ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಬಿಐ ನಿರ್ದೇಶಕನ 'ರೇಪ್' ಹೇಳಿಕೆಗೆ ತಿರುಗೇಟು

By Mahesh
|
Google Oneindia Kannada News

ಬೆಂಗಳೂರು, ನ.13: ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ನಿರ್ದೇಶಕ ರಂಜಿತ್ ಸಿನ್ಹಾ ಅವರು ರೇಪ್ ಹಾಗೂ ಬೆಟ್ಟಿಂಗ್ ಬಗ್ಗೆ ನೀಡಿದ ಹೇಳಿಕೆ ವಿವಾದಕ್ಕೆ ಎಡೆ ಮಾಡಿದೆ. 'ಬೆಟ್ಟಿಂಗ್ ನಿಯಂತ್ರಿಸಲಾಗದು ಎಂದ ಮೇಲೆ ರೇಪ್ ಕೂಡಾ ಅಷ್ಟೇ ತಡೆಗಟ್ಟಲು ಆಗದಿದ್ದರೆ ಎಂಜಾಯ್ ಮಾಡಬೇಕು' ಎಂದು ಸಿನ್ಹಾ ಹೇಳಿದ್ದಾರೆ.

ಹಲವು ರಾಜ್ಯಗಳಲ್ಲಿ ಲಾಟರಿ ಆಡುತ್ತಾರೆ, ಹಾಲಿಡೇ ರೆಸಾರ್ಟ್ ಗಳಲ್ಲಿ ಕ್ಯಾಸಿನೋಗಳಿವೆ. ಹಲವು ಜೂಜುಅಡ್ಡೆಗಳು ಅನಧಿಕೃತವಾಗಿ ನಡೆಯುತ್ತಲೇ ಇದೆ. ಕಪ್ಪು ಹಣದ ಬಗ್ಗೆ ಮಾತನಾಡುವ ಸರ್ಕಾರ ಏತಕ್ಕೆ ಬೆಟ್ಟಿಂಗ್ ದಂಧೆಯನ್ನು ಕಾನೂನಿನ ಚೌಕಟ್ಟಿಗೆ ತರಬಾರದು. ಇದರಿಂದ ಸರ್ಕಾರಕ್ಕೆ ತೆರಿಗೆ ಕೂಡಾ ಸಿಗುತ್ತದೆ. ಬೆಟ್ಟಿಂಗ್ ಅಧಿಕೃತಗೊಳಿಸುವುದರಿಂದ ಯಾವುದೇ ಹಾನಿಯಾಗುವುದಿಲ್ಲ. ಸರ್ಕಾರದ ಹದ್ದಿನ ಕಣ್ಣಿನಲ್ಲೇ ಎಲ್ಲವೂ ನಡೆಯುತ್ತದೆ. ನಿಷೇಧ ಜಾರಿಗೊಳಿಸಿ ಎಂದು ಹೇಳುವುದು ಸುಲಭ ಕಾರ್ಯಗತ ಜಾರಿಗೊಳಿಸುವುದು ಕಷ್ಟ ಎಂದಿದ್ದಾರೆ.

ರಂಜಿತ್ ಸಿನ್ಹಾ ಅವರ ಹೇಳಿಕೆಯನ್ನು ಮಹಿಳಾ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ. ಕಲುಷಿತ ಮನಸ್ಥಿತಿ ಹೊಂದಿರುವ ವ್ಯಕ್ತಿಗಳು ಮಾತ್ರ ಇಂಥ ಹೇಳಿಕೆ ನೀಡಲು ಸಾಧ್ಯ. ಸಿನ್ಹಾ ಅವರ ಹೇಳಿಕೆ ಸರ್ವಥಾ ಖಂಡನೀಯ ಎಂದು ಸಿಪಿಐ ಎಂ ನಾಯಕಿ ಬೃಂದಾ ಕಾರಟ್ ಕಿಡಿ ಕಾರಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ಈಗಾಗಲೇ ಸಿಬಿಐ ಎಂದರೆ ಕಾಂಗ್ರೆಸ್ ಸಂಸ್ಥೆ ಎಂದು ಕಿಚಾಯಿಸುವುದನ್ನು ಓದಿರುತ್ತೀರಿ. ಈಗ ಸಿಬಿಐ ನಿರ್ದೇಶಕರ ಹೇಳಿಕೆ ಬಗ್ಗೆ ಕಿರಣ್ ಮುಜಾಂದರ್ ಶಾ, ಕಿರಣ್ ಬೇಡಿ, ತಸ್ಮೀಮಾ ನಸ್ರೀನ್ ಸೇರಿದಂತೆ ಜನ ಸಾಮಾನ್ಯರ ಪ್ರತಿಕ್ರಿಯೆಯ ಅಸಮಗ್ರ ಸಂಗ್ರಹ ಇಲ್ಲಿದೆ ಓದಿ

