ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿಯನ್ನು ‌ಪವಾರ್ ಬೆಂಬಲಿಸಿದ್ದಕ್ಕೆ ಸಿಟ್ಟಿಗೆದ್ದು ಪಕ್ಷ ತೊರೆದ ಸಂಸದ

|
Google Oneindia Kannada News

ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್ ಸಿಪಿ) ನಾಯಕ ತಾರೀಕ್ ಅನ್ವರ್ ತಮ್ಮ ಸಂಸದ ಸ್ಥಾನಕ್ಕೆ ಹಾಗೂ ಪಕ್ಷದ ಸದಸ್ಯತ್ವಕ್ಕೆ ಶುಕ್ರವಾರ ರಾಜೀನಾಮೆ ನೀಡಿದ್ದಾರೆ. ರಫೇಲ್ ಯುದ್ಧ ವಿಮಾನ ಖರೀದಿ ವಿಚಾರವಾಗಿ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ವ್ಯಕ್ತಪಡಿಸಿದ ನಿಲುವು ವಿರೋಧಿಸಿ ಈ ನಿರ್ಧಾರ ಮಾಡಿದ್ದಾರೆ.

ಬಿಹಾರದಲ್ಲಿರುವ ಎನ್ ಸಿಪಿಯ ಏಕೈಕ ಸಂಸದ ತಾರೀಕ್ ಅನ್ವರ್. ವಿರೋಧ ಪಕ್ಷಗಳು ಒಟ್ಟಾಗಿ ರಫೇಲ್ ಯುದ್ಧ ವಿಮಾನ ಖರೀದಿ ಬಗ್ಗೆ ತನಿಖೆಗೆ ಆಗ್ರಹಿಸುವ ಸನ್ನಿವೇಶದಲ್ಲಿ ಶರದ್ ಪವಾರ್ ಅವರು ಮೋದಿಯನ್ನು ಬೆಂಬಲಿಸಿ ನೀಡಿದ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಫೇಲ್ ಖರೀದಿ ಬಗ್ಗೆ ಮೋದಿಗೆ 6 ಪ್ರಶ್ನೆ ಮುಂದಿಟ್ಟ ಯಶವಂತ್ ಸಿನ್ಹಾರಫೇಲ್ ಖರೀದಿ ಬಗ್ಗೆ ಮೋದಿಗೆ 6 ಪ್ರಶ್ನೆ ಮುಂದಿಟ್ಟ ಯಶವಂತ್ ಸಿನ್ಹಾ

ಯುದ್ಧ ವಿಮಾನ ಖರೀದಿಯ ತಾಂತ್ರಿಕ ಮಾಹಿತಿ ಬಹಿರಗ ಮಾಡಬೇಕು ಎಂಬ ವಿರೋಧ ಪಕ್ಷಗಳ ಒತ್ತಾಯ ವಿವೇಕಯುತವಾದದ್ದಲ್ಲ ಎಂದು ಮರಾಠಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಶರದ್ ಪವಾರ್ ಹೇಳಿದ್ದರು. "ಮೋದಿ ಉದ್ದೇಶದ ಬಗ್ಗೆ ಜನರು ವೈಯಕ್ತಿಕವಾಗಿ ಅನುಮಾನ ಪಟ್ಟಿಲ್ಲ" ಎಂದು ಅವರು ಅಭಿಪ್ರಾಯ ಪಟ್ಟಿದ್ದರು.

