ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಅಮೃತಾ ಮಾಡಿದ್ದು ಸರೀನಾ?' ಫೇಸ್ ಬುಕ್ ನಲ್ಲಿ ಜನ ಏನಂತಾರೆ?

|
Google Oneindia Kannada News

ಮಿರ್ಯಾಲಗುಡ, ಸೆಪ್ಟೆಂಬರ್ 20: "ಪ್ರೀತಿಸಿದ್ದೇನೋ ಸರಿ, ಆದರೆ ತನ್ನನ್ನು ಹೊತ್ತು, ಹೆತ್ತು, ಬೆಳೆಸಿದ ತಂದೆ-ತಾಯಿಯನ್ನು ಅಮೃತಾ ಧಿಕ್ಕರಿಸಿ ಹೋದದ್ದು ಎಷ್ಟು ಸರಿ?"

ತೆಲಂಗಾಣದಲ್ಲಿ ನಡೆದ ಪ್ರಣಯ್ ಹತ್ಯೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಎದ್ದಿರುವ ಪ್ರಶ್ನೆ ಇದು. ಈ ಪ್ರಕರಣದಲ್ಲಿ ಅಮೃತಾ ತಂದೆ ಮಾರುತಿ ರಾವ್ ಅವರ ಕೈವಾಡ ಪತ್ತೆಯಾಗಿದ್ದು, ಅವರನ್ನು ಬಂಧಿಸಲಾಗಿದೆ.

ಪ್ರಣಯ್ ನನ್ನು ನಿನ್ನ ತಂದೆ ಕೊಂದಿರಬಹುದು, ಆದರೆ ನಿಮ್ಮಪ್ಪನನ್ನು ನೀನು ಎಂದೋ ಮಾನಸಿಕವಾಗಿ ಸಾಯಿಸಿಬಿಟ್ತಿದ್ದೀಯಾ. ಅವರ ಭಾವನೆಗಳಿಗೆ ಮೂರು ಕಾಸಿನ ಬೆಲೆಯನ್ನೂ ನೀಡದೆ ಸ್ವಾರ್ಥಿಯಾಗಿ ಓಡಿಹೋಗಿದ್ದೀಯಾ ಎಂದು ಫೇಸ್ ಬುಕ್ ಯೂಸರ್ ವೊಬ್ಬರು ಅಮೃತಾ ಅವರಿಗೆ ಬರೆದ ಮಾರುದ್ದದ ಪತ್ರವನ್ನು ಒನ್ ಇಂಡಿಯಾ ಪ್ರಕಟಿಸಿತ್ತು.

'ಅಮೃತಾ, ನೀನು ನಿಮ್ಮಪ್ಪನನ್ನು ಎಂದೋ ಸಾಯಿಸಿದ್ದೀಯಾ!''ಅಮೃತಾ, ನೀನು ನಿಮ್ಮಪ್ಪನನ್ನು ಎಂದೋ ಸಾಯಿಸಿದ್ದೀಯಾ!'

ಈ ಲೇಖನಕ್ಕೆ ಒನ್ ಇಂಡಿಯಾ ಓದುಗರು ವಿವಿಧ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದು, ಕೆಲವರು ಮಾರುತಿ ರಾವ್ ಅವರ ನಡೆಯನ್ನು ವಿರೋಧಿಸಿದ್ದರೆ, ಮತ್ತಷ್ಟು ಜನ ಈ ನಡೆಯನ್ನು ಸರಿ ಎಂದು ಸಮರ್ಥಿಸಿಕೊಂಡಿದ್ದಾರೆ.

ಸಾವನ್ನೂ ಸಂಭ್ರಮಿಸುವವರು ಮನುಷ್ಯರಲ್ಲ!

ಸಾವನ್ನೂ ಸಂಭ್ರಮಿಸುವವರು ಮನುಷ್ಯರಲ್ಲ!

