ಪತ್ನಿ ಜತೆಗಿನ ಸರಸ ಆನ್ ಲೈನ್ ನಲ್ಲಿ LIVE ನೀಡಿದ್ದ ಪತಿ ಬಂಧನ

Posted By:
Subscribe to Oneindia Kannada

ಹೈದರಾಬಾದ್, ಏಪ್ರಿಲ್ 14: ಇಲ್ಲಿನ ಸಾಫ್ಟ್ ವೇರ್ ಇಂಜಿನಿಯರ್ ಒಬ್ಬ ತನ್ನ ಪತ್ನಿಯೊಂದಿಗೆ ಸರಸವಾಡುತ್ತಿದ್ದುದನ್ನು ಅಶ್ಲೀಲ ವೆಬ್ ಸೈಟ್ ಗಳಿಗೆ ಲೈವ್ ನೀಡಿದ್ದ ಹಿನ್ನೆಲೆಯಲ್ಲಿ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನ ಹೆಸರು ಹಾಗೂ ಇತರ ವಿವರಗಳನ್ನು ಪೊಲೀಸರು ನೀಡಿಲ್ಲ.

ಇಂಜಿನಿಯರ್ ನ 28 ವರ್ಷದ ಹೆಂಡತಿ ನೀಡಿದ ದೂರಿನ ಆಧಾರದಲ್ಲಿ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ, ತ್ರಿಷೂರ್ ನಲ್ಲಿದ್ದ ಆ ಇಂಜಿನಿಯರ್ ನನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ, ಆ ಪತಿಯು ತಾನು ಮಾಡುತ್ತಿದ್ದ ಕಳ್ಳಾಟವನ್ನು ಒಪ್ಪಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

Techie live streams private acts with wife, arrested

ಏನಾಗಿತ್ತು?:ಪತ್ನಿಯೊಂದಿಗೆ ಮಿಲನಗೊಳ್ಳುತ್ತಿದ್ದ ಪ್ರತಿ ಸಂದರ್ಭಕ್ಕೂ ಮುನ್ನ ಬೆಡ್ ರೂಮಿನಲ್ಲಿದ್ದ ಲ್ಯಾಪ್ ಟಾಪ್ ಅನ್ನು ಆನ್ ಮಾಡಿ ಯಾವುದೋ ಅಶ್ಲೀಲ ವೆಬ್ ಸೈಟ್ ಗಳಿಗೆ ನೇರ ಪ್ರಸಾರ ನೀಡುವಂತೆ ಆನ್ ಲೈನ್ ಮೂಲಕ ವ್ಯವಸ್ಥೆ ಮಾಡಿರುತ್ತಿದ್ದ.

ಈತನ ಸಂಚು ಅರಿಯದ ಪತ್ನಿ, ಪತಿಯ ಕಳಪೆ ಮೋಹಕ್ಕೆ ಮನಸೋತು ಒಲಿದುಬರುತ್ತಿದ್ದಳು. ಆಗ, ಸುಮ್ಮನೇ ಲ್ಯಾಪ್ ಟಾಪ್ ನಲ್ಲಿ ಸಿನಿಮಾವೊಂದನ್ನು ಹಾಕಿ ಅದನ್ನು ನೋಡುವಂತೆ ಪ್ರೇರೇಪಿಸುತ್ತಿದ್ದ. ಆದರೆ, ಆಕೆಗೆ ಗೊತ್ತಿಲ್ಲದಂತೆಯೇ ವೆಬ್ ಕ್ಯಾಮೆರಾ ಆನ್ ಆಗಿರುತ್ತಿತ್ತು. ಆ ಹೊತ್ತಿನಲ್ಲಿ ಪತ್ನಿಯೊಂದನೆ ಆತ ರೊಮ್ಯಾನ್ಸ್ ಆರಂಭಿಸುತ್ತಿದ್ದ. ಆಗ ಅಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆಯೂ ನೇರವಾಗಿ ಆ ಅಶ್ಲೀಲ ವೆಬ್ ಸೈಟ್ ಗಳ ಮೂಲಕ ಅದರ ನೋಡುಗರಿಗೆ ಪ್ರಸಾರವಾಗುತ್ತಿತ್ತು.

ಇದಲ್ಲದೆ, ಈ ಎಲ್ಲಾ ಚಟುವಟಿಕೆಗಳನ್ನು ರೆಕಾರ್ಡ್ ಕೂಡಾ ಮಾಡಿಕೊಳ್ಳುತ್ತಿದ್ದ ಆತ, ಆ ವೀಡಿಯೋ ತುಣುಕುಗಳನ್ನು ಇತರೆ ಅಸಭ್ಯ ವೆಬ್ ಸೈಟ್ ಗಳಿಗೆ ಮಾರಿಕೊಳ್ಳುತ್ತಿದ್ದ ಎಂದು ಹೇಳಲಾಗಿದೆ.

ಪತ್ತೆಯಾಗಿದ್ದು ಹೇಗೆ?:ಪತ್ನಿಯ ಸ್ನೇಹಿತೆಯೊಬ್ಬರು ಆನ್ ಲೈನ್ ನಲ್ಲಿ ಈ ವೀಡಿಯೋಗಳು ಲಭ್ಯವಾಗುತ್ತಿರುವುದನ್ನು ಕಂಡು ತಕ್ಷಣವೇ ಅದನ್ನು ಸಂತ್ರಸ್ಥೆಗೆ ತಿಳಿಸಿದ್ದಾರೆ. ಆದರೆ, ಮೊದಲಿಗೆ ಆಕೆ ಅದನ್ನು ನಂಬಿಲ್ಲ. ತನ್ನಂತೇ ಇರುವ ಯಾರೋ ಅದರಲ್ಲಿ ಇರಬಹುದು ಎಂದು ತಿಳಿದು ಸುಮ್ಮನಾಗಿದ್ದಾರೆ.

ಆದರೆ, ಒಂದು ದಿನ ಸ್ನೇಹಿತೆಯ ಬಲವಂತದ ಮೇರೆಗೆ ಆ ವೀಡಿಯೋಗಳನ್ನು ತಾನೇ ನೋಡಿದ ನಂತರ, ಗಂಡನ ಕರಾಳ ಮುಖದ ಪರಿಚಯವಾಗಿ ಕೋಪಗೊಂಡು ಪೊಲೀಸರಿಗೆ ದೂರು ನೀಡಿದ್ದಾಳೆಂದು ಮೂಲಗಳು ಹೇಳಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A software engineer has been arrested for secretly recording intimate moments with his wife and streaming them live on a porn site using his laptop. The engineer, who was arrested last week, has been sent to judicial custody
Please Wait while comments are loading...