Tariq Anwar quits NCP, cites party chief Sharad Pawar stand on Rafale row

ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯ ಸಂಸ್ಥಾಪಕ ಸದಸ್ಯರ ಪೈಕಿ ಅನ್ವರ್ ಕೂಡ ಒಬ್ಬರು. "ಇಂಥ ಸನ್ನಿವೇಶದಲ್ಲಿ ಪಕ್ಷದಲ್ಲಿ ಮುಂದುವರಿಯುವುದಿಲ್ಲ" ಎಂದು ಅವರು ಹೇಳಿದ್ದಾರೆ. ಫ್ರಾನ್ಸ್ ನ ಡಸಾಲ್ಟ್ ಕಂಪನಿ ಜತೆಗೆ ನಡೆಸಿರುವ ಯುದ್ಧ ವಿಮಾನ ಖರೀದಿ ವ್ಯವಹಾರದಲ್ಲಿ ವೈಯಕ್ತಿಕ ಲಾಭಗಳಿವೆ. ಇದರಲ್ಲಿ ಸಂಶಯ ಪಡುವಂಥ ಅಂಶಗಳಿವೆ. ಆದರೆ ಪವಾರ್ ಹೇಳಿಕೆ ಮೋದಿಗೆ ಬೆಂಬಲದಂತೆ ಇದೆ. ಆದ್ದರಿಂದ ಪಕ್ಷ ತೊರೆಯಲು ನಿರ್ಧರಿಸಿದೆ ಎಂದಿದ್ದಾರೆ.

ರಫೇಲ್ ಖರೀದಿ: ಮೋದಿ ಬಗ್ಗೆ ಜನರಲ್ಲಿ ಅನುಮಾನಗಳಿಲ್ಲ ಎಂದ ಪವಾರ್ರಫೇಲ್ ಖರೀದಿ: ಮೋದಿ ಬಗ್ಗೆ ಜನರಲ್ಲಿ ಅನುಮಾನಗಳಿಲ್ಲ ಎಂದ ಪವಾರ್

ಐದು ಅವಧಿಗೆ ಲೋಕಸಭೆ ಸದಸ್ಯರಾಗಿ ಹಾಗೂ ಎರಡು ಅವಧಿಗೆ ರಾಜ್ಯಸಭಾ ಸದಸ್ಯರಾಗಿ ಅನ್ವರ್ ಆಯ್ಕೆ ಆಗಿದ್ದಾರೆ. "ಭಾರತದ ಸೂಚನೆ ಮೇರೆಗೆ ರಿಲಯನ್ಸ್ ಡಿಫೆನ್ಸ್ ಕಂಪನಿಯನ್ನು ಡಸಾಲ್ಟ್ ನ ಭಾಗೀದಾರ ಆಗಿ ಮಾಡಲಾಯಿತು ಎಂಬ ಫ್ರೆಂಚ್ ಮಾಜಿ ಅಧ್ಯಕ್ಷ ಫ್ರಾಂಕೋಯಿಸ್ ಒಲಾಂಡ್ ಹೇಳಿಕೆ ಹಿನ್ನೆಲೆಯಲ್ಲಿ ಸರಕಾರವು ತಾನು ಶುದ್ಧ ಹಸ್ತ ಎಂದು ಸಾಬೀತು ಮಾಡಬೇಕು" ಎಂದಿದ್ದಾರೆ ಅನ್ವರ್.

ರಫೇಲ್ ವಿವಾದದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಆರು ಸಂಗತಿಗಳುರಫೇಲ್ ವಿವಾದದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಆರು ಸಂಗತಿಗಳು

ತಾರೀಕ್ ಅನ್ವರ್ ಮುಂದಿನ ಹಾದಿ ಏನು ಎಂಬ ಬಗ್ಗೆ ಇನ್ನೂ ಖಾತ್ರಿ ಆಗಿಲ್ಲ. ಆದರೆ ಶರದ್ ಪವಾರ್ ಜತೆಗೆ ಸೇರಿ ಕಾಂಗ್ರೆಸ್ ಬಿಟ್ಟು ಹೊರಬಂದಿದ್ದ ಅನ್ವರ್, ವಾಪಸ್ ಕಾಂಗ್ರೆಸ್ ಗೆ ಹೋಗಬಹುದು ಎಂಬ ನಿರೀಕ್ಷೆಯಿದೆ. ಕಾಂಗ್ರೆಸ್ ತೊರೆಯುವ ಮುನ್ನ ಆ ಪಕ್ಷದ ಹಲವು ಪ್ರಮುಖ ಹುದ್ದೆಗಳಲ್ಲಿ ತಾರೀಕ್ ಅನ್ವರ್ ಕಾರ್ಯ ನಿರ್ವಹಿಸಿದ್ದರು.

English summary
Nationalist Congress Party leader Tariq Anwar resigned from the Lok Sabha and his party on Friday, citing his party chief Sharad Pawar’s stand on the Rafale fight aircraft deal with France.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X