ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಕ್ಕೆ ಭಾರತದ ನೂತನ ರಾಯಭಾರಿ ತರಣ್‌ಜಿತ್ ಸಂಧು

|
Google Oneindia Kannada News

ವಾಷಿಂಗ್ಟನ್, ಜನವರಿ 15: ಅಮೆರಿಕದಲ್ಲಿನ ಭಾರತದ ನೂತನ ರಾಯಭಾರಿಯಾಗಿ ತರಣ್‌ಜಿತ್ ಸಿಂಗ್ ಸಂಧು ಅಧಿಕಾರ ಸ್ವೀಕರಿಸಲಿದ್ದಾರೆ.

ಅಮೆರಿಕದಲ್ಲಿದ್ದ ಭಾರತದ ರಾಯಭಾರಿ ಹರ್ಷವರ್ಧನ್ ಶೃಂಗ್ಲಾ ಇತ್ತೀಚೆಗಷ್ಟೇ ಭಾರತಕ್ಕೆ ಹಿಂದಿರುಗಿದ್ದು, ವಿಜಯ್ ಗೋಖಲೆ ಅವರಿಂದ ಜನವರಿ ಅಂತ್ಯಕ್ಕೆ ತೆರವಾಗಲಿರುವ ವಿದೇಶಾಂಗ ಕಾರ್ಯದರ್ಶಿ ಹುದ್ದೆಯನ್ನು ಸ್ವೀಕರಿಸಲಿದ್ದಾರೆ.

ಭಾರತದೊಂದಿನ ಸಂಬಂಧದ ಸಂಭ್ರಮಾಚರಣೆ ಮಾಡಿದ ಅಮೆರಿಕ

ಸಂಧು ಅವರು 2017ರ ಜನವರಿ 24ರಿಂದ ಶ್ರೀಲಂಕಾದಲ್ಲಿ ಹೈಕಮಿಷನರ್ ಆಗಿದ್ದಾರೆ. ಇದಕ್ಕೂ ಮುನ್ನ ಅವರು ವಾಷಿಂಗ್ಟನ್ ಡಿಸಿಯಲ್ಲಿರುವ ಭಾರತದ ರಾಯಭಾರ ಕಚೇರಿಯಲ್ಲಿ 2013-2017ರ ಅವಧಿಯಲ್ಲಿ ಯೋಜನಾ ಉಪ ಮುಖ್ಯಸ್ಥರಾಗಿದ್ದರು. ಸಂಧು ಅವರನ್ನು ಅಮೆರಿಕದ ರಾಯಭಾರಿಯನ್ನಾಗಿ ನೇಮಿಸುವ ಅಧಿಕೃತ ಆದೇಶ ಇನ್ನೂ ಹೊರಬಂದಿಲ್ಲ.

Taranjit Singh Sandhu To Take US Enovy Of India

ಸಿಂಗಪುರದಲ್ಲಿ ಭಾರತದ ಹೈಕಮಿಷನರ್ ಆಗಿರುವ ಜಾವೇದ್ ಅಶ್ರಫ್ ಅವರು ಫ್ರಾನ್ಸ್‌ನಲ್ಲಿ ಭಾರತದ ರಾಯಭಾರಿಯಾಗಲಿದ್ದಾರೆ. ಫ್ರಾನ್ಸ್‌ನಲ್ಲಿದ್ದ ವಿನಯ್ ಕ್ವಾಟ್ರಾ ಅವರು ನೇಪಾಳಕ್ಕೆ ತೆರಳಲಿದ್ದಾರೆ. ನೇಪಾಳದ ರಾಯಭಾರಿ ಮಂಜೀವ್ ಸಿಂಗ್ ಪುರಿ ಇತ್ತೀಚೆಗಷ್ಟೇ ನಿವೃತ್ತರಾಗಿದ್ದಾರೆ.

English summary
Taranjit Singh Sandhu who currently high commissioner to Sri Lanka is likely to take charge as the new Indian ambassador to US.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X