ ಆಕ್ರೋಶ

ಸಾಮಾಜಿಕ ತಾಣಗಳಲ್ಲಿ ಆಕ್ರೋಶ

ಇದು ಒಂದು ವೆಬ್‌ಸೈಟ್ ನೀಡಿರುವ ಮಾಹಿತಿಯಷ್ಟೇ. ಕೇಂದ್ರ ಸರ್ಕಾರ ಇತ್ತೀಚೆಗೆ ಕಠಿಣ ಕ್ರಮದ ಮೂಲಕ ಕೆಲವು ಅಶ್ಲೀಲ ವೆಬ್‌ಸೈಟ್‌ಗಳನ್ನು ಸ್ಥಗಿತಗೊಳಿಸಿತ್ತು. ಆದರೆ ಇನ್ನೂ ಅನೇಕ ವೆಬ್‌ಸೈಟ್‌ಗಳು ವೀಕ್ಷಣೆಗೆ ಸಿಗುತ್ತಿವೆ. ಭಾರತದ್ದೇ ಆದ ನೂರಾರು ಅಶ್ಲೀಲ ವೆಬ್‌ಸೈಟ್‌ಗಳಿವೆ. ಇಂತಹ ವೆಬ್‌ಸೈಟ್‌ಗಳಲ್ಲಿ ಅತ್ಯಾಚಾರದ ಬಲಿಪಶುವಿನ ಹೆಸರನ್ನು ಎಷ್ಟು ಮಂದಿ ಹುಡುಕಾಡಿದ್ದಾರೆಯೋ ತಿಳಿದಿಲ್ಲ. ಜನರ ಇಂತಹ ಹೀನ ಮನಸ್ಥಿತಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.

'ದಿಶಾ' ಎಂಬ ಹೆಸರಿಟ್ಟ ಪೊಲೀಸರು

'ದಿಶಾ' ಎಂಬ ಹೆಸರಿಟ್ಟ ಪೊಲೀಸರು

ಕಾನೂನಿನ ಪ್ರಕಾರ ಅತ್ಯಾಚಾರ ಸಂತ್ರಸ್ತೆಯ ಹೆಸರು ಮತ್ತು ಅವರ ಗುರುತನ್ನು ತಿಳಿಸುವಂತಹ ಮಾಹಿತಿಗಳನ್ನು ಮಾಧ್ಯಮಗಳಲ್ಲಿ ಪ್ರಕಟಿಸುವಂತಿಲ್ಲ. ಆದರೆ ತೆಲಂಗಾಣ ಪಶುವೈದ್ಯೆಯ ಪ್ರಕರಣದಲ್ಲಿ ಈ ಕಾನೂನು ಪಾಲನೆಯಾಗಲಿಲ್ಲ. ಆಕೆಯ ಮೇಲೆ ಅತ್ಯಾಚಾರ ನಡೆದಿದೆ ಎನ್ನುವುದನ್ನು ಪೊಲೀಸರು ಆರಂಭದಲ್ಲಿ ಖಚಿತಪಡಿಸಿರಲಿಲ್ಲ. ಸುಟ್ಟು ಸ್ಥಿತಿಯಲ್ಲಿ ದೇಹ ಸಿಕ್ಕಿದಾಗ ಮತ್ತು ಆಕೆಯ ಕುಟುಂಬದವರು ದೇಹವನ್ನು ಗುರುತಿಸಿದಾಗಲೇ ಮಾಧ್ಯಮಗಳಲ್ಲಿ ಆಕೆಯ ಹೆಸರಿನ ಸಹಿತ ವರದಿ ಪ್ರಕಟವಾಗಿತ್ತು. ಅತ್ಯಾಚಾರ ನಡೆದಿತ್ತೇ, ಇಲ್ಲವೇ ಎಂಬುದು ಮರಣೋತ್ತರ ಪರೀಕ್ಷೆಯಿಂದ ದೃಢಪಡುವ ಮೊದಲೇ ಆಕೆಯ ಹೆಸರು ಮತ್ತು ಗುರುತು ವ್ಯಾಪಕವಾಗಿ ಸುದ್ದಿಯಾಗಿತ್ತು. ಬಳಿಕ ಪೊಲೀಸರು ಆಕೆಯ ಹೆಸರನ್ನು 'ದಿಶಾ' ಎಂದು ಬದಲಿಸಿದ್ದರು.

ಪಶುವೈದ್ಯೆ ಮೇಲೆ ಅತ್ಯಾಚಾರ; ಆರೋಪಿಗಳು ಸಿಕ್ಕಿಬಿದ್ದಿದ್ದು ಹೇಗೆ?

'ಹೆಸರು ತೆಗೆಯಿಸಿ' ಅಭಿಯಾನ

'ಹೆಸರು ತೆಗೆಯಿಸಿ' ಅಭಿಯಾನ

ಪಶುವೈದ್ಯೆಯ ಹೆಸರು ಅಶ್ಲೀಲ ವೆಬ್‌ಸೈಟ್‌ನಲ್ಲಿ ಟ್ರೆಂಡ್ ಆಗುತ್ತಿರುವ ಖೇದಕರ ಸಂಗತಿ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿದೆ. ಈ ರೀತಿ ಟ್ರೆಂಡಿಂಗ್‌ನಲ್ಲಿರುವ ಆಕೆಯ ಮೂಲ ಹೆಸರನ್ನು ತೆಗೆದುಹಾಕುವಂತೆ ಆನ್‌ಲೈನ್‌ನಲ್ಲಿ ಅಭಿಯಾನ ಆರಂಭವಾಗಿದೆ. ಚೇಂಜ್ ಡಾಟ್ ಆರ್ಗ್ ಮೂಲಕ ರಿಗಾನ್ ಬರ್ನ್‌ವಾಲ್ ಈ ಅಭಿಯಾನ ಆರಂಭಿಸಿದ್ದು, ಸಾವಿರಾರು ಮಂದಿ ಅದಕ್ಕೆ ಸಹಿ ಹಾಕಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In a shocking report, people of India and Pakistan have searched Telangana rape and murder victim doctor's name in some websites, who publishes vulgar videos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more