ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೀಮಾಂಧ್ರದ ಮೊದಲ ಸಿಎಂ ಆಗಿ ಚಂದ್ರಬಾಬು ನಾಯ್ಡು

By Mahesh
|
Google Oneindia Kannada News

ಗುಂಟೂರು, ಜೂ. 8: ಸೀಮಾಂಧ್ರದ ಮೊದಲ ಮುಖ್ಯಮಂತ್ರಿಯಾಗಿ ತೆಲುಗುದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ಭಾನುವಾರ ಪ್ರಮಾಣ ವಚನ ಸ್ವೀಕರಿಸಲು ವೇದಿಕೆ ಸಿದ್ಧವಾಗಿದೆ. ಈ ಕಾರ್ಯಕ್ರಮಕ್ಕಾಗಿ ಕೇಂದ್ರ ಸಚಿವರು, ಆರು ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ಅನೇಕ ಗಣ್ಯರು ಆಗಮಿಸುತ್ತಿದ್ದಾರೆ.

ಗುಂಟೂರಿನಲ್ಲಿ ನಡೆಯಲಿರುವ ಸಮಾರಂಭಕ್ಕೆ ವೈಎಸ್ ಆರ್ ಕಾಂಗ್ರೆಸ್ ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ ಗೈರು ಹಾಜರಾಗಲಿದ್ದಾರೆ ಎಂಬ ಸುದ್ದಿಯಿದೆ. ಈ ನಡುವೆ ಚಂದ್ರಬಾಬು ನಾಯ್ಡು ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ತೆಲುಗು ದೇಶಂ ಪಕ್ಷ ಮಾಡುತ್ತಿರುವ ವೆಚ್ಚದ ಕುರಿತು ಪ್ರತಿಪಕ್ಷಗಳು ಆಕ್ಷೇಪವೆತ್ತಿವೆ. ಚಂದ್ರಬಾಬು ನಾಯ್ಡು ಅವರು ಅನಗತ್ಯವಾಗಿ ಕೋಟ್ಯಂತರ ರುಪಾಯಿಗಳನ್ನು ವೆಚ್ಚಮಾಡುತ್ತಿದ್ದಾರೆ. ಪ್ರತಿಜ್ಞಾ ವಿಧಿ ಸಮಾರಂಭಕ್ಕೆ ಕೋಟ್ಯಂತರ ಹಣ ವ್ಯಯಿಸುವ ಅಗತ್ಯವಿರಲಿಲ್ಲ ಎಂದು ಟೀಕಿಸಿವೆ.

ಈ ನಡುವೆ ವಚನ ಸಮಾರಂಭಕ್ಕೆ ಈಗಾಗಲೇ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಸುಮಾರು 30 ಕೋಟಿ ರುಪಾಯಿ ವೆಚ್ಚದಲ್ಲಿ ಸಮಾರಂಭಕ್ಕೆ ಸಿದ್ಧತೆ ನಡೆಸಲಾಗಿದೆ. ಕಾರ್ಯಕ್ರಮಕ್ಕೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ಸಿನಿಮಾ ನಟರು, ಹಿರಿಯ ರಾಜಕಾರಣಿಗಳು ಸೇರಿದಂತೆ ಕೇಂದ್ರ ಸಚಿವರನ್ನು ಆಹ್ವಾನಿಸಲಾಗಿದೆ. [ತೆಲಂಗಾಣ ಉದಯ, ಸಿಂಗಾರಗೊಂಡ ಹೈದರಾಬಾದ್]

ಅಲ್ಲದೆ ಕಾರ್ಯಕ್ರಮಕ್ಕೆ ಸುಮಾರು 5 ಲಕ್ಷ ಜನರು ಭಾಗವಹಿಸುವ ನಿರೀಕ್ಷೆಯಿದೆ. ಹೀಗಾಗಿ ಗುಂಟೂರು ಸಮೀಪ ಬಂದ ಅತಿಥಿಗಳಿಗಾಗಿ ಮತ್ತು ಟಿಡಿಪಿ ಕಾರ್ಯಕರ್ತರಿಗಾಗಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದೆ. ಸಮಾರಂಭದ ಸಿದ್ಧತೆ ಚಿತ್ರಗಳು, ಗಣ್ಯರ ವಿವರ, ಕ್ಯಾಬಿನೆಟ್ ನಲ್ಲಿ ಯಾರಿಗೆ ಸಿಕ್ಕಿದೆ ಸ್ಥಾನ ಎಂಬೆಲ್ಲಾ ಮಾಹಿತಿ ಮುಂದೆ ಓದಿ...

ಚಂದ್ರಬಾಬು ನಾಯ್ಡು ಪ್ರಮಾಣ ವಚನ ಲೈವ್

ಸೀಮಾಂಧ್ರದ ಮೊದಲ ಮುಖ್ಯಮಂತ್ರಿಯಾಗಿ ತೆಲುಗುದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ಭಾನುವಾರ ಪ್ರಮಾಣ ವಚನ ಸ್ವೀಕರಿಸಲು ವೇದಿಕೆ ಸಿದ್ಧವಾಗಿದೆ.