"ಯಾರ ಸಾವನ್ನೂ ಸಂಭ್ರಮಿಸುವ ಅಥವಾ ಸಮರ್ಥಿಸಿಕೊಳ್ಳುವ ಮನೊಭಾವವೇ ನಿಜವಾದ ಮನುಷ್ಯನಲ್ಲಿ ಇರುವುದಿಲ್ಲ. ಇವೆಲ್ಲವೂ ವಿಷಜಂತುಗಳಲ್ಲಿ ಇರುತ್ತದೆ ಎಂದು ನನ್ನ ಅಭಿಪ್ರಾಯ. ದಯವಿಟ್ಟು ಪ್ರತಿಯೊಬ್ಬರೂ ಈ ಹುಡುಗಿಯ ತಂದೆ ತಾಯಿ ಸ್ಥಾನದಲ್ಲಿ ನಿಂತು ನೋಡಬೇಡಿ. ಮಗನನ್ನು ಕಳೆದುಕೊಂಡ ಆ ತಂದೆ ತಾಯಿ ಸ್ಥಾನದಲ್ಲಿ ನಿಂತು ಒಮ್ಮೆ ಯೋಚಿಸಿ ನಿಮಗೆ ತಿಳಿಯುತ್ತದೆ ಯಾವುದು ಸರಿ ಎಂದು..." ಎಂದಿದ್ದಾರೆ ಮಿಥುನ್ ದೊಡ್ಮನೆ

ತೆಲಂಗಾಣ ಹತ್ಯೆ: ಅಮ್ಮನಿಗೆ ಮಾಡಿದ ಫೋನ್ ಕರೆಗಳೇ ಪತಿಯ ಜೀವಕ್ಕೆ ಮುಳುವಾದವೇ? ತೆಲಂಗಾಣ ಹತ್ಯೆ: ಅಮ್ಮನಿಗೆ ಮಾಡಿದ ಫೋನ್ ಕರೆಗಳೇ ಪತಿಯ ಜೀವಕ್ಕೆ ಮುಳುವಾದವೇ?

ಎಲ್ಲಕ್ಕೂ ಕಾರಣ ಅಮೃತಾ!

ಎಲ್ಲಕ್ಕೂ ಕಾರಣ ಅಮೃತಾ!

"ಅವಳು ನಿಜವಾದ ನೀತಿವಂತ ಹುಡುಗಿ ಆಗಿದಿದ್ರೆ ಇಷ್ಟು ಆಗೋಕೆ ಬಿಡ್ತಿರ್ಲಿಲ್ಲ, ಪ್ರೀತಿ ಮಾಡೋದು ಹೆಚ್ಚಲ್ಲ. ಎಲ್ರೂ ಮಾಡ್ತಾರೆ. ಆದ್ರೆ ಅವಳು ಮನೇಲಿ ಒಪ್ಪಿಸಿ ಮದ್ವೆ ಆಗಿದಿದ್ರೆ ಇವತ್ತು ಗಂಡನ ಕಳ್ಕೊಂಡು, ತಂದೆನ ದೋಷಿ ಮಾಡ್ತಿರ್ಲಿಲ್ಲ. ಆ ತಂದೆ ಮಗಳ ಸೌಭಾಗ್ಯ ಕಿತ್ಕೋತಿರ್ಲಿಲ್ಲ, ಎಲ್ಲಾ ಆ ಹುಡುಗಿಯಿಂದ. ಗಂಡ ಸತ್ತ, ಈ ಕಡೆ ತಂದೆ ಬದುಕಿದ್ದೂ ಸತ್ತ. ಆದರೆ ಎಲ್ಲರ ನಡುವೆ ಹೆತ್ತ ತಾಯಿಯ ನೋವು ಮಾತ್ರ ಯಾರ ಊಹೆಗೂ ನಿಲುಕದ್ದು...

ಯಾವ ತಂದೇನೂ ಮಗಳನ್ನು ಕಷ್ಟದಲ್ಲಿ ನೋಡಲು ಇಷ್ಟ ಪಡಲ್ಲ, ಅವ್ನು ಕಷ್ಟ ಪಟ್ಟು ಕೂಡಿಟ್ಟ ಹಣ ಆಸ್ತಿ ಮನೆ ಹೆಣ್ಣುಮಗಳನ್ನ ಯಾರೋ ಬಂದು ತಗೊಂಡ್ ಹೋದ್ರೆ ಆತನಿಗೆ ಎಷ್ಟು ನೋವಾಗಿರ್ಬಾರ್ದು? ಅಂದ್ರೆ ಆತ ಕೊಲೆ ಮಾಡಿಸಿದ್ದು ಸರಿ ಅಂತ ಹೇಳ್ತಿಲ್ಲ, ತಂದೇನ ಕೊಲೆಗಡುಕ ಸ್ಥಾನದಲ್ಲಿ ನಿಲ್ಲೋ ತರ ಮಾಡಿದ್ದು ಆ ಮಗಳ ತಪ್ಪು ಅಂತ ಹೇಳ್ತಿದೀನಿ..!" ಎಂದಿದ್ದಾರೆ ಶ್ರೀಹರಿ ಜರಿಪಿತಿ