ಕಿರಣ್ ಬೇಡಿ

ಸಾಮಾಜಿಕ ಕಾರ್ಯಕರ್ತೆ ಕಿರಣ್ ಬೇಡಿ ಅವರು ಸಿನ್ಹಾ ಹೇಳಿಕೆ ಖಂಡಿಸಿದ್ದಾರೆ

ವಿವಾದಿತ ಸಿನ್ಹಾ

ವಿವಾದಿತ ಸಿನ್ಹಾ

ಲಾಲೂ ಯಾದವ್ ಆರೋಪಿಯಾಗಿರುವ ಮೇವು ಹಗರಣದ ತನಿಖೆ ನಡೆಸುತ್ತಿದ್ದ ಬಿಸ್ವಾಸ್ ಅವರು ಸಲ್ಲಿಸಿದ್ದ ಮೂಲ ವರದಿಯನ್ನು ತಿರುಚಿ ಅಂದಿನ ಡಿಐಜಿ ಆಗಿದ್ದ ರಂಜಿತ್ ಸಿನ್ಹಾ ಅವರು, ಲಾಲೂ ಅವರಿಗೆ ಸಹಕಾರಿಯಾಗುವಂಥ ವರದಿಯನ್ನು ಪಟ್ನಾ ಹೈಕೋರ್ಟಿಗೆ ಸಲ್ಲಿಸಿದ್ದರು. ಅಂದು ಸಿಬಿಐ ಡೈರೆಕ್ಟರ್ ಆಗಿದ್ದ ಜೋಗಿಂದರ್ ಸಿಂಗ್ ಅವರು ಕೂಡ, ಹೈಕೋರ್ಟಿಗೆ ನೇರವಾಗಿ ವರದಿ ಸಲ್ಲಿಸದೆ ತಮಗೇ ವರದಿ ಸಲ್ಲಿಸಬೇಕೆಂದು ಆಗ್ರಹಿಸಿದ್ದರು.

ವಿಪರ್ಯಾಸವೊ, ದುರಂತವೋ

ವಿಪರ್ಯಾಸವೊ, ದುರಂತವೋ

ಅಂದು ಬಿಸ್ವಾಸ್ ಅವರಿಗೆ ಅಡ್ಡಗಾಲು ಹಾಕಿದ್ದ ರಂಜಿತ್ ಸಿನ್ಹಾ ಅವರೇ ಈಗ ಸಿಬಿಐನ ನಿರ್ದೇಶಕರಾಗಿದ್ದಾರೆ. 2012ರಲ್ಲಿ ಅವರನ್ನು ನಿರ್ದೇಶಕರನ್ನಾಗಿ ಮಾಡಿದ್ದಾಗ ಬಿಜೆಪಿಯಿಂದ ಭಾರೀ ಪ್ರತಿರೋಧ ವ್ಯಕ್ತವಾಗಿತ್ತು. ಅಚ್ಚರಿಯ ಸಂಗತಿಯೆಂದರೆ, ಬಿಜೆಪಿಯ ಶತ್ರುಘ್ನ ಸಿನ್ಹಾ ಮತ್ತು ರಾಮ್ ಜೇಠ್ಮಲಾನಿ ಅವರು ಸಿನ್ಹಾ ಅವರನ್ನು ಬೆಂಬಲಿಸಿದ್ದರು.

ಕಿರಣ್ ಮುಜಾಂದರ್ ಶಾ

ಸಿಬಿಐ ನಿರ್ದೇಶಕ ಸ್ಥಾನದಲ್ಲಿ ಮುಂದುವರೆಯಲು ಸಿನ್ಹಾ ಅನರ್ಹ ಎಂಅ ಬಯೋಕಾನ್ ಮುಖ್ಯಸ್ಥೆ ಕಿರಣ್ ಮುಜಾಂದರ್ ಶಾ

