ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಿಳೆಯರ ಮತದಾನಕ್ಕಾಗಿ ಟಾಟಾ ಪುಶ್ ದಿ ಪಿನ್

By Mahesh
|
Google Oneindia Kannada News

ಬೆಂಗಳೂರು, ಮಾ.18: ಟಾಟಾ ಟಿ ಜಾಗೊ ರೆ 'ಪವರ್ ಆಫ್ 49' ಆಂದೋಲನ ಭಾರತೀಯ ಮಹಿಳೆಯರಲ್ಲಿ ತಮ್ಮ ಹಕ್ಕನ್ನು ಬಳಸಿಕೊಳ್ಳುವಂತೆ ಮನವಿ ಮಾಡುತ್ತಿದೆ. ತನ್ನ ಡಿಜಿಟಲ್ ಮಾಧ್ಯಮದ ಕಾರ್ಯಕ್ರಮ ಫುಶ್ ದಿ ಪಿನ್ ಮೂಲಕ ಇದಕ್ಕೆ ಉತ್ತೇಜನ ನೀಡುತ್ತಿದೆ. ಭಾರತದಲ್ಲಿ ಶೇ.49ರಷ್ಟು ಮಹಿಳೆಯರು ಮತದಾನದ ಹಕ್ಕು ಹೊಂದಿದ್ದಾರೆ.

ಮಹಿಳೆಯರನ್ನು ಜಾಗೃತಿಗೊಳಿಸಲು ಈ ಕಾರ್ಯಕ್ರಮ 3 ಮಾಧ್ಯಮಗಳಲ್ಲಿ ಲಭ್ಯವಿದ್ದು, ಭಾರತದ ಮಹಿಳೆಯರು ಜಾಗೋ ರೆ ಅಂತರ್ಜಾಲ ತಾಣದಲ್ಲಿ, ಎಸ್ ಎಂಎಸ್ ಮತ್ತು ಐವಿಆರ್ ಎಸ್ ಮೂಲಕ 'ಪುಶ್ ದಿ ಪಿನ್' ವೇದಿಕೆಯನ್ನು ಬಳಸಿಕೊಳ್ಳಬಹುದು. ಮಹಿಳೆ ತನ್ನ ಸ್ಥಳೀಯ ಮಟ್ಟದಲ್ಲಿರುವ ಸಮಸ್ಯೆಯೊಂದಿಗೆ ಸುಲಭವಾಗಿ ಪಿನ್ ಒತ್ತಬಹುದು. ಈ ಸ್ಥಳದ ಆಧಾರದಲ್ಲಿ ಪಿನ್ ‍ಕೋಡ್ ಆಧರಿಸಿ ಅವರ ಚುನಾವಣೆ ಕ್ಷೇತ್ರವನ್ನು ಪತ್ತೆ ಮಾಡಲಾಗುವುದು. ಒಟ್ಟಾರೆ ಪುಶ್ ದಿ ಪಿನ್ ಕಾರ್ಯಕ್ರಮ ಭಾರತೀಯ ಮಹಿಳೆಯರ ಸಮಸ್ಯೆಯನ್ನು ಎತ್ತಿ ಹಿಡಿಯಲಿದೆ. ಕಳೆದ ತಿಂಗಳು 6,00,000 ಪಿನ್ ಗಳನ್ನು ನಾವು ಸ್ವೀಕರಿಸಲಾಗಿದೆ.

Tata Global Beverages

ಈವರೆಗೆ ಐವಿಆರ್‍ಎಸ್ ಮೂಲಕ ಕರ್ನಾಟಕದ 15,798 ಮಹಿಳೆಯರು ತಮ್ಮ ಸಮಸ್ಯೆಯನ್ನು ಪಿನ್ ಮಾಡಿದ್ದಾರೆ. ಭದ್ರತೆ, ಮಹಿಳೆಯರ ವಿರುದ್ಧ ದೌರ್ಜನ್ಯ, ಹಣದುಬ್ಬರ, ಶಿಕ್ಷಣ ಮತ್ತು ಉದ್ಯೋಗ ಹಾಗೂ ಆರೋಗ್ಯ ಮತ್ತು ಸ್ವಚ್ಛತೆ ಪ್ರಮುಖ ಸಂಗತಿಗಳಾಗಿವೆ.

ಕರ್ನಾಟಕದ ಅಂಕಿ-ಅಂಶ:
* ಮಹಿಳಾ ಸುರಕ್ಷತೆ: 3531 ಪಿನ್ ಪುಶ್ ಆಗಿದೆ
* ಲೈಂಗಿಕ ದೌರ್ಜನ್ಯ: 3158
* ಬೆಲೆ ಏರಿಕೆ: 3247
* ಶಿಕ್ಷಣ ಮತ್ತು ನಿರುದ್ಯೋಗ: 2847
* ಆರೋಗ್ಯ ಮತ್ತು ಶೌಚಾಲಯ: 1036
* ಇತರೆ : 1979
* ಒಟ್ಟಾರೆ: 15798
source: IVRS

ಒಟ್ಟಾರೆಯಾಗಿ 'ಪುಶ್ ದಿ ಪಿನ್ ವೇದಿಕೆ' ಮಹಿಳೆಯರ ಧ್ವನಿಗೆ ಸಹಾಯ ಮಾಡಲು ಮುಂದಾಗಿದೆ. ಜಾಗೋರೆ ಪವರ್ ಆಫ್ 49 ವೇದಿಕೆ ಅಡಿಯಲ್ಲಿ ಪರಿಕಲ್ಪಿತ ಈ ಕಾರ್ಯಕ್ರಮ ಮಹಿಳೆಯರ ಹಕ್ಕನ್ನು ಎತ್ತಿ ಹಿಡಿಯಲಿದೆ.

ಪವರ್ ಆಫ್ 49 ಕುರಿತು : ಪವರ್ ಆಫ್ 49, ಜಾಗೋರೆಯ ಕಾರ್ಯಕ್ರಮವಾಗಿದ್ದು 2013ರ ಆಗಸ್ಟ್‍ನಲ್ಲಿ ಬಿಡುಗಡೆಗೊಂಡಿತು. ಮಹಿಳೆಯರ ಜಾಗೃತಿ, ದೇಶದಲ್ಲಿ ಶೇ.49ರಷ್ಟು ಮತದಾನದ ಹಕ್ಕು ಪಡೆದಿರುವ ಅವರ ಸ್ಥಾನದ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಸಿದ್ಧಗೊಂಡಿದ್ದು. ಟಾಟಾ ಸಮೂಹ ಇದಕ್ಕೆ ಬೆಂಬಲ ನೀಡುತ್ತಿದೆ. ಸಂಸ್ಥೆ ಹಲವಾರು ಸಮಾಜಿಕ ಸಂಗತಿಗಳೊಂದಿಗೆ ಹತ್ತಿರವಾಗಿ ಕೆಲಸ ಮಾಡುತ್ತಿರುವುದೇ ಇದಕ್ಕೆ ಕಾರಣ.

English summary
Tata Global Beverages, through their social awakening platform Jaago Re, and the Tata group launched the second phase of the ‘Power of 49’ campaign, aiming to make it one of India’s largest women-centric awareness campaigns in recent times with an intent to reach out to 100 million women.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X