ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2 ಕೋಟಿಗೂ ಹೆಚ್ಚು ತೆರಿಗೆ ಆದಾಯ ಇದ್ದರೆ ಕನಿಷ್ಠ 39% ತೆರಿಗೆ

|
Google Oneindia Kannada News

ಈ ಬಾರಿ ಕೇಂದ್ರ ಬಜೆಟ್ ನಲ್ಲಿ ಪ್ರಸ್ತಾವ ಆಗಿರುವಂತೆ ಸರ್ ಚಾರ್ಜ್ ಜಾರಿಯಾದ ಮೇಲೆ, ಅತ್ಯಂತ ಶ್ರೀಮಂತ ವ್ಯಕ್ತಿಗಳ ಆದಾಯದಲ್ಲಿ ತೆರಿಗೆಗೆ ಕನಿಷ್ಠ 39% ಕಡಿತ ಆಗಲಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಮಂಡಿಸಿದ ಕೇಂದ್ರ ಬಜೆಟ್ ನಲ್ಲಿ, ಆದಾಯ ತೆರಿಗೆ ವ್ಯಾಪ್ತಿಯೊಳಗೆ ಬರುವಂತೆ ಎರಡು ಕೋಟಿಗಿಂತ ಹೆಚ್ಚಿನ ಆದಾಯ ಇದ್ದರೆ ಹೆಚ್ಚಿನ ಸರ್ ಚಾರ್ಜ್ ಪ್ರಸ್ತಾವ ಮಾಡಿದ್ದಾರೆ.

ನಿರ್ಮಲಾ ಚೊಚ್ಚಲ ಬಜೆಟ್ : ಯಾವುದು ಏರಿಕೆ ? ಯಾವುದು ಇಳಿಕೆ? ನಿರ್ಮಲಾ ಚೊಚ್ಚಲ ಬಜೆಟ್ : ಯಾವುದು ಏರಿಕೆ ? ಯಾವುದು ಇಳಿಕೆ?

ಎರಡು ಕೋಟಿಯಿಂದ ಐದು ಕೋಟಿ ತನಕ ಹಾಗೂ ಐದು ಕೋಟಿಗಿಂತ ಹೆಚ್ಚು ಆದಾಯ ಇರುವವರು ಕ್ರಮವಾಗಿ ಮೂರು ಪರ್ಸೆಂಟ್ ಮತ್ತು ಏಳು ಪರ್ಸೆಂಟ್ ಸರ್ ಚಾರ್ಜ್ ಏರಿಕೆ ಮಾಡಲಾಗಿದೆ. ಅತಿ ಹೆಚ್ಚು ಮೌಲ್ಯದ ಹೂಡಿಕೆದಾರರಿಗೆ ಇದು ದೊಡ್ದ ಹೊಡೆತ ನೀಡಲಿದೆ. ಈ ಏರಿಕೆ ಆದ ನಂತರ ದೊಡ್ಡ ಆದಾಯದವರ ತೆರಿಗೆ ದರವು ನಲವತ್ತೆರಡು ಪರ್ಸೆಂಟ್ ತನಕ ತಲುಪುತ್ತದೆ.

Taxable income over 2 crores observe higher surcharge, minimum 39 percent tax

ಆದಾಯ ತೆರಿಗೆ ಪಾವತಿ ಮಿತಿ ಬಗ್ಗೆ ನಿರ್ಮಲಾ ಬಜೆಟ್ ನಲ್ಲಿ ಏನಿದೆ? ಆದಾಯ ತೆರಿಗೆ ಪಾವತಿ ಮಿತಿ ಬಗ್ಗೆ ನಿರ್ಮಲಾ ಬಜೆಟ್ ನಲ್ಲಿ ಏನಿದೆ?

ಎರಡರಿಂದ ಐದು ಕೋಟಿ ಮಧ್ಯೆ ಆದಾಯ ಇರುವವರಿಗೆ ತೆರಿಗೆ ಪ್ರಮಾಣವು 39 ಪರ್ಸೆಂಟ್ ಆಗುತ್ತದೆ. ಇನ್ನು ಆದಾಯವು 5 ಕೋಟಿ ಮೀರಿದರೆ ಸರ್ ಚಾರ್ಜ್ ಏರಿಕೆ ನಂತರ 42.74 ಪರ್ಸೆಂಟ್ ತೆರಿಗೆ ಬೀಳುತ್ತದೆ. ಇನ್ನು ವಾರ್ಷಿಕವಾಗಿ ಬ್ಯಾಂಕ್ ಖಾತೆಯಿಂದ ಎರಡು ಕೋಟಿ ನಗದು ವಿಥ್ ಡ್ರಾ ಮಾಡಿದರೆ ಎರಡು ಪರ್ಸೆಂಟ್ ತೆರಿಗೆ ಬೀಳುತ್ತದೆ. ಇದರಿಂದ ಪಾರದರ್ಶಕತೆಗೆ ಅನುಕೂಲ ಆಗಲಿದ್ದು, ಡಿಜಿಟಲ್ ಪಾವತಿಗೆ ಪ್ರೋತ್ಸಾಹ ದೊರೆಯುತ್ತದೆ.

English summary
Union Budget 2019: Individual taxable income over 2 crores observe higher surcharge, minimum 39 percent tax. Here is the details of the story
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X