ತಸ್ಮಿಮಾ ನಸ್ರೀನ್

ಬಾಂಗ್ಲಾ ಲೇಖಕಿ ತಸ್ಮಿಮಾ ನಸ್ರೀನ್ ಅವರು ಪ್ರತಿಕ್ರಿಯೆ ನೀಡಿ ಇದು ನಂಬಲು ಅಸಾಧ್ಯ

ಸಿನ್ಹಾ ಹೇಳಿಕೆ ಪರಿಣಾಮ

ಸಿನ್ಹಾ ಹೇಳಿಕೆ ಪರಿಣಾಮ

ರಂಜಿತ್ ಸಿನ್ಹಾ ಅವರ ಹೇಳಿಕೆ ವೈಯಕ್ತಿಕ ಇದಕ್ಕೂ ಸಂಸ್ಥೆಗೂ ಯಾವುದೇ ಸಂಬಂಧವಿಲ್ಲ ಎಂದು ಸಿಬಿಐ ವಕ್ತಾರರು ಹೇಳಿಕೆ ನೀಡಬಹುದು. ಕುರ್ಚಿ ಭದ್ರವಾಗುತ್ತದೆ. ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.

ಸಿನ್ಹಾ ಹೇಳಿಕೆ ಗಂಭೀರವಾಗಿ ಪರಿಗಣಿಸಿದರೆ ಜೈಲಿನಲ್ಲಿರುವ ಎಲ್ಲಾ ರೇಪಿಸ್ಟ್ ಗಳನ್ನು ಹೊರಕ್ಕೆ ಬಿಡಬೇಕಾಗುತ್ತದೆ. ಅತ್ಯಾಚಾರ ಇನ್ಮುಂದೆ ಸಹಮತ ಸೆಕ್ಸ್ ಆಗಿ ಪರಿವರ್ತನೆಗೊಂಡು ಸಮಾಜದ ಸ್ವಾಸ್ಥ್ಯ ಕೆಡುತ್ತದೆ.

ಇಷ್ಟಕ್ಕೂ ಸಿನ್ಹಾ ಹೇಳಿಕೆಗೆ ಅವರ ಕುಟುಂಬದವರು ಏನು ಪ್ರತಿಕ್ರಿಯೆ ನೀಡುತ್ತಾರೆ. ಅವರು ಇದನ್ನು ಅನುಮೋದಿಸುತ್ತಾರೆಯೇ? ಎಂಬ ಪ್ರಶ್ನೆ ಎದ್ದು ಬಂದಿದೆ.

ನಿರ್ದೇಶಕನೇ ಹೀಗಾದರೆ?

ಸಿಬಿಐ ನಿರ್ದೇಶಕರೆ ಈ ರೀತಿ ಹೇಳಿಕೆ ನೀಡಿದರೆ ಇನ್ನು ಸಿಬಿಐ ಮೇಲೆ ಯಾವ ನಂಬಿಕೆ ಇಡಲು ಸಾಧ್ಯ

ಪಾಪ ಕಣ್ರಿ ಸಿಬಿಐ

ಹೈಕೋರ್ಟ್, ಸುಪ್ರೀಂಕೋರ್ಟ್, ಪ್ರತಿಪಕ್ಷಗಳು ಎಲ್ಲರೂ ಸಿಬಿಐ ಮೇಲೆ ಬಲಾತ್ಕಾರ ಮಾಡಿದ್ದಾರೆ ಪಾಪ

ಆಧುನಿಕ ವಾತ್ಸಾಯನ

ಸಿಬಿಐ ನಿರ್ದೇಶಕ ಸಿನ್ಹಾ ಏನು ಆಧುನಿಕ ವಾತ್ಸಾಯನನೇ?

ಸಿಬಿಐ ನಿರ್ದೇಶಕ ವಿಷಾದ

ಸಿಬಿಐ ನಿರ್ದೇಶಕ ವಿಷಾದ

ನಾನು ನೀಡಿದ್ದು ಉದ್ದೇಶ ಪೂರ್ವಕ ಹೇಳಿಕೆಯಾಗಿರಲಿಲ್ಲ. ಯಾರ ಮನಸ್ಸು ನೋಯಿಸುವ ಉದ್ದೇಶವೂ ನನಗಿಲ್ಲ. ಸಮಸ್ತ ಮಹಿಳೆಯರಿಗೆ ನನ್ನ ಕ್ಷಮೆ ಕೋರುತ್ತೇನೆ. ಮಹಿಳೆಯರ ಗೌರವಕ್ಕೆ ಚ್ಯುತಿ ಬರುವಂತೆ ಮಾತಾನಾಡಿದ್ದು ತಪ್ಪು ಎಂದು ಸಿನ್ಹಾ ತಪ್ಪ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ.

English summary
Central Bureau of Investigation (CBI) chief Ranjit Sinha has sparked a controversy by comparing the inability to implement anti-betting laws in sports to ‘enjoying rape’ if it cannot be fought.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X