ಸ್ಫೋಟಕ ಮಾಹಿತಿ: ಪ್ರಣಯ್ ಹತ್ಯೆಗೆ 4 ಬಾರಿ ನಡೆದಿತ್ತು ಸಂಚು!ಸ್ಫೋಟಕ ಮಾಹಿತಿ: ಪ್ರಣಯ್ ಹತ್ಯೆಗೆ 4 ಬಾರಿ ನಡೆದಿತ್ತು ಸಂಚು!

ಮಗಳನ್ನು ವಿಧವೆ ಮಾಡಿದ್ದು ಎಷ್ಟು ಸರಿ?

ಮಗಳನ್ನು ವಿಧವೆ ಮಾಡಿದ್ದು ಎಷ್ಟು ಸರಿ?

ಹುಡುಗ ಮಧ್ಯಮ ವರ್ಗದನಾಗಿದ್ದಿರಬಹುದು. ಆದರೆ ಭಿಕಾರಿಯಾಗಿರಲಿಲ್ಲ ವಿರೋಧಿಸೋಕೆ! ಹೆತ್ತವರಿಗೆ ಅಷ್ಟೊಂದು ಮಗಳ ಮೇಲೆ ಪ್ರೀತಿ ಇದ್ದಿದ್ದರೆ, ಮಗಳಿಗೆ ಇನ್ನೂ ಅರ್ಥಿಕ ಸಹಾಯ ಮಾಡಬಹುದಾಗಿತ್ತು... ಮಗಳನ್ನು ವಿಧವೆ ಮಾಡಿ ಆಕೆಗೆ ಕಷ್ಟ ಕೊಡುತ್ತಿರಲಿಲ್ಲ...

ಆದರೆ ಅವರಿಗೆ ಇದ್ದದ್ದು ಜಾತಿ ಅನ್ನೋ ವಿಷ ಬೀಜ, ಪ್ರೀತಿ ಅಲ್ಲ... ಅವರ ತಂದೆಯೇ ಒಪ್ಪಿಕೊಂಡಿದ್ದಾರೆ, ತನ್ನ ಮಗಳಿಗೆ "ತನ್ನ ಜಾತಿಯ ಯಾವುದೇ ಹುಡುಗನಿಗೆ ಮದುವೆ ಆಗು, ಆದರೆ ಅನ್ಯ ಜಾತಿಯ ಹುಡುಗನ ಜೊತೆ ಮಾತ್ರ ಮದುವೆ ಆಗಬಾರದು ಎಂದಿದ್ದೆ" ಅಂತ! ಎಂದಿದ್ದಾರೆ ರಾವ್ ಬಹದ್ದೂರ್.

'ಪ್ರಣಯ್ ನನಗೆ ನೀಡಿದ ಅತ್ಯಮೂಲ್ಯ ಉಡುಗೊರೆ ನನ್ನ ಗರ್ಭದಲ್ಲಿದೆ' 'ಪ್ರಣಯ್ ನನಗೆ ನೀಡಿದ ಅತ್ಯಮೂಲ್ಯ ಉಡುಗೊರೆ ನನ್ನ ಗರ್ಭದಲ್ಲಿದೆ'

ಹುಡುಗಿಯದೂ ತಪ್ಪು, ಆದರೆ ಹುಡುಗನ ಕೊಲೆ ಸರಿಯಲ್ಲ!

ಹುಡುಗಿಯದೂ ತಪ್ಪು, ಆದರೆ ಹುಡುಗನ ಕೊಲೆ ಸರಿಯಲ್ಲ!

