• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತೇಜಪಾಲ್, ಶೋಮಾಗೆ ಹೆಚ್ಚಿದ ಸಂಕಟ

By Mahesh
|

ಪಣಜಿ, ಡಿ. 9: ತೆಹೆಲ್ಕಾ ಸಂಸ್ಥೆಯ ಕಿರಿಯ ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿ ಬಂಧನಕ್ಕೊಳಗಾಗಿರುವ ತೆಹೆಲ್ಕಾ ಮಾಜಿ ಸಂಪಾದಕ ತರುಣ್ ತೇಜಪಾಲ್ ಸದ್ಯಕ್ಕೆ ಜೈಲಿನಲ್ಲಿದ್ದಾರೆ. ತೇಜಪಾಲ್ ಅವರ ಪುರುಷತ್ವ ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ. ಜತೆ ಇನ್ನೆರಡು ಪ್ರಕರಣಗಳಲ್ಲಿ ಫೇಲ್ ಆಗಿದ್ದಾರೆ. ಹೌದು ತೇಜಪಾಲ್ ಮೇಲೆ ಮತ್ತೆರಡು ಪ್ರಕರಣ ದಾಖಲಾಗಿದೆ.

ತನ್ನ ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬಂಧನ ಕ್ಕೊಳಗಾಗಿರುವ ತೆಹಲ್ಕಾ ಸ್ಥಾಪಕ ಸಂಪಾದಕ ತರುಣ್ ತೇಜ್ ಪಾಲ್ ವಿರುದ್ಧ ಗೋವಾ ಕ್ರೈಮ್ ಬ್ರಾಂಚ್ ಪೊಲೀಸರು ಹೆಚ್ಚುವರಿ ಎರಡು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತೇಜಪಾಲ್ ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿದ್ದಂತಾಗಿದೆ.

ತೇಜ್ ಪಾಲ್ ವಿರುದ್ಧ ದಾಖಲಿಸಲಾಗಿರುವ ಪ್ರಥಮ ಮಾಹಿತಿ ವರದಿಗೆ ಸೆಕ್ಷನ್ 341(ಅಕ್ರಮ ತಡೆ) ಹಾಗೂ ಸೆಕ್ಷನ್ 342(ಅಕ್ರಮ ಬಂಧನ) ಎಂಬ ಭಾರತ ದಂಡ ಸಂಹಿತೆಯ ಹೆಚ್ಚುವರಿ ಎರಡು ಪರಿಚ್ಛೇದಗಳನ್ನು ಸೇರಿಸಲಾಗಿದೆ ಎಂದು ಗೋವಾ ಪೊಲೀಸ್ ಮೂಲಗಳು ತಿಳಿಸಿವೆ.

ಸಂತ್ರಸ್ತೆಯ ಹೇಳಿಕೆ, ಸಾಕ್ಷಿ ಹಾಗೂ ಪ್ರಕರಣ ನಡೆದಿದೆ ಎಂದು ಹೇಳಲಾಗಿರುವ ಹಯಾತ್ ಹೊಟೇಲ್ ನ ಸಿಸಿಟಿವಿ ವೀಡಿಯೊ ತುಣುಕುಗಳನ್ನು ಆಧಾರವಾಗಿಟ್ಟುಕೊಂಡು ಹೆಚ್ಚುವರಿ ಸೆಕ್ಷನ್ ‌ಗಳನ್ನು ತೇಜ್ ಪಾಲ್ ವಿರುದ್ಧ ಪ್ರಯೋಗಿಸಲಾಗಿದೆ ಎಂದು ತೇಜ್ ಪಾಲ್ ರನ್ನು ತನಿಖೆ ನಡೆಸುತ್ತಿರುವ 45 ವರ್ಷದ ಸುನೀತಾ ಸಾವಂತ್ ಎಂಬ ಖಡಕ್ ಮಹಿಳಾ ಆಧಿಕಾರಿ ಹೇಳಿದ್ದಾರೆ. ಈ ನಡುವೆ ತೇಜ್ ಪಾಲ್ ಅವರ ಪೊಲೀಸ್ ಕಸ್ಟಡಿಯನ್ನು ಡಿ.10 ರವರೆಗೆ ವಿಸ್ತರಿಸಿ ಕೋರ್ಟ್ ಆದೇಶಿಸಿದೆ.

ಶೋಮಾ ವಿಚಾರಣೆ

ಶೋಮಾ ವಿಚಾರಣೆ

ತೆಹಲ್ಕಾದ ಸ್ಥಾಪಕ ಸಂಪಾದಕ ತರುಣ್ ತೇಜ್ ಪಾಲ್ ಸಹೋದ್ಯೋಗಿ ಯುವತಿಗೆ ಲೈಂಗಿಕ ದೌರ್ಜನ್ಯ ನೀಡಿರುವ ಪ್ರಕರಣದಲ್ಲಿ ಸಂಸ್ಥೆಯ ಮಾಜಿ ವ್ಯವಸ್ಥಾಪಕ ಸಂಪಾದಕಿ ಶೋಮಾ ಚೌಧರಿಯನ್ನು ಗೋವಾ ಕ್ರೈಂ ಬ್ರಾಂಚ್ ಪೊಲೀಸರು ತನಿಖೆಗೊಳಪಡಿಸಿದ್ದಾರೆ. ಸುಮಾರು ನಾಲ್ಕು ಗಂಟೆಗಳ ಕಾಲ ವಿಚಾರಣೆ ನಡೆಯಿತು.

