• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶನಿವಾರ ತನಕ ತರುಣ್ ಗೆ ಮಧ್ಯಂತರ ಜಾಮೀನು

By Mahesh
|

ಪಣಜಿ, ನ.29: ತೆಹಲ್ಕಾ ಸುದ್ದಿಸಂಸ್ಥೆ ಸ್ಥಾಪಕ ಹಾಗೂ ಮುಖ್ಯ ಸಂಪಾದಕ ತರುಣ್ ತೇಜಪಾಲ್ ತನ್ನ ಸಹದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಿದ್ದಾರೆ. ಮಧ್ಯಾಹ್ನ 2.30 ಗಂಟೆ ತನಕ ತೇಜಪಾಲ್ ಅವರನ್ನು ಬಂಧಿಸುವಂತಿಲ್ಲ ಎಂದು ಕೋರ್ಟ್ ಹೇಳಿದೆ. ತೇಜಪಾಲ್ ಅವರಿಗೆ ಮಧ್ಯಂತರ ಜಾಮೀನು ನೀಡಲಾಗಿದೆ.

ಭಾರಿ ಭದ್ರತೆಯ ನಡುವೆ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಓಡಾಡಿ, ಪತ್ನಿ, ಪುತ್ರಿಯನ್ನು ಭೇಟಿ ಮಾಡಿದ ತೇಜಪಾಲ್ ಅವರು ಇಂಡಿಗೋ ವಿಮಾನ ಮೂಲಕ ಗೋವಾ ವಿಮಾನ ನಿಲ್ದಾಣ ಬಂದಿಳಿದ ತಕ್ಷಣ ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು.

ತೇಜಪಾಲ್ ಅವರನ್ನು ಬಸ್ ಮೂಲಕ ಕೋರ್ಟಿಗೆ ವಿಚಾರಣೆಗಾಗಿ ಕರೆದೊಯ್ಯಲಾಗಿದೆ. ಕೋರ್ಟಿನಲ್ಲಿ ಆಘಾತಕಾರಿ ಪ್ರಸಂಗ ನಡೆದ ವರದಿಯಾಗಿದೆ. ಪಣಜಿ ನ್ಯಾಯಾಲಯದಲ್ಲಿ ನಡೆದಿರುವ ವಿಚಾರಣೆಯಲ್ಲಿ ತೇಜ್ ಪಾಲ್ ಪರ ವಕೀಲರು ತರುಣ್ ತೇಜಪಾಲ್ ಅವರನ್ನು ಬಂಧಿಸುವ ಅವಶ್ಯಕತೆ ಇಲ್ಲ. ಅವರು ತನಿಖೆಗೆ ಪೂರಕವಾಗಿ ಸ್ಪಂದಿಸಲಿದ್ದಾರೆ. ಹೀಗಾಗಿ ಅವರನ್ನು ನ್ಯಾಯಾಂಗ ವಶಕ್ಕೆ ಪಡೆಯುವ ಅವಶ್ಯಕತೆ ಇಲ್ಲ ಎಂದು ವಾದಿಸಿದ್ದಾರೆ.ತೇಜಪಾಲ್ ಬಂಧನ, ಕೋರ್ಟಿನಲ್ಲಿನ ವಾದ ಪ್ರತಿವಾದದ ವಿವರಗಳ ಮುಖ್ಯಾಂಶ ಕೆಳಗಿದೆ:

* ಅತ್ಯಾಚಾರಕ್ಕೊಳಗಾದ ಮಹಿಳೆಯ ಹೆಸರನ್ನು ತೇಜಪಾಲ್ ಪರ ವಕೀಲರು ಕೋರ್ಟಿನಲ್ಲಿ ಬಹಿರಂಗಗೊಳಿಸಿದ್ದಾರೆ. ಈ ಆಘಾತಕಾರಿ ಪ್ರಸಂಗದ ನಂತರ ವಕೀಲರಿಗೆ ನ್ಯಾಯಮೂರ್ತಿಗಳು ಛೀಮಾರಿ ಹಾಕಿದ್ದಾರೆ.