"ಅಷ್ಟೊಂದು ಪ್ರೀತಿಯಿಂದ ಸಾಕಿದ ತಂದೆ ತಾಯಿ ಕುಟುಂಬಕ್ಕೆ ಅವರ ಭಾವನೆಗಳಿಗೆ ನಂಬಿಕೆದ್ರೋಹ ಮಾಡಿ, ಶಾಲೆಗೆ ಹೋಗುವ ವಯಸ್ಸಿನಲ್ಲಿ ಬೇರೊಬ್ಬನ ಜೊತೆ ಓಡಿ ಹೋಗಿ ಮದುವೆ ಆಗುವುದು ತಪ್ಪೆ. ಆದರೂ ಕೂಡಾ ಕೈ ಮೀರಿ ಹೋದ ಇಂತಹ ಪ್ರಸಂಗಗಳಲ್ಲಿ ಇಬ್ಬರ ಕಡೆಯವರು ಕುಳಿತು ಮಾತನಾಡಿಕೊಂಡು ಮುಂದಿನ ಅವರ ಜೀವನ ರೂಪಿಸಬೇಕಾಗಿತ್ತು ಆದರೆ ಹುಡುಗ ಕೀಳು ಜಾತಿಗೆ ಸೇರಿದವ ಎಂಬ ಒಂದೇ ಕಾರಣಕ್ಕೆ ಈ ರೀತಿ ಕೊಲೆ ಮಾಡಿದ್ದು ನಾಗರಿಕ ಸಮಾಜಕ್ಕೆ ತಕ್ಕದ್ದಲ್ಲ ಇದು ಅಕ್ಷಮ್ಯ ಅಪರಾಧ" ಎಂದಿದ್ದಾರೆ ವಿರೂಪಾಕ್ಷ ತುಂಬದ್.

ಸುಪಾರಿ ಕಿಲ್ಲರ್ ಗಳಿಂದ ಪ್ರಣಯ್ ಹತ್ಯೆಗೆ ಸಂಚು ನಡೆದಿದ್ದು ಹೇಗೆ?ಸುಪಾರಿ ಕಿಲ್ಲರ್ ಗಳಿಂದ ಪ್ರಣಯ್ ಹತ್ಯೆಗೆ ಸಂಚು ನಡೆದಿದ್ದು ಹೇಗೆ?

ಒಬ್ಬರಿಗೆ ಕಾನೂನಿನ ಶಿಕ್ಷೆ, ಇನ್ನೊಬ್ಬರಿಗೆ ವಿಧಿಯ ಶಿಕ್ಷೆ

ಒಬ್ಬರಿಗೆ ಕಾನೂನಿನ ಶಿಕ್ಷೆ, ಇನ್ನೊಬ್ಬರಿಗೆ ವಿಧಿಯ ಶಿಕ್ಷೆ

"ಅಮೃತಾ ರವರ ಫೋಟೋ ಶೂಟ್ ಗಳನ್ನು ಟಿವಿ ಮಾಧ್ಯಮ ದಲ್ಲಿ ನೋಡಿದೆ. ಆಗ ನನಗೂ ಹಾಗೆ ಅನ್ನಿಸಿತು. ಈ ಹುಡುಗಿ ತನ್ನ ಜನಕರನ್ನು ಜೀವಂತ ಸಾಯಿಸಿದ್ದಾಳೆ ಅಂತ. ಹಾಗೆ ಅಂತ ಆ ಮನುಷ್ಯ ಕೂಡ ತಪ್ಪು ಮಾಡಿದ್ದಾನೆ. ಒಬ್ಬರು ಕಾನೂನು ನೀಡುವ ಶಿಕ್ಷೆ ಹಾಗೂ ಇನ್ನೊಬ್ಬರು ವಿಧಿ ಆಡಿದ ಆಟ ಅನುಭವಿಸುವ ಹಾಗೆ ಆಯಿತು!" ಎಂದಿದ್ದಾರೆ ಗಣಪತಿ ಮಂಚಿ.

'ಪ್ರಣಯ್‌ಗೆ ನ್ಯಾಯ ದೊರಕಿಸಿ': ಫೇಸ್‌ಬುಕ್‌ನಲ್ಲಿ ಬೃಹತ್ ಅಭಿಯಾನ 'ಪ್ರಣಯ್‌ಗೆ ನ್ಯಾಯ ದೊರಕಿಸಿ': ಫೇಸ್‌ಬುಕ್‌ನಲ್ಲಿ ಬೃಹತ್ ಅಭಿಯಾನ

ತಪ್ಪು ಜಾತಿಯದ್ದಲ್ಲ, ಪ್ರತಿಷ್ಟೆಯದ್ದು!