ಹೇಳಿಕೆ ದಾಖಲಿಸಿದ ಶೋಮಾ

ಹೇಳಿಕೆ ದಾಖಲಿಸಿದ ಶೋಮಾ

ಶೋಮಾ ಅವರು ತಮ್ಮ ಹೇಳಿಕೆಯನ್ನು ಮುಖ್ಯನ್ಯಾಯಾಂಗ ಮ್ಯಾಜಿಸ್ಟ್ರೇಟ್ ಸಾರಿಕಾ ಫಲ್ದೇಸಾಯಿ ಅವರಿಗೆ ನೀಡಿದ ನಂತರ ಆಕೆ ವಿಚಾರಣೆ ನಡೆಸಲಾಯಿತು. ತರುಣ್ ತೇಜ್ ಪಾಲ್ ಹಾಗೂ ಯುವ ಪತ್ರಕರ್ತೆ ನಡುವೆ ನಡೆದ ಇಮೇಲ್ ಸಂದೇಶ ರವಾನೆಯ ಬಗ್ಗೆ ಶೋಮಾರಲ್ಲಿ ಪ್ರಶ್ನಿಸಲಾಯಿತು ಎಂದು ಗೋವಾ ಪೊಲೀಸರು ತಿಳಿಸಿದ್ದಾರೆ.

ಲ್ಯಾಪ್ ಟಾಪ್ ವಶಕ್ಕೆ

ಲ್ಯಾಪ್ ಟಾಪ್ ವಶಕ್ಕೆ

ತೇಜ್ ಪಾಲ್ ಹಾಗೂ ಶೋಮಾ ಚೌಧರಿ ಅವರು ಬಳಸುತ್ತಿದ್ದ ಲ್ಯಾಪ್ ಟಾಪ್ ಮತ್ತು ಇನ್ನಿತರ ವಿದ್ಯುನ್ಮಾನ ಉಪಕರಣಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲು ಕ್ರೈಂ ಬ್ರಾಂಚ್ ಪೊಲೀಸರು ಮುಂದಾಗಿದ್ದಾರೆ. ತೇಜ್ ಪಾಲ್ ಬಳಸುತ್ತಿದ್ದ ಮೊಬೈಲ್ ಫೋನ್‌ನ್ನೂ ವಿಧಿವಿಜ್ಞಾನ ಪರಿವೀಕ್ಷಣೆಗೆ ಕಳುಹಿಸಿಕೊಡಲಾಗುವುದು ಎಂದು ತಿಳಿದು ಬಂದಿದೆ.

ಪ್ರಶ್ನೆಗಳ ಸುರಿಮಳೆ

ಪ್ರಶ್ನೆಗಳ ಸುರಿಮಳೆ

ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶೋಮಾ, ನನಗೆ ಸುಮಾರು 50 ಕ್ಕೂ ಹೆಚ್ಚು ಪ್ರಶ್ನೆಗಳನ್ನು ನೀಡಲಾಗಿತ್ತು. ಎಲ್ಲಕ್ಕೂ ಸಮರ್ಥವಾಗಿ ಉತ್ತರಿಸಿದ್ದೇನೆ. ಈ ಪ್ರಕರಣದಲ್ಲಿ ನಾನು ಮಾಧ್ಯಮಗಳ ಜತೆ ಸಹಕರಿಸುತ್ತಾ ಬಂದಿದ್ದೇನೆ. ಆದರೆ, ನನ್ನ ಪಾತ್ರದ ಬಗ್ಗೆ ಸರಿಯಾಗಿ ವರದಿ ಬಂದಿಲ್ಲ ಹೀಗಾಗಿ ನಾನು ತೆಹೆಲ್ಕಾ, ತೇಜಪಾಲ್, ಈ ಇಡೀ ಪ್ರಕರಣದ ಬಗ್ಗೆ ಹೆಚ್ಚಿನ ವಿಷಯ ಹಂಚಿಕೊಳ್ಳುವುದಿಲ್ಲ ಎಂದಿದ್ದಾರೆ.

ಶೋಮಾ ಅವರು ತೇಜಪಾಲ್ ಹಾಗೂ ಸಂತ್ರಸ್ತೆ ಇಮೇಲ್ ಬಗ್ಗೆ ಬಂದ ಪ್ರಶ್ನೆಗಳಿಗೆ ಸರಿ ಉತ್ತರ ನೀಡಿಲ್ಲ ಎಂದು ತಿಳಿದು ಬಂದಿದೆ.

English summary
After recording her statement in the Tarun Tejpal sexual assault case before the Judicial Magistrate First Class Sarika Phaldesai for about seven hours, Tehelka's Ex-Managing Editor Shoma Chaudhary was questioned by the Goa Crime Branch for almost four hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X