ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ನಾಲ್ಕು ಐಟಿ ಕಂಪನಿಗಳಲ್ಲಿನ ನಗದು ಮೊತ್ತವೆಷ್ಟು ಗೊತ್ತೆ?

By Srinath
|
Google Oneindia Kannada News

TCS, Infosys‌, Wipro HCL have combined cash of 900 crore Dollors
ನವದೆಹಲಿ, ಅ. 28: ದೇಶದ ಮಾಹಿತಿ ತಂತ್ರಜ್ಞಾನ (ಐಟಿ) ಕ್ಷೇತ್ರದಲ್ಲಿ ಅಗ್ರ ಸ್ಥಾನದಲ್ಲಿರುವ 4 ಕಂಪನಿಗಳ ಬಳಿ ಸದ್ಯ 900 ಕೋಟಿ ಡಾಲರ್‌ (ರೂ 56,000 ಕೋಟಿ) ನಗದು ಸಂಪತ್ತಿದೆ!

ಇದಿಷ್ಟೂ ಸಂಪತ್ತು ನೋಟಿನ ಸ್ವರೂಪದಲ್ಲಿ ಮತ್ತು ತಕ್ಷಣವೇ ನಗದು ಸ್ವರೂಪಕ್ಕೆ ಪರಿವರ್ತಿಸಿ ಕೊಳ್ಳಬಹುದಾದ ಬಾಂಡ್‌ ಗಳು, ಬ್ಯಾಂಕ್‌ ಠೇವಣಿಗಳು ಬೇಕೆಂದಾಗ ಮಾರಾಟ ಮಾಡಬಹುದಾದ ಹೂಡಿಕೆಗಳಲ್ಲಿ ಇರುವುದು ಗಮನಾರ್ಹ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಉತ್ತಮ ವಹಿವಾಟಿನ ಕಾರಣದಿಂದಾಗಿ ಉತ್ತಮ ಲಾಭದಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ (TCS‌), ಇನ್ಫೋಸಿಸ್‌ (Infosys)‌, ವಿಪ್ರೊ (Wipro) ಮತ್ತು ಎಚ್‌ಸಿಎಲ್‌ ಟೆಕ್ನಾಲಜೀಸ್‌ (HCL) ಕಂಪನಿಗಳೇ ಸದ್ಯ ಭಾರಿ ಪ್ರಮಾಣದ ನಗದೀಕರಿಸಬಹುದಾದ ಸಂಪತ್ತು ಹೊಂದಿವೆ. ಇದು ದೇಶದ ಐಟಿ ಉದ್ಯಮದ ಸಿರಿವಂತಿಕೆಗೆ ಸಾಕ್ಷಿಯಾಗಿದೆ.

ಹಣಕಾಸು ವರ್ಷದ ಆರಂಭದಲ್ಲಿ 800 ಕೋಟಿ ಡಾಲರುಗಳಷ್ಟಿದ್ದ ನಾಲ್ಕೂ ಕಂಪನಿಗಳ ಕ್ರೋಡೀಕೃತ ನಗದು ಸಂಪತ್ತು, ಆರು ತಿಂಗಳಲ್ಲಿಯೇ 100 ಕೋಟಿ ಡಾಲರುಗಳಷ್ಟು (ರೂ 6,200 ಕೋಟಿ) ಹೆಚ್ಚಿದೆ!

ಸೆಪ್ಟೆಂಬರ್ 30ರಲ್ಲಿ ಇನ್ಫೋಸಿಸ್‌ ಖಜಾನೆಯಲ್ಲಿ 431 ಕೋಟಿ ಡಾಲರಿಗೆ ಸಮನಾದ ನಗದು ಸಂಗ್ರಹವಿದ್ದರೆ, ವಿಪ್ರೊ ಬಳಿ 250 ಕೋಟಿ ಡಾಲರ್‌, ಟಿಸಿಎಸ್‌ ಬಳಿ 122 ಕೋಟಿ ಡಾಲರ್‌ ಮತ್ತು ಎಚ್‌ಸಿಎಲ್‌ ಬಳಿ 97.90 ಕೋಟಿ ಡಾಲರ್‌ ಮೊತ್ತಕ್ಕೆ ಸಮನಾದ ಹಣವಿತ್ತು.

English summary
TCS, Infosys‌, Wipro HCL have combined cash of 900 crore Dollors
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X