ತಪ್ಪು ಜಾತಿಯದ್ದಲ್ಲ, ಪ್ರತಿಷ್ಟೆಯದ್ದು!

ಈ ಕೊಲೆ ನಡೆದಿದ್ದು ಜಾತಿಯ ಕಾರಣಕ್ಕೆ ಎಂದು ನನಗನ್ನಿಸುತ್ತಿಲ್ಲ. ಇಲ್ಲಿ ತಪ್ಪಾಗಿದ್ದು ಪ್ರತಿಷ್ಟೆಯದ್ದು. ಆ ಹುಡುಗ ಯಾವುದಾದರೂ ಒಳ್ಳೆಯ ಆಫೀಸರ್ರೋ, ಕಮಿಶನರ್ ಮಗಾನೋ, ಉದ್ಯಮಿಯ ಮಗನೋ ಆಗಿ, ಕೋಟ್ಯಧಿಪತಿ ಆಗಿದ್ರೆ ಹೀಗೆ ಸಾಯ್ತಿರ್ಲಿಲ್ಲ. ಆಗ ಇವರೇ ಮುಂದೆ ನಿಂತು ಮದುವೆ ಮಾಡ್ತಿದ್ರು. ಅದೊಂದಿತ್ತು ಕಾಲ. ಆಗ ಜಾತಿ ಜಾತಿ ಅಂತ ಬಡ್ಕೋತಿದ್ರು. ಈಗ ಸ್ಟೇಟಸ್ ಸ್ಟೇಟಸ್ ಅಂತ ಬಡ್ಕೋತಾರೆ ಎಂದಿದ್ದಾರೆ ಮಂಜುನಾಥ ಕೆ ವಿ.

ಪ್ರಣಯ್ ಹತ್ಯೆ ಭೇದಿಸಿದ ಪೊಲೀಸ್! ಕೊಲೆಗಾರನಿಗೆ 1 ಕೋಟಿ ರು. ಸುಪಾರಿ! ಪ್ರಣಯ್ ಹತ್ಯೆ ಭೇದಿಸಿದ ಪೊಲೀಸ್! ಕೊಲೆಗಾರನಿಗೆ 1 ಕೋಟಿ ರು. ಸುಪಾರಿ!

ಮನವೊಲಿಸುವ ಪ್ರಯತ್ನ ಮಾಡಬೇಕಿತ್ತು!

ಮನವೊಲಿಸುವ ಪ್ರಯತ್ನ ಮಾಡಬೇಕಿತ್ತು!

ಈ ಪ್ರೇಮಿಗಳು ನಿಜವಾಗಿಯೂ ಟ್ರೂ ಲವರ್ಸ್ ಆಗಿದ್ದರೆ ಅವರ ಮನೆಯವರು ಒಪ್ಪೋವರೆಗೂ ಕಾಯಬೇಕಾಗಿತ್ತು, ಮನ ಒಲಿಸಿ ಮದ್ವೆ ಆಗಬೇಕಾಗಿತ್ತು. ಏನು ಇವರಿಗೆ ಅಂತ ವಯಸ್ಸೇನ ಆಗಿಲ್ಲ, ಎಂಜಾಯ್ ಮಾಡೋ ವಯಸ್ಸಲ್ಲಿ ಮದುವೆ ಮಾಕ್ಕಳು ಯಾಕೆ ಇವರಿಗೆ, ಮದುವೇನೋ ಆಗಿದ್ದಾರೆ ಮತ್ತೆ ಅವರಮನೆಗೆ ಯಾಕೆ ಹೋಗಬೇಕಾಗಿತ್ತು ಇವರು? ಸ್ವಲ್ಪ ದಿನ ಕಾಯಬೇಕಾಗಿತ್ತು, ಅವರ ಕೋಪ ತಣ್ಣಗೇ ಆದಮೇಲೆ ಹೋಗಬೇಕಾಗಿತ್ತು, ಇಲ್ಲದಿದ್ದರೆ ಮನವೊಲಿಸುವ ಪ್ರಯತ್ನ ಮದುವೆ ಮುಂಚೆನೇ ಇರಬೇಕಾಗಿತ್ತು, ಇವರಿಗೆ ಅಥವಾ ಇವರ ಉದ್ದೇಶ ಏನಾಗಿತ್ತೋ ಗೊತ್ತಿಲ್ಲ , ಅಷ್ಟರಲ್ಲಿ ಈ ಎಡವಟ್ಟಾಗಿದೆ" ಎಂದಿದ್ದಾರೆ ರಾಘವೇಂದ್ರ ಪೂರ್ಮ.

ಮಕ್ಕಳ ಆಸೆ ಆಕಾಂಕ್ಷೆಗಳಿಗೆ ಬೆಲೆ ಕೊಡಬೇಕು

ಮಕ್ಕಳ ಆಸೆ ಆಕಾಂಕ್ಷೆಗಳಿಗೆ ಬೆಲೆ ಕೊಡಬೇಕು

"ಯಾವ ಮಕ್ಕಳೂ ನಮಗೆ ಜನ್ಮ ಕೊಡ್ರಿ ಅಂತ ಯಾವ ಅಪ್ಪ ಅಮ್ಮನಿಗೂ ಕೇಳೋಲ್ಲ, ನಾವು ನಮಗೆ ಬೇಕು ಅಂತ ಮಕ್ಕಳನ್ನು ಹುಟ್ಟಿಸಿಕೊಂಡಿರ್ತೇವೆ. ಸಾಕುತ್ತೇವೆ. ಹಾಗಂತ ನಾವೇನೋ ದೊಡ್ಡದು ಮಾಡಿಬಿಡಲ್ಲ , ಆದರೆ ಮಕ್ಕಳ ಆಸೆ ಆಕಾಂಕ್ಷೆಗಳಿಗೆ ನಾವು ಕೂಡ ಬೆಲೆ ಕೊಡಬೇಕು. ಅವರೇನಾದರೂ ತಪ್ಪು ಮಾಡಿದ್ರೆ ತಿದ್ದಬೇಕು. ಆದ್ರೆ ಪ್ರೀತಿ ಮಾಡದು ನಿಸರ್ಗ ಸಹಜ ಅದು ತಪ್ಪಲ್ಲ , ಅದಕ್ಕೆ ಕೊಲೆ ಮಾಡೋ ಅಂತ ತಪ್ಪು ಮಾಡಿದ್ದು ಅವರಪ್ಪ. ಮಗಳಲ್ಲ! ಆ ಮಗು ಏನಾದ್ರೂ ಕೇಳಿತ್ತಾ ನನಗೆ ಜನ್ಮ ಕೊಡ್ರಿ ಅಂತ!?

ನಾನು ಕೂಡ ಒಂದು ಹೆಣ್ಣು ಮಗಳ ತಂದೆ. ನನ್ನ ಮಗಳು ಕೂಡ ಬೇರೆ ಜಾತಿಯವರನ್ನ ಪ್ರೀತಿಸಿ ಮದುವೆಯಾದಳು. ಹಾಗಂತ ಅವಳು ತಪ್ಪು ಮಾಡಿದಳೇ ? ಜಾತಿ ಅನ್ನೋದು , ಅಂತಸ್ತು ಅನ್ನೋದು ನಾವುಗಳು ಮಾಡಿಕೊಂಡಿರೋ ಕರ್ಮ. ಹೌದು ಹುಡುಗನಿಗೆ ಕೆಟ್ಟ ಗುಣ ಇದ್ರೆ ವಿರೋಧಿಸಬಹುದು ಆದ್ರೆ ಜಾತಿಗಲ್ಲ ಎಂದಿದ್ದಾರೆ ವಿಜಯೇಂದ್ರ.

ಮನೆಬಿಟ್ಟು ಹೋಗೋದು ಸರೀನಾ?

ಮನೆಬಿಟ್ಟು ಹೋಗೋದು ಸರೀನಾ?

ಅಪ್ಪ ದುಷ್ಟನೇ ಇರಬಹುದು, ಹಲವಾರು ಅನಾಚಾರಗಳನ್ನು ಮಾಡಿರಬಹುದು, ಕೆಲವರಿಗೆ ಮೋಸ ಮಾಡಿ ದುಡ್ಡು ಹೊಡೆದಿರಬಹುದು, ಆದರೆ, ಮಗಳಿಗೆ ಅಪ್ಪ ಅಪ್ಪನೆ. ಅಪ್ಪನ ಅನಾಚಾರಗಳನ್ನು ಧಿಕ್ಕರಿಸಿ ಮನೆಬಿಟ್ಟು ಹೋಗಿದ್ದರೆ ಒಪ್ಪಬಹುದಿತ್ತು. ಆದರೆ, ಪ್ರೀತಿ ಪ್ರೇಮದ ವಿಷಯದಲ್ಲಿ ಮನೆಬಿಟ್ಟು ಹೋಗುವುದು ಸರೀನಾ?

ಮನೋವೈಜ್ಞಾನಿಕ ಕಾರಣ ತಿಳಿಯಬೇಕು

ಮನೋವೈಜ್ಞಾನಿಕ ಕಾರಣ ತಿಳಿಯಬೇಕು

"ಯಾರೊಬ್ರೂ ಇನ್ನೊಬ್ಬರ ಪ್ರಾಣ ತೆಗೆಯುವ ಕೆಲಸ ಮಾಡುವುದು ಸರಿಯಲ್ಲ. ಆದರೆ ಈ ರೀತಿಯ ಪ್ರಕ್ರಿಯೆಗಳಲ್ಲಿ ಇರಬಹುದಾದ ಮನೋವೈಜ್ಞಾನಿಕ ಕಾರಣಗಳನ್ನು ಖಂಡಿತವಾಗಿ ವಿಶ್ಲೇಷಣೆ ಮಾಡಲೇಬೇಕು. ಈಗಿನ ಯುವಪೀಳಿಗೆಗೆ ತಮ್ಮ ಹೆತ್ತವರನ್ನು ತಮ್ಮ ಬೇಡಿಕೆಗಳನ್ನು ಈಡೇರಿಸುವ ಒಂದು ವಸ್ತು ವಂತೆ ಮಾತ್ರ ನೋಡಲು ಗೊತ್ತು. ಮಿಕ್ಕಹಾಗೆ ಅವರಿಗೂ ಆಸೆ ಆಕಾಂಕ್ಷೆಗಳು ಕನಸುಗಳು ಇರುತ್ತವೆ, ತಮಗೂ ಸಹ ಜವಾಬ್ದಾರಿ ಇದೆ ಎಂಬ ಕನಿಷ್ಠ ಪಕ್ಷವಾದ ಅನಿಸಿಕೆಗಳು ಸುತರಾಂ ಇಲ್ಲ. ಸಿನೆಮಾ ಶೈಲಿ ಪ್ಯಾರ್ ಪ್ರೇಮ ಕಾದಲ್ ಮಾತ್ರ ಅಚ್ಚುಕಟ್ಟಾಗಿ ಮಾಡಲು ಕಲಿಯುತ್ತಾರೆ. ತುಂಬಾ ಜನ ಪೋಷಕರು ಒಲ್ಲದ ಮನಸ್ಸನಿಂದಲೇ ಇದಕ್ಕೆ ಒಪ್ಪಿಕೊಂಡು ತಮ್ಮ ಮಿಕ್ಕ ಜೀವನವನ್ನು ಸಾಗಿಸುತ್ತಿದ್ದಾರೆ. ಇದನ್ನು ತಮ್ಮ ವೈಯುಕ್ತಿಕ ಹಾನಿ ಎಂದು ಉದ್ರೇಕ ಹೊಂದುವ ಕೆಲವು ಜನ ಇಂಥ ವಿಪರೀತ ಕೃತ್ಯಗಳಿಗೆ ಇಳಿಯುತ್ತಾರೆ. ಅಂತ್ಯ ಮಾತ್ರ ಎಲ್ಲರಿಗೂ ದುರಂತ" ಎಂದಿದ್ದಾರೆ ದೇವ.

English summary
After a facebook user write a letter to Telangana caste killing victim Prans's wife Amrutha, many oneindia readers defend his views and many are opposed it. In his letter FB user has defended accused Maruthi Rao.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X