ಲಾಲುಗೆ ಸೇರಿದ 165 ಕೋಟಿ ರು. ಮೌಲ್ಯದ ಆಸ್ತಿ ಜಪ್ತಿ

Posted By:
Subscribe to Oneindia Kannada

ನವದೆಹಲಿ, ಸೆಪ್ಟೆಂಬರ್ 11: ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಹಾಗೂ ಅವರ ಸಂಬಂಧಿಕರಿಗೆ ಸಂಬಂಧಪಟ್ಟ ಸುಮಾರು 165 ಕೋಟಿ ರು. ಮೌಲ್ಯದ ಆಸ್ತಿಗಳನ್ನು ವಶಪಡಿಸಿಕೊಂಡಿರುವುದಾಗಿ ಆದಾಯ ತೆರಿಗೆ ಇಲಾಖೆ ತಿಳಿಸಿದೆ.

ದೆಹಲಿ ಹಾಗೂ ಬಿಹಾರದ ಅನೇಕ ಪ್ರಾಂತ್ಯಗಳಲ್ಲಿ 15ಕ್ಕೂ ಹೆಚ್ಚು ಇಂಥ ಸ್ಥಿರಾಸ್ತಿಗಳನ್ನು ತಾನು ವಶಪಡಿಸಿಕೊಂಡಿರುವುದಾಗಿ ಹೇಳಿರುವ ಇಲಾಖೆ, ಇವುಗಳಲ್ಲಿ ಕೆಲವು ನೇರವಾಗಿ ಲಾಲು ಹಾಗೂ ಅವರ ಸಂಬಂಧಿಕರ ಹೆಸರಿನಲ್ಲಿ ಇವೆ ಎಂದು ತಿಳಿಸಿದೆ.

ಇವುಗಳಲ್ಲಿ ಪ್ರತಿಷ್ಠಿತ ಪ್ರದೇಶವಾದ ದಕ್ಷಿಣ ದೆಹಲಿಯಲ್ಲಿರುವ ಐಶಾಮಿ ಬಂಗಲೆ, ಪಾಟ್ನಾದಲ್ಲಿ 12 ಸೈಟುಗಳು ಹಾಗೂ ಸುಮಾರು 3.5 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿರುವ ಶಾಪಿಂಗ್ ಮಾಲ್ ಒಂದನ್ನೂ ಇಲಾಖೆಯ ತನ್ನ ವಶಕ್ಕೆ ಪಡೆದಿರುವ ಸ್ಥಿರಾಸ್ತಿಗಳ ಪಟ್ಟಿಯಲ್ಲಿದೆ ಎನ್ನಲಾಗಿದೆ.

ಈ ಆಸ್ತಿಗಳಿಗೆ ಸಂಬಂಧಿಸಿದಂತೆ ಲಾಲು ಪ್ರಸಾದ್ ಯಾದವ್ ಅವರ ಸಂಬಂಧಿಗಳಾದ ಐವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಭ್ರಷ್ಟಾಚಾರದ ಮೂಲಕವೇ ಈ ಅಕ್ರಮ ಆಸ್ತಿ ಸಂಪಾದಿಸಿರುವುದಾಗಿ ತನ್ನ ವರದಿಯಲ್ಲಿ ಉಲ್ಲೇಖಿಸಿರುವ ಇಲಾಖೆ, ಈ ಐವರನ್ನೂ ಲಾಲು ಪ್ರಸಾದ್ ಯಾದವ್ ಅವರ ಭ್ರಷ್ಟಾಚಾರಗಳಿಗೆ ಕೈ ಜೋಡಿಸಿದ್ದಾರೆಂದು ಆರೋಪಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
More than a dozen properties worth around Rs. 165 crores spread across Delhi and Bihar allegedly belonging to the family of Bihar's veteran politician Lalu Yadav - has been seized by the Income Tax department, which is investigating assets cases against the family in several cities.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