* ಪಣಜಿ ವಿಮಾನ ನಿಲ್ದಾಣ: ಬಿಜೆಪಿ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ತರುಣ್ ತೇಜಪಾಲ್ ಅವರ ವಿರುದ್ಧ ಘೋಷಣೆ ಕೂಗಿ ಸ್ವಾಗತಿಸಿದರು.

* ತೆಹೆಲ್ಕಾ ಸಂಸ್ಥೆಯ ಆಂತರಿಕ ಇಮೇಲ್ ಗಳನ್ನು ಎಫ್ ಐಆರ್ ದಾಖಲಿಸಲು ಬಳಸುವುದು ಹೇಗೆ ಸಾಧ್ಯ ಎಂದು ತರುಣ್ ತೇಜಪಾಲ್ ಪ್ರಶ್ನಿಸಿದ್ದಾರೆ.

* ತನಿಖೆಗೆ ತೇಜಪಾಲ್ ಸಹಕರಿಸುತ್ತಿಲ್ಲ ಹೀಗಾಗಿ ಹೆಚ್ಚಿನ ವಿಚಾರಣೆ ನಡೆಸಲು ಅವರನ್ನು ತಮ್ಮ ವಶಕ್ಕೆ ನೀಡಬೇಕು ಎಂದು ಗೋವಾ ಪೊಲೀಸರು ಕೋರ್ಟಿಗೆ ಮನವಿ ಮಾಡಿದ್ದಾರೆ.

* ತೇಜಪಾಲ್ ಅವರು ನನ್ನ ಮೇಲೆ ಅತ್ಯಾಚಾರಕ್ಕಿಂತ ಹೆಚ್ಚಿನ ಪ್ರಮಾಣದ ಮಾನಸಿಕ, ದೈಹಿಕ ಹಿಂಸೆ ನೀಡಿದ್ದಾರೆ ಎಂದ ಸಂತ್ರಸ್ತೆ

* ಅತ್ಯಾಚಾರ ಪ್ರಕರಣದ ಸಂಪೂರ್ಣ ವರದಿ ನೀಡುವಂತೆ ಗೋವಾ ಸರ್ಕಾರ ಗೃಹ ಸಚಿವಾಲಯ ಪೊಲೀಸರಿಗೆ ಸೂಚಿಸಿದೆ.

* ಶುಕ್ರವಾರ ಬೆಳಗ್ಗೆ ಪಣಜಿ ಸೆಷನ್ಸ್ ಕೋರ್ಟ್ ನಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದ ತೇಜಪಾಲ್, ಮಧ್ಯಾಹ್ನ 2.30ರ ನಂತರ ವಿಚಾರಣೆ ನಡೆಸಲಾಯಿತು. ಶನಿವಾರ ಮುಂದಿನ ವಿಚಾರಣೆ ನಡೆಯುವವರೆಗೂ ತೇಜಪಾಲ್ ಬಂಧನ ಮಾಡದಂತೆ ಪೊಲೀಸರಿಗೆ ಸೂಚಿಸಿ ಮಧ್ಯಂತರ ಜಾಮೀನು ನೀಡಲಾಗಿದೆ.

* ನಿಗೂಢ ಸ್ಥಳಕ್ಕೆ ತೇಜಪಾಲ್ ಅವರನ್ನು ಸಾಗಿಸಲಾಗಿದ್ದು, ನಾಳೆ ಕೋರ್ಟ್ ವಿಚಾರಣೆಗೆ ಹಾಜರಾಗಲಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Tarun Tejpal gets interim relief in : The Panaji court granted interim protection from arrest till 2:30 pm. The sessions court will give its order on his interim bail application at 2.30 pm. Tejpal has been accused of sexually assaulting a woman colleague, filed an anticipatory bail plea in Sessions Court
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more