ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಟೋಬರ್ 17ರಿಂದ ತೇಜಸ್ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭ

|
Google Oneindia Kannada News

ನವದೆಹಲಿ, ಅಕ್ಟೋಬರ್ 12 : ತೇಜಸ್ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ಅಕ್ಟೋಬರ್ 17ರಿಂದ ಆರಂಭವಾಗಲಿದೆ ಎಂದು ರೈಲ್ವೆ ಇಲಾಖೆ ಘೋಷಣೆ ಮಾಡಿದೆ. ಖಾಸಗಿಯವರು ನಿರ್ವಹಣೆ ಮಾಡುವ ರೈಲು ತೇಜಸ್ ಆಗಿದೆ.

ಭಾರತೀಯ ರೈಲ್ವೆ ಈ ಕುರಿತು ಪ್ರಕಟಣೆ ಹೊರಡಿಸಿದೆ. ದೆಹಲಿ-ಲಕ್ನೋ ಮತ್ತು ಅಹಮದಾಬಾದ್- ಮುಂಬೈ ನಡುವೆ ಅಕ್ಟೋಬರ್ 17ರಿಂದ ತೇಜಸ್ ಎಕ್ಸ್‌ಪ್ರೆಸ್ ರೈಲು ಸಂಚಾರ ನಡೆಸಲಿದೆ ಎಂದು ಹೇಳಿದೆ.

ಕರ್ನಾಟಕಕ್ಕೆ ಮೊದಲ ತೇಜಸ್ ರೈಲು; ಮಾರ್ಗ, ವೇಳಾಪಟ್ಟಿಕರ್ನಾಟಕಕ್ಕೆ ಮೊದಲ ತೇಜಸ್ ರೈಲು; ಮಾರ್ಗ, ವೇಳಾಪಟ್ಟಿ

ಅಹಮದಾಬಾದ್-ಮುಂಬೈ ನಡುವೆ ಸಂಚಾರ ನಡೆಸುವ ತೇಜಸ್ ರೈಲಿಗೆ ಎರಡು ಹೊಸ ನಿಲ್ದಾಣಗಳನ್ನು ನೀಡಲಾಗಿದೆ. ಅಂಧೇರಿ ಮತ್ತು ಮುಂಬೈ ನಿಲ್ದಾಣಗಳಲ್ಲಿಯೂ ರೈಲು ನಿಲುಗಡೆಗೊಳ್ಳಲಿದೆ ಎಂದು ರೈಲ್ವೆ ಹೇಳಿದೆ.

ಭಾರತಕ್ಕೆ 100ಕ್ಕೂ ಅಧಿಕ ಹೊಸ ವಿಮಾನ ನಿಲ್ದಾಣ, ತೇಜಸ್ ರೈಲು ಭಾರತಕ್ಕೆ 100ಕ್ಕೂ ಅಧಿಕ ಹೊಸ ವಿಮಾನ ನಿಲ್ದಾಣ, ತೇಜಸ್ ರೈಲು

Tejas Express To Resume Services From October 17

ಕೋವಿಡ್ ಲಾಕ್ ಡೌನ್ ಘೋಷಣೆಯಾದ ಸಂದರ್ಭದಲ್ಲಿ ದೇಶದಲ್ಲಿ ರೈಲುಗಳ ಸಂಚಾರ ರದ್ದುಗೊಳಿಸಲಾಗಿತ್ತು. ಬಳಿಕ ಹಂತ-ಹಂತವಾಗಿ ರೈಲುಗಳನ್ನು ಓಡಿಸಲಾಗುತ್ತಿದೆ. ಈಗ ಖಾಸಗಿ ರೈಲುಗಳ ಸಂಚಾರಕ್ಕೂ ಅವಕಾಶ ನೀಡಲಾಗಿದೆ.

ತೇಜಸ್ ಎಕ್ಸ್‌ಪ್ರೆಸ್; ದೇಶದ 2ನೇ ಖಾಸಗಿ ರೈಲಿಗೆ ಹಸಿರು ನಿಶಾನೆತೇಜಸ್ ಎಕ್ಸ್‌ಪ್ರೆಸ್; ದೇಶದ 2ನೇ ಖಾಸಗಿ ರೈಲಿಗೆ ಹಸಿರು ನಿಶಾನೆ

ಬೇಡಿಕೆ ಹೆಚ್ಚಿರುವ ಮಾರ್ಗದಲ್ಲಿ ಮಾತ್ರ ರೈಲುಗಳನ್ನು ಓಡಿಸಲಾಗುತ್ತಿದೆ. ಸೆಪ್ಟೆಂಬರ್ 12ರಿಂದ 80 ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದೆ. ಲಾಕ್ ಡೌನ್ ಅವಧಿಯಲ್ಲಿ ತವರು ರಾಜ್ಯಕ್ಕೆ ಹೋಗಿರುವ ಕಾರ್ಮಿಕರು ವಾಪಸ್ ಬರಲು ಅನುಕೂಲವಾಗುವಂತೆ ರೈಲು ಓಡಿಸಲಾಗುತ್ತಿದೆ.

ಪ್ರಸ್ತುತ ಭಾರತೀಯ ರೈಲ್ವೆ 310 ವಿಶೇಷ ರೈಲು, 20 ಜೋಡಿ ಕ್ಲೋನ್ ರೈಲುಗಳನ್ನು ಓಡಿಸಲಾಗುತ್ತಿದೆ. ರೈಲುಗಳ ಸಂಚಾರ ಯಾವಾಗ ಸಾಮಾನ್ಯ ಸ್ಥಿತಿಗೆ ಬರಲಿದೆ? ಎಂಬುದು ಇನ್ನೂ ಅಂತಿಮಗೊಂಡಿಲ್ಲ.

ಲಕ್ನೋ ಮತ್ತು ದೆಹಲಿ ನಡುವೆ ದೇಶದ ಮೊದಲ ಖಾಸಗಿ ರೈಲು ತೇಜಸ್ ಸಂಚಾರವನ್ನು ಆರಂಭಿಸಿತ್ತು. ಮುಂಬೈ-ಅಹಮದಾಬಾದ್‌ ನಡುವಿನ ತೇಜಸ್ ರೈಲು ಸಂಚಾರಕ್ಕೆ 2020ರ ಜನವರಿಯಲ್ಲಿ ಚಾಲನೆ ಕೊಡಲಾಗಿತ್ತು.

English summary
Indian railways announced that Tejas express will resume its services from 17th October. Rail will run between Lucknow-New Delhi and Ahmedabad-Mumbai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X