ಭಾನುವಾರ ಪ್ರಮಾಣ ವಚನಕ್ಕೆ ಶುಭ ಸಮಯ

ಭಾನುವಾರ ಪ್ರಮಾಣ ವಚನಕ್ಕೆ ಶುಭ ಸಮಯ

ಸೀಮಾಂಧ್ರದ ರಾಜ್ಯಪಾಲ ಇ.ಎಸ್.ಎಲ್ ನರಸಿಂಹನ್ ಅವರು ಸರಿಯಾಗಿ 7.27 ಸಮಯಕ್ಕೆ ಚಂದ್ರಬಾಬು ನಾಯ್ಡುಗೆ ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ. ವಿಜಯವಾಡ ಹಾಗೂ ಗುಂಟೂರು ಮಧ್ಯದಲ್ಲಿರುವ ನಂಬೂರು ಗ್ರಾಮದ ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾಲಯದ 70 ಎಕರೆ ಭೂಮಿಯಲ್ಲಿ ಸಮಾರಂಭ ಆಯೋಜನೆಗೊಂಡಿದೆ.

ಗಣ್ಯಾತಿಗಣ್ಯರ ಆಗಮನದ ನಿರೀಕ್ಷೆ

ಗಣ್ಯಾತಿಗಣ್ಯರ ಆಗಮನದ ನಿರೀಕ್ಷೆ

ಹಿರಿಯ ನಾಯಕರಾದ ಎಲ್ ಕೆ ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ನಿರ್ಮಲಾ ಸೀತಾರಾಮನ್ ಮತ್ತು ಅರುಣ್ ಜೇಟ್ಲಿ, ಪ್ರಕಾಶ್ ಜಾವಡೇಕರ್, ಸದಾನಂದ ಗೌಡ, ಪಿಯೂಷ್ ಗೋಯಲ್ ಅವರು ಭಾಗವಹಿಸುವ ಸಾಧ್ಯತೆ ಇದೆ.

ಇದಲ್ಲದೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಛತ್ತೀಸ್ ಗಡ ಮುಖ್ಯಮಂತ್ರಿ ರಮಣ್ ಸಿಂಗ್, ಮನೋಹರ್ ಪಾರಿಕ್ಕರ್, ಪ್ರಕಾಶ್ ಸಿಂಗ್ ಬಾದಲ್, ಆನಂದಿಬೆನ್ ಪಟೇಲ್ ಅವರನ್ನೂ ಪ್ರತಿಜ್ಞಾವಿಧಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.

ಜೂ.ಎನ್.ಟಿ.ಆರ್, ಜನಸೇನಾ ಪಕ್ಷದ ಸಂಸ್ಥಾಪಕ ಮತ್ತು ನಟ ಪವನ್ ಕಲ್ಯಾಣ್, ಹಿಂದೂಪುರ ಕ್ಷೇತ್ರದ ಶಾಸಕ ಮತ್ತು ನಟ ಬಾಲಕೃಷ್ಣ ಸೇರಿದಂತೆ ಖ್ಯಾತ ತೆಲುಗು ಸಿನಿಮಾ ನಟರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.

ಸೀಮಾಂಧ್ರದ ವಿಸ್ತಾರ, ಜನಸಂಖ್ಯೆ

ಸೀಮಾಂಧ್ರದ ವಿಸ್ತಾರ, ಜನಸಂಖ್ಯೆ

ಸೀಮಾಂಧ್ರದ ವಿಸ್ತಾರ 2,75,045 ಕಿ.ಮೀ. ತೆಲಂಗಾಣ ಒಡೆದು 1,14,840 ಕಿ.ಮೀ. ಪ್ರತ್ಯೇಕ ರಾಜ್ಯವಾಗಿರುವುದರಿಂದ ಆಂಧ್ರಪ್ರದೇಶದ ವಿಸ್ತೀರ್ಣ 1,60,205 ಕಿ.ಮೀ.ಕರ್ನಾಟಕದ ಒಟ್ಟು ವಿಸ್ತೀರ್ಣ 1,94,791 ಕಿ.ಮೀ.ನಷ್ಟು ಇದೆ. ಹೊಸ ಆಂಧ್ರ ರಾಜ್ಯ ಕೇರಳಕ್ಕಿಂತ ಸ್ವಲ್ಪ ದೊಡ್ಡ ರಾಜ್ಯ ಎನಿಸಲಿದೆ. ಜನಸಂಖ್ಯೆ 5 ಕೋಟಿ ದಾಟಬಹುದು

ಸೀಮಾಂಧ್ರ ರಾಜ್ಯ ಜಿಲ್ಲೆಗಳ ಸಂಖ್ಯೆ 13

ಸೀಮಾಂಧ್ರ ರಾಜ್ಯ ಜಿಲ್ಲೆಗಳ ಸಂಖ್ಯೆ 13

ಸೀಮಾಂಧ್ರ ಹಾಗೂ ತೆಲಂಗಾಣಕ್ಕೆ 10 ವರ್ಷಕಾಲ ಹೈದರಾಬಾದ್ ಜಂಟಿ ರಾಜಧಾನಿಯಾಗಲಿದೆ.
ಸೀಮಾಂಧ್ರ ರಾಜ್ಯ: ಜಿಲ್ಲೆ 13:ಶ್ರೀಕಾಕುಳಂ, ವಿಜಯನಗರಂ, ವಿಶಾಖಪಟ್ಟಣ, ಪೂರ್ವಗೋದಾವರಿ, ಪಶ್ಚಿಮಗೋದಾವರಿ, ಕೃಷ್ಣಾ, ಗುಂಟೂರು, ಪ್ರಕಾಶಂ, ನೆಲ್ಲೂರು, ಚಿತ್ತೂರು, ಕಡಪ, ಕರ್ನೂಲು, ಅನಂತಪುರ
ಒಟ್ಟು ವಿಧಾನಸಭೆ ಸದಸ್ಯರ ಸಂಖ್ಯೆ: 175, ಒಟ್ಟು ಲೋಕಸಭಾ ಕ್ಷೇತ್ರಗಳು: 25

ಸೀಮಾಂಧ್ರಕ್ಕೆ ಇನ್ಮುಂದೆ ಇಬ್ಬರು ಡಿಸಿಎಂಗಳು

ಸೀಮಾಂಧ್ರಕ್ಕೆ ಇನ್ಮುಂದೆ ಇಬ್ಬರು ಡಿಸಿಎಂಗಳು

ಕೆ.ಇ ಕೃಷ್ಣಮೂರ್ತಿ ಹಾಗೂ ಚಿನ್ನರಾಜಪ್ಪ ಅವರು ಉಪ ಮುಖ್ಯಮಂತ್ರಿಗಳಾಗಲಿದ್ದಾರೆ. ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಹಿಂದುಳಿದ ವರ್ಗ ಹಾಗೂ ಕಾಪು ಸಮುದಾಯಕ್ಕೆ ಸೇರಿದವರಿಗೆ ಸ್ಥಾನ ಕಲ್ಪಿಸಲಾಗಿದೆ.

ಚಂದ್ರಬಾಬು ಸಂಪುಟದಲ್ಲಿ ಯಾರಿಗೆ ಸ್ಥಾನ?

ಚಂದ್ರಬಾಬು ಸಂಪುಟದಲ್ಲಿ ಯಾರಿಗೆ ಸ್ಥಾನ?

ಟಿಡಿಪಿ ನಾಯಕರದ ವೈ ರಾಮಕೃಷ್ಣುಡು(ಎಂಎಲ್ಸಿ), ಬಿ ಗೋಪಾಲಕೃಷ್ಣ ರೆಡ್ಡಿ, ಪೆರಿಟಾಲ ಸುನಿತಾ, ಪಿ ರಘುನಾಥ್ ರೆಡ್ಡಿ ಕ್ಯಾಬಿನೆಟ್ ಸಚಿವರಾಗಲಿದ್ದಾರೆ. ಬಿಜೆಪಿಯಿಂದ ಕೆ. ಶ್ರೀನಿವಾಸ್, ಮಾಣಿಕ್ಯಲ ರಾವ್ ಸಂಪುಟ ಸೇರಲಿದ್ದಾರೆ.ನಾರಾಯಣ ಶಿಕ್ಷಣ ಸಂಸ್ಥೆಗಳ ಪಿ. ನಾರಾಯಣ ಆಯ್ಕೆ ಹಲವರಿಗೆ ಅಚ್ಚರಿ ಮೂಡಿಸಿದೆ.

ಟಿಡಿಪಿ ಗೆಲುವಿನ ಸಂಭ್ರಮ

ಟಿಡಿಪಿ ಗೆಲುವಿನ ಸಂಭ್ರಮ

ಆಂಧ್ರಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ 175 ಸ್ಥಾನಗಳಲ್ಲಿ 102 ಸ್ಥಾನಗಳಿಸಿ ಟಿಡಿಪಿ ಭರ್ಜರಿ ಬಹುಮತ ಗಳಿಸಿತ್ತು. ಬಿಜೆಪಿ ನಾಲ್ಕು ಸ್ಥಾನ ಪಡೆದಿತ್ತು. ಸೀಮಾಂಧ್ರ ಹಾಗೂ ತೆಲಂಗಾಣ ವಿಭಜನೆಗೂ ಮುನ್ನ ಚಂದ್ರಬಾಬುನಾಯ್ಡು ಅವರು 1995 ರಿಂದ 2004ರ ತನಕ ಆಂಧ್ರದ ಸಿಎಂ ಆಗಿದ್ದರು.

English summary
Telugu Desam Party (TDP) chief N. Chandrababu Naidu will take oath as the chief minister of Andhra Pradesh along with 18 ministers Sunday